Einsteinಗಿಂತಲೂ ಹೆಚ್ಚು ಶಾರ್ಪ್​ ಅಂತೆ ಈ 11 ವರ್ಷದ ಹುಡುಗಿ!

ಆಧರಾ

ಆಧರಾ

ಆಲ್ಬರ್ಟ್ ಐನ್‌ಸ್ಟೈನ್‌ಗಿಂತ ಹೆಚ್ಚಿನ ಐಕ್ಯೂ ಹೊಂದಿರುವ ಆಧರಾ ಅವರು ಐದನೇ ವಯಸ್ಸಿನಲ್ಲಿ ತನ್ನ ಪ್ರಾಥಮಿಕ ಶಾಲೆಯನ್ನು ಪೂರ್ಣಗೊಳಿಸಿದರು ಮತ್ತು ಕೇವಲ ಒಂದು ವರ್ಷದ ನಂತರ ಮಧ್ಯಮ ಮತ್ತು ಪ್ರೌಢಶಾಲೆಯಿಂದ ಪದವಿ ಪಡೆದರು.

  • Share this:

ಐನ್‌ಸ್ಟೈನ್‌ (Albert Einstein) ತಮ್ಮ ಬುದ್ಧಿವಂತಿಕೆಗೆ ಹೆಸರಾದವರು. ಸಾಮಾನ್ಯವಾಗಿ “ಮಹಾ ಬುದ್ಧಿವಂತ” ಅನ್ನೋದಕ್ಕೆ ನಾವು ಐನ್‌ಸ್ಟೈನ್‌ ಹೆಸರನ್ನೇ ಆಗಾಗ ಉಲ್ಲೇಖಿಸುತ್ತೇವೆ. ಆದರೆ ಇಲ್ಲೊಬ್ಬಳು ಹುಡುಗಿ ಐನ್‌ಸ್ಟೈನ್‌ಗಿಂತಲೂ ಹೆಚ್ಚು ಬುದ್ಧಿವಂತಿಕೆ ಹೊಂದಿದ್ದಾಳೆ. ಹೌದು, ಇದು ತಮಾಷೆಯಲ್ಲ! ಮೆಕ್ಸಿಕೋ (Mexico) ಮೂಲದ ಆಧರಾ ಪೆರೆಜ್‌ ಸ್ಯಾಂಚೆಜ್‌ ಅನ್ನೋ 11 ವರ್ಷದ ಹುಡುಗಿ ಐನ್‌ಸ್ಟೈನ್‌ಗಿಂತಲೂ ಹೆಚ್ಚು ಬುದ್ಧಿವಂತಳು ಎನಿಸಿಕೊಂಡಿದ್ದಾಳೆ. ಮೆಕ್ಸಿಕೋ ಸಿಟಿಯಿಂದ ಬಂದಿರುವ ಅಧರಾ ಪೆರೆಜ್ ಸ್ಯಾಂಚೆಜ್‌ಗೆ 11 ವರ್ಷ ವಯಸ್ಸು. ಆಕೆಯ ಐಕ್ಯೂ ಸ್ಕೋರ್ (IQ Score) 162 ಎಂದು ವರದಿಯಾಗಿದ್ದು, ಇದು ಐನ್‌ಸ್ಟೈನ್‌ಗಿಂತ ಹೆಚ್ಚು ಎಂದು ಹೇಳಲ್ಪಟ್ಟಿದೆ.


ಆಲ್ಬರ್ಟ್ ಐನ್‌ಸ್ಟೈನ್‌ಗಿಂತ ಹೆಚ್ಚಿನ ಐಕ್ಯೂ ಹೊಂದಿರುವ ಆಧರಾ ಅವರು ಐದನೇ ವಯಸ್ಸಿನಲ್ಲಿ ತನ್ನ ಪ್ರಾಥಮಿಕ ಶಾಲೆಯನ್ನು ಪೂರ್ಣಗೊಳಿಸಿದರು ಮತ್ತು ಕೇವಲ ಒಂದು ವರ್ಷದ ನಂತರ ಮಧ್ಯಮ ಮತ್ತು ಪ್ರೌಢಶಾಲೆಯಿಂದ ಪದವಿ ಪಡೆದರು.


ಇನ್ನು, ಆಧರಾ ಸ್ಯಾಂಚೆಜ್‌ CNCI ವಿಶ್ವವಿದ್ಯಾನಿಲಯದಿಂದ ಸಿಸ್ಟಮ್ಸ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿದ್ದಾರೆ. ಮೆಕ್ಸಿಕೊದ ತಾಂತ್ರಿಕ ವಿಶ್ವವಿದ್ಯಾಲಯದಿಂದ ಗಣಿತಶಾಸ್ತ್ರದಲ್ಲಿ ಪರಿಣತಿ ಹೊಂದಿದ್ದು, ಕೈಗಾರಿಕಾ ಎಂಜಿನಿಯರಿಂಗ್ ಪದವಿಯನ್ನು ಪಡೆದಿದ್ದಾರೆ. ಸದ್ಯ ಎಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆಯಲಿದ್ದಾರೆ.


ನಾಸಾದಲ್ಲಿ ಗಗನಯಾತ್ರಿಯಾಗುವ ಕನಸು


11 ವರ್ಷದ ಪ್ರಾಡಿಜಿ ಸಾರ್ವಜನಿಕ ಭಾಷಣಕಾರರೂ ಆಗಿರುವ ಆಧರಾ ಮುಂದೊಂದು ದಿನ ಗಗನಯಾತ್ರಿಯಾಗಲು ಬಯಸಿದ್ದಾರೆ. ಮುಂದೊಂದು ದಿನ ನಾಸಾಗೆ ಸೇರುವ ಕನಸುಗಳೊಂದಿಗೆ, ಅವರು ಈಗ ಯುವ ವಿದ್ಯಾರ್ಥಿಗಳಿಗೆ ಬಾಹ್ಯಾಕಾಶ ಪರಿಶೋಧನೆ ಮತ್ತು ಗಣಿತವನ್ನು ಉತ್ತೇಜಿಸುವ ಮೂಲಕ ಮೆಕ್ಸಿಕನ್ ಬಾಹ್ಯಾಕಾಶ ಸಂಸ್ಥೆಯೊಂದಿಗೆ ಕೆಲಸ ಮಾಡುತ್ತಿದ್ದಾರೆ.


ಇದನ್ನೂ ಓದಿ: ಇಂಥ ಚಿತ್ರ-ವಿಚಿತ್ರ ಮನೆಗಳನ್ನು ನೀವ್ ನೋಡಿರೋದಕ್ಕೆ ಸಾಧ್ಯನೇ ಇಲ್ಲ, ಏನ್ ಡಿಸೈನ್ ಅಂತೀರಾ!


ಸಾಮಾಜಿಕ ನಡವಳಿಕೆ – ಸಂವಹನ ಕೊರತೆಯ ಆಟಿಸಂ!


ಆಧರಾ ಮೂರನೇ ವಯಸ್ಸಿನಲ್ಲಿದ್ದಾಗ ಸ್ವಲೀನತೆ ಅಥವಾ ಸಾಮಾಜಿಕ, ಭಾವನಾತ್ಮಕ ಕೌಶಲ್ಯಗಳ ಕೊರತೆ ಇರುವುದು ಪತ್ತೆಯಾಯಿತು. ಈ ಕುರಿತು ಅವರ ತಾಯಿ ನಯೆಲಿ ಸ್ಯಾಂಚೆಜ್ ಮಾಧ್ಯಮ ಸಂದರ್ಶನವೊಂದರಲ್ಲಿ ವಿಷಯಗಳನ್ನು ಹಂಚಿಕೊಂಡಿದ್ದರು.


Einsteinಗಿಂತಲೂ ಹೆಚ್ಚು ಶಾರ್ಪ್​ ಅಂತೆ ಈ 11 ವಷರ್ದ ಹುಡುಗಿ!


ಆಟಿಸಂ ಅಥವಾ ಸಾಮಾಜಿಕ ನಡವಳಿಕೆ ಹಾಗೂ ಸಂವಹನ ಕೌಶಲ್ಯಗಳ ಕೊರತೆಯಿಂದ ತನ್ನ ಸಹಪಾಠಿಗಳಿಂದ ಆಧರಾ ಪೀಡಿಸಲ್ಪಡುತ್ತಿದ್ದಳು ಎಂಬುದಾಗಿ ಹೇಳಿದ್ದರು. ಅಲ್ಲದೇ ಮಗಳ ಈ ಸ್ಥಿತಿ ಕುರಿತು ಶಿಕ್ಷಕರು ಕಾಳಜಿ ತೋರಿರಲಿಲ್ಲ ಎಂಬುದಾಗಿ ಹೇಳಿದ್ದರು.


ಇದನ್ನೂ ಓದಿ: ಅಕ್ಕ ಕೆಲಸ ಮಾಡುವ ವಿಮಾನದಲ್ಲಿ ತಮ್ಮನ ಪ್ರಯಾಣ, ವಿಡಿಯೋ ನೋಡಿ ಎಮೋಷನಲ್ ಆದ ನೆಟ್ಟಿಗರು!


"ತನ್ನ ಮಗಳ ಬಗ್ಗೆ ಶಿಕ್ಷಕರು ಹೆಚ್ಚು ಸಹಾನುಭೂತಿ ಹೊಂದಿರಲಿಲ್ಲ. ಇದರಿಂದ ಮಗಳು ತನ್ನನ್ನು ತಾನು ಹೊರಗಿಡಲು ಪ್ರಾರಂಭಿಸಿದಳು. ಅವಳು ತನ್ನ ಸಹಪಾಠಿಗಳೊಂದಿಗೆ ಆಟವಾಡಲು ಬಯಸುತ್ತಿರಲಿಲ್ಲ. ಅವಳು ವಿಚಿತ್ರವಾಗಿ, ವಿಭಿನ್ನ ಭಾವನೆಯನ್ನು ಅನುಭವಿಸುತ್ತಿದ್ದಳು ಎಂದು ನಯೆಲಿ ಸ್ಯಾಂಚೆಜ್ ಹೇಳಿದ್ದರು.


“ಮಗಳನ್ನು ಗೇಲಿ ಮಾಡುತ್ತಿದ್ದರು”


"ಅವಳು ಸ್ವಲ್ಪ ಸಮಯದವರೆಗೆ ಶಾಲೆಯಲ್ಲಿರಬಹುದು ಎಂದುಕೊಂಡಿದ್ದೆ. ಆದರೆ ಅದೂ ಆಗಲಿಲ್ಲ. ಅವಳು ಹೆಚ್ಚು ನಿದ್ರೆಗೆ ಜಾರುತ್ತಿದ್ದಳು. ತುಂಬಾ ಖಿನ್ನತೆಗೆ ಒಳಗಾಗಿದ್ದಳು. ಜನರು ಸಹಾನುಭೂತಿ ತೋರಲಿಲ್ಲ. ಬದಲಾಗಿ ಆಕೆಯನ್ನು ಗೇಲಿ ಮಾಡಿದರು," ಎಂದು ನಯೆಲಿ ವಿವರಿಸಿದ್ದಾರೆ.


ಇಂಥ ಪರಿಸ್ಥಿತಿಗಳ ಪರಿಣಾಮವಾಗಿ, ಸ್ಯಾಂಚೆಜ್ ಮೂರು ಬಾರಿ ಶಾಲೆಗಳನ್ನು ಬದಲಾಯಿಸಬೇಕಾಯಿತು. ಆದರೆ ಚಿಕ್ಕ ಮಗಳು ಆಧರಾ ಆವರ್ತಕ ಕೋಷ್ಟಕವನ್ನು ಸಂಪೂರ್ಣವಾಗಿ ನೆನಪಿಟ್ಟುಕೊಳ್ಳಲು ಸಮರ್ಥರಾಗಿದ್ದಳು. ಅಲ್ಲದೇ ಸ್ವತಃ ಬೀಜಗಣಿತವನ್ನು ಸಹ ಕಲಿತಳು ಎಂಬುದನ್ನು ತಾಯಿ ಗಮನಿಸಿದರು.




ಇನ್ನು, ತನ್ನ ಮಗಳು ಸ್ಥಿತಿಯನ್ನು ಕಂಡ ತಾಯಿ ಅವಳನ್ನು ಚಿಕಿತ್ಸೆ ನೀಡಲು ಕರೆದೊಯ್ದರು. ಆ ಸಮಯದಲ್ಲಿ, ವೈದ್ಯರು ಚಿಕ್ಕ ಹುಡುಗಿಯಲ್ಲಿದ್ದ ಪ್ರತಿಭೆಯನ್ನು ಗುರುತಿಸಿದರು. ಜೊತೆಗೆ ಪ್ರತಿಭಾನ್ವಿತ ಮಕ್ಕಳಿಗಾಗಿ ಇರುವ ಸೆಂಟರ್‌ ಫಾರ್‌ ಅಟೆಂನ್ಶನ್‌ ಟು ಟ್ಯಾಲೆಂಟ್‌ (CEDAT) ಸೇರಿಸುವಂತೆ ಸಲಹೆ ನೀಡಿದರು.

top videos


    ತದನಂತರದಲ್ಲಿ ಐನ್‌ಸ್ಟೈನ್‌ ಹಾಗೂ ಸ್ಟೀಫನ್ ಹಾಕಿಂಗ್ ಇಬ್ಬರಿಗಿಂತ ಹೆಚ್ಚಿನ ಐಕ್ಯೂವನ್ನು ಆಧರಾ ಹೊಂದಿದ್ದಾರೆ ಎಂದು ದೃಢ ಪಟ್ಟಿತು.

    First published: