viral: ಬಾಹುಬಲಿ ಪಾನಿಪುರಿ ವಿಡಿಯೋ ವೈರಲ್; ಇದನ್ನು ತಿನ್ನುವುದೇ ಒಂದು ಸವಾಲ್!

ಜನಪ್ರಿಯ ಫುಡ್ ಬ್ಲಾಗರ್ ಲಕ್ಷ್ಯ ದದ್ವಾನಿ ಅವರು ಯ್ಯೂಟ್ಯೂಬ್‍ನಲ್ಲಿ ಪೋಸ್ಟ್ ಮಾಡಿರುವ ಬಾಹುಬಲಿ ಪಾನಿಪುರಿಯ ವಿಡಿಯೋ ಸುಮಾರು 31 ಮಿಲಿಯನ್ ವೀಕ್ಷಣೆಗಳನ್ನು ಕಂಡಿದ್ದು, ಪ್ರಸ್ತುತ ಭಾರತದ ಅಗ್ರ ಸ್ಥಾನದಲ್ಲಿರುವ ಟ್ರೆಂಡಿಂಗ್ ವಿಡಿಯೋಗಳ ಪೈಕಿ ಒಂದಾಗಿದೆ.

ಬಾಹುಬಲಿ ಪಾನಿಪುರಿ

ಬಾಹುಬಲಿ ಪಾನಿಪುರಿ

  • Share this:
ಪಾನಿಪುರಿಗೆ (panipuri) ಇರುವಷ್ಟು ಜನಪ್ರಿಯತೆ ಅಥವಾ ಅಭಿಮಾನಿಗಳು, ಬೀದಿ ಬದಿಯಲ್ಲಿ ಸಿಗುವ ಬೇರೆ ಯಾವುದೇ ಚಾಟ್‍ಗಳಿಗೆ ಇಲ್ಲ. ಪಾನಿಪುರಿ ದೇಶದ ಮೂಲೆ ಮೂಲೆಗಳಲ್ಲಿ ಇರುವ ತಿಂಡಿ ಪ್ರಿಯರ ನಾಲಗೆ ಚಪಲವನ್ನು ತಣಿಸುತ್ತಾ, ಎಲ್ಲೆಡೆ ತನ್ನ ಅಸ್ಥಿತ್ವನ್ನು ಚಾಚಿಕೊಂಡಿದೆ. ಅದಕ್ಕೆ, ಗೋಲ್ ಗೊಪ್ಪಾ(golgappa) ಅಥವಾ ಪುಚ್ಕಾ(puchka) , ಬಟಾಶೆ ಅಥವಾ ಗಪ್ ಚುಪ್ ಎಂಬ ಪಾನಿಪುರಿಗೆ ಇರುವ ವಿಭಿನ್ನ ಹೆಸರುಗಳೇ ಸಾಕ್ಷಿ. ಇತ್ತೀಚೆಗೆ, ಭೋಪಾಲದ ಪಾನಿಪುರಿ ಮಾರಾಟಗಾರರೊಬ್ಬರು ತಮಗೆ ಮಗಳು ಜನಿಸಿದ ಖುಷಿಗೆ , ತನ್ನೆಲ್ಲಾ ಗ್ರಾಹಕರಿಗೆ ಪಾನಿ ಪುರಿ ಹಂಚಿದ ಸುದ್ದಿ ಇಡೀ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿತ್ತು. ಇದೀಗ ಮತ್ತೊಂದು ವಿಶೇಷ ಪಾನಿಪುರಿ ಸಾಮಾಜಿಕ ಮಾಧ್ಯಮ (social media) ಬಳಕೆದಾರರ ಗಮನವನ್ನು ಸೆಳೆಯುತ್ತಿದೆ. ಅದುವೇ ಬಾಹುಬಲಿ ಪಾನಿಪುರಿ. ಮಧ್ಯಪ್ರದೇಶದ ನಾಗಪುರದಲ್ಲಿ (madhya pradesh nagpur)  ಸಿಗುವ ಈ ಬಾಹುಬಲಿ ಪಾನಿಪುರಿ, ಅಲ್ಲಿನ ಪಾನಿಪುರಿ ಪ್ರಿಯರನ್ನು ಮಂತ್ರಮುಗ್ಧಗೊಳಿಸಿದೆಯಂತೆ.

ಸಾಮಾಜಿಕ ಜಾಲತಾಣಿಗರ ಮನಗೆದ್ದ ಪಾನಿಪೂರಿ

ಜನಪ್ರಿಯ ಫುಡ್ ಬ್ಲೊಗರ್ ಲಕ್ಷ್ಯ ದದ್ವಾನಿ (food blogger Laksh Dadwani) ಅವರು ಯ್ಯೂಟ್ಯೂಬ್‍ನಲ್ಲಿ (youtube) ಪೋಸ್ಟ್ ಮಾಡಿರುವ ಬಾಹುಬಲಿ ಪಾನಿಪುರಿಯ (bahubali Panipuri) ವಿಡಿಯೋ ಸುಮಾರು 31 ಮಿಲಿಯನ್ ವೀಕ್ಷಣೆಗಳನ್ನು ಕಂಡಿದ್ದು, ಪ್ರಸ್ತುತ ಭಾರತದ ಅಗ್ರ ಸ್ಥಾನದಲ್ಲಿರುವ ಟ್ರೆಂಡಿಂಗ್ ವಿಡಿಯೋಗಳ ಪೈಕಿ ಒಂದಾಗಿದೆ. ಈ ವಿಡಿಯೋದಲ್ಲಿ ಕಾಣಿಸಿಕೊಂಡಿರುವ ಬೀದಿ ಬದಿ ವ್ಯಾಪಾರಿ ಚಿರಾಗ್ ಕ ಚಸ್ಕಾ. ಅವರು ನಾಗಪುರದ ಪ್ರತಾಪ್ ನಗರದವರು. ಅವರು ತಮ್ಮ ವಿಶೇಷ ಮತ್ತು ಆಸಕ್ತಿದಾಯಕ ಪಾನಿಪುರಿಯ ಕಾರಣದಿಂದಾಗಿ ಅನೇಕ ಬಾರಿ ಸುದ್ದಿಯಾಗಿದ್ದಾರೆ.

ಇದನ್ನು ಓದಿ: ನವರಾತ್ರಿಗೆ ಯಾವ ದಿನ ಯಾವ ಬಣ್ಣದ ಬಟ್ಟೆ ಧರಿಸಬೇಕು? ಇಲ್ಲಿದೆ ಪಟ್ಟಿ

ಈ ಪಾನಿಪೂರಿ ಸೇವಿಸುವುದೇ ಸವಾಲಿನ ಕೆಲಸ

ನಾಗಪುರದ ಬಾಹುಬಲಿ ಪಾನಿಪುರಿಯ ತಯಾರಿ ನೋಡುವುದೇ ಒಂಥರಾ ಮಜವಾಗಿದೆ. ಒಂದು ದೊಡ್ಡ ಪಾನಿಪುರಿಯಲ್ಲಿ ವಿಭಿನ್ನ ಬಗೆಯ ಚಟ್ನಿ ಮತ್ತು ಪಾನಿಗಳನ್ನು ತುಂಬಲಾಗಿರುತ್ತದೆ. ಹುಣಸೇ ಹಣ್ಣಿನ ಚಟ್ನಿ, ಅದಾದ ಬಳಿಕ ಸಾಮಾನ್ಯವಾಗಿ ಬಳಸುವ ಪಾನಿ, ಬಳಿಕ ಕಿತ್ತಳೆ ಹಣ್ಣಿನ ಸ್ವಾದವುಳ್ಳ ಪಾನಿ (ಬೇಸಿಗೆಯಲ್ಲಿ ಮಾವಿನಹಣ್ಣಿನ ಸ್ವಾದದ ಪಾನಿ ಇರುತ್ತದೆ), ಜೀರಿಗೆ ಪಾನಿ ಮತ್ತು ಬೆಳ್ಳುಳ್ಳಿ ಪಾನಿ. ಬಳಿಕ ಸಾಮಾನ್ಯವಾಗಿ ಪಾನಿ ಪುರಿ ಒಳಗೆ ತುಂಬಿಸುವ ಬೇಯಿಸಿದ ಆಲೂಗಡ್ಡೆ ಮಸಾಲೆಯನ್ನು ಇಲ್ಲಿ ಕೊಂಚ ಭಿನ್ನ ರೀತಿಯಲ್ಲಿ ತುಂಬಿಸಲಾಗುತ್ತದೆ. ಅಂದರೆ, ಪೂರಿಯ ಮೇಲೆ ಸಿಲಿಂಡರ್ ಟವರ್‍ನ ಆಕೃತಿಯಲ್ಲಿ ಇಡಲಾಗುತ್ತದೆ. ಆ ನಂತರ ಅದರ ಮೇಲೆ ಮೊಸರು, ಬೂಂದಿ, ಸೇವ್, ಕೊತ್ತಂಬರಿ ಸೊಪ್ಪು ಮತ್ತು ದಾಳಿಂಬೆ ಕಾಳುಗಳನ್ನು ಹಾಕಲಾಗುತ್ತದೆ.

ಇದನ್ನು ಓದಿ: ರಶ್ಮಿಕಾಯಿಂದ ಸಮಂತಾವರೆಗೆ: ಮುರಿದು ಬಿದ್ದ ದಕ್ಷಿಣ ಭಾರತೀಯ ನಟಿಯರ ಪ್ರೇಮ ಕಥೆಗಳು

ಸಿಕ್ಕಾಪಟ್ಟೆ ರುಚಿಕರ ಈ ಪಾನಿಪೂರಿ

ಈ ಬಾಹುಬಲಿ ಪಾನಿಪುರಿಯ ವಿಡಿಯೋ ನೋಡಿ , ಅದನ್ನು ತಿನ್ನುವ ಆಸೆಯಿಂದ ಬಾಯಲ್ಲಿ ನೀರು ಬರಿಸಿಕೊಂಡವರು, ನಾಲಗೆ ಚಪ್ಪರಿಸಿಕೊಂಡವರು ಬಹಳಷ್ಟು ಮಂದಿ ಇದ್ದಾರೆ. ಕೆಲವರು ಅಷ್ಟಕ್ಕೆ ಸುಮ್ಮನಾದರೆ ಇನ್ನು ಕೆಲವರು ಬಾಹುಬಲಿ ಪಾನಿಪುರಿ ವಿಡಿಯೋಗೆ ತಮ್ಮ ಪ್ರತಿಕ್ರಿಯೆಗಳನ್ನು ಕೂಡ ನೀಡಿದ್ದಾರೆ. ಈ ಬಾಹುಬಲಿ ಪಾನಿಪುರಿ ನೋಡಲು ಆಕರ್ಷಕ ಮತ್ತು ಆಸಕ್ತಿದಾಯಕವಾಗಿ ಇದೆ ಎನ್ನುವುದೇನೋ ಸತ್ಯ. ಆದರೆ ಇದನ್ನು ತಿನ್ನುವುದು ಮಾತ್ರ ಸವಾಲಿನ ಕೆಲಸವೇ ಸರಿ. ಅದೇ ಅಭಿಪ್ರಾಯ ಕೆಲವು ನೆಟ್ಟಿಗರದ್ದು ಕೂಡ. “ ನೀವು ಅದನ್ನು ಹೇಗೆ ತಿನ್ನುವುದು ಎಂಬುವುದರ ಬಗ್ಗೆ ಕೂಡ ವಿಡಿಯೋ ಮಾಡಬೇಕು” ಎಂದು ಒಬ್ಬರು ಪ್ರತಿಕ್ರಿಯೆ ನೀಡಿದರೆ, ಇನ್ನೊಬ್ಬ ನೆಟ್ಟಿಗ, “ ಈ ಜಗತ್ತಿನಲ್ಲಿ ಒಂದೇ ತುತ್ತಿಗೆ ತಿನ್ನಲಾಗದ ಪಾನಿಪುರಿ ಇದೆ ಎಂದರೆ ನಂಬಲಾಗುತ್ತಿಲ್ಲ” ಎಂದು ಬರೆದಿದ್ದಾರೆ.
First published: