Viral Video: ಮುದ್ದಾಗಿದೆ ಮರ ಹತ್ತಲು ಕಿತ್ತಾಡುತ್ತಿರುವ ಪಾಂಡಾಗಳ ಮುದ್ದಾದ ವಿಡಿಯೋ

ಎರಡು ಪಾಂಡಾಗಳ ಮುದ್ದಾದ ಗುದ್ದಾಟ ಸಾಮಾಜಿಕ ಜಾಲತಾಣಗಳಲ್ಲಿ ಜನರ ಮನಸೂರೆಗೊಂಡಿದೆ.ಈ ವಿಡಿಯೋದಲ್ಲಿ ಎರಡು ಪಾಂಡಾಗಳು ಮರಗಳನ್ನು ಹತ್ತಲು ಗುದ್ದಾಡುವ ಪರಿಗೆ ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ. ಒಂದು ನಿಮಿಷದ ಈ ವಿಡಿಯೋದಲ್ಲಿ ಮರ ಹತ್ತಲು ಅವುಗಳು ಎಳೆದಾಡುವ ಪರಿ ಅದ್ಭುತವಾಗಿ ಸೆರೆಯಾಗಿದೆ.

ಫೋಟೋ-ಫೇಸ್​ಬುಕ್

ಫೋಟೋ-ಫೇಸ್​ಬುಕ್

  • Share this:

ಸಾಮಾಜಿಕ ಜಾಲತಾಣಗಳಲ್ಲಿ ಮಾನವನ ಚಟುವಟಿಕೆಗಳು ವೈರಲ್ ಆದಂತೆ ಪ್ರಾಣಿಗಳ ಚಟುವಟಿಕೆಗಳು, ಆಟಗಳು, ಮುದ್ದಾದ ಗುದ್ದಾಟಗಳು, ಮಾನವರೊಂದಿಗೆ ಬೆರೆಯುವ ರೀತಿ ಹೀಗೆ ಒಂದಿಲ್ಲೊಂದು ಕಾರಣಕ್ಕೆ ಅವುಗಳ ವಿಡಿಯೋಗಳು ವೈರಲ್ ಆಗುವುದರ ಜೊತೆಗೆ ಲಕ್ಷಾಂತರ ನೆಟ್ಟಿಗರ ಮನಸ್ಸನ್ನು ಗೆಲ್ಲುತ್ತವೆ.ಅದರಲ್ಲೂ ಗಿಡ್ಡ ದೇಹ ಹೊಂದಿರುವ ಕೂದಲುಗಳಿಂದ ಆವೃತವಾಗಿ ಮುದ್ದು ಮುದ್ದಾಗಿರುವ ಪಾಂಡಾಗಳನ್ನು ಕಂಡರೆ ಜನರಿಗೆ ಎಲ್ಲಿಲ್ಲದ ಪ್ರೀತಿ. ಇವುಗಳನ್ನು ಕಂಡರೆ ಜನರಿಗೆ ಪ್ರೀತಿ ತುಸು ಹೆಚ್ಚೇ ಇರುತ್ತದೆ. ಇದೀಗ ಎರಡು ಪಾಂಡಾಗಳ ಮುದ್ದಾದ ಗುದ್ದಾಟ ಸಾಮಾಜಿಕ ಜಾಲತಾಣಗಳಲ್ಲಿ ಜನರ ಮನಸೂರೆಗೊಂಡಿದೆ.ಈ ವಿಡಿಯೋದಲ್ಲಿ ಎರಡು ಪಾಂಡಾಗಳು ಮರಗಳನ್ನು ಹತ್ತಲು ಗುದ್ದಾಡುವ ಪರಿಗೆ ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ. ಒಂದು ನಿಮಿಷದ ಈ ವಿಡಿಯೋದಲ್ಲಿ ಮರ ಹತ್ತಲು ಅವುಗಳು ಎಳೆದಾಡುವ ಪರಿ ಅದ್ಭುತವಾಗಿ ಸೆರೆಯಾಗಿದೆ.


ಇದರಲ್ಲಿ ಎರಡು ಪಾಂಡಾಗಳು ಒಂದರ ಹಿಂದೆ ಮರ ಹತ್ತಲು ಬರುತ್ತದೆ. ಅದರಲ್ಲಿ ಎರಡು ಪಾಂಡಾಗಳು ನಾ ಮುಂದೆ ತಾ ಮುಂದೆ ಎಂದು ಮರ ಹತ್ತಲು ಪ್ರಯತ್ನಿಸುತ್ತವೆ. ಆಗ ಆ ಎರಡು ಪಾಂಡಾಗಳು ಒಂದನ್ನು ಮತ್ತೊಂದು ಎಳೆಯುತ್ತಾ ಮರ ಹತ್ತಲು ಅವೆರಡೇ ಪೈಪೋಟಿಗೆ ಇಳಿಯುತ್ತದೆ.


ಹೀಗೆ ಇವುಗಳ ಗುದ್ದಾಟ ಮುಂದುವರೆದು ಮರದ ಪಕ್ಕದಲ್ಲಿನ ಹುಲ್ಲಿನ ಹಾಸಿನ ಮೇಲೆ ಬೀಳುತ್ತವೆ. ಅಲ್ಲೂ ಸಹ ಒಂದರ ಮೇಲೊಂದು ಮಲಗಿ ಗುದ್ದಾಟ ಶುರುಮಾಡುತ್ತದೆ. ನಂತರ ಅದರಲ್ಲಿ ಒಂದು ಪಾಂಡಾ ಮರ ಹತ್ತಿಯೇ ಬಿಡುತ್ತದೆ. ಇದನ್ನು ಕಂಡ ಮತ್ತೊಂದು ಪಾಂಡಾ ಕೂಡ ಮರ ಹತ್ತಿ ಆ ಪಾಂಡಾವನ್ನು ಬೀಳಿಸುತ್ತದೆ. ನಂತರ ಪುನಃ ನೆಲದ ಮೇಲೆ ಬಿದ್ದು ಹೊರಳಾಡುತ್ತದೆ. ಇಲ್ಲಿಗೆ ವಿಡಿಯೋ ಕೊನೆಗೊಳ್ಳುತ್ತದೆ. ಕಪ್ಪು ಬಿಳುಪು ಬಣ್ಣದ ಎರಡು ಪಾಂಡಾಗಳ ವಿಡಿಯೋಗಳು ಮಾತ್ರ ಒಂದು ನಿಮಿಷ ನೋಡುಗರ ಹೃದಯ ಗೆಲ್ಲುವುದು ಮಾತ್ರ ಗ್ಯಾರಂಟಿ.


ಈ ವಿಡಿಯೋವನ್ನು 14 ಸಾವಿರಕ್ಕೂ ಹೆಚ್ಚು ಮಂದಿ ಇಷ್ಟಪಟ್ಟಿದ್ದಾರೆ. ಈ ಘಟನೆ ಬೀಜಿಂಗ್‍ನ ಒಂದು ಉದ್ಯಾನವನದಲ್ಲಿ ನಡೆದಂತೆ ಭಾಸವಾಗುತ್ತದೆ.


ಕೆಲವು ದಿನಗಳ ಹಿಂದೆ ತಾಯಿ ಪಾಂಡಾ ಮತ್ತು ಮರಿ ಪಾಂಡಾ ವಿಡಿಯೋ ಕೂಡ ವೈರಲ್ ಆಗಿತ್ತು. ಇದರಲ್ಲಿ ತಾಯಿ ಪಾಂಡಾವು ಮರಿ ಪಾಂಡಾವನ್ನು ಬಿಗಿದಪ್ಪಿ ಮುದ್ದಾಡುತ್ತಿತ್ತು. ಅಲ್ಲೇ ಇದ್ದ ಇನ್ನೊಂದು ಪಾಂಡಾ ಅದನ್ನು ವೀಕ್ಷಿಸುತ್ತಿತ್ತು.




ಇದರ ಜೊತೆಗೆ ಮರಿ ಪಾಂಡಾ ಪಾದಗಳಿಂದ ಚೆಂಡಿನಲ್ಲಿ ಆಟ ಆಡುತ್ತಿರುತ್ತದೆ. ಆಟ ಆಡುತ್ತಿರುವಾಗ ಚೆಂಡು ಅಲ್ಲೇ ಹತ್ತಿರದಲ್ಲಿದ್ದ ಟಬ್ ಒಳಗೆ ಬೀಳುತ್ತದೆ. ಅದನ್ನು ಕಂಡ ಮರಿ ಪಾಂಡಾ ಟಬ್‍ ಒಳಗೆ ಇಳಿದು ಚೆಂಡನ್ನು ತೆಗೆದುಕೊಳ್ಳಲು ಹೋಗುತ್ತದೆ. ಆದರೆ ಅದಕ್ಕೆ ಹೇಗೆ ಹೊರಗೆ ಬರುವುದು ಎಂದು ಗೊತ್ತಾಗದೆ ಕಂಗಾಲಾಗುತ್ತದೆ. ಅಗ ಅಲ್ಲಿಗೆ ಬಂದ ತಾಯಿ ಪಾಂಡಾ ಮರಿಯ ಒದ್ದಾಟ ನೋಡಿ ಟಬ್ ಅನ್ನು ತನ್ನ ಬಲದಿಂದ ಉರುಳಿಸಿ, ಮರಿ ಪಾಂಡಾವನ್ನು ಹೊರಗೆ ಕರೆದುಕೊಳ್ಳುತ್ತದೆ.


First published: