• Home
 • »
 • News
 • »
 • trend
 • »
 • ನಿರ್ವಾಣದ 'ನೆವರ್‌ಮೈಂಡ್' ಆಲ್ಬಮ್ ಕವರ್‌ನಲ್ಲಿದ್ದ ಮಗುವಿನಿಂದ ಬ್ಯಾಂಡ್‌ ವಿರುದ್ಧ ಚೈಲ್ಡ್‌ ಪೋರ್ನೋಗ್ರಫಿ ಕೇಸ್‌..!

ನಿರ್ವಾಣದ 'ನೆವರ್‌ಮೈಂಡ್' ಆಲ್ಬಮ್ ಕವರ್‌ನಲ್ಲಿದ್ದ ಮಗುವಿನಿಂದ ಬ್ಯಾಂಡ್‌ ವಿರುದ್ಧ ಚೈಲ್ಡ್‌ ಪೋರ್ನೋಗ್ರಫಿ ಕೇಸ್‌..!

ಕೇಸ್ ದಾಖಲಿಸಿರುವ ಸ್ಪೆನ್ಸರ್ ಎಲ್ಡೆನ್.

ಕೇಸ್ ದಾಖಲಿಸಿರುವ ಸ್ಪೆನ್ಸರ್ ಎಲ್ಡೆನ್.

TMZ ಪ್ರಕಾರ, ಎಲ್ಡೆನ್ ನಿರ್ವಾಣ ಬ್ಯಾಂಡ್‌ನ ಉಳಿದಿರುವ ಇಬ್ಬರು ಸದಸ್ಯರು ಹಾಗೂ ಕರ್ಟ್ ಕೋಬೈನ್ ಎಸ್ಟೇಟ್ ವಿರುದ್ಧ ಮೊಕದ್ದಮೆ ಹೂಡಿದ್ದಾರೆ ಮತ್ತು ಪ್ರತಿಯೊಬ್ಬರೂ ಕನಿಷ್ಠ 150,000 ಡಾಲರ್‌ ಪಾವತಿಸಬೇಕೆಂದು ಒತ್ತಾಯಿಸಿದ್ದಾರೆ.

 • Share this:

  ನಿರ್ವಾಣ ರಾಕ್‌ ಬ್ಯಾಂಡ್‌ ಬಗ್ಗೆ ಬಹುತೇಕರಿಗೆ ತಿಳಿದಿರುತ್ತದೆ. ಆ ಬ್ಯಾಂಡ್‌ನ 'ನೆವರ್‌ಮೈಂಡ್' ಆಲ್ಬಮ್ ಕವರ್‌ನಲ್ಲಿದ್ದ ಮಗು ಈಗ ಚೈಲ್ಡ್‌ ಪೋರ್ನೋಗ್ರಫಿ ಅಥವಾ ಅಶ್ಲೀಲತೆಗಾಗಿ ಬ್ಯಾಂಡ್ ಮೇಲೆ ಮೊಕದ್ದಮೆ ಹೂಡುತ್ತಿದೆ. 30 ವರ್ಷದ ಸ್ಪೆನ್ಸರ್ ಎಲ್ಡೆನ್, ತನ್ನನ್ನು ನಿರ್ವಾಣದ 1991ರ ಆಲ್ಬಮ್ ಕವರ್‌ನಲ್ಲಿ ಈಜುಕೊಳದಲ್ಲಿ ಚಿತ್ರಿಸಿದ ಬೆತ್ತಲೆಯ ಮಗು ಎಂದು ಹೇಳಿಕೊಂಡಿದ್ದು, ಆ ಮುಖಪುಟದಲ್ಲಿ ಬಳಸಿದ ಚಿತ್ರಕ್ಕೆ ತಮ್ಮ ಗಾರ್ಡಿಯನ್‌ಗಳು ಒಪ್ಪಿಗೆ ನೀಡಿರಲಿಲ್ಲ. ಮತ್ತು ಅದು ಮಕ್ಕಳ ಫೆಡರಲ್ ಅಶ್ಲೀಲತೆಯ ಕಾನೂನನ್ನು ಉಲ್ಲಂಘಿಸುತ್ತದೆ ಎಂದು ಆರೋಪಿಸಿದರು. ಟ್ಯಾಬ್ಲಾಯ್ಡ್ ಪತ್ರಿಕೆ ಟಿಎಂಝಡ್‌ ಈ ಫೆಡರಲ್ ಮೊಕದ್ದಮೆಯ ಬಗ್ಗೆ ವರದಿ ಮಾಡಿದ್ದು, ಎಲ್ಡೆನ್ ತಾನು ಕೇವಲ ನಾಲ್ಕು ತಿಂಗಳ ವಯಸ್ಸಿನವರಾಗಿದ್ದಾಗಿನಿಂದ ತಮ್ಮ ಚಿತ್ರವನ್ನು ಕವರ್‌ನಲ್ಲಿ ಬಳಸುವುದಕ್ಕೆ ಒಪ್ಪಿಗೆ ನೀಡಲು ಸಾಧ್ಯವಾಗಲಿಲ್ಲ. ಆದರೆ ಅವರ ಕಾನೂನು ಪಾಲಕರು ಅಥವಾ ಗಾರ್ಡಿಯನ್‌ಗಳು ಕೂಡ ತಮ್ಮ ಒಪ್ಪಿಗೆ ನೀಡಲಿಲ್ಲ ಎಂದು ಎಲ್ಡೆನ್ ಹೇಳುತ್ತಾರೆ. ಅಲ್ಲದೆ, ಬ್ಯಾಂಡ್ ತನ್ನ ಜನನಾಂಗಗಳನ್ನು ಸ್ಟಿಕ್ಕರ್‌ನಿಂದ ಮುಚ್ಚುವ ಭರವಸೆಯನ್ನು ನೀಡಿತ್ತು. ಆದರೆ, ಆಲ್ಬಮ್‌ ಕವರ್‌ ಹೊರಬಂದಾಗ ಆ ಭರವಸೆಯನ್ನು ಉಳಿಸಿಕೊಳ್ಳಲಿಲ್ಲ ಎಂದು ಎಲ್ಡೆನ್ ತನ್ನ ಮೊಕದ್ದಮೆಯಲ್ಲಿ ದೂರಿದ್ದಾರೆ.


  ಮೊಕದ್ದಮೆಯನ್ನು ಉಲ್ಲೇಖಿಸಿದ ಪಿಚ್‌ಫೋರ್ಕ್, ''ಆತ ಅನುಭವಿಸಿದ ಶಾಶ್ವತ ಹಾನಿಯು ತೀವ್ರ ಮತ್ತು ಶಾಶ್ವತವಾದ ಭಾವನಾತ್ಮಕ ಯಾತನೆಗಳನ್ನು ಒಳಗೊಂಡಿದೆ ಆದರೆ, ಅಷ್ಟಕ್ಕೆ ಸೀಮಿತವಾಗಿಲ್ಲ. ಅದರೊಂದಿಗೆ ದೈಹಿಕ ಅಭಿವ್ಯಕ್ತಿಗಳು, ಅವನ ಸಾಮಾನ್ಯ ಅಭಿವೃದ್ಧಿ ಮತ್ತು ಶೈಕ್ಷಣಿಕ ಪ್ರಗತಿಯೊಂದಿಗೆ ಹಸ್ತಕ್ಷೇಪ, ಜೀವನಪರ್ಯಂತ ಆದಾಯ ಗಳಿಕೆಯ ಸಾಮರ್ಥ್ಯದ ನಷ್ಟ, ಹಿಂದಿನ ಮತ್ತು ಭವಿಷ್ಯದ ವೇತನದ ನಷ್ಟ, ವೈದ್ಯಕೀಯ ಮತ್ತು ಮಾನಸಿಕ ಚಿಕಿತ್ಸೆಗಾಗಿ ಹಿಂದಿನ ಮತ್ತು ಭವಿಷ್ಯದ ವೆಚ್ಚಗಳು, ಜೀವನದ ಆನಂದದ ನಷ್ಟ, ಮತ್ತು ಈ ನಷ್ಟದ ವಿಚಾರಣೆಯಲ್ಲಿ ವಿವರಿಸುವ ಮತ್ತು ಸಾಬೀತಾಗುವ ಇತರ ನಷ್ಟಗಳೂ ಸೇರಿವೆ'' ಎಂದು ಹೇಳಲಾಗಿದೆ.


  TMZ ಪ್ರಕಾರ, ಎಲ್ಡೆನ್ ನಿರ್ವಾಣ ಬ್ಯಾಂಡ್‌ನ ಉಳಿದಿರುವ ಇಬ್ಬರು ಸದಸ್ಯರು ಹಾಗೂ ಕರ್ಟ್ ಕೋಬೈನ್ ಎಸ್ಟೇಟ್ ವಿರುದ್ಧ ಮೊಕದ್ದಮೆ ಹೂಡಿದ್ದಾರೆ ಮತ್ತು ಪ್ರತಿಯೊಬ್ಬರೂ ಕನಿಷ್ಠ 150,000 ಡಾಲರ್‌ ಪಾವತಿಸಬೇಕೆಂದು ಒತ್ತಾಯಿಸಿದ್ದಾರೆ.


  ಇದನ್ನೂ ಓದಿ: All Party Meeting| ಅಫ್ಘನ್​ನಲ್ಲಿ ಶಾಂತಿ ನೆಲೆಸಲು ಭಾರತ ಶ್ರಮಿಸಬೇಕು; ಸರ್ವ ಪಕ್ಷ ಸಭೆ ಬಳಿಕ ದೇವೇಗೌಡರಿಂದ ಹೇಳಿಕೆ ಬಿಡುಗಡೆ


  ಎಲ್ಡೆನ್ ಈ ಹಿಂದೆ ಆಲ್ಬಮ್ ಕವರ್‌ನ ಚಿತ್ರವನ್ನು ವಯಸ್ಕರಾಗಿ ಮರುಸೃಷ್ಟಿಸಿದ್ದರಿಂದ ಮತ್ತು ಆತನ ಎದೆಯ ಮೇಲೆ ಟ್ಯಾಟೂ ಹಾಕಿಸಿಕೊಂಡ ಆಲ್ಬಂನ ಶೀರ್ಷಿಕೆಯನ್ನು ಹೊಂದಿರುವುದರಿಂದ ಈ ಮೊಕದ್ದಮೆಯು ಅನೇಕರಿಗೆ ಆಶ್ಚರ್ಯವನ್ನುಂಟು ಮಾಡಬಹುದು.

  ಎಲ್ಡೆನ್ 2015ರ ಸಂದರ್ಶನವೊಂದರಲ್ಲಿ "ಇಂತಹ ಸಾಂಸ್ಕೃತಿಕ ಪ್ರತಿಮೆಗಳ ಭಾಗವಾಗಿರುವ ನನ್ನ ತಲೆಯನ್ನು ಸುತ್ತುವುದು ಒಂದು ವಿಚಿತ್ರ ಸಂಗತಿ. ಆದರೆ ಇದು ಯಾವಾಗಲೂ ಸಕಾರಾತ್ಮಕ ವಿಷಯವಾಗಿದೆ ಮತ್ತು ನನಗೆ (ಅವಕಾಶಗಳ) ಬಾಗಿಲು ತೆರೆಯಿತು" ಎಂದು ಹೇಳಿಕೊಂಡಿದ್ದರು.


  ಇದನ್ನೂ ಓದಿ: Trending| ಈ ಊರಿಗೆ ಸೂರ್ಯನೇ ಇಲ್ಲವೇ? ಸಮಸ್ಯೆ ಇಲ್ಲ ಬಿಡಿ; ದೈತ್ಯ ಕನ್ನಡಿಯ ಮೂಲಕ ಕೃತಕ ಸೂರ್ಯನ ಸೃಷ್ಟಿ!


  ಹಾಗೂ, "ಇದು ಹುಡುಗಿಯರ ವಿಚಾರದಲ್ಲೂ ಸಹಾಯ ಮಾಡುತ್ತದೆ. ನಾನು ಆ ಬಗ್ಗೆ ಚರ್ಚಿಸುವುದಕ್ಕಿಂತ ಕೆಲವೊಮ್ಮೆ ಹುಡುಗಿಯರು ಅದರ ಬಗ್ಗೆ ನನ್ನ ಜತೆ ಚಾಟ್ ಮಾಡುತ್ತಾರೆ. ಇದು ನಾನೇ ಎಂದು ನಾನು ಅವರಿಗೆ ಹೇಳುವುದಿಲ್ಲ, ಮತ್ತು ನನ್ನ ಸ್ನೇಹಿತರು ನನಗಿಂತ ಹೆಚ್ಚಾಗಿ ಅದರ ಬಗ್ಗೆ ಹೆಮ್ಮೆ ಪಡುತ್ತಾರೆ'' ಎಂದೂ ದಿ ಗಾರ್ಡಿಯನ್‌ಗೆ ನೀಡಿದ್ದ ಸಂದರ್ಶನದಲ್ಲಿ ಸ್ಪೆನ್ಸರ್‌ ಎಲ್ಡೆನ್‌ ಹೇಳಿದ್ದರು.


  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.

  Published by:MAshok Kumar
  First published: