Barbie Doll: ಬಾರ್ಬಿ ಗೊಂಬೆಯಂತೆ ಕಾಣಲು ಬರೋಬ್ಬರಿ 24 ಲಕ್ಷ ಖರ್ಚು ಮಾಡಿದ ಆಸ್ಟ್ರೇಲಿಯಾದ ಯುವತಿ

Viral News: ವಾಸ್ತವವಾಗಿ, ಕೆಲವರು ಅಂದವನ್ನು ಹೆಚ್ಚಿಸಿಕೊಳ್ಳಲು ಅತಿಯಾಗಿ ಹಣವನ್ನು ಖರ್ಚು ಮಾಡಲು ಸಿದ್ಧರಿದ್ದಾರೆ. ಇದಕ್ಕೆ ಉತ್ತಮ  ಉದಾಹರಣೆಯೆಂದರೆ ಜೆಸ್ಸಿ ಬನ್ನಿ ಎಂದು ಕರೆಯಲ್ಪಡುವ ಮಹಿಳೆ.

ಚಿಕಿತ್ಸೆ ಪಡೆದ ಯುವತಿ

ಚಿಕಿತ್ಸೆ ಪಡೆದ ಯುವತಿ

  • Share this:
 ಪ್ರಪಂಚದಾದ್ಯಂತ ಜನರು ಯಾವಾಗಲೂ ಎಲ್ಲ ರೀತಿಯಿಂದಲೂ ಸರಿಯಾಗಿರಬೇಕು ಎಂದು ಬಯಸುತ್ತಾರೆ. ಯಾವುದೇ ವಿಚಾರದಲ್ಲಿ ತಪ್ಪುಗಳಾಗುವುದನ್ನ ಸಹಿಸುವುದಿಲ್ಲ. ಅದರಲ್ಲೂ ಹೆಣ್ಣು ಮಕ್ಕಳು ಸೌಂದರ್ಯದ(Beauty ) ವಿಚಾರಕ್ಕೆ ಬಂದಾಗ ಇನ್ನು ಹೆಚ್ಚಿನ ಕಾಳಜಿವಹಿಸುತ್ತಾರೆ. ಏನು ಮಾಡಿದರೆ ನಮ್ಮ ಅಂದವನ್ನು ಹೆಚ್ಚಿಸಿಕೊಳ್ಳಬಹುದು ಎಂಬುದನ್ನ ಯಾವಾಗಲೂ ಹುಡುಕುತ್ತಾರೆ. ಸಾಧ್ಯವಾದಷ್ಟು ಪ್ರಯತ್ನವನ್ನು ಸಹ ಮಾಡುತ್ತಾರೆ.  ಹಲವಾರು ಚಿಕಿತ್ಸೆಗಳನ್ನು( Cosmetic Surgery)  ಪಡೆದುಕೊಳ್ಳುತ್ತಾರೆ. ಆದರೆ ಇನ್ನು ಕೆಲವರು ತಮ್ಮ ಸೌಂದರ್ಯಕ್ಕಾಗಿ ಯಾವ ಹೆಜ್ಜೆಯನ್ನು ಬೇಕಾದರು ಮಾಡಲು ಸಿದ್ಧರಿರುತ್ತಾರೆ.  

ವಾಸ್ತವವಾಗಿ, ಕೆಲವರು ಅಂದವನ್ನು ಹೆಚ್ಚಿಸಿಕೊಳ್ಳಲು ಅತಿಯಾಗಿ ಹಣವನ್ನು ಖರ್ಚು ಮಾಡಲು ಸಿದ್ಧರಿದ್ದಾರೆ. ಇದಕ್ಕೆ ಉತ್ತಮ  ಉದಾಹರಣೆಯೆಂದರೆ ಜೆಸ್ಸಿ ಬನ್ನಿ ಎಂದು ಕರೆಯಲ್ಪಡುವ ಮಹಿಳೆ. ಜರ್ಮನಿಯ  ಈ ಮಹಿಳೆ ನಿಜವಾದ ಬಾರ್ಬಿ ಗೊಂಬೆಯಂತೆ ಕಾಣಲು £ 24,000  ಅಂದರೆ ₹ 24 ಲಕ್ಷ ಖರ್ಚು ಮಾಡುವ ಮೂಲಕ ಸುದ್ದಿಯಲ್ಲಿದ್ದಾಳೆ.

20 ವರ್ಷದ ಈ ಯುವತಿಗೆ ಯಾವಾಗಲೂ ಮೇಕಪ್‌ ಬಗ್ಗೆ ಆಲೋಚನೆ, ಮೇಕಪ್ ಮಾಡಿಕೊಳ್ಳುವುದು ಎಂದರೆ ಬಹಳ ಇಷ್ಟ, ಅಲ್ಲದೇ ಚಿಕ್ಕವಳಿದ್ದಾಗ ಬಾರ್ಬಿ ಗೊಂಬೆಗಳೊಂದಿಗೆ ಆಟವಾಡುತ್ತಿದ್ದಳು. ಈ ಗೊಂಬೆಗಳ ಸೌಂದರ್ಯ ಆಕೆಯನ್ನು ಆಕರ್ಷಿಸಿದ್ದು, ತಾನೂ ಅವುಗಳಂತೆ ಕಾಣಬೇಕು ಎಂಬ ಹಂಬಲವನ್ನು ಹೊಂದಿದ್ದಳು. ಈ ಕಾರಣದಿಂದ 24 ಲಕ್ಷ ರೂಗಳನ್ನು ವ್ಯಯಿಸಿದ್ದಾಳೆ.

ಇದನ್ನೂ ಓದಿ: ಕೆಣಕಿದ ಯುವಕನನ್ನ ಬೆನ್ನಟ್ಟಿದ ಹುಂಜ- ನೆಟ್ಟಿಗರಲ್ಲಿ ನಗು ಮೂಡಿಸಿದ ವೈರಲ್ ವಿಡಿಯೋ

ಆಕೆಯ ಈ ಆಸೆಯನ್ನು ಮೊದಲು ಪೋಷಕರು ಒಪ್ಪಿರಲಿಲ್ಲ, ಅಲ್ಲದೇ ಆಕೆಯ ಅನುಮತಿಯನ್ನು ಸಹ ನೀಡಿರಲಿಲ್ಲ. ಪೋಷಕರನ್ನು ಒಪ್ಪಿಸಲು ಆಕೆ ಬಹಳಷ್ಟು ಪ್ರಯತ್ನವನ್ನು ಸಹ ಮಾಡಿದ್ದಳು. ನಂತರ 2019 ರಲ್ಲಿ ಶಾಲೆ ಮುಗಿದ ನಂತರ ಮನೆ ಬಿಟ್ಟು ಹೋದ ಆಕೆ,  ಪೋಷಕರು ಕೂಡಿಟ್ಟಿದ್ದ ಹಣದಲ್ಲಿ ಸ್ತನ ಹಿಗ್ಗುವ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಳು.

ಅಂದು ಆರಂಭವಾದ ಆಕೆಯ ಈ ಕೆಲಸ ಅಲ್ಲಿಗೆ ನಿಲ್ಲಲಿಲ್ಲ. ತನ್ನ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ಒಂದರ ನಂತರ ಒಂದು ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿದ್ದಾಳೆ. ಇದರ ನಂತರ, ಅವಳು ತನ್ನ ಮೊದಲ ಲಿಪ್ ಫಿಲ್ಲರ್‌ ಚಿಕಿತ್ಸೆ ಪಡೆದುಕೊಂಡಳು.ಇದು ಆಕೆಯಲ್ಲಿ ನಿಜವಾದ ಬಾರ್ಬಿ ಗೊಂಬೆಯಂತೆ ಕಾಣುವ ಗುರಿಯನ್ನು ಸಾಧಿಸಲು  ಆತ್ಮವಿಶ್ವಾಸವನ್ನು ಹೆಚ್ಚು ಮಾಡಿತ್ತು.

ಈ ಚಿಕಿತ್ಸೆಯ ನಂತರ ಆಕೆಯಲ್ಲಿ ಕೆಲ ಬದಲಾವಣೆಗಳಾಗಿದ್ದು, ಸುಂದರವಾಗಿ ಕಾಣುತ್ತಿದ್ದೇನೆ , ಬಾರ್ಬಿಯಂತೆ ನಾನು ಕಾಣಬಹುದು ಎಂಬ ಆಕೆಯ ಆಸೆ ಹೆಮ್ಮರವಾಗಿತ್ತು.  2020 ರಲ್ಲಿ, ಅವಳು ಮತ್ತೊಂದು ಸ್ತನ ಹಿಗ್ಗುವಿಕೆ ಶಸ್ತ್ರಚಿಕಿತ್ಸೆಯನ್ನು ಮಾಡಿಸಿಕೊಂಡಿದ್ದಾಳೆ. ಇದು  ಯುರೋಪನಲ್ಲಿ ಹೆಚ್ಚು ಸುದ್ದಿ ಮಾಡಿತ್ತು. ಇಲ್ಲಿಯವರೆಗೆ, ಆಕೆ  ಸ್ತನ ಚಿಕಿತ್ಸೆಗಾಗಿ £ 12,000, ಲಿಪ್ ಫಿಲ್ಲರ್‌ಗಳಿಗೆ £ 6,000, ಬೊಟೊಕ್ಸ್‌ಗೆ £ 1,500, ಇತರ ಫಿಲ್ಲರ್‌ಗಳಿಗೆ £ 2,000 ಮತ್ತು ಲಿಪೊಸಕ್ಷನ್ ಮೇಲೆ £ 2,500 ಗಳಷ್ಟು ಖರ್ಚು ಮಾಡಿದ್ದಾಳೆ.

ಇನ್ನು ಈಗ ಸಾಧ್ಯ ಸಾಮಾಜಿಕ ಜಾಲಾತಾಣದಲ್ಲಿ ಫೇಮಸ್ ಆಗಿದ್ದು, ಇನ್ಸ್ಟಾಗ್ರಾಂನಲ್ಲಿ ಹೆಚ್ಚು ಜನರು ಆಕೆಯನ್ನು ಫಾಲೋ ಮಾಡುತ್ತಿದ್ದಾರೆ. ಅಲ್ಲದೇ ಆಕೆಯ ಫೋಟೋ,ವಿಡಿಯೋಗಳು ಆಗಾಗ ವೈರಲ್ ಆಗುತ್ತಿದ್ದವು.

ಸಧ್ಯ ಆಕೆ ಕೇವಲ ಫ್ಯಾನ್ಸ್ ಪೇಜ್ ಮಾತ್ರ ಹೊಂದಿದ್ದು ಆಕೆ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲು ಸೂಕ್ತವಲ್ಲದ ವಯಸ್ಕರ ವಿಷಯವನ್ನು ಹಂಚಿಕೊಳ್ಳುತ್ತಾಳೆ.  ಸದ್ಯಕ್ಕೆ, ಆಕೆಯನ್ನು  'ಬಿಂಬೊ ಸಮುದಾಯ'ದ ಅತ್ಯಂತ ಹೆಮ್ಮೆಯ ಸದಸ್ಯೆ ಎನ್ನಲಾಗುತ್ತಿದೆ.  ಅಲ್ಲದೇ ಆಕೆ ತನ್ನ ನೋಟದ ಬಗ್ಗೆ ಅತ್ಯಂತ ಆತ್ಮವಿಶ್ವಾಸವನ್ನು ಹೊಂದಿದ್ದು, ನಾನು ತನ್ನ ಸೌಂದರ್ಯ ಹೆಚ್ಚಿಸಿಕೊಳ್ಳಲು ಏನೂ ಬೇಕಾದರೂ . ನನಗೆ ಬಾರ್ಬಿಯಂತೆ ಕಾಣಬೇಕು ಎಂದು ಹೇಳುತ್ತಾಳೆ.
Published by:Sandhya M
First published: