Ayam Cemani| ಈ ಕೋಳಿಯ ಮಾಂಸ, ಮೂಳೆ, ಗರಿ ಎಲ್ಲವೂ ಕಪ್ಪು ಕಪ್ಪು..

ಆ ಕೋಳಿಯೇ ಆಯಮ್ ಸೆಮಾನಿ. ನೀವು ಅದನ್ನು ಖರೀದಿಸಬಹುದು, ಆದರೆ ಊಟ ಅಥವಾ ಭೋಜನಕ್ಕೆ ಬಳಕೆಗೆ ಬರುವುದಿಲ್ಲ. ಈ ಜಾತಿಯ ಕೋಳಿಗಳು ಸಂಪೂರ್ಣವಾಗಿ ಕಪ್ಪು ಗರಿಗಳನ್ನು ಹೊಂದಿದ್ದು, ಕಪ್ಪು ಕಣ್ಣುಗಳು ಮತ್ತು ಪಾದಗಳನ್ನು ಹೊಂದಿರುತ್ತವೆ.

ಕಪ್ಪು ಕೋಳಿ.

ಕಪ್ಪು ಕೋಳಿ.

 • Share this:
  ಪ್ರಾಣಿ, ಪಕ್ಷಿ ಪ್ರಪಂಚ ಪ್ರತಿಯೊಬ್ಬರ ಇಷ್ಟದ ಪ್ರಪಂಚ. ವಿಭಿನ್ನ ಬಣ್ಣ, ಆಕಾರ ಹೊಂದಿರುವ ಇವು ಇಡೀ ಭೂಮಿಯ ಸಂಪತ್ತು. ಒಂದೊಂದು ಅವುಗಳ ಬಣ್ಣದಿಂದ ಗಮನ ಸೆಳೆದರೆ ಇನ್ನು ಕೆಲವು ಪ್ರಾಣಿ ಪಕ್ಷಿಗಳು ಅವುಗಳ ಲಕ್ಷಣಗಳು, ಪ್ರತಿಕ್ರಿಯಿಸುವ ರೀತಿ ಹೀಗೆ ನಾನಾ ಕಾರಣಗಳಿಂದ ಇಷ್ಟವಾಗುತ್ತದೆ. ಇದೀಗ ಕೋಳಿಯೊಂದು ತನ್ನ ಬಣ್ಣ ಮತ್ತು ಲಕ್ಷಣಗಳಿಂದ ಜನರನ್ನು ಸೆಳೆದಿದೆ.ನೀವು ಸಾಮಾನ್ಯವಾಗಿ ಗಾಢ ಕಂದು ಬಣ್ಣದ ಕಪ್ಪು ಬಾಲದ, ಬಿಳಿ ಬಣ್ಣದ ಕಪ್ಪು ಗರಿ, ಸಂಪೂರ್ಣ ಬಿಳಿ ಬಣ್ಣದ ಕೋಳಿಗಳನ್ನು ನೋಡಿರು ತ್ತೀರಾ. ಆದರೆ ಇಲ್ಲೊಂದು ಕೋಳಿ ಇದೆ. ಅದರ ಬಣ್ಣ ಸಂಪೂರ್ಣ ಕಪ್ಪು. ನಂಬಲು ಅಸಾಧ್ಯವಾದರೂ ನೀವು ಇದನ್ನು ನಂಬಲೇ ಬೇಕು.

  ಹೌದು ಆ ಕೋಳಿಯೇ ಆಯಮ್ ಸೆಮಾನಿ. ನೀವು ಅದನ್ನು ಖರೀದಿಸಬಹುದು, ಆದರೆ ಊಟ ಅಥವಾ ಭೋಜನಕ್ಕೆ ಬಳಕೆಗೆ ಬರುವುದಿಲ್ಲ. ಈ ಜಾತಿಯ ಕೋಳಿಗಳು ಸಂಪೂರ್ಣವಾಗಿ ಕಪ್ಪು ಗರಿಗಳನ್ನು ಹೊಂದಿದ್ದು, ಕಪ್ಪು ಕಣ್ಣುಗಳು ಮತ್ತು ಪಾದಗಳನ್ನು ಹೊಂದಿರುತ್ತವೆ. ಇದರ ಅಂಗಗಳು, ಮಾಂಸ ಮತ್ತು ಮೂಳೆಗಳು ಕೂಡ ಕಪ್ಪು.

  ನ್ಯಾಷನಲ್ ಜಿಯೋಗ್ರಾಫಿಕ್ ಇದನ್ನು ಪ್ರಕೃತಿಯಲ್ಲಿ ಕಂಡುಬರುವ 'ಅತ್ಯಂತ ಆಳವಾದ ಪಿಗ್ಮೆಟೆಂಡ್ ಕ್ರಿಯೇಚರ್' ಎಂದು ವಿವರಿಸಿದೆ. ಆದರೆ ಕೋಳಿಗಳು ಕೆನೆ ಬಣ್ಣದ ಮೊಟ್ಟೆಗಳನ್ನು ಇಡುವುದರಿಂದ ಆಯಮ್ ಸೆಮಾನಿ ಕೋಳಿಯ ಪ್ರತಿಯೊಂದು ಅಂಶವೂ ಕಪ್ಪು ಎಂದು ಹೇಳಲು ಸಾಧ್ಯವಾಗುವುದಿಲ್ಲ.

  ಅಯಮ್ ಸೆಮಾನಿ ಕೋಳಿ ಅಪರೂಪವಾಗಿದ್ದು ಇದನ್ನು ಹೆಚ್ಚಾಗಿ ಇಂಡೋನೇಷಿಯಾದಲ್ಲಿ ಕಾಣಬಹುದು. ಇದರ ಅಸಾಮಾನ್ಯ ಕಪ್ಪು ನೋಟವು ಅಂಗಾಂಶಗಳ ಅಧಿಕ ವರ್ಣದ್ರವ್ಯದ ಪರಿಣಾಮವಾಗಿದೆ, ಇದು ಫೈಬ್ರೊಮೆಲಾನೋಸಿಸ್ ಎಂದು ಕರೆಯಲ್ಪಡುವ ಅನುವಂಶಿಕ ಸ್ಥಿತಿಯಿಂದ ಉಂಟಾಗುತ್ತದೆ. ಈ ಕೋಳಿಯು ಜಾವಾ ದ್ವೀಪದಿಂದ ಬಂದಿರಬಹುದು ಎಂದು ಶಂಕಿಸಲಾಗಿದೆ. 1998ರಲ್ಲಿ ಡಚ್ ಬ್ರೀಡರ್ ಜಾನ್ ಸ್ಟೆವೆರಿಂಕ್‌ರಿಂದ ಯೂರೋಪಿಗೆ ಆಮದು ಮಾಡಿಕೊಳ್ಳಲಾಯಿತು.

  ಕುತೂಹಲಕಾರಿಯಾಗಿ, ಕಪ್ಪು ಒಳಭಾಗ ಹೊಂದಿರುವ ಏಕೈಕ ಕೋಳಿ ತಳಿ ಇದು ಎಂದು ಹೇಳಲಾಗುವುದಿಲ್ಲ. ಸ್ವೀಡನ್‍ನ ಬೋಹುಸ್ಲಾನ್-ದಾಲ್ಸ್ ಸ್ವಾರ್ಥನಾ, ವಿಯೆಟ್ನಾಂನ ಬ್ಲ್ಯಾಕ್ ಎಚ್‍ಮಾಂಗ್ ಮತ್ತು ಸಿಲ್ಕಿ ಎಂಬವು ಕೂಡ ಒಂದೇ ರೀತಿಯ ವೈಶಿಷ್ಟ್ಯಗಳನ್ನು ಹೊಂದಿವೆ.

  ಸ್ವೀಡಿಷ್ ಜೆನೆಟಿಸ್ಟ್ ಲೀಫ್ ಆಂಡರ್ಸನ್ ಪ್ರಕಾರ, ಮೇಲೆ ತಿಳಿಸಿದ ಎಲ್ಲಾ ಜಾತಿಗಳು ಒಂದೇ 'ಜಿನೋಮ್‍ನಲ್ಲಿ ಸಂಕೀರ್ಣ ಮರುಜೋಡಣೆ' ಹೊಂದಿದ್ದು, ಪುರಾತನ ಕೋಳಿ ಎಂದು ಗುರುತಿಸಬಹುದು.

  "ಈ ಫಿನೋಟೈಪ್ ಹೊಂದಿರುವ ಎಲ್ಲಾ ಕೋಳಿಗಳು ಒಂದೇ ರೀತಿಯ ರೂಪಾಂತರ ಹೊಂದಿರುತ್ತವೆ ಎಂಬುದು ಕುತೂಹಲಕಾರಿಯಾದ ವಿಚಾರ ಕಪ್ಪು ಕೋಳಿಗಳನ್ನು ನೋಡಿದ ಕೆಲವು ಮಾನವರು ಅವುಗಳ ಬಗ್ಗೆ ಉತ್ಸುಕರಾಗಿ ಅವುಗಳನ್ನು ಇಟ್ಟುಕೊಂಡರು ಮತ್ತು ಕೆಲವರು ಮಾರಿದರು ಮತ್ತು ಅವರು ಪ್ರಪಂಚದಾದ್ಯಂತ ಹರಡಿದರು" ಎಂದು ಹೇಳಿದರು.

  ಇದನ್ನೂ ಓದಿ: IT Sector| ಭಾರತದಲ್ಲಿ ಐಟಿ ವೃತ್ತಿಪರರಿಗೆ ಉದ್ಯೋಗವಕಾಶಗಳಲ್ಲಿ ಶೇ.400ರಷ್ಟು ಏರಿಕೆ: ಬೆಂಗಳೂರಿಗೆ ಮೊದಲ ಆದ್ಯತೆ

  ಅಯಾಮ್ ಸೆಮಾನಿ ಕೋಳಿ ಅನ್ನು ಮೊದಲು ಗುರುತಿಸಿದಾಗಿನಿಂದ ವಿವಿಧ ಅಡ್ಡಹೆಸರುಗಳಿಂದ ಕರೆಯಲಾಗುತ್ತದೆ. ಸ್ಮಿತ್ಸೋನಿಯನ್ ಪ್ರಕಾರ, ಅವುಗಳನ್ನು 'ವಿಶ್ವದ ಅತ್ಯಂತ ಮೋಡಿಮಾಡುವ ಕೋಳಿ', 'ಕೋಳಿಗಳ ಲಂಬೋರ್ಘಿನಿ' ಮತ್ತು 'ಗೋಥ್ ಕೋಳಿ' ಎಂದು ಕರೆಯಲಾಗುತ್ತದೆ.
  First published: