ಇತ್ತೀಚಿಗಿನ ಕಾಲದಲ್ಲಿ ನಂಬಲು ಆಗದೇ ಇರುವಂತಹ ವಿಚಿತ್ರ ಘಟನೆಗಳೇ ಹೆಚ್ಚಾಗಿ ನಡೆಯುತ್ತಾ ಇದೆ. ಅದ್ರಲ್ಲೂ ವೈದ್ಯಕೀಯ ಲೋಕಕ್ಕೇ ಶಾಕ್ (Shock) ನೀಡುವಂತಹ ಘಟನೆಗಳು ನಡೆಯುತ್ತಾ ಇರುವುದೇ ಹೆಚ್ಚು. ಇಂತಹ ಸುದ್ಧಿಗಳು ಸಾಮಾಜಿಕ ಜಾಲತಾಣದಲ್ಲಿ (Social Media) ಸಖತ್ ವೈರಲ್ (Viral) ಆಗ್ತಾ ಇರುತ್ತವೆ. ಇದೀಗ ಇದಕ್ಕೆ ಸಂಬಂಧ ಪಟ್ಟ ಒಂದು ಸುದ್ಧಿ ವೈರಲ್ ಆಗ್ತಾ ಇದೆ. ಅಪರೂಪದ ವೈದ್ಯಕೀಯ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಅದರ ಬಗ್ಗೆ ಕೇಳಿ ಎಲ್ಲರೂ ಬೆಚ್ಚಿಬಿದ್ದಿದ್ದಾರೆ. ಒಂದು ಮಗುವಿನ ಜನನವಾಗಿದೆ. ಇದನ್ನು ನೋಡಿ ಖುಷಿ ಪಡುವುದೋ ಅಥವಾ ಶಾಕ್ ಆಗುವುದೋ ಒಂದು ಗೊತ್ತಿಲ್ಲ.
ಮಗು ಅಂದ್ರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ? ಎಲ್ಲೋ ಶೇಕಡ ಎರಡರಷ್ಟೋ, ಮೂರರಷ್ಟೋ ಜನರಿಗೆ ಮಕ್ಕಳು ಅಂದ್ರೆ ಇಷ್ಟ ಇರೋಲ್ಲ ಅಂತ ಹೇಳಬಹುದು. ಈ ಮಗು ಹುಟ್ಟಿದಾ್ ಮನೆಯವರು ಮುಖದಲ್ಲಿ ಕಾಣುವ ಸಂತೋಷ, ನೆಮ್ಮದಿಯನ್ನು ವಿವರಿಸಲು ಅಸಾಧ್ಯ. ಆದರೆ ಇಲ್ಲೊಂದು ಮಗುವಿನ ಜನನವಾಗಿದೆ. ಈ ಮಗುವನ್ನು ನೋಡಿ ಸಂತೋಷ ಪಡುವುದೋ ಅಥವಾ ಅಳುವುದೋ ಎಂದು ತೋಚುತ್ತಿಲ್ಲ. ಅಷ್ಟರ ಮಟ್ಟಿಗೆ ಮನೆಯವರಿಗೆ, ವೈದ್ಯರಿಗೆ ಶಾಕ್ ಆಗಿದೆ.
ಯಾಕೆಂದರೆ ಆ ಮಗುವಿನ ಹಿಂಭಾಗದಲ್ಲಿ ಆರು ಸೆಂಟಿಮೀಟರ್ ಬಾಲದೊಂದಿಗೆ ಜನಿಸಿತು. ವೈದ್ಯರು ಕೂಡ ಗೊಂದಲದಲ್ಲಿದ್ದಾರೆ. ಈ ಪ್ರಕರಣ ತೀರಾ ವಿರಳ ಎಂದು ವೈದ್ಯರು ತಿಳಿಸಿದ್ದು, ಬಳಿಕ ಶಸ್ತ್ರಚಿಕಿತ್ಸೆ ಮೂಲಕ ಮಗುವಿನ ಬೆನ್ನ ಮೇಲಿದ್ದ ಬಾಲವನ್ನು ತೆಗೆಯಲಾಗಿದೆ.
ಇದನ್ನೂ ಓದಿ: ನೀವು ಯಾವ ಕಡೆಯಿಂದ ಸಮೋಸ ತಿನ್ನುತ್ತೀರಿ? ಮಹಿಳಾ ವೈದ್ಯೆ ಪ್ರಶ್ನೆಗೆ ನೆಟ್ಟಿಗರ ಚಿತ್ರ-ವಿಚಿತ್ರ ಉತ್ತರ!
ಮಾಹಿತಿಯ ಪ್ರಕಾರ, ಇದೆಲ್ಲವೂ ಬ್ರೆಜಿಲ್‌ನಲ್ಲಿ ಸಂಭವಿಸಿದೆ ಮತ್ತು ಬೆನ್ನಿನ ಮೇಲೆ ಬಾಲವಿರುವ ಈ ಮಗು ಹೆಣ್ಣು. ಈ ಮಗು ಜನಿಸಿದ್ದು ಹುಟ್ಟಿದ್ದು ಸ್ಪೈನಾ ಬೈಫಿಡಾ ಎಂಬ ಅಪರೂಪದ ಕಾಯಿಲೆಯಿಂದ. ವೈದ್ಯರ ಪ್ರಕಾರ, ಅಂಗವೈಕಲ್ಯವು ಆ ಮಗುವಿಗೆ ಬೆನ್ನುಮೂಳೆಯಲ್ಲಿ ಅಂತರವನ್ನು ಉಂಟುಮಾಡಿತು ಮತ್ತು ಮಗುವಿನ ಬಾಲವು ಬೆಳೆಯಲು ಕಾರಣವಾಯಿತು.
ಸಾವೊ ಪಾಲೊದಲ್ಲಿನ ಮಕ್ಕಳ ಆಸ್ಪತ್ರೆಯಾದ ಗ್ರೆನಾಡಾಕ್‌ನ ವೈದ್ಯರು, ಬೆನ್ನುಮೂಳೆಯನ್ನು ಸೊಂಟಕ್ಕೆ ಸಂಪರ್ಕಿಸುವ ಲುಂಬೊಸ್ಯಾಕ್ರಲ್ ಪ್ರದೇಶದಿಂದ ಬಾಲವು ಮೇಲ್ಮುಖವಾಗಿ ಬೆಳೆದಿದೆ ಎಂದು ಹೇಳಿದ್ದಾರೆ. ಇದನ್ನು 'ಮಾನವ ಹುಸಿ-ಬಾಲ' ಎಂದು ಪರಿಗಣಿಸಲಾಗಿದೆ, ಇದು ಬಾಲದಂತೆ ಕಾಣುವ ಬೆಳವಣಿಗೆ ಆದರೆ ವಾಸ್ತವವಾಗಿ ಬೆನ್ನುಮೂಳೆಯ ಸಮಸ್ಯೆ ಅಥವಾ ಗೆಡ್ಡೆಯಿಂದ ಉಂಟಾಗುತ್ತದೆ.
ಈ ಬಾಲಕಿಗೆ 3 ವರ್ಷ ಆದ ಬಳಿಕ ಈಕೆಗೆ ಬಾಲ ಬಂದಿದ್ದ ಸುದ್ಧಿಯು ಹೊರಗೆ ಬಂದಿದೆ. ಮಗು ಹೊಟ್ಟೆಯಲ್ಲಿ ಇರುವಾಗ ವೈದ್ಯರ ಸಲಹೆಯ ಮೇರೆಗೆ ತಾಯಿ ಆಹಾರಗಳನ್ನು ತಿನ್ನಬೇಕು, ಒಳಿತನ್ನೇ ನೋಡಬೇಕು, ಮಾಡಬೇಕು. ಇಲ್ಲದಿದ್ದಲ್ಲಿ ಇದರ ನೇರ ಪರಿಣಾಮ ಮಗುವಿನ ಮೇಲೆ ಬೀರುತ್ತದೆ. ಕೊಲವೊಮ್ಮೆ ಅಚಾನಕವಾಗಿ ಕೂಡ ಈ ಅಂಗವೈಕಲ್ಯದಿಂದ ಮಗು ಹುಟ್ಟೋದುಂಟು. ಸದ್ಯಕ್ಕೆ ಈ ಹೆಣ್ಣು ಮಗು ಈಗ ಅರೋಗ್ಯಕರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ