ChatGPT ಬಳಸಿಕೊಂಡು 100ಕ್ಕೂ ಹೆಚ್ಚು ಕಾದಂಬರಿಗಳನ್ನು ಬರೆದು ದಾಖಲೆ ಸೃಷ್ಟಿಸಿದ ಲೇಖಕ!

ವೈರಲ್​ ವ್ಯಕ್ತಿ

ವೈರಲ್​ ವ್ಯಕ್ತಿ

ನಮಗೆ ಗೊತ್ತಿಲ್ಲದ ಎಷ್ಟೋ ಪದಗಳಿಗೆ ಅರ್ಥವನ್ನು ನಾವು ಗೂಗಲ್ ನಲ್ಲಿ ಹುಡುಕಿ ಅದನ್ನು ನಮ್ಮ ಕಥೆ ಮತ್ತು ಕಾದಂಬರಿಗಳಲ್ಲಿ ಬಳಸಿಕೊಳ್ಳಬಹುದು.

  • Share this:

ಮೊದಲೆಲ್ಲಾ ಒಂದು ಕಥೆಯ ಪುಸ್ತಕ (Story Book) ಅಥವಾ ಕಾದಂಬರಿಯನ್ನು ಬರೆಯೋದು ಎಂದರೆ ಅಷ್ಟೊಂದು ಸುಲಭದ ಕೆಲಸವಾಗಿರಲಿಲ್ಲ ಬಿಡಿ. ಏಕೆಂದರೆ ಅದನ್ನು ಬರೆಯಲು ಆಗಿನ ಲೇಖಕರು ತುಂಬಾನೇ ಓದಿಕೊಂಡಿರಬೇಕಾಗಿತ್ತು ಮತ್ತು ಅವರಲ್ಲಿ ಸಾಕಷ್ಟು ಪದಗಳ ಬಗ್ಗೆ ಅರಿವು ಮತ್ತು ಜ್ಞಾನ ಎರಡು ಇರಬೇಕಾಗಿತ್ತು. ಆದರೆ ಈಗೆಲ್ಲಾ ಕಥೆಯ ಪುಸ್ತಕ ಅಥವಾ ಕಾದಂಬರಿಯನ್ನು ಬರೆಯೋದು ಎಂದರೆ ಲೇಖಕರಿಗೆ ಅನೇಕ ತಂತ್ರಜ್ಞಾನದ (Technology) ಬೆಂಬಲವಿದೆ. ಈಗ ನೀವು ಚಾಟ್‌ಜಿಪಿಟಿಯನ್ನು (ChatGPT) ಮತ್ತು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (AI) ಎಂದರೆ ಕೃತಕ ಬುದ್ದಿಮತ್ತೆಯನ್ನು ಬಳಸಿಕೊಂಡು ದೊಡ್ಡ ದೊಡ್ಡ ಪುಸ್ತಕಗಳನ್ನು ಬರೆಯಬಹುದು. ಇಷ್ಟೇ ಅಲ್ಲದೆ ನಮಗೆ ಗೊತ್ತಿಲ್ಲದ ಎಷ್ಟೋ ಪದಗಳಿಗೆ ಅರ್ಥವನ್ನು ನಾವು ಗೂಗಲ್ ನಲ್ಲಿ ಹುಡುಕಿ ಅದನ್ನು ನಮ್ಮ ಕಥೆ ಮತ್ತು ಕಾದಂಬರಿಗಳಲ್ಲಿ ಬಳಸಿಕೊಳ್ಳಬಹುದು.


ಒಂದು ವರ್ಷದಲ್ಲಿ 100ಕ್ಕೂ ಹೆಚ್ಚು ಕಾದಂಬರಿಗಳನ್ನು ಬರೆದಿರುವ ಲೇಖಕ


ಸೈನ್ಸ್ ಫಿಕ್ಷನ್ ಎಂದರೆ ವಿಜ್ಞಾನ ಕಾಲ್ಪನಿಕ ಲೇಖಕರೊಬ್ಬರು ಇತ್ತೀಚೆಗೆ ತಮ್ಮ ಬರವಣಿಗೆಯ ಆಕಾಂಕ್ಷೆಗಳಿಗೆ ಜೀವ ತುಂಬಲು ಎಐ ಉಪಕರಣಗಳನ್ನು, ವಿಶೇಷವಾಗಿ ಚಾಟ್‌ಜಿಪಿಟಿಯ ಲಾಭವನ್ನು ಪಡೆದಿದ್ದಾರೆ. ಒಂದು ವರ್ಷಕ್ಕಿಂತ ಕಡಿಮೆ ಅವಧಿಯಲ್ಲಿ, ಅವರು ಈ ಎಐ ಉಪಕರಣವನ್ನು ಬಳಸಿಕೊಂಡು ಸುಮಾರು 100 ಪುಸ್ತಕಗಳನ್ನು ಬರೆಯುವಲ್ಲಿ ಯಶಸ್ವಿಯಾಗಿದ್ದಾರೆ ಮತ್ತು ಇದರಲ್ಲಿ ಉತ್ತಮ ವಿಷಯವೆಂದರೆ ಅವರು ಈ ಪ್ರಕ್ರಿಯೆಯಲ್ಲಿ ಗಮನಾರ್ಹ ಪ್ರಮಾಣದ ಹಣವನ್ನು ಸಹ ಗಳಿಸಿದ್ದಾರೆ.


ನ್ಯೂಯಾರ್ಕ್ ಪೋಸ್ಟ್ ಪ್ರಕಾರ, ಚಾಟ್‌ಜಿಪಿಟಿ ಮತ್ತು ಆಂಥ್ರೋಪಿಕ್ಸ್ ಕ್ಲೌಡ್ ನಂತಹ ಎಐ ಸಾಧನಗಳ ಸಹಾಯದಿಂದ, ಟಿಮ್ ಬೌಷರ್ ಎಂಬ ಲೇಖಕರು ಸುಮಾರು 100 ಕ್ಕೂ ಹೆಚ್ಚು ಕಾದಂಬರಿಗಳನ್ನು ಬರೆದು ಮುಗಿಸಿದ್ದಾರೆ.


ಅವರ ಗುರಿ ತುಂಬಾನೇ ಸರಳವಾಗಿತ್ತು, ಸೈನ್ಸ್ ಫಿಕ್ಷನ್ ಅನ್ನು ಎಐ-ಉತ್ಪಾದಿಸಿದ ಜಗತ್ತುಗಳೊಂದಿಗೆ ಸಂಯೋಜಿಸುವ ರೋಮಾಂಚಕ ಇ-ಬುಕ್ ಗಳನ್ನು ತಯಾರಿಸುವುದು ಆಗಿತ್ತು. ಬೌಷರ್ ಈ ಪುಸ್ತಕಗಳನ್ನು "ಎಐ ಲೋರ್ ಸಿರೀಸ್" ಎಂದು ಕರೆಯುತ್ತಾರೆ ಮತ್ತು ಅವು ಮಾನವ ಸೃಜನಶೀಲತೆಯನ್ನು ಹೆಚ್ಚಿಸುವಲ್ಲಿ ಕೃತಕ ಬುದ್ಧಿಮತ್ತೆಯ ಅದ್ಭುತ ಸಾಧ್ಯತೆಗಳನ್ನು ಪ್ರದರ್ಶಿಸುತ್ತವೆ ಎಂದು ನಂಬುತ್ತಾರೆ. ನ್ಯೂಸ್ ವೀಕ್ ಗೆ ಬರೆದ ಲೇಖನದಲ್ಲಿ, ಅವರು ಎಐ ಸಾಮರ್ಥ್ಯದ ಬಗ್ಗೆ ತಮ್ಮ ಉತ್ಸಾಹವನ್ನು ಸಹ ಹಂಚಿಕೊಂಡರು.


ಲೇಖಕ ಬೌಷರ್ ತಮ್ಮ ಕಥೆಗಳಿಗೆ ಜೀವ ತುಂಬಲು ಏನೆಲ್ಲಾ ಬಳಸಿದ್ದಾರೆ ನೋಡಿ..


ಬೌಷರ್ ತನ್ನ ಕಥೆಗಳಿಗೆ ಜೀವ ತುಂಬಲು ಎಐ ಚಾಟ್ ಬಾಟ್ ಗಳು ಮತ್ತು ಇಮೇಜ್ ಜನರೇಟರ್ ಗಳನ್ನು ಸಹ ಬಳಸಿದರು. ಅವರ ಸಹಾಯದಿಂದ, ಅವರು ತ್ವರಿತವಾದ ಆಲೋಚನೆಗಳನ್ನು ಮಾಡಲು ಸಾಧ್ಯವಾಯಿತು ಮತ್ತು ಪಠ್ಯವನ್ನು ರಚಿಸಬಹುದು, ಜೊತೆಗೆ ಸುಂದರವಾದ ಚಿತ್ರಣಗಳನ್ನು ಸಹ ರಚಿಸಬಹುದು. ಅವರ ಪ್ರತಿಯೊಂದು ಪುಸ್ತಕವು ಸುಮಾರು 5,000 ಪದಗಳಷ್ಟು ಉದ್ದವಾಗಿದೆ ಮತ್ತು ಡಜನ್ ಗಟ್ಟಲೆ ಎಐ-ರಚಿಸಿದ ಚಿತ್ರಗಳನ್ನು ಸಹ ಈ ಪುಸ್ತಕಗಳು ಒಳಗೊಂಡಿದೆ.


ಇದನ್ನೂ ಓದಿ: ಮನೆಯಲ್ಲಿಈ ಹೂವು ಒಂದಿದ್ರೆ ಸಾಕು, ನಿಮ್ಮನ್ನು ಶ್ರೀಮಂತರನ್ನಾಗಿಸುತ್ತೆ! ಇಲ್ಲಿದೆ ನೋಡಿ ಸಲಹೆಗಳು

ತಿಂಗಳುಗಟ್ಟಲೆ ಸಮಯವನ್ನು ಈ ಬರೆಯುವುದರಲ್ಲಿ ಕಳೆಯುವ ಸಾಂಪ್ರದಾಯಿಕ ಲೇಖಕರಿಗಿಂತ ಭಿನ್ನವಾಗಿ, ಬೌಷರ್ ಕೆಲವೇ ಗಂಟೆಗಳಲ್ಲಿ ಪುಸ್ತಕವನ್ನು ಬರೆದು ಮುಗಿಸಬಹುದು ಎಂದು ಬಹಿರಂಗಪಡಿಸಿದರು. ವಾಸ್ತವವಾಗಿ, ಅವರು ಒಮ್ಮೆ ಎಐ ಬಳಸಿ ಪುಸ್ತಕವನ್ನು ಮೂರು ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ ಬರೆದು ಮುಗಿಸಿದ್ದಾರೆ ಎಂದು ಹೇಳಿದರು. ಆಗಸ್ಟ್ ಮತ್ತು ಮೇ ತಿಂಗಳುಗಳ ನಡುವೆ, ಅವರು ತಮ್ಮ ಕಥೆಗಳ 500 ಕ್ಕೂ ಹೆಚ್ಚು ಪ್ರತಿಗಳನ್ನು ಮಾರಾಟ ಮಾಡುವಲ್ಲಿ ಯಶಸ್ವಿಯಾದರು, ಈ ಪ್ರಕ್ರಿಯೆಯಲ್ಲಿ ಅವರು 2,000 ಡಾಲರ್ ಹಣವನ್ನು ಸಹ ಗಳಿಸಿದರು.


ಇದನ್ನೂ ಓದಿ: ನಿಮ್ಮ ರಾಶಿಗೆ ಸೂಟ್​ ಆಗುವ ಈ ರತ್ನಗಳನ್ನು ಹೀಗೆ ಸಲೆಕ್ಟ್ ಮಾಡಿ

ಕುತೂಹಲಕಾರಿ ಸಂಗತಿಯೆಂದರೆ, ಬೌಷರ್ ತನ್ನ ಎಐ ಲೊರ್ ಪುಸ್ತಕಗಳು ಒಂದು ಸಿರೀಸ್ ನಂತೆ ಎಲ್ಲವೂ ಒಂದಕ್ಕೊಂದು ಸಂಪರ್ಕ ಹೊಂದಿವೆ ಎಂಬುದನ್ನು ಖಚಿತಪಡಿಸಿಕೊಂಡರು. ಅನೇಕ ಓದುಗರು ಈಗಾಗಲೇ ಇವರ ಅಭಿಮಾನಿಗಳಾಗಿದ್ದಾರೆ ಮತ್ತು ಒಂದೇ ಬಾರಿಗೆ ಆರು, ಎಂಟು ಅಥವಾ ಹತ್ತು ಪುಸ್ತಕಗಳನ್ನು ಖರೀದಿಸಲು ಹಿಂದೆ ಮುಂದೆ ನೋಡುತ್ತಿಲ್ಲವಂತೆ.



ಬೌಷರ್ ತನ್ನ ಪುಸ್ತಕಗಳು ಅತ್ಯಂತ ಪಾಕೆಟ್ ಸ್ನೇಹಿಯಾಗಿವೆ, ಆದ್ದರಿಂದ ಓದುಗರಿಗೆ ಅವುಗಳನ್ನು ಖರೀದಿಸಲು ಎಂದಿಗೂ ಸಮಸ್ಯೆಯಾಗುವುದಿಲ್ಲ, ಅವುಗಳ ಬೆಲೆ 1.99 ಮತ್ತು 3.99 ಡಾಲರ್ ನಡುವೆ ಇದೆ ಅಂತ ಹೇಳುತ್ತಾರೆ. ಕೃತಕ ಬುದ್ಧಿಮತ್ತೆಯನ್ನು ಬಳಸುವುದು ಅವರ ಸೃಜನಶೀಲತೆಯನ್ನು ಹೆಚ್ಚಿಸಿದೆ ಮಾತ್ರವಲ್ಲದೆ ಅವರ ಬರವಣಿಗೆಯನ್ನು ಮತ್ತು ಅವರನ್ನು ಪರಿಣಾಮಕಾರಿಯಾಗಿಸಿದೆ ಎಂದು ಅವರು ಭಾವಿಸುತ್ತಾರೆ.


First published: