• Home
  • »
  • News
  • »
  • trend
  • »
  • Trending Video: ಮೇಕೆಯಂತೆಯೇ ಜಿಗಿದಾಡಿದೆ ನೋಡಿ ಈ ಮರಿ ಘೇಂಡಾಮೃಗ! ಮುದ್ದಾಗಿದೆ ಅಂದ್ರು ನೆಟ್ಟಿಗರು

Trending Video: ಮೇಕೆಯಂತೆಯೇ ಜಿಗಿದಾಡಿದೆ ನೋಡಿ ಈ ಮರಿ ಘೇಂಡಾಮೃಗ! ಮುದ್ದಾಗಿದೆ ಅಂದ್ರು ನೆಟ್ಟಿಗರು

ವೈರಲ್​ ಆದ ಪ್ರಾಣಿಗಳ ವಿಡಿಯೋ

ವೈರಲ್​ ಆದ ಪ್ರಾಣಿಗಳ ವಿಡಿಯೋ

Trending Video: ಪ್ರಾಣಿಗಳ ಕ್ಯೂಟ್​ ವಿಡಿಯೋ ನೋಡೋದೇ ಒಂಥರಾ ಚೆಂದ! ಇದೀಗ ಒಂದು ಗೇಂಡಾಮೃಗ ಮರಿಯ ವಿಡಿಯೋ ವೈರಲ್​ ಆಗಿದೆ.

  • Share this:

ಕಳೆದ ತಿಂಗಳು ನಾವೆಲ್ಲಾ ಸಾಮಾಜಿಕ ಮಾಧ್ಯಮದಲ್ಲಿ ( Social Media)  ಹರಿದಾಡುತ್ತಿರುವ ವೀಡಿಯೋದಲ್ಲಿ ಮೇಕೆ ಮತ್ತು ಅದರ ಸ್ನೇಹಿತ ಪುಟ್ಟ ಕೋತಿ ಒಟ್ಟಿಗೆ ಸೇರಿ ಬೆರ್ರಿ ಹಣ್ಣುಗಳನ್ನು ತಿನ್ನುತ್ತಿರುವುದನ್ನು ನೋಡಿದ್ದೆವು. ಆ ಕ್ಲಿಪ್ ನಲ್ಲಿ ಒಬ್ಬ ವ್ಯಕ್ತಿಯು ಒಂದು ಹಿಡಿ ಬೆರ್ರಿ ಹಣ್ಣು (Berry Fruit) ಗಳನ್ನು ತಂದು ಹತ್ತಿರದಲ್ಲಿರುವ ಒಂದು ಮೇಕೆಯನ್ನು ಕರೆದರೆ, ಆ ಮೇಕೆ ಮರಿ ಕೋತಿಯನ್ನು ಸಹ ಕರೆದುಕೊಂಡು ಬಂದಿತು. ನಂತರ ಈ ಎರಡು ಪ್ರಾಣಿಗಳು ಒಟ್ಟಿಗೆ ಬೆರ್ರಿ ಹಣ್ಣುಗಳನ್ನು ತಿಂದು ಆನಂದಿಸಿದ್ದನ್ನು ನಾವೆಲ್ಲಾ ನೋಡಿದ್ದೆವು. ಹೀಗೆ ಎರಡು ಬೇರೆ ಬೇರೆ ಪ್ರಾಣಿಗಳು (Animals) ಒಟ್ಟಿಗೆ ಕುಳಿತು ಒಂದೇ ರೀತಿ ಮಾಡುವಾಗ ಅದನ್ನು ನೋಡುವುದೇ ಒಂದು ಚೆಂದ ಅಂತ ಹೇಳಬಹುದು. ಇಲ್ಲಿ ಸಹ ಅಂತಹದೇ ಇನ್ನೊಂದು ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ ನೋಡಿ.


2.3 ಮಿಲಿಯನ್ ವೀಕ್ಷಣೆಗಳನ್ನು ಪಡೆದ ವೀಡಿಯೋ!


ಈ 14 ಸೆಕೆಂಡಿನ ವೀಡಿಯೋ ತುಣುಕಿನಲ್ಲಿ ಮರಿ ಘೇಂಡಾಮೃಗ ಮತ್ತು ಮೇಕೆಯ ನಡುವಿನ ಮುಗ್ಧ ವಿನಿಮಯವನ್ನು ತೋರಿಸುತ್ತದೆ. ಈ ಮುದ್ದಾದ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಅನೇಕ ಜನರಿಗೆ ಖುಷಿ ಪಡಿಸಿದೆ ಅಂತ ಹೇಳಬಹುದು.


ಈ ಚಿಕ್ಕ ಕ್ಲಿಪ್ ಅನ್ನು ಶುಕ್ರವಾರ 'ಫ್ಯಾಸಿನೇಟಿಂಗ್' ಎಂಬ ಟ್ವಿಟರ್ ಹ್ಯಾಂಡಲ್ ನಲ್ಲಿ ಪೋಸ್ಟ್ ಮಾಡಲಾಗಿದೆ ಮತ್ತು ಅಂದಿನಿಂದ ಇದು 2.3 ಮಿಲಿಯನ್ ವೀಕ್ಷಣೆಗಳನ್ನು ಮತ್ತು 1,29,000 ಕ್ಕೂ ಹೆಚ್ಚು ಲೈಕ್ ಗಳನ್ನು ಸಹ ಗಳಿಸಿದೆ.


ಇದನ್ನೂ ಓದಿ: ಲೇಡಿ ಟೀಚರ್-ವಿದ್ಯಾರ್ಥಿನಿ​ ನಡುವೆ ಕುಚ್​ ಕುಚ್​, ಲಿಂಗ ಬದಲಾವಣೆ ಮಾಡಿಸಿಕೊಂಡು ಮದುವೆಯಾದ ಜೋಡಿ!


"ಮರಿ ಘೇಂಡಾಮೃಗವು ತನ್ನ ಮೇಕೆ ಸ್ನೇಹಿತನನ್ನು ಅನುಕರಿಸುತ್ತದೆ" ಎಂದು ಪೋಸ್ಟ್ ನ ಶೀರ್ಷಿಕೆಯಲ್ಲಿ ಬರೆಯಲಾಗಿದೆ. ಈ ಮುದ್ದಾದ ವೀಡಿಯೋವನ್ನು 2020 ರಲ್ಲಿ ದಕ್ಷಿಣ ಆಫ್ರಿಕಾದ ಹೋಡ್ಸ್ಪ್ರೂಟ್ ಅಳಿವಿನಂಚಿನಲ್ಲಿರುವ ಪ್ರಭೇದಗಳ ಕೇಂದ್ರದಲ್ಲಿ ಕರಿಯನ್ ಸ್ಮಿತ್ ಸೆರೆ ಹಿಡಿದಿದ್ದಾರೆ ಎಂದು ಡೈಲಿ ಸ್ಟಾರ್ ವರದಿ ಮಾಡಿದೆ. ಇದರಲ್ಲಿ ಒಂದು ಮರಿ ಘೇಂಡಾಮೃಗವು ತನ್ನ ಮೇಕೆ ಸ್ನೇಹಿತನಂತೆ ಸಂತೋಷದಿಂದ ಜಿಗಿಯುತ್ತಿರುವುದನ್ನು ಇಲ್ಲಿ ನೋಡಬಹುದು.


ವೈರಲ್ ವೀಡಿಯೋದಲ್ಲಿ ಏನಿದೆ ನೋಡಿ..


ವೀಡಿಯೋ ಕ್ಲಿಪ್ ನಲ್ಲಿ ಮೊದಮೊದಲು, ಮರಿ ಘೇಂಡಾಮೃಗವು ಉತ್ಸಾಹಭರಿತ ಮೇಕೆಯೊಂದು ತನ್ನ ಪಕ್ಕದಲ್ಲಿ ಜೋರಾಗಿ ಜಿಗಿದು ಜಿಗಿದು ಒಳ್ಳೆ ಹಗ್ಗದಾಟ ಆಡುವ ರೀತಿಯಲ್ಲಿ ಮುಂದಕ್ಕೆ ಹೋಗುವುದನ್ನು ಗಮನವಿಟ್ಟು ನೋಡುತ್ತದೆ.


ಕೆಲವು ಸೆಕೆಂಡುಗಳ ನಂತರ, ಭಾರಿ ತೂಕದ ಮರಿ ಘೇಂಡಾಮೃಗವು ಸಹ ತನ್ನ ಸ್ನೇಹಿತ ಮೇಕೆಯಂತೆ ಜಿಗಿದು ಜಿಗಿದು ಮುಂದಕ್ಕೆ ಬರುವುದಕ್ಕೆ ಪ್ರಯತ್ನಿಸುತ್ತಿರುವುದು ಕಂಡು ಬಂದಿತು. ಈ ವೀಡಿಯೋವು ಇಂಟರ್ನೆಟ್ ಬಳಕೆದಾರರನ್ನು ಬೇಗನೆ ಆಕರ್ಷಿಸಿತು ಮತ್ತು ಅವರು ಕಾಮೆಂಟ್ ವಿಭಾಗದಲ್ಲಿ ಎಲ್ಲಾ ರೀತಿಯ ಪ್ರತಿಕ್ರಿಯೆಗಳೊಂದಿಗೆ ಕಾಮೆಂಟ್ ಗಳ ಪ್ರವಾಹವನ್ನೇ ಹರಿಸಿದರು ಅಂತ ಹೇಳಬಹುದು.


ಇದನ್ನೂ ಓದಿ: ಮಗ-ಸೊಸೆಯ ಮಗುವಿಗೆ ಜನ್ಮ ನೀಡಿದ ತಾಯಿ; ಇದು ಅಚ್ಚರಿಯಾದ್ರೂ ಸತ್ಯ


ಮುದ್ದಾದ ವೀಡಿಯೋಗೆ ಸಿಕ್ಕ ಕಾಮೆಂಟ್ ಗಳನ್ನ ಒಮ್ಮೆ ನೋಡಿ..


"ಈ ವೀಡಿಯೋ ತುಂಬಾನೇ ಉಲ್ಲಾಸದಾಯಕವಾಗಿದೆ" ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರೊಬ್ಬರು ಬರೆದಿದ್ದಾರೆ. "ಘೇಂಡಾಮೃಗಗಳು ನೋಡಿದರೆ ಹೆದರಿಕೆ ಬರುವ ಹಾಗೆ ಇರುತ್ತವೆ, ಆದರೆ ಅವು ಸಾಕಷ್ಟು ಸ್ನೇಹಪರವಾಗಿರಬಹುದು ಎಂಬುದು ಈ ವೀಡಿಯೋ ತೋರಿಸುತ್ತದೆ. ಸಮಸ್ಯೆಯೆಂದರೆ ಅದರ ದೇಹದ ರಚನೆ ಜನರನ್ನು ಭಯಭೀತಿಗೊಳಿಸುವಂತೆ ಇರುತ್ತದೆ" ಎಂದು ಇನ್ನೊಬ್ಬರು ತಮ್ಮ ಕಾಮೆಂಟ್ ನಲ್ಲಿ ವಿವರಿಸಿದರು.



ಮೂರನೆಯ ಬಳಕೆದಾರರು "ತುಂಬಾ ಮುದ್ದಾಗಿ" ಎಂದು ಕಾಮೆಂಟ್ ಮಾಡಿದರು. “ನಾನು ಮೇಕೆ ಮರಿಗಳನ್ನು ತುಂಬಾನೇ ಇಷ್ಟ ಪಡುತ್ತೇನೆ, ಅವು ಯಾವಾಗಲೂ ತುಂಬಾ ಸಂತೋಷವಾಗಿ ಮತ್ತು ಲವಲವಿಕೆಯಿಂದ ಇರುತ್ತವೆ" ಎಂದು ನಾಲ್ಕನೆಯ ಬಳಕೆದಾರರು ಹೇಳಿದರು.


"ಘೇಂಡಾಮೃಗಗಳು ಜಿಗಿಯಬಲ್ಲವು ಎಂದು ನನಗೆ ತಿಳಿದಿರಲಿಲ್ಲ" ಎಂದು ಐದನೆಯ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಹೇಳುವುದಾದರೆ ಈ ಎರಡು ವಿಭಿನ್ನ ಪ್ರಭೇದಗಳ ಪ್ರಾಣಿಗಳ ನಡುವಿನ ವಿಚಿತ್ರ ಬಂಧವು ನೋಡಲು ಆನಂದದಾಯಕವಾಗಿದೆ.

First published: