ಇತ್ತೀಚೆಗೆ ಈ ಆನೆಗಳ (Elephant) ತುಂಟಾಟದ ವೀಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ (Social Media) ತುಂಬಾನೇ ಜೋರಾಗಿ ಹರಿದಾಡುತ್ತಿವೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಕೆಲವು ವಾರಗಳ ಹಿಂದೆ ಆನೆಯೊಂದು ಹೀಗೆ ಮಾವುತನು ಮಲಗಿದ್ದಂತಹ 'ಹಾಸಿಗೆ ನಂದು' ಅಂತ ಅವನ ಜೊತೆಯಲ್ಲಿ ತಮಾಷೆಯಾಗಿ ಕಿತ್ತಾಡಿದ್ದ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಸಿಕ್ಕಾಪಟ್ಟೆ ವೈರಲ್ (Viral) ಆಗಿತ್ತು. ಆನಂತರ ಇನ್ನೊಂದು ವೀಡಿಯೋ ಸಹ ಸಾಮಾಜಿಕ ಮಾಧ್ಯಮ(Social media)ದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಅದರಲ್ಲಿ ಆನೆಯೊಂದು ತನಗೆ ಸ್ನಾನ ಮಾಡಿಸುವಾಗ ಅದು ತನ್ನ ತಲೆಯನ್ನು ಕೆಳಕ್ಕೆ ನೆಲದ ಮೇಲೆ ಊರಿ ಅದರ ತಲೆಯ ಮೇಲೆ ನಿಂತು ಹಿಂದಿನ ದೇಹವನ್ನೇ ಮೇಲಕ್ಕೆ ಎತ್ತಿತ್ತು.
ಇದನ್ನು ಸಹ ಜನರು ನೋಡಿ ಅಬ್ಬಬ್ಬಾ.. ಆನೆ ಹೇಗೆಲ್ಲಾ ಮಾಡುತ್ತವೆ ಅಂತ ನೆಟ್ಟಿಗರು ಆಶ್ಚರ್ಯಚಕಿತರಾಗಿದ್ದರು. ಹೀಗೆ ಒಂದೇ ಎರಡೇ ಅನೇಕ ವೀಡಿಯೋಗಳು ಆನೆಯ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದವು ಎಂದು ಹೇಳಬಹುದು.
ಸೆಲ್ಫಿ ತೆಗೆಯಲು ಹೋದ ಬಾಲಕಿಯ ಮುಖಕ್ಕೆ ಹೊಡೆದ ಆನೆ
ಇನ್ನೊಂದು ವೀಡಿಯೋದಲ್ಲಿ ಮೃಗಾಲಯದಲ್ಲಿ ಆನೆಯನ್ನು ನೋಡುತ್ತಿರುವ ಹಲವರಲ್ಲಿ ಒಬ್ಬ ಹುಡುಗಿ ತುಂಬಾ ಹತ್ತಿರದಿಂದ ಆನೆಯ ಫೋಟೋವನ್ನು ತೆಗೆಯಲು ಹೋದಾಗ ಆನೆಯು ಕೋಪಗೊಂಡು ತನ್ನ ಸೊಂಡಿಲಿನಿಂದ ಆ ಹುಡುಗಿಯ ಮೊಬೈಲ್ ಫೋನ್ ಅನ್ನು ನೆಲಕ್ಕೆ ಬಿಳಿಸಿತು. ಈ ಗಾಬರಿಯಿಂದ ಬೆಚ್ಚಿ ಬಿದ್ದ ಹುಡುಗಿ ಕೆಳಕ್ಕೆ ಬೀಳದಂತೆ ಅಲ್ಲೇ ಪಕ್ಕದಲ್ಲಿ ಇರುವ ವ್ಯಕ್ತಿಯನ್ನು ಗಟ್ಟಿಯಾಗಿ ಹಿಡಿದುಕೊಂಡಳು. ಹೀಗೆ ಆನೆಗಳು ತುಂಬಾನೇ ಸ್ನೇಹ ಜೀವಿಗಳು ಎಂದು ಹೇಳಬಹುದು, ಆದರೆ ಅವುಗಳಿಗೆ ಕೋಪ ಬಂತು ಎಂದರೆ ಏನಾದರೂ ಆಗಬಹುದು ಎಂಬುದನ್ನು ಈ ವೀಡಿಯೋಗಳನ್ನು ನೋಡಿ ಅರ್ಥ ಮಾಡಿಕೊಳ್ಳಬಹುದು.
ಇದನ್ನೂ ಓದಿ: Sarus Crane: ಎರಡು ಮೊಟ್ಟೆಯ ಕಥೆ! ಈ ಹಳ್ಳಿಯ ಜನ ಕೊಕ್ಕರೆಗಳಿಗೆ ಹೇಗೆ ಸಹಾಯ ಮಾಡಿದ್ದಾರೆ ಅಂತ ಒಮ್ಮೆ ನೀವೇ ನೋಡಿ
ಮತ್ತೊಂದು ಆನೆಯ ವಿಡಿಯೋ ವೈರಲ್
ಇಲ್ಲೊಂದು ಅಂತಹದೇ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ ನೋಡಿ. ಆನೆಯೊಂದು ಮಹಿಳೆಯ ಮೇಲೆ ಹೇಗೆ ದಾಳಿ ಮಾಡಿದೆ ನೋಡಿ. ಈ ಘಟನೆ ನಡೆದಿದ್ದು ಥೈಲ್ಯಾಂಡ್ ನಲ್ಲಿ ಎಂದು ಹೇಳಲಾಗುತ್ತಿದೆ. ಹೆಣ್ಣುಮಗಳ ಮೇಲೆ ಆನೆ ದಾಳಿ ಮಾಡಿದೆ. ಮುಂದೆ ಏನಾಯಿತು ಎಂಬುದು ನಿಮಗೆ ನಿಜಕ್ಕೂ ಆಶ್ಚರ್ಯವನ್ನುಂಟು ಮಾಡುತ್ತದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.
ಮಹಿಳೆಯ ಮೇಲೆ ದಾಳಿ ಮಾಡಿದ ಆನೆ
ಥೈಲ್ಯಾಂಡ್ ನಲ್ಲಿ ಟ್ರಾವೆಲ್ ಇನ್ಫ್ಲುಯೆನ್ಸರ್ ಮೇಲೆ ಆನೆಯೊಂದು 'ದಾಳಿ' ನಡೆಸುತ್ತಿರುವುದನ್ನು ತೋರಿಸುವ ವೀಡಿಯೋ ಅಂತರ್ಜಾಲದಲ್ಲಿ ವೈರಲ್ ಆಗಿದೆ. ಮೇಗನ್ ಮಿಲನ್ ಎಂಬ ಮಹಿಳೆ ಚಾಯ್ ಲಾಲ್ ಆರ್ಕಿಡ್ ನಲ್ಲಿರುವ ಚಿಯಾಂಗ್ ಮೈ ಎಂಬ ಆನೆಗಳ ಪ್ರದೇಶಕ್ಕೆ ಭೇಟಿ ನೀಡಿದರು ಮತ್ತು ಅಲ್ಲಿನ ಕೆಲವು ಆನೆಗಳೊಂದಿಗೆ ಮಾತನಾಡಲು ಬಯಸಿದರು. ಆವಾಗ ಅದರಲ್ಲಿರುವ ಒಂದು ಸಣ್ಣ ಜಂಬೋ ಸ್ವಲ್ಪ ಹೆಚ್ಚು ಉತ್ಸುಕವಾಯಿತು ಮತ್ತು ಮೇಗನ್ ಅವರನ್ನು ಹಾಗೆಯೇ ಮುಂದಕ್ಕೆ ತಳ್ಳಿಕೊಂಡು ಹೋಗಿ ಅವರನ್ನು ನೆಲಕ್ಕೆ ಉರುಳಿಸಿತು.
ವೀಡಿಯೋದಲ್ಲಿ ಏನಿದೆ
ಟ್ವಿಟರ್ ನಲ್ಲಿ ಹಂಚಿಕೊಂಡಿರುವ ಪೋಸ್ಟ್ ಒಂದರಲ್ಲಿ, ಮರಿ ಆನೆಯೊಂದು ಮೇಗನ್ ನನ್ನು ಅಟ್ಟಿಸಿಕೊಂಡು ಹೋಗಿ ಡಿಕ್ಕಿ ಹೊಡೆಯುತ್ತಿರುವುದು ಕಂಡು ಬಂದಿದೆ. ಕೆಲವು ಸೆಕೆಂಡುಗಳ ನಂತರ, ಆನೆಗಳ ಹಿಂಡಿನಿಂದ ಮತ್ತೊಂದು ಆನೆಯು ಮೇಗನ್ ನ ರಕ್ಷಣೆಗೆ ಬಂದು ಪುಟ್ಟ ಆನೆಯನ್ನು ದೂರಕ್ಕೆ ಕರೆದೊಯ್ದಿತು.
ವೀಡಿಯೋದಲ್ಲಿ, ಸಣ್ಣ ಜಂಬೋ ಮೇಗನ್ ಮೇಲೆ ದಾಳಿ ಮಾಡುತ್ತಿರುವಂತೆ ತೋರಿತು. ಆದರೆ ಮಹಿಳೆ ಮಾತ್ರ ಮತ್ತೊಂದು ಟ್ವೀಟ್ ನಲ್ಲಿ ಪ್ರತಿಕ್ರಿಯಿಸಿ "ನನಗೆ ಏನು ನೋವಾಗಿಲ್ಲ, ಅದು ತುಂಬಾನೇ ಚಿಕ್ಕ ಆನೆ, ಬಹುಶಃ 3 ವಾರಗಳಾಗಿರಬೇಕು ಅದಕ್ಕೆ ಅಷ್ಟೇ. ಆನೆಗಳು ಜನರನ್ನು ನೋಯಿಸುವುದಿಲ್ಲ. ಸಹಾನುಭೂತಿ ಹೊಂದಿರುವ ಏಕೈಕ ಪ್ರಾಣಿಗಳಲ್ಲಿ ಆನೆಗಳು ಒಂದು" ಎಂದು ಅವರು ಬರೆದಿದ್ದಾರೆ.
ಇದನ್ನೂ ಓದಿ: Cats Eat Woman: ಮಹಿಳೆಯನ್ನು ಕಚ್ಚಿಕೊಂದು ತಿಂದುಹಾಕಿದ 20 ಬೆಕ್ಕುಗಳು!
ಈ ವೀಡಿಯೋ 15 ಮಿಲಿಯನ್ ವೀಕ್ಷಣೆಗಳು ಮತ್ತು ಟನ್ ಗಟ್ಟಲೆ ಪ್ರತಿಕ್ರಿಯೆಗಳೊಂದಿಗೆ ಹೆಚ್ಚು ವೈರಲ್ ಆಗಿದೆ. ಕೆಲವರು ಈ ವೀಡಿಯೋವನ್ನು ತಮಾಷೆಯಾಗಿ ಕಂಡುಕೊಂಡರೆ, ಇತರರು ಜನರಿಗೆ ಆನೆಗಳ ಅಷ್ಟು ಹತ್ತಿರಕ್ಕೆ ಹೋಗಲು ಅವಕಾಶ ನೀಡಬಾರದು ಎಂದು ಅಭಿಪ್ರಾಯಪಟ್ಟಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ