Baby Dinosaur: ಇವು ನಿಜಕ್ಕೂ ಡೈನೋಸಾರ್ ಮರಿಗಳೇ? ವೈರಲ್ ವಿಡಿಯೋ ನೋಡಿ
ಬೇಬಿ ಡೈನೋಸಾರ್ಗಳು ಓಡುವ ಆ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಈಗ ನೋಡುಗರನ್ನು ಬೆಚ್ಚಿ ಬೀಳಿಸಿದೆ. ಅಷ್ಟಕ್ಕೂ ಆ ದೃಶ್ಯದಲ್ಲಿರುವ ಪ್ರಾಣಿಗಳು ಡೈನೋಸಾರ್ ಮರಿಗಳಾ? ಅಥವಾ ಡೈನೋಸಾರ್ ಮರಿಗಳಂತೆ ಕಾಣುವ ಆ ಪ್ರಾಣಿ ಯಾವುದು ಅಂತೀರಾ. ಹಾಗಾದ್ರೆ ಮುಂದೆ ಓದಿ.
ಬೇಬಿ ಡೈನೋಸಾರ್ಗಳ (Baby Dinosaur) ಓಡುವ ಆ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಈಗ ನೋಡುಗರನ್ನು ಬೆಚ್ಚಿ ಬೀಳಿಸಿದೆ. ಬಿಟ್ಟಿಂಗ್ಬಿಡನ್ ಎಂಬುವರು ತಮ್ಮ ಟ್ವೀಟರ್ ಖಾತೆಯಲ್ಲಿ (Twitter) ಡೈನೋಸಾರ್ ಮರಿಗಳ ಗುಂಪೊಂದು ಸಮುದ್ರದ ತಟದಲ್ಲಿ (Beach) ಓಡುತ್ತಿದೆ ಎಂದು ಬರೆದು ಆ ದೃಶ್ಯವನ್ನು ಸಾಮಾಜಿಕ ಜಾಲತಾಣದಲ್ಲಿ (Social Media) ಪೋಸ್ಟ್ ಮಾಡಿದ್ದು, ಈಗ ಆ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ (Viral Video) ಆಗಿದೆ. ಅಷ್ಟಕ್ಕೂ ಆ ದೃಶ್ಯದಲ್ಲಿರುವ ಪ್ರಾಣಿಗಳು ಡೈನೋಸಾರ್ ಮರಿಗಳಾ? ಅಥವಾ ಡೈನೋಸಾರ್ ಮರಿಗಳಂತೆ ಕಾಣುವ ಬೇರೆ ಪ್ರಾಣಿ ಇದೆಯಾ? ಹಾಗಾದ್ರೆ ಮುಂದೆ ಓದಿ.
ಸಮುದ್ರದ ತಟದಲ್ಲಿ ಡೈನೋಸಾರ್ ಮರಿಗಳು ಓಡುತ್ತಿವೆ ಎಂದು ಬಿಟ್ಟಿಂಗ್ಬಿಡನ್ ಅವರು ತಮ್ಮ ಟ್ವೀಟರ್ ನಲ್ಲಿ ಬರೆದು ಹಾಕಿರುವ ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ. ಕೇವಲ 14 ಸೆಕೆಂಡ್ನ್ನು ಒಳಗೊಂಡಿರುವ ಈ ದೃಶ್ಯ ನೋಡುಗರನ್ನು ಬೆಚ್ಚಿ ಬೀಳಿಸಿದೆ.
ನಿಜಕ್ಕೂ ಡೈನೋಸಾರ್ ಮರಿಗಳೇ? ಇನ್ನು ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ನೋಡಿದ ನೆಟ್ಟಿಗರಲ್ಲಿ ಇವು ಡೈನೋಸಾರ್ ಮರಿಗಳು ಅಲ್ಲ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ಪ್ರಾಣಿಗಳು ಓಡುತ್ತಿರುವ ಜಾಗವನ್ನು ಗಮನಿಸಿ ಆ ಪ್ರದೇಶದಲ್ಲಿ ಡೈನೋಸಾರ್ ಹೋಲುವಂತ ಪ್ರಾಣಿಗಳಿದ್ದು, ಉದ್ದ ಕತ್ತಿನ ಹಾಗೂ ಉದ್ದ ಬಾಲ ಹೊಂದಿರುವ ಈ ಪ್ರಾಣಿಗಳು ಪ್ರೊಸಿಯೊನಿಡೆ ಕುಟುಂಬಕ್ಕೆ ಸೇರಿದ ಕೋಟಿಮುಂಡಿ ಸಸ್ತನಿಗಳು ಎಂದು ಟ್ವೀಟ್ ಮಾಡಿದ್ದಾರೆ.
ಎಲ್ಲಿ ಕಂಡು ಬರುತ್ತವೆ ಈ ಕೊಟಿಮುಂಡಿ ಪ್ರಾಣಿಗಳು ಹೌದು, ಕೋಟಿಮುಂಡಿ ಎಂಬ ಪ್ರಾಣಿ ದಕ್ಷಿಣ ಅಮೇರಿಕಾ, ಮಧ್ಯ ಅಮೇರಿಕಾ, ಮೆಕ್ಸಿಕೋ ಮತ್ತು ನೈರುತ್ಯ ಯುನೈಟೆಡ್ ಸ್ಟೇಟ್ಸ್ಗೆ ಸೇರಿದ ಸ್ಥಳೀಯ ಸಸ್ತನಿಗಳಾಗಿವೆ. ಬ್ರೇಜಿಲ್ ಟುಪಿನ್ ಎಂಬ ಭಾಷೆಯಿಂದ ಬಂದ ಕೋಟಿಮುಂಡಿ ಹೆಸರಿನ ಈ ಪದದ ಅರ್ಥ ಒಂಟಿ ಕೋಟಿ ಎಂಬ ಅರ್ಥ ನೀಡುತ್ತದೆ ಎಂದು ಬಳಕೆದಾರರು ಟ್ವೀಟರ್ನಲ್ಲಿ ಬರೆದುಕೊಂಡಿದ್ದಾರೆ.
9.8 ಮಿಲಿಯನ್ಕ್ಕೂ ಹೆಚ್ಚು ವಿಕ್ಷಣೆ ಪಡೆದುಕೊಂಡ ಆ ಪೋಸ್ಟ್ ಆ 14 ಸೆಕೆಂಡ್ ವಿಡಿಯೋವನ್ನು ಗಮನಿಸಿದ್ರೆ ಉದ್ದ ಕತ್ತಿನ ಡೈನೋಸಾರ್ ಪ್ರಬೇಧದ ಸೌರೋಪಾಡ್ಸ್ ಡೈನೋಸಾರ್ಗಳಂತೆ ಕಾಣಿಸುತ್ತಿದ್ದು, ನೋಡುಗರನ್ನು ಬೆಚ್ಚಿ ಬೀಳಿಸಿದೆ. ಆದ್ರೆ ಅಸಲಿಗೆ ಆ ಪ್ರಾಣಿ ಕೋಟಿಮುಂಡಿ ಎಂದು ಗೊತ್ತಾಗಿದೆ. ಆದ್ರೂ ಕೇವಲ 14 ಸೆಕೆಂಡ್ನ್ನು ಒಳಗೊಂಡಿರುವ ಈ ದೃಶ್ಯವನ್ನು 9.8 ಮಿಲಿಯನ್ಕ್ಕೂ ಹೆಚ್ಚು ಜನರು ವಿಕ್ಷೀಸಿದ್ದಾರೆ. ಅಷ್ಟೆ ಅಲ್ಲದೆ 47 ಸಾವಿರ ಜನರು ಲೈಕ್ ಮಾಡಿದ್ದಾರೆ.
ಜುರಾಸಿಕ್ ಪಾರ್ಕ್ ಮೂವಿ ನೆನಪಿಸಿದ ಆ ದೃಶ್ಯ ಹೌದು, ಈ ವಿಡಿಯೋ ಮೊದಮೊದಲು ನೋಡುಗರನ್ನು ಹಿಂದೆ ಕಂಡ ಜುರಾಸಿಕ್ ಪಾರ್ಕ್ ಮೂವಿ ನೆನಪಿಸಿದೆ ಎಂದು ಕೆಲವರು ಟ್ವೀಟರ್ನಲ್ಲಿ ಬರೆದುಕೊಂಡಿದ್ದಾರೆ. ನಿಜವಾಗಲು ಡೈನೋಸಾರ್ ಆಕಾರ ಹೊಂದಿರುವಂತೆ ಕಾಣುವ ಈ ಕೋಟಿಮುಂಡಿ ಪ್ರಾಣಿಗಳು ಓಡುವ ವೇಳೆ ತನ್ನ ಉದ್ದವಾದ ಕತ್ತಿಯನ್ನು ಮೇಲಕ್ಕೆ ಎತ್ತಿ ಓಡುತ್ತದೆ.
ಹೀಗಾಗಿ ಮೊದಲಿಗೆ ಈ ದೃಶ್ಯವನ್ನು ನೋಡಿದ್ರೆ ಡೈನೋಸಾರ್ಗಳಂತೆ ಕಾಣುತ್ತವೆ. ಇನ್ನು ಕೊಟಿಮುಂಡಿ ಪ್ರಾಣಿ 17 ರಿಂದ 27 ಇಂಚು ಉದ್ದ ಇರುತ್ತದೆ. ಮತ್ತು ಎತ್ತರ 12 ಇಂಚು ಹಾಗೂ 2 ರಿಂದ 8 ಕೆಜಿವರೆಗೆ ತೂಕ ಇರುತ್ತದೆ ಎಂದು ಜನರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
Published by:Suraj Risaldar
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ