ಮಧ್ಯರಾತ್ರಿ ತನ್ನಷ್ಟಕ್ಕೆ ಟಾಯ್ಲೆಟ್ ಫ್ಲಶ್, ಎಲ್ಲವೂ ಹಾವಿನ ಕರಾಮತ್ತು!

Buzz: ತನ್ನ ಶೌಚಾಲಯದಲ್ಲಿ ಕಂಡು ಬಂದ ದೃಶ್ಯ ನೋಡಿದ ಭಯಕ್ಕೆ ಕೊಂಚ ಕಾಲದವರೆಗೆ ಅವನ ಕೈಕಾಲು ತಣ್ಣಗಾಗಿ ಬಿಟ್ಟಿದ್ದವು. ಅವನ ಪಾಲಿಗೆ ಅದು ಯಾವುದೋ ಭಯಾನಕ ಚಲನಚಿತ್ರದ ದೃಶ್ಯದಂತೆ ಭಾಸವಾಗಿತ್ತು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:

ಯಾರಾದಾದರೂ ಮನೆಯಲ್ಲಿ, ಮಧ್ಯರಾತ್ರಿಯ ವೇಳೆಯಲ್ಲಿ ತನ್ನಷ್ಟಕ್ಕೆ ಟಾಯ್ಲೆಟ್ ಫ್ಲಶ್ ಆಗುವ ಸದ್ದು ಬಂದರೆ ಹೇಗಿರುತ್ತದೆ? ಯಾರದೋ ಮನೆಯಲ್ಲಿ ಬಿಡಿ, ನಮ್ಮ ಮನೆಯಲ್ಲೂ ಅಂತದ್ದೇನಾದರೂ ಆದರೆ ಎಂಥ ಗಟ್ಟಿ ಮನಸ್ಸಿನವರಿಗಾದರೂ ಒಂದು ಕ್ಷಣ ಹೆದರಿಕೆ ಆಗುವುದು ಖಂಡಿತಾ. ಆಸ್ಟ್ರಿಯಾದಲ್ಲಿ ವ್ಯಕ್ತಿಯೊಬ್ಬನ ಮನೆಯಲ್ಲಿ ಇದೇ ರೀತಿ ಆಯಿತಂತೆ.  ಆತ ಆಸ್ಟ್ರಿಯಾದ ರಾಜಧಾನಿ ವಿಯೆನ್ನಾಗೆ ಹತ್ತಿರದಲ್ಲಿ ಇರುವ ಬ್ರೀಟೆನ್‍ಫರ್ಟ್ ಎಂಬ ಸ್ಥಳದ ನಿವಾಸಿ. ಅವನು ರಾತ್ರಿ ತನ್ನ ಮನೆಯಲ್ಲಿ ನಿದ್ರಿಸುತ್ತಿದ್ದಾಗ ಸಡನ್ನಾಗಿ ಟಾಯ್ಲೆಟ್ ಫ್ಲಶ್ ಆದ ಸದ್ದು ಬಂತು. ಟಾಯ್ಲೆಟ್‍ನಲ್ಲಿ ಯಾರೂ ಇಲ್ಲದಿರುವಾಗ ಫ್ಲಶ್ ಸದ್ದು ಏಕೆ ಆಯಿತು ಎಂದು ಪರೀಕ್ಷಿಸಲು ಹೋದಾಗ, ತನ್ನ ಕಣ್ಣುಗಳನ್ನು ತಾನೇ ನಂಬದಾದ ಮತ್ತು ಮರು ಕ್ಷಣವೇ ಭಯದಿಂದ ಜೋರಾಗಿ ಕಿರುಚಿದ. ಅಂತದ್ದೇನಾಯಿತು ಅಂತೀರಾ? ಏಕೆಂದರೆ, ಟಾಯ್ಲೆಟ್‍ನಲ್ಲಿ ಯಾರೂ ಇಲ್ಲದಿರುವಾಗ ಫ್ಲಶ್ ಆಗಿದ್ದಕ್ಕೆ ಕಾರಣ ಒಂದು ದೊಡ್ಡ ಹಾವು!


ತನ್ನ ಶೌಚಾಲಯದಲ್ಲಿ ಕಂಡು ಬಂದ ದೃಶ್ಯ ನೋಡಿದ ಭಯಕ್ಕೆ ಕೊಂಚ ಕಾಲದವರೆಗೆ ಅವನ ಕೈಕಾಲು ತಣ್ಣಗಾಗಿ ಬಿಟ್ಟಿದ್ದವು. ಅವನ ಪಾಲಿಗೆ ಅದು ಯಾವುದೋ ಭಯಾನಕ ಚಲನಚಿತ್ರದ ದೃಶ್ಯದಂತೆ ಭಾಸವಾಗಿತ್ತು. ಅಸಲಿಗೆ ಆಗಿದ್ದೇನೆಂದರೆ, ರಾತ್ರಿ ನಿದ್ರಿಸುತ್ತಿದ್ದಾಗ ಟಾಯ್ಲೆಟ್‍ನಿಂದ ಬರುತ್ತಿದ್ದ ಸದ್ದಿನ ಕಾರಣಕ್ಕೆ ಆ ವ್ಯಕ್ತಿಯ ನಿದ್ರೆಗೆ ಭಂಗವಾಯಿತು. ಹಾಗಾಗಿ ಆ ಸದ್ದಿಗೆ ಕಾರಣವೇನೆಂದು ತಿಳಿಯಲು ಟಾಯ್ಲೆಟ್ ಕೋಣೆಯ ಕಡೆ ಹೋಗಿ ನೋಡಿದರೆ, ಅಲ್ಲಿ 6 ಅಡಿ ಉದ್ದದ ಹಾವೊಂದು ಕಂಡು ಬಂತು. ಅವನಿಗೆ ಭಯವಾಗಿದ್ದು ನಿಜ, ಆದರೂ ಸಾವರಿಸಿಕೊಂಡು ಕೂಡಲೇ ತುರ್ತು ಸೇವಾ ಸಿಬ್ಬಂದಿಗೆ ಕರೆ ಮಾಡಿದ ಮತ್ತು ಅವರಿಗೆ ಮನೆಯಲ್ಲಿ ಹಾವು ಸೇರಿಕೊಂಡಿರುವ ಕುರಿತು ಮಾಹಿತಿ ನೀಡಿದ ಎಂದು ವರದಿಗಳು ತಿಳಿಸಿವೆ.


ಇದನ್ನೂ ಓದಿ: 13 ನೇ ಶುಕ್ರವಾರವನ್ನು ದುರಾದೃಷ್ಟಕರವೆಂದು ಏಕೆ ಕರೆಯಲಾಗುತ್ತದೆ? ಮೂಢನಂಬಿಕೆ ಪ್ರಾರಂಭವಾಗಿದ್ದು ಹೇಗೆ?

ಆಗ್ನಿಶಾಮಕ ದಳದ ಸಿಬ್ಬಂದಿ ಅವನ ಮನೆಗೆ ತಲುಪಿ ನೋಡಿದಾಗ, ಅಲ್ಲಿ ಆ್ಯಸ್ಕುಲೇಪಿಯನ್ ಜಾತಿಯ ಹಾವು ಕಂಡು ಬಂತು. ಅವರು ಅಂತೂ ಇಂತೂ ಹಾವನ್ನು ಟಾಯ್ಲೆಟ್‍ನಿಂದ ಹೊರ ತೆಗೆಯುವಲ್ಲಿ ಸಫಲರಾದರು ಮತ್ತು ಅದನ್ನು ಕಾಡಿಗೆ ಬಿಟ್ಟು ಬಂದರು.


ರಕ್ಷಣಾ ಅಧಿಕಾರಿಗಳ ಪ್ರಕಾರ, ಆ್ಯಸ್ಕುಲೇಪಿಯನ್ ಹಾವುಗಳು ಯುರೋಪ್‍ನಲ್ಲಿ ಅತ್ಯಂತ ಸಾಮಾನ್ಯ ಮತ್ತು ಅವು ಸುಮಾರು 5 ಮೀಟರ್‌ವರೆಗೆ ಉದ್ದ ಬೆಳೆಯುತ್ತವೆ. ಎಲ್ಲಾ ಸರಿ, ಆ ಹಾವು ಅಲ್ಲಿಗೆ ಹೇಗೆ ಬಂತು? ಅಗ್ನಿಶಾಮಕ ದಳದ ಅಧಿಕಾರಿಗಳ ಪ್ರಕಾರ, ಆ ಹಾವು ಎರಡು ಗೋಡೆಗಳ ಮಧ್ಯದಿಂದ ನುಸುಳಿ ಅಲ್ಲಿಗೆ ತಲುಪಿದೆ.
ಟಾಯ್ಲೆಟ್‍ನಲ್ಲಿ ಹಾವು ಅಡಗಿಕೊಂಡಿರುವ ಘಟನೆ ಆಸ್ಟ್ರಿಯಾದಲ್ಲಿ ಇದೇ ಮೊದಲನೇ ಸಲವೇನಲ್ಲ. ಇಂತಹ ಘಟನೆಗಳು ಅಲ್ಲಿ ನಡೆಯುತ್ತಲೇ ಇರುತ್ತವಂತೆ.


ಕೆಲವು ದಿನಗಳ ಹಿಂದೆ, 65 ವರ್ಷದ ವೃದ್ಧರೊಬ್ಬರು ತಮ್ಮ ಮನೆಯ ಶೌಚಾಲಯಕ್ಕೆ ಹೋಗಿದ್ದಾಗ, ಹಾವೊಂದು ಟಾಯ್ಲೆಟ್ ಸೀಟ್‍ನ ಮಧ್ಯೆ ಬಚ್ಚಿಟ್ಟುಕೊಂಡಿದ್ದ ಘಟನೆ ನಡೆದಿತ್ತು. ದುರಾದೃಷ್ಟವಶಾತ್, ಆ ವ್ಯಕ್ತಿ ಟಾಯ್ಲೆಟ್ ಸೀಟಿನ ಮಧ್ಯೆ ಕುಳಿತುಕೊಳ್ಳುತ್ತಿದ್ದಂತೆ, ಆ ಹಾವು ಅವರನ್ನು ಕಚ್ಚಿತ್ತು.
ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.

 
Published by:Sandhya M
First published: