Research: ಬಡ ಮಕ್ಕಳಿಗಿಂತ Rich ಫ್ಯಾಮಿಲಿಯಲ್ಲಿ ಹುಟ್ಟಿದ ಮಕ್ಕಳೇ ಹೆಚ್ಚು ಚುರುಕಂತೆ!

ಹಣ ಸಮೃದ್ಧವಾಗಿರುವ ಕುಟುಂಬಗಳಲ್ಲಿ ಜನಿಸಿದ ಶಿಶುಗಳು ಬಡತನದಲ್ಲಿರುವವರಿಗಿಂತ ಹೆಚ್ಚು ಮೆದುಳಿನ ಚಟುವಟಿಕೆಯನ್ನು ಹೊಂದಿರುತ್ತಾರೆ ಎಂಬ ಅಂಶದ ಮೇಲೆ ವರದಿ ತಯಾರಾಗಿದೆ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ಬಡತನವು (Poverty) ಮಕ್ಕಳ ಮಾನಸಿಕ ಬೆಳವಣಿಗೆಗೆ (Mental Development) ಮೆದುಳಿನ ಚಟುವಟಿಕೆ, ಚುರುಕತನದ ಮೇಲೆ ಪ್ರಭಾವ ಬೀರುತ್ತದೆ ಎಂದು ಅಧ್ಯಯನವೊಂದು ತಿಳಿಸಿಕೊಟ್ಟಿದೆ. ಶ್ರೀಮಂತರ ಮಕ್ಕಳಿಗೆ ಹೋಲಿಸಿದರೆ ಕಡಿಮೆ ಮಾಸಿಕ ಆದಾಯ ಹೊಂದಿರುವಂತಹ  ಪೋಷಕರ ಮನೆಯ ಮಕ್ಕಳ  ಮೆದುಳಿನ ಚಟುವಟಿಕೆ (Brain Activity) ಕಡಿಮೆ ಇರುತ್ತದೆ. ಒಂದು ವರ್ಷದ ಬಳಿಕ ಮಗುವಿನ ಬುದ್ಧಿ ಸಾಮರ್ಥ್ಯ ಕಡಿಮೆಯಾಗುತ್ತಾ ಹೋಗುತ್ತದೆ ಎಂದು ಅಮೆರಿಕಾದ ಜರ್ನಲ್‌ ಪ್ರೊಸೀಡಿಂಗ್ಸ್ ಆಫ್‌ ದಿ ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್ (National Academy of Sciences) ತಿಳಿಸಿದೆ. ಈ ಸಂಸ್ಥೆಯು ಅಧ್ಯಯನ ಮಾಡಿದ ಮೊದಲ ವರದಿಯಲ್ಲಿ ಈ ವಿಚಾರ ಬಹಿರಂಗವಾಗಿದೆ. ಈ ಅಧ್ಯಯನ ಒಂದು ವರ್ಷದ ನಂತರ ಮಕ್ಕಳ ಚಿಂತನೆ ಮತ್ತು ಕಲಿಕೆಗೆ ಸಂಬಂಧಿಸಿದೆ ಎಂದು ತಿಳಿಸಿದೆ.

ಮಕ್ಕಳ ಬುದ್ಧಿಮತ್ತೆಗೆ ಅಡ್ಡಿಯಾಗುವ ಬಡತನ

US ಅಧ್ಯಯನವು ಬಡತನವು ಹೇಗೆ ಮಕ್ಕಳ ಅರಿವಿನ ಮೇಲೆ ಪರಿಣಾಮ ಬೀರುತ್ತದೆ ಎಂದು ತಿಳಿಸಿದೆ. ಈ ಅಧ್ಯಯನದ ಹಿರಿಯ ಲೇಖಕ ಕಿಂಬರ್ಲಿ ನೋಬಲ್ ಹೇಳುವ ಪ್ರಕಾರ "ಹಲವು ವರ್ಷಗಳಿಂದ ಬಡತನದಲ್ಲಿ ಬೆಳೆಯುತ್ತಿರುವ ಮಕ್ಕಳು ಶಾಲಾ ಜೀವನದಲ್ಲಿ ಮಹತ್ತರ ಬೆಳವಣಿಗೆ ಕಾಣುವುದಿಲ್ಲ. ಅಲ್ಲದೇ ಅವರು ಉತ್ತಮ ಆರೋಗ್ಯವನ್ನೂ ಸಹ ಹೊಂದುವುದಿಲ್ಲ" .

ಈ ವ್ಯತ್ಯಾಸವು ಹಣಕಾಸಿನ ಸಂಪನ್ಮೂಲಗಳ ಕೊರತೆಯಿಂದ ಬಂದಿದೆಯೇ ಅಥವಾ ಬಡತನದೊಂದಿಗೆ ಸಾಮಾನ್ಯವಾಗಿ ಸಂಬಂಧಿಸಿದ ಇತರ ಅಂಶಗಳಿಂದ ಈ ಬೆಳವಣಿಗೆ ಆಗುತ್ತಿದೆಯೇ ಎಂದು ಇಲ್ಲಿಯವರೆಗೆ ತಿಳಿದಿಲ್ಲ. ಇದು ಬಡತನದಿಂದ ಮಗುವಿನ ಮೆದುಳಿನ ಚುರುಕುತನ ಕಡಿಮೆಯಾಗುತ್ತದೆ ಎಂದು ತಿಳಿಸುವ ಮೊದಲ ಅಧ್ಯಯನವಾಗಿದೆ ಎಂದು ಕಿಂಬರ್ಲಿ ನೋಬಲ್ ಹೇಳಿದ್ದಾರೆ.

ಇದನ್ನೂ ಓದಿ: Online Shoppingನಲ್ಲಿ 1.4 ಲಕ್ಷದ ಫರ್ನಿಚರ್ ಖರೀದಿಸಿದ ಪುಟ್ಟ ಪೋರ, ಆರ್ಡರ್ ಕಂಡು ಅಮ್ಮನಿಗೆ ಫುಲ್ ಶಾಕ್!

ಶ್ರೀಮಂತರ ಮನೆ ಮಕ್ಕಳೇ ಬುದ್ಧಿವಂತರಾ?

ಹಣ ಸಮೃದ್ಧವಾಗಿರುವ ಕುಟುಂಬಗಳಲ್ಲಿ ಜನಿಸಿದ ಮಕ್ಕಳು ಬಡತನದಲ್ಲಿರುವವರಿಗಿಂತ ಹೆಚ್ಚು ಮೆದುಳಿನ ಚಟುವಟಿಕೆಯನ್ನು ಹೊಂದಿರುತ್ತಾರೆ ಎಂಬ ಅಂಶದ ಮೇಲೆ ವರದಿ ತಯಾರಾಗಿದೆ. ಇದು ಕೇವಲ ಮಗುವಿನ ಒಂದು ವರ್ಷದ ಬೆಳವಣಿಗೆಯ ವರದಿಯಾಗಿದ್ದು, ಅಧ್ಯಯನದ ಮೊದಲ ಹಂತವಾಗಿದೆ.

2018ರಲ್ಲಿ, ಈ ಅಧ್ಯಯನಕ್ಕಾಗಿ ನೋಬಲ್ ಮತ್ತು ಅವರ ತಂಡವು ಕಡಿಮೆ ಆದಾಯ ಹೊಂದಿರುವ ಸಾವಿರ ತಾಯಂದಿರು ಮತ್ತು ಅವರ ನವಜಾತ ಶಿಶುಗಳನ್ನು ಸಂಪರ್ಕಿಸಿತು. ಯುಎಸ್‌ನ 4 ಪ್ರಮುಖ ನಗರಗಳ ಹೆರಿಗೆ ವಾರ್ಡ್‌ಗಳಲ್ಲಿ ಇರುವ ತಾಯಂದಿರು ಹಾಗೂ ಶಿಶುಗಳ ಮೇಲೆ 'ಬೇಬೀಸ್ ಫಸ್ಟ್ ಇಯರ್ಸ್' ಅಂಶಗಳನ್ನು ಅಧ್ಯಯನ ಮಾಡಲು ಗಣನೆಗೆ ತೆಗೆದುಕೊಳ್ಳಲಾಯಿತು.

ಮಕ್ಕಳಿಗೆ EEG ಮಾನಿಟರ್ ಅಳವಡಿಕೆ

ಅಧ್ಯಯನಕ್ಕೆ ಒಳಗಾದ ಕೆಲವು ತಾಯಂದಿರ ವಾರ್ಷಿಕ ಗಳಿಕೆಯು ಕೇವಲ 20 ಡಾಲರ್‌ ಆಗಿದ್ದರೆ, ಇನ್ನೂ ಕೆಲವರದ್ದು 333 ಡಾಲರ್ ಆಗಿತ್ತು. ಅಧ್ಯಯನದಲ್ಲಿ ಸರಾಸರಿ ವಾರ್ಷಿಕ ಗಳಿಕೆಯು ಕಡಿಮೆ ಇರುವ ಮನೆಗೆ ನೋಬಲ್ ತಂಡ ಭೇಟಿ ನೀಡಿ, ಮೆದುಳಿನ ಸಾಮರ್ಥ್ಯವನ್ನು ಪತ್ತೆ ಹಚ್ಚುವ EEG ಮಾನಿಟರ್ ಅನ್ನು ಮಗುವಿಗೆ ಅಳವಡಿಸಿ, ಬುದ್ಧಿಯ ಸಾಮರ್ಥ್ಯ ಅಳೆಯಲಾಯಿತು.

ಕೋವಿಡ್ -19 ಸಾಂಕ್ರಾಮಿಕ ಸಂದರ್ಭವಾಗಿದ್ದರಿಂದ 1,000 ಶಿಶುಗಳಲ್ಲಿ 435 ಶಿಶುಗಳನ್ನು ಅಧ್ಯಯನ ಮಾಡಲು ಅವರಿಗೆ ಸಾಧ್ಯವಾಯಿತು. ಈ ಪ್ರಕಾರ ಬಡತನದಲ್ಲಿ ಬೆಳೆಯುತ್ತಿರುವ ಮಕ್ಕಳ ಮೆದುಳಿನ ಬೆಳವಣಿಗೆ ಕಡಿಮೆ ಇರುತ್ತದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: Breastfeed Tips: ತಾಯಿ ಎದೆಹಾಲಿನಿಂದ ಶಿಶುವಿನ ಬೆಳವಣಿಗೆಗೆ ಎಷ್ಟೆಲ್ಲಾ ಪ್ರಯೋಜನವಿದೆ ಗೊತ್ತೇ?

ಹಣಕಾಸಿನ ಪರಿಣಾಮ

ಯಾವ ಕುಟುಂಬದವರು ಆರ್ಥಿಕವಾಗಿ ಸಬಲರಿರುತ್ತಾರೋ ಆ ಮಕ್ಕಳಲ್ಲಿ ಹೆಚ್ಚು ಕಲಿಕೆ ಸಾಮರ್ಥ್ಯವಿರುತ್ತದೆ ಎಂದು ಅಧ್ಯಯನದ ಮತ್ತೋರ್ವ ಪ್ರಮುಖ ಲೇಖಕರು ಸೋನ್ಯಾ ಟ್ರೋಲರ್-ರೆನ್‌ಫ್ರೀ ತಿಳಿಸಿದ್ದಾರೆ. ಮಕ್ಕಳ ಅರಿವಿನ ನಡವಳಿಕೆಯ ಮೇಲೆ ಹಣಕಾಸಿನ ಪರಿಣಾಮ ಹೇಗೆ ನೇರವಾಗಿ ಪ್ರಭಾವ ಬೀರುತ್ತದೆ ಎಂಬುವುದರ ಮೇಲೆ ಈ ಅಧ್ಯಯನವು ಕೇಂದ್ರೀಕೃತವಾಗಿದೆ.

'ಬೇಬೀಸ್ ಫಸ್ಟ್ ಇಯರ್ಸ್' ಸಂಶೋಧನೆಯ ಮುಂದಿನ ಹಂತಗಳಲ್ಲಿ ತಾಯಂದಿರಿಗೆ ಹಣ ನೀಡಿ ಅವರು ಹಣವನ್ನು ಹೇಗೆ ಖರ್ಚು ಮಾಡಿದ್ದಾರೆ ಎಂಬ ಸ್ವಯಂಪ್ರೇರಿತ ಮಾಹಿತಿಯ ಆಧಾರದ ಮೇಲೆ ಅಧ್ಯಯನ ಮುಂದುವರೆಯುತ್ತದೆ ಎಂದು ಹೇಳಿದ್ದಾರೆ.  ಶಿಶುಗಳು 4 ವರ್ಷ 4 ತಿಂಗಳು ತಲುಪುವವರೆಗೂ ಈ ಅಧ್ಯಯನ ನಡೆಯುತ್ತದೆ ಎಂದು ನೋಬಲ್ ತಿಳಿಸಿದ್ದಾರೆ.
Published by:vanithasanjevani vanithasanjevani
First published: