Kerala Onam Lottery Result 2022: ಆಟೋ ಡ್ರೈವರ್‌ಗೆ ಒಲಿದ ಅದೃಷ್ಟ, ಕೊನೆ ಕ್ಷಣದಲ್ಲಿ ಖರೀದಿಸಿದ ಟಿಕೆಟ್‌ಗೆ ಬಂತು 25 ಕೋಟಿ ಬಹುಮಾನ!

ಈ ವರ್ಷದ ಕೇರಳದ ತಿರುವೋಣಂ ಬಂಪರ್ ಲಾಟರಿ ಬಡ ಆಟೋ ಚಾಲಕನ ಲೈಫ್‌ ಅನ್ನೇ ಚೇಂಜ್ ಮಾಡಿದೆ. ತಿರುವನಂತಪುರಂನ ಶ್ರೀವರಾಹಂ ನಿವಾಸಿ ಅನೂಪ್ ಎಂಬುವರು ಓಣಂ ಬಂಪರ್ ಲಾಟರಿಯಲ್ಲಿ ಪ್ರಥಮ ಬಹುಮಾನವಾಗಿ 25 ಕೋಟಿ ರೂಪಾಯಿಗಳನ್ನು ಪಡೆದಿದ್ದಾರೆ.

25 ಕೋಟಿ ಬಹುಮಾನ ಗೆದ್ದ ಆಟೋ ಚಾಲಕ ಅನೂಪ್

25 ಕೋಟಿ ಬಹುಮಾನ ಗೆದ್ದ ಆಟೋ ಚಾಲಕ ಅನೂಪ್

  • Share this:
ಕೇರಳ: ಅದೃಷ್ಟ (Luck) ಎನ್ನುವುದು ಹೇಗೆ ಇರುತ್ತೆ ನೋಡಿ. ಅದೃಷ್ಟ ಎನ್ನುವುದು ಬಂದರೆ ದಿನಬೆಳಗಾದರೆ ಎಲ್ಲಿದ್ದವ ಇನ್ನೆಲ್ಲಿಗೋ ತಲುಪುತ್ತಾನೆ. ಬಡವನಾಗಿದ್ದ (Poor) ವ್ಯಕ್ತಿ ಬೆಳಗಾದರೆ ಶ್ರೀಮಂತನಾಗಿ (Rich) ಮೆರೆಯುತ್ತಾನೆ. ಇದಕ್ಕೆ ಉದಾಹರಣೆ ಎನ್ನುವಂತೆ ಕೇರಳದಲ್ಲಿ (Kerala) ಘಟನೆಯೊಂದು ನಡೆದಿದೆ. ಕೇರಳ ಸರ್ಕಾರದಿಂದ (Kerala Government) ನಡೆಸಲ್ಪಡುವ ಓಣಂ ಲಾಟರಿಯಲ್ಲಿ (Onam Lottery) ಈ ಬಾರಿ ಬಂಪರ್ ಬಹುಮಾನವಾಗಿ (Bumper Prize) ಬರೋಬ್ಬರಿ 25 ಕೋಟಿ ರೂಪಾಯಿಗಳನ್ನು (25 crore rupees) ಘೋಷಿಸಲಾಗಿತ್ತು. ಈ ಲಾಟರಿ ರಿಸಲ್ಟ್ (Result) ಇಂದು ಪ್ರಕಟವಾಗಿದ್ದು, ಆಟೋ ಚಾಲಕನೊಬ್ಬನ (Auto Driver) ಜೀವನವೇ ಬದಲಾಗಿದೆ (Life Change). ಹೊಟ್ಟೆಪಾಡಿಗಾಗಿ ಆಟೋ ಓಡಿಸುತ್ತಿದ್ದ ಡ್ರೈವರ್ ಇಂದು ಬರೋಬ್ಬರಿ 25 ಕೋಟಿ ರೂಪಾಯಿಗಳ ಒಡೆಯನಾಗಿದ್ದಾನೆ.

25 ಕೋಟಿ ರೂಪಾಯಿ ಗೆದ್ದ ಆಟೋ ಚಾಲಕ

ಈ ವರ್ಷದ ಕೇರಳದ ತಿರುವೋಣಂ ಬಂಪರ್ ಲಾಟರಿ ಬಡ ಆಟೋ ಚಾಲಕನ ಲೈಫ್‌ ಅನ್ನೇ ಚೇಂಜ್ ಮಾಡಿದೆ. ತಿರುವನಂತಪುರಂನ ಶ್ರೀವರಾಹಂ ನಿವಾಸಿ ಅನೂಪ್ ಎಂಬುವರು ಓಣಂ ಬಂಪರ್ ಲಾಟರಿಯಲ್ಲಿ ಪ್ರಥಮ ಬಹುಮಾನವಾಗಿ 25 ಕೋಟಿ ರೂಪಾಯಿಗಳನ್ನು ಪಡೆದಿದ್ದಾರೆ.



ನಿನ್ನೆ ರಾತ್ರಿಯಷ್ಟೇ ಟಿಕೆಟ್ ಖರೀದಿಸಿದ್ದ ಅನೂಪ್

ಆಟೋ ಚಾಲಕನಾಗಿರುವ ಅನೂಪ್ ನಿನ್ನೆ ರಾತ್ರಿ ಎಂದಿನಂತೆ ಕೆಲಸ ಮುಗಿಸಿಕೊಂಡು ಮನೆಗೆ ಮರಳಲು ಸಜ್ಜಾಗಿದ್ದರು. ಆಗ ತಡರಾತ್ರಿ ತಿರುವನಂತಪುರದ ಪಜವಂಗಡಿಯ ಗಣಪತಿ ದೇವಸ್ಥಾನದ ಬಳಿಯ ಚಿಲ್ಲರೆ ಮಾರಾಟ ಮಳಿಗೆಯಿಂದ ಲಾಟರಿ ಟಿಕೆಚ್ ಖರೀದಿಸಿದ್ದಾರೆ. ಟಿಜೆ 750605 ನಂಬರಿನ ಲಾಟರಿ ಟಿಕೆಟ್ ಅನ್ನು ಲಾಟರಿ ಏಜೆಂಟ್ ತಂಗರಾಜ್ ಎಂಬುವರಿಂದ ಖರೀದಿಸಿದ್ದಾರೆ. ಇಂದು ಅದೇ ಲಾಟರಿಗೆ 25 ಕೋಟಿ ರೂಪಾಯಿ ಬಹುಮಾನ ಬಂದಿದೆ.

ಇದನ್ನೂ ಓದಿ: Lottery: ಅಸ್ಸಾಂ ಕಾರ್ಮಿಕನಿಗೆ ಬಂತು 80 ಲಕ್ಷ ಹಣ! ಎದ್ನೋ ಬಿದ್ನೋ ಅಂತ ಪೊಲೀಸ್ ಠಾಣೆಗೆ ಓಡಿದ ಆಸಾಮಿ!

ಮಗಳ ಗೋಲ್ಕದಲ್ಲಿದ್ದ ಹಣ ತೆಗೆದು ಟಿಕೆಟ್ ಖರೀದಿ

ಮೂವತ್ತು ವರ್ಷದ ಅನುಪ್ ಅವರ ಮನೆಯಲ್ಲಿ ಪತ್ನಿ, ಮಗು ಮತ್ತು ಅವರ ತಾಯಿ ಇದ್ದಾರೆ. ಬಡತನದಲ್ಲೇ ಆಟೋ ಓಡಿಸುತ್ತಿದ್ದ ಅನೂಪ್‌ಗೆ, ನಿನ್ನೆ ಸಂಜೆಯವರೆಗೂ ಲಾಟರಿ ಖರೀದಿಸಲು ಕೈಯಲ್ಲಿ 500 ರೂಪಾಯಿ ಇರಲಿಲ್ಲ. ಆಗ ಪುಟ್ಟ ಮಗಳು ಮನೆಯಲ್ಲಿ ಗೋಲ್ಕದಲ್ಲಿ ಹಣ ಕೂಡಿಡುತ್ತಿದ್ದ ವಿಚಾರ ಗೊತ್ತಾಗಿದೆ. ಅದೇ ಹುಂಡಿಯಿಂದ 500 ರೂಪಾಯಿ ತೆಗೆದು, ಕೇವಲ ಒಂದೇ ಒಂದು ಲಾಟರಿ ಟಿಕೆಟ್ ಖರೀದಿಸಿದ್ದಾರೆ.

ವಿಜೇತರ ನಂಬರ್ ಘೋಷಿಸಿದ ಸಚಿವರು

ಭಾನುವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಕೇರಳದ ಹಣಕಾಸು ಸಚಿವ ಕೆ.ಎನ್.ಬಾಲಗೋಪಾಲ್ ಅವರು ಕೇರಳದ ರಾಜಧಾನಿ ತಿರುವನಂತಪುರದಲ್ಲಿ ಲಕ್ಕಿ ಡ್ರಾ ಫಂಕ್ಷನ್ ಮೂಲಕ ವಿಜೇತರನ್ನು ಆಯ್ಕೆ ಮಾಡಿದರು, ಅನೂಪ್ ಅವರ ಟಿಕೆಟ್ ಸಂಖ್ಯೆ TJ-750605 ವಿಜೇತರಾಗಿ ಹೊರಹೊಮ್ಮಿತು.

ವಿಜೇತನನ್ನು ಗುರುತಿಸಿದ ಲಾಟರಿ ಸಂಯೋಜಕರು

ವಿಜೇತ ಟಿಕೆಟ್ ಸಂಖ್ಯೆಯನ್ನು ಘೋಷಿಸಿದ ಕೆಲವೇ ಕ್ಷಣಗಳಲ್ಲಿ, ಟಿಕೆಟ್ ಮಾಲೀಕರಿಗಾಗಿ ಹುಡುಕಾಟ ಪ್ರಾರಂಭವಾಯಿತು ಮತ್ತು ತಿರುವನಂತಪುರಂನ ಪಜವಂಗಡಿಯ ಏಜೆನ್ಸಿಯಿಂದ ಲಾಟರಿ ಟಿಕೆಟ್ ಖರೀದಿಸಲಾಗಿದೆ ಎಂದು ಕಂಡುಬಂದಿದೆ. ಮತ್ತು ಸ್ವಲ್ಪ ಸಮಯದ ನಂತರ, ಟಿಕೆಟ್ ಖರೀದಿಸಿದ ವ್ಯಕ್ತಿಯನ್ನು ಗುರುತಿಸಲಾಯಿತು. ಅದು ಅನೂಪ್ ಅವರದ್ದೇ ನಂಬರ್ ಆಗಿತ್ತು.

ಇದನ್ನೂ ಓದಿ: Dream-11: 2 ಕೋಟಿ ರೂಪಾಯಿ ಗೆದ್ದು ಶ್ರೀಮಂತನಾದ ಚಾಲಕ; 49 ರೂಪಾಯಿಗೆ ಹೊಡೆಯಿತು ಜಾಕ್‌ಪಾಟ್!

 “ನನಗೆ ಏನು ಮಾಡಬೇಕು ಅಂತ ಗೊತ್ತಾಗುತ್ತಿಲ್ಲ”

ಇನ್ನು ಲಾಟರಿ ಬಂದ ಖುಷಿಯಲ್ಲಿ ಇರುವ ಅನೂಪ್, ನಾನು ನಿಜವಾಗಿಯೂ ಗೆಲ್ಲುವ ನಿರೀಕ್ಷೆ ಇರಲಿಲ್ಲ. ನಾನು ಸಾಮಾನ್ಯವಾಗಿ ಮಾಡುವಂತೆಯೇ ಟಿಕೆಟ್ ಖರೀದಿಸಿದೆ. ಆದರೆ ಅದೃಷ್ಟದಿಂದ 25 ಕೋಟಿ ಹಣ ಬಂದಿದೆ. ಈ ಸಮಯದಲ್ಲಿ ನನಗೆ ಏನು ಹೇಳಬೇಕು ಅಥವಾ ಹಣವನ್ನು ಏನು ಮಾಡಬೇಕೆಂದು. ತಿಳಿದಿಲ್ಲ. ಸದ್ಯ ನಾನು ಸಂತೋಷವಾಗಿದ್ದೇನೆ. ನಂತರ ಏನು ಮಾಡಬೇಕೆಂದು ಯೋಚಿಸುತ್ತೇನೆ ಅಂತ ಅನೂಪ್ ಹೇಳಿದ್ದಾರೆ.
Published by:Annappa Achari
First published: