Baby Monkey Video: ನಿಮ್ಮ ಮನಸ್ಸು ಹಗುರಾಗಬೇಕೇ..? ಈ ಮರಿ ಕೋತಿಯ ಕ್ಯೂಟ್ ವಿಡಿಯೋ ನೋಡಿ

ಮರಿ ಕೋತಿ ನೆಲದ ಮೇಲೆ ಕುಳಿತಿರುವುದನ್ನು ಈ ವಿಡಿಯೋದ ಆರಂಭದಲ್ಲಿ ನಾವು ನೋಡಬಹುದು. ಆ ಮುದ್ದಾದ ಜೀವಿಯು ತನ್ನ ಹೆಬ್ಬೆರಳನ್ನು ಬಾಯಲ್ಲಿ ಹೀರುತ್ತಲೇ ಇರುತ್ತದೆ.

ಹಣ್ಣು ತಿನ್ನುತ್ತಿರುವ ಮರಿ

ಹಣ್ಣು ತಿನ್ನುತ್ತಿರುವ ಮರಿ

  • Share this:
    ಕೋತಿ (Monkey)  ಎಂದರೆ ಕೆಲವರಿಗೆ ಭಯ ಹುಟ್ಟಿಸುತ್ತದೆ (Scared) ಮತ್ತು ಇನ್ನೂ ಕೆಲವರಿಗೆ ಕೋತಿ ಮಾಡುವುದೆಲ್ಲವೂ ಸಂತೋಷವನ್ನು (Happy) ನೀಡುತ್ತದೆ ಎಂದು ಹೇಳಬಹುದು. ನಾವು ಯಾವುದಾದರೂ ಪ್ರವಾಸಿ ತಾಣಕ್ಕೆ (Tourist Place ) ಅಥವಾ ದೇವಸ್ಥಾನಗಳಿಗೆ ಹೋದರೆ, ಅಲ್ಲಿ ಭಕ್ತಾದಿಗಳು ನೀಡುವ ತೆಂಗಿನಕಾಯಿಯನ್ನು ಮತ್ತು ಯಾವುದೇ ತಿಂಡಿಯನ್ನು ನೀಡಿದರೆ ಸಾಕು, ‘ಅಬ್ಬಾ ನಾನು ಇದನ್ನು ದೂರ ತೆಗೆದುಕೊಂಡು ಹೋಗಿ ಕುಳಿತು ಒಬ್ಬನೇ ತಿಂತೀನಿ’ ಅಂತ ಕೋತಿ ತನ್ನ ಪಾಡಿಗೆ ತಾನು ಅದನ್ನು ತೆಗೆದುಕೊಂಡು ಹೋಗಿ ಒಂದೆಡೆ ಕುಳಿತುಕೊಂಡು ತಿನ್ನುತ್ತಿರುವ ದೃಶ್ಯವನ್ನು ನಾವು ಅನೇಕ ಬಾರಿ ನೋಡಿರುತ್ತೇವೆ.

    ಈ ರೀತಿಯ ಅನೇಕ ಕೋತಿಗಳ ವಿಡಿಯೋಗಳನ್ನು ನಾವು ಸಾಮಾಜಿಕ ಮಾಧ್ಯಮದಲ್ಲಿ ನೋಡಬಹುದು. ಅವುಗಳು ನೋಡಲು ತುಂಬಾನೇ ಮುದ್ದಾಗಿ ಕಾಣುತ್ತವೆ. ಅವುಗಳು ತಮ್ಮ ಕೈಗೆ ಸಿಕ್ಕಿದ್ದನ್ನು ತಿನ್ನುವಾಗ ತುಂಬಾನೇ ಚುರುಕಾಗಿ ಆ ಕಡೆ ಈ ಕಡೆ ತಮ್ಮ ತಲೆಯನ್ನು ಹೊರಳಾಡಿಸುತ್ತಾ ವೇಗವಾಗಿ ಬಾಯಿಗೆ ಹಾಕಿಕೊಂಡು ತಿನ್ನುವುದನ್ನು ನಾವು ನೋಡಬಹುದು.






    ಈಗ ಇಂಟರ್ನೆಟ್‌ನಲ್ಲಿ ಮರಿ ಪ್ರಾಣಿಗಳ ಹಲವಾರು ವಿಡಿಯೋಗಳನ್ನು ನಾವು ನೋಡಬಹುದಾಗಿದೆ ಮತ್ತು ಅವುಗಳನ್ನು ನೀವು ಒಮ್ಮೆ ನೋಡಿದರೆ ಸಾಕು ನಿಮ್ಮ ಇಡೀ ದಿನ ಖುಷಿ ಖುಷಿಯಾಗಿ ಕಳೆಯಬಹುದು. ಎಂದರೆ ಈ ವಿಡಿಯೋಗಳು ನಿಮ್ಮ ಮುಖದ ಮೇಲೆ ಅಂತಹ ಒಂದು ನಗುವನ್ನು ಮೂಡಿಸುತ್ತವೆ ಮತ್ತು ಸಕಾರಾತ್ಮಕವಾದ ವಾತಾವರಣವನ್ನು ಸೃಷ್ಟಿಸುತ್ತವೆ ಎಂದು ಹೇಳಬಹುದು. ಈ ರೀತಿಯ ಮುದ್ದಾದ ಪುಟ್ಟ ಕೋತಿಯ ಒಂದು ವಿಡಿಯೋ ಕೆಲವು ದಿನಗಳ ಹಿಂದೆ ಪೋಸ್ಟ್ ಮಾಡಿದಾಗಿನಿಂದ ಇನ್‌ಸ್ಟಾಗ್ರಾಮ್‌ನಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

    ಮುದ್ದು ಕೋತಿ ಮರಿ 

    ಹೊರಾಂಗಣ ಸೆಟ್ಟಿಂಗ್‌ನಲ್ಲಿ ಮರಿ ಕೋತಿ ನೆಲದ ಮೇಲೆ ಕುಳಿತಿರುವುದನ್ನು ಈ ವಿಡಿಯೋದ ಆರಂಭದಲ್ಲಿ ನಾವು ನೋಡಬಹುದು. ಆ ಮುದ್ದಾದ ಜೀವಿಯು ತನ್ನ ಹೆಬ್ಬೆರಳನ್ನು ಬಾಯಲ್ಲಿ ಹೀರುತ್ತಲೇ ಇರುತ್ತದೆ ಮತ್ತು ವ್ಯಕ್ತಿಯೊಬ್ಬ ಅವರು ಹಿಡಿದಿಟ್ಟಿದ್ದ ಒಂದು ಡ್ರ್ಯಾಗನ್ ಫ್ರೂಟ್ ಅನ್ನು ಗಮನವಿಟ್ಟು ನೋಡುತ್ತಲೇ ಇರುತ್ತದೆ. ಮನುಷ್ಯ ಆ ಡ್ರ್ಯಾಗನ್ ಫ್ರೂಟ್ ಅನ್ನು ಮರಿ ಕೋತಿಯ ಬಾಯಲ್ಲಿ ಹಿಡಿದುಕೊಳ್ಳಬಹುದಾದ ಒಂದು ಚಿಕ್ಕದಾದ ಸ್ಲೈಸ್ ಆಗಿ ಕತ್ತರಿಸುತ್ತಾನೆ. ಆದರೆ ಅದನ್ನು ಸಾಧ್ಯವಾದಷ್ಟು ಸುಂದರವಾದ ರೀತಿಯಲ್ಲಿ ತಿನ್ನಬೇಕು ಎಂದು ಅದಕ್ಕೆ ನಿಜವಾಗಿಯೂ ಅರ್ಥವಾದಂತಿಲ್ಲ.

    ನಂತರ ಆ ವ್ಯಕ್ತಿ ಹಿಡಿದುಕೊಂಡ ಡ್ರ್ಯಾಗನ್ ಫ್ರೂಟ್‌ನ ಆ ಒಂದು ತುಂಡನ್ನು ಕಚ್ಚಲು ಮುಂದಾಗುತ್ತಾನೆ, ಇದರಿಂದ ಮರಿ ಕೋತಿ ಈ ಕ್ರಿಯೆಯನ್ನು ನಕಲು ಮಾಡಬಹುದು ಮತ್ತು ಅದನ್ನು ಹೇಗೆ ತಿನ್ನಬಹುದು ಎಂದು ಅದಕ್ಕೆ ತೋರಿಸಿಕೊಟ್ಟ ಹಾಗೆ ಆಗುತ್ತದೆ ಎಂದು ಭಾವಿಸಿ ಅದಕ್ಕೆ ತೋರಿಸುತ್ತಾನೆ. ಆ ಮುದ್ದಾದ ಕೋತಿ, ಸಹಜವಾಗಿಯೇ ಅದನ್ನು ಅರ್ಥ ಮಾಡಿಕೊಳ್ಳುತ್ತದೆ ಮತ್ತು ಹಣ್ಣನ್ನು ಸ್ವಲ್ಪ ಸ್ವಲ್ಪ ಕಚ್ಚಿಕೊಂಡು ತಿನ್ನಲು ಮುಂದುವರಿಯುತ್ತದೆ. ಮೂಲ ವಿಡಿಯೋವನ್ನು ಆದಿ ದ್ವಿ ಎಂಬ ಇನ್‌ಸ್ಟಾಗ್ರಾಮ್ ಬಳಕೆದಾರರು ಚಿತ್ರೀಕರಿಸಿದ್ದಾರೆ, ಅವರು ಈ ಮರಿ ಕೋತಿಗೆ ನುಕ್ ಎಂದು ಹೆಸರಿಟ್ಟಿದ್ದಾರೆ.

    ವೈರಲ್​ ಆದ ವಿಡಿಯೋ

    ಈ ಮುದ್ದಾದ ವಿಡಿಯೋವನ್ನು ಸುಮಾರು ನಾಲ್ಕು ದಿನಗಳ ಹಿಂದೆ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಲಾಗಿದೆ ಮತ್ತು ಅಂದಿನಿಂದ, ಈ ಮುದ್ದಾದ ಪುಟ್ಟ ಜೀವಿಯನ್ನು ಆರಾಧಿಸುವುದನ್ನು ನಿಲ್ಲಿಸಲು ಸಾಧ್ಯವಾಗದ ಜನರಿಂದ ಹಲವಾರು ಕಾಮೆಂಟ್‌ಗಳನ್ನು ಇದು ಗಳಿಸಿದೆ. ಇಲ್ಲಿಯವರೆಗೆ 5.2 ಮಿಲಿಯನ್‌ಗೂ ಹೆಚ್ಚು ವೀಕ್ಷಣೆಗಳನ್ನು ಸಹ ಪಡೆದಿದೆ. ಇನ್‌ಸ್ಟಾಗ್ರಾಮ್ ಬಳಕೆದಾರರೊಬ್ಬರು "ಓ ದೇವರೇ.. ಅದು ತನ್ನ ಹೆಬ್ಬೆರಳನ್ನು ಹೀರುತ್ತಿದೆಯಾ" ಇದರೊಂದಿಗೆ ಹೃದಯ ಮತ್ತು ಕಣ್ಣಿನ ಮುಖದ ಎಮೋಜಿ ಇತ್ತು. "ಪುಟ್ಟ ಮಗು ತನ್ನ ಹೆಬ್ಬೆರಳನ್ನು ಹೀರುತ್ತಿದೆ" ಎಂದು ಮತ್ತೊಂದು ಕಾಮೆಂಟ್ ಹೇಳುತ್ತದೆ.
    Published by:Kavya V
    First published: