Bachpan Ka Pyaar : ಹಾಡಿನ ಮೂಲಕ ವೈರಲ್ ಆದ ಹಳ್ಳಿ ಬಾಲಕನಿಗೆ ಚಾನ್ಸ್ ಕೊಟ್ಟ ಬಾಲಿವುಡ್ ಗಾಯಕ ಬಾದ್​ಶಾ

ಯುವ ತಾರೆ ಸಹದೇವ್ ಬಾದ್‌ಶಾ ಅವರೊಂದಿಗೆ ಕೆಲಸ ಮಾಡಲು ಬಯಸುತ್ತಾರೆ ಎಂದು ಕೇಳಿದ ನಂತರ ಹುಡುಗನಿಗೆ ಎಲ್ಲಿಲ್ಲದ ಸಂತೋಷ ವಾಗುತ್ತದೆ. ಈ ವಿಡಿಯೋ ಕರೆಯ ಸಂಭಾಷಣೆಯ ವಿಡಿಯೋ ಕೂಡ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಗಾಯಕ ಬಾದ್​ಶಾ ಹಾಗೂ ವೈರಲ್​ ಆದ ಬಾಲಕ

ಗಾಯಕ ಬಾದ್​ಶಾ ಹಾಗೂ ವೈರಲ್​ ಆದ ಬಾಲಕ

 • Share this:

  ನೀವು ಇನ್‌ಸ್ಟಾಗ್ರಾಮ್ ಬಳಕೆದಾರರಾಗಿದ್ದರೆ, ನಿಮ್ಮ ಸ್ನೇಹಿತರ ಬಾಯಲ್ಲಿ ಅಥವಾ ಸಾಮಾಜಿಕ ಮಾಧ್ಯಮಗಳಲ್ಲಿ ನೀವು "ಬಚ್ಪನ್ ಕಾ ಪ್ಯಾರ್‌" ಎನ್ನುವ ಹಾಡನ್ನು ಕೇಳಿರಲೆಬೇಕು. ಏಕೆಂದರೆ ಸಾಮಾಜಿಕ ಮಾಧ್ಯಮಗಳಲ್ಲಿ"ಬಚ್ಪನ್ ಕಾ ಪ್ಯಾರ್‌"  ಹಾಡು ತುಂಬಾ ಪ್ರಸಿದ್ಧಿಯಾಗಿದ್ದು, ಜನರು ಆ ಹಾಡನ್ನು ಕೇಳಿದ ತಕ್ಷಣ ಕ್ಯಾಮೆರಾ ಮುಂದೆ ನಿಂತುಕೊಂಡು ಕೂಡಲೇ ಎರಡು ಮೂರು ಹೆಜ್ಜೆ ಹಾಕದೆ ಇರಲಾರರು . ಅವರು ಹೆಜ್ಜೆ ಹಾಕಿದ್ದು ಸಹ ಈ ಹಾಡಿನೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದಾರೆ. ಅಷ್ಟರ ಮಟ್ಟಿಗೆ ಈ ಹಾಡು ಜನರ ಮನಸ್ಸಿನಲ್ಲಿ ಮನೆ ಮಾಡಿದೆ ಎಂದರೆ ತಪ್ಪಲ್ಲ. ಅಂತಹ ಒಂದು ಹಾಡು ಇದಾಗಿದೆ. ಇತ್ತೀಚಿನ ದಿನಗಳಲ್ಲಿ ಈ ಹಾಡು ತುಂಬಾ ವೈರಲ್ ಆಗಿದೆ.


  ಈ ಹಾಡನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಾಡಿದ ಹುಡುಗನ ಹೆಸರು ಸಹದೇವ್ ಡಿರ್ಡೋ. ಈಗ ಈ ಹುಡುಗ ಇದ್ದಕ್ಕಿದ್ದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ತುಂಬಾ ದೊಡ್ಡ ಮಟ್ಟದಲ್ಲಿ ಹಿಟ್ ಆಗಿದ್ದಾನೆ. ಇತ್ತೀಚೆಗೆ ವಿಡಿಯೋ ಕರೆಯ ಮೂಲಕ ಭಾರತೀಯ ರಾಪರ್ ಬಾದ್‌ಶಾ ಅವರೊಂದಿಗೆ ಮಾತನಾಡುತ್ತ ಬಾದ್‌ಶಾ ಗಾಗಿ "ಬಚ್ಪನ್ ಕಾ ಪ್ಯಾರ್" ಹಾಡನ್ನು ವಿಡಿಯೋ ಕರೆಯಲ್ಲಿ ಹಾಡುತ್ತಾರೆ.


  ಬಾಲಿವುಡ್‌ನಲ್ಲಿ ಗೇಂದಾ ಫೂಲ್ ಹಾಡನ್ನು ಹಾಡಿದ ರಾಪರ್ ಬಾದ್‌ಶಾ ಅವರು ಸಹದೇವ್ ಅವರು ಹಾಡಿದ ಹಾಡನ್ನು ಕೇಳಿ ಅವರಿಗೆ ನಮ್ಮೊಂದಿಗೆ ಬಂದು ಬಾಲಿವುಡ್ ನಲ್ಲಿ ಹಾಡು ಹೇಳಿ ಎಂದು ಕೇಳಿಯೇ ಬಿಟ್ಟರು. ಅದಕ್ಕೆ ಸಹದೇವ್ ತುಂಬಾ ಉತ್ಸುಕನಾಗಿ ಓ ಸರಿ ಹಾಡುತ್ತೇನೆ ಎಂದು ಜೋರಾಗಿ ಉತ್ತರಿಸಿದನು.


  ಬಾದ್‌ಶಾ ವಿಡಿಯೋ ಕರೆಯಲ್ಲಿ ಸಹದೇವ್‌ನಿಗೆ, "ನೀವು ನನ್ನೊಂದಿಗೆ ಹಾಡುತ್ತೀರಾ" ಮತ್ತು ನಂತರ " ಬನ್ನಿ ಹಾಗಾದ್ರೆ" ಎಂದು ಹೇಳುತ್ತಾರೆ. ಸಾಮಾಜಿಕ ಮಾಧ್ಯಮಗಳ ಯುವ ತಾರೆ ಸಹದೇವ್ ಬಾದ್‌ಶಾ ಅವರೊಂದಿಗೆ ಕೆಲಸ ಮಾಡಲು ಬಯಸುತ್ತಾರೆ ಎಂದು ಕೇಳಿದ ನಂತರ ಹುಡುಗನಿಗೆ ಎಲ್ಲಿಲ್ಲದ ಸಂತೋಷ ವಾಗುತ್ತದೆ. ಈ ವಿಡಿಯೋ ಕರೆಯ ಸಂಭಾಷಣೆಯ ವಿಡಿಯೋ ಕೂಡ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಅದರ ಮೇಲೆ ಬಾದ್‌ಶಾ "ಬಚ್ಪನ್ ಕಾ ಪ್ಯಾರ್" ಹಾಡಿದ ಹುಡುಗನಿಗೆ ಭೇಟಿ ಮಾಡಿದ ವೈರಲ್ ವಿಡಿಯೋ ಅಂತ ಬರೆದಿದೆ.  View this post on Instagram


  A post shared by BADSHAH (@badboyshah)

  ಈ"ಬಚ್ಪನ್ ಕಾ ಪ್ಯಾರ್"ಹಾಡನ್ನು ಮೂಲತಃ ಕಮಲೇಶ್ ಬರೋಟ್ ಹಾಡಿದ್ದಾರೆ ಮತ್ತು ಸಾಹಿತ್ಯವನ್ನು ಪಿ.ಪಿ. ಬರಿಯಾ ಅವರು ಬರೆದಿದ್ದು, ಮೂಲ ಹಾಡಿನ ಶೀರ್ಷಿಕೆ "ಬಚ್ಪನ್ ಕಾ ಪ್ಯಾರ್, ಸೋನು ಮೇರಿ ಡಾರ್ಲಿಂಗ್" ಎಂಬುದಾಗಿದೆ.ಬಾದ್‌ಶಾ ಕೂಡ ಈ ಹಾಡಿನ ಬಗ್ಗೆ ಪಾನಿ ಪಾನಿ ಹಾಡನ್ನು ಹಾಡಿದಂತ ಗಾಯಕ ಆಸ್ತಾ ಗಿಲ್ ಅವರೊಂದಿಗೆ ವಿಡಿಯೋ ಮಾಡಿದ್ದು ಹಾಡಿಗೆ ಸಿಕ್ಕಾಪಟ್ಟೆ ಕುಣಿದಿದ್ದಾರೆ.


  ಆ ವಿಡಿಯೋಗೆ ಮೃನಾಲ್ ಠಾಕೂರ್, ಮನೀಶ್ ಪಾಲ್ ಅವರು ಪ್ರತಿಕ್ರಿಯಿಸಿದ್ದಾರೆ. ಈ ವಿಡಿಯೋವನ್ನು ಇನ್‌ಸ್ಟಾದಲ್ಲಿ ಹಂಚಿಕೊಂಡಿದ್ದಾರೆ.

  Published by:Kavya V
  First published: