ಮಾಡೆಲಿಂಗ್ ಅಥವಾ ಫ್ಯಾಷನ್ ಜಗತ್ತು ಎಲ್ಲರ ಕಣ್ಣಿಗೆ ನಯನ ಮನೋಹರ. ಕ್ಯಾಟ್ ವಾಕ್ ಮಾಡಿಕೊಂಡು, ಆ್ಯಡ್ನಲ್ಲಿ ನಟಿಸುತ್ತಾ ಮಾಡೆಲ್ಗಳು ಯಥೇಚ್ಛ ಹಣ ಮಾಡಿಕೊಳ್ಳುತ್ತಾರೆ ಎಂದು ಮೇಲ್ನೋಟಕ್ಕೆ ಕಾಣುವ ಸಂಗತಿ. ಆದರೆ, ಹತ್ತಿರದಿಂದ ಬಲ್ಲವರಿಗೇ ಗೊತ್ತು ಅಂಕುಡೊಂಕು. ಫ್ಯಾಷನ್ ಲೋಕವಾಗಲೀ, ಚಿತ್ರಜಗತ್ತಾಗಲೀ ಮೇಲ್ನೋಟಕ್ಕೆ ಎಷ್ಟು ಸುಂದರವೋ ಒಳಗೆ ಅಷ್ಟೇ ವಿರೂಪಗಳಿವೆ. ದಶಕದ ಹಿಂದೆ ಬಾಲಿವುಡ್ನಲ್ಲಿ ಪೇಜ್ 3 ಎಂಬ ಸಿನಿಮಾ ಫ್ಯಾಷನ್ ಲೋಕದ ಕೆಲ ಇನ್ಸೈಡ್ ವಿಚಾರಗಳನ್ನ ಬಿಚ್ಚಿಟ್ಟಿತ್ತು. ಹಾಗೆಯೇ, ತಮಿಳಿನ ವಿಕ್ರಮ್ ಅಭಿನಯದ ಐ ಸಿನಿಮಾದಲ್ಲೂ ಫ್ಯಾಷನ್ ಲೋಕದ ಮತ್ತೊಂದು ಮುಖವನ್ನು ಅನಾವರಣಗೊಳಿಸಲಾಗಿತ್ತು. ಇದರ ಜೊತೆಗೆ ಹಲವು ಸಿನಿತಾರೆಯರು, ಮಾಡೆಲ್ಗಳು ಗ್ಲಾಮರ್ ಲೋಕದ ಡರ್ಟಿ ಸೀಕ್ರೆಟ್ಗಳನ್ನ ಆಗಾಗ್ಗೆ ಬಯಲು ಮಾಡುತ್ತಲೇ ಇರುತ್ತಾರೆ. ಅಂಥವರಲ್ಲಿ ಒಬ್ಬಳು ಆಸ್ಟ್ರಿಯಾದ ಮಾಡೆಲ್ ಜ್ಯಾಜ್ ಎಗ್ಗರ್ ಎಂಬಾಕೆ.
ಕೆಲವಾರು ವರ್ಷಗಳಿಂದಲೂ ಈಕೆ ಫ್ಯಾಷನ್ ಲೋಕದ ಅಸಹ್ಯ ಮುಖಗಳ ಬಗ್ಗೆ ಆಗಾಗ್ಗೆ ಶಾಕಿಂಗ್ ನ್ಯೂಸ್ ಕೊಡುತ್ತಾ ಬಂದಿದ್ದಾರೆ. ಇದೀಗ ಈಕೆ ಫ್ಯಾಷನ್ ಲೋಕದಲ್ಲಿ ವೇಶ್ಯಾವಾಟಿಕೆ ಹೇಗೆ ನಡೆಯುತ್ತದೆ, ಎಷ್ಟು ಹಣ ಸಿಗುತ್ತದೆ ಎಂಬುದನ್ನು ರಿವೀಲ್ ಮಾಡಿದ್ದಾಳೆ.
ಶ್ರೀಮಂತರ ಪಾರ್ಟಿಯಲ್ಲಿ ಮಾಡೆಲ್ಗೇನು ಕೆಲಸ?
20 ವರ್ಷದ ಜ್ಯಾಜ್ (Jazz Egger) ಅವರಿಗೆ ದೊಡ್ಡ ದೊಡ್ಡ ಕಂಪನಿಗಳಿಂದ ಮಾಡೆಲಿಂಗ್ ಆಫರ್ ಬಂದಿದ್ದ ವರ್ಷ ಅದು. ಅದೇ ವೇಳೆ, ಗ್ರೀಕ್ ಯಾಚ್ನಲ್ಲಿ ಸಿರಿವಂತರೊಂದಿಗೆ ಪಾರ್ಟಿಯಲ್ಲಿ ಪಾಲ್ಗೊಳ್ಳುವ ಆಫರ್ ಕೂಡ ಬಂದಿತ್ತು. ಇದರಲ್ಲಿ ಏನೋ ಒಳಸುಳಿ ಇದೆ ಎಂಬುದು ಅಲ್ಲಿಗೆ ಹೋದಾಗ ಜ್ಯಾಜ್ಗೆ ಅನಿಸಿತು. ಆಗ ಪಾರ್ಟಿಗೆ ಹೋಗೋದು ಬಿಟ್ಟಳು. ಮತ್ತೊಬ್ಬ ಏಜೆಂಟ್ ಈಕೆಗೆ ಖ್ಯಾತ ನಟನೊಂದಿಗೆ ಡಿನ್ನರ್ ಪಾರ್ಟಿಗೆ ಏರ್ಪಾಟು ಮಾಡಿದ್ದ. ಅದರಲ್ಲಿ ಪಾಲ್ಗೊಂಡರೆ 2 ಲಕ್ಷ ಹಣ ಸಿಗುತ್ತದೆ ಎಂದು ತಿಳಿಸಿದ್ದ ಆ ಏಜೆಂಟ್, ನಟನ ಜೊತೆ ಒಂದೇ ರೂಮಿನಲ್ಲಿ ಕಾಲ ಕಳೆಯಬೇಕು ಎಂಬ ಷರತ್ತನ್ನು ಜ್ಯಾಜ್ಗೆ ವಿಧಿಸಿದ್ದ. ಜ್ಯಾಜ್ ಈ ಸಂವಾದದ ಸ್ಕ್ರೀನ್ ಶಾಟ್ಗಳನ್ನ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ಝಾಡಿಸಿದ್ದಾಳೆ.
ಫ್ಯಾಷಲ್ ಜಗತ್ತಿನಲ್ಲಿ ಹೀಗೊಂದು ವೇಶ್ಯಾವಾಟಿಕೆ:
ಮತ್ತೊಂದು ಬೆಳವಣಿಗೆಯಲ್ಲಿ, ಏಜೆಂಟ್ವೊಬ್ಬ ಇರಾನ್ ದೇಶದ ಸ್ಫುರದ್ರೂಪಿ ವ್ಯಕ್ತಿಯೊಬ್ಬನ ಜೊತೆ ಡೇಟಿಂಗ್ ಹೋಗಬೇಕೆಂದು ಜ್ಯಾಜ್ಗೆ ತಿಳಿಸುತ್ತಾನೆ. ಡೇಟಿಂಗ್ ವೇಳೆ ಆತನೊಂದಿಗೆ ಸಲುಗೆಯಿಂದ ಇರಬೇಕು ಎಂದೂ ಷರತ್ತು ಹಾಕುತ್ತಾನೆ. ಆಗ ಈಕೆ ತಾನು ಒಬ್ಬ ಮಾಡೆಲ್ ಅಷ್ಟೇ, ವೇಶ್ಯೆ ಅಲ್ಲ ಎಂದು ಉತ್ತರಿಸುತ್ತಾಳೆ. ಆಗ ಆ ಏಜೆಂಟ್ ಈಕೆಗೆ ಸಮಾಧಾನ ಮಾಡಲು ಯತ್ನಿಸುತ್ತಾನೆ. ಫ್ಯಾಷಲ್ ಜಗತ್ತಿನಲ್ಲಿ ಇದೆಲ್ಲಾ ಸಾಮಾನ್ಯ. ಎಲ್ಲಾ ಮಾಡೆಲ್ಗಳು ಇಂಥ ಕೆಲಸ ಮಾಡಬೇಕಾಗುತ್ತದೆ. ಅಷ್ಟೇ ಅಲ್ಲ, ಹ್ಯಾಂಡ್ಸಮ್ ಹುಡುಗನ ಜೊತ ಕಾಲ ಕಳೆಯಲು ಯಾವ ಹುಡುಗಿಗೆ ತಾನೆ ಆಸೆ ಇರೋದಿಲ್ಲ? ಅದರಲ್ಲಿ ನಾಚಿಕೆ ಪಡುವಂಥದ್ದು ಏನೂ ಇಲ್ಲ ಎಂದು ಆ ಏಜೆಂಟ್ ಹೇಳಿದ್ದನ್ನು ಉಲ್ಲೇಖಿಸಿ ಜ್ಯಾಜ್ ತನ್ನ ಸೋಷಿಯಲ್ ಮೀಡಿಯಾ ಅಕೌಂಟ್ನಲ್ಲಿ ವಿವರ ಕೊಟ್ಟಿದ್ಧಾಳೆ.
ಜ್ಯಾಜ್ ಫ್ಯಾಷನ್ ಲೋಕದ ಕತ್ತಲ ಜಗತ್ತನ್ನು ಬಹಿರಂಗಪಡಿಸುತ್ತಿರುವಂತೆಯೇ ಇನ್ನೂ ಹಲವು ಮಾಡೆಲ್ಗಳು ತಮ್ಮ ಕಹಿ ಅನುಭವಗಳನ್ನ ಹಂಚಿಕೊಳ್ಳುವ ಟ್ರೆಂಡ್ ಕೂಡ ಸೃಷ್ಟಿಯಾಯಿತು.
ಇದನ್ನೂ ಓದಿ: Great Shock- ಯುವತಿಯರ ಗುಂಪು ಟೌನ್ ಹಾಲ್ ಮುಂದೆ ಬಟ್ಟೆ ಬಿಚ್ಚಿದ್ರು; ಕಾರಣ ಸುಮ್ನೆ ಅಲ್ಲ
ಫೋಟೋ ಜೊತೆಗಿನ ಇನ್ಸೈಡ್ ಸ್ಟೋರಿ:
ಜ್ಯಾಜ್ ಎಗ್ಗರ್ ಈ ಹಿಂದೆಯೂ ಹಲವು ರಹಸ್ಯಗಳನ್ನ ಬೆಳಕಿಗೆ ಬಂದಿದ್ದರು. ಟ್ರೂತ್ ಬಿಹೈಂಡ್ ಶಾಟ್ಸ್ ಎಂಬ ಹ್ಯಾಷ್ಟ್ಯಾಗ್ನಲ್ಲಿ ಈಕೆ ಒಬ್ಬ ಮಾಡೆಲ್ ಅನ್ನ ಹೇಗೆಲ್ಲಾ ದುರ್ಬಳಕೆ ಮಾಡಿಕೊಳ್ಳುವ ಪ್ರಯತ್ನ ಆಗುತ್ತದೆ ಎಂದು ಮಾಹಿತಿ ನೀಡುವ ಕೆಲಸ ಮಾಡಿದ್ದಾಳೆ.
View this post on Instagram
ಫೋಟೋಗ್ರಾಫರ್ ಕಾಮದ ಕಣ್ಣು:
ಫೋಟೋಗ್ರಾಫರ್, ವಿಡಿಯೋಗ್ರಾಫರ್ಗಳ ಕಾಮದ ಕಣ್ಣುಗಳು ಹೇಗೆಲ್ಲಾ ಆಡಿಸುತ್ತವೆ ಎಂದು ಸವಿಸ್ತಾರವಾಗಿ ಈಕೆ ಬರೆದಿದ್ದಾಳೆ. ಫೋಟೋಗ್ರಾಫರ್ಗಳು ಸುಮ್ಮಸುಮ್ಮನೆ ಬೆತ್ತಲೆಗೊಳ್ಳಲು ಹೇಳುತ್ತಾರೆ. ತಮ್ಮೊಂದಿಗೆ ಕಾಲ ಕಳೆಯುವಂತೆ ತಿಳಿಸುತ್ತಾರೆ. ಅವರು ಹೇಳಿದ್ದನ್ನ ಕೇಳಲಿಲ್ಲವೆಂದರೆ ಶೂಟ್ ಆಗಿರುವ ಫೋಟೋ, ವಿಡಿಯೋಗಳನ್ನ ಕೊಡುವುದಿಲ್ಲವಂತೆ.
ಏಜೆನ್ಸಿ ಕಾಟ:
ಇನ್ನು ಏಜೆನ್ಸಿಗಳು ಮತ್ತು ಏಜೆಂಟ್ಗಳು ಮಾಡೆಲ್ಗಳನ್ನ ಸೂಳೆಗಾರಿಕೆಗೆ ಬಳಕೆ ಮಾಡುತ್ತಾರೆ. ಶ್ರೀಮಂತರನ್ನ ಗುರುತಿಸಿ ಅವರಿರುವ ಪಾರ್ಟಿಗಳಿಗೆ ಮಾಡೆಲ್ಗಳನ್ನ ಕಳುಹಿಸಿ ಸಲುಗೆಯಲ್ಲಿ ಇರಬೇಕೆಂದು ಸೂಚಿಸುತ್ತಾರೆ. ಒಪ್ಪದಿದ್ದರೆ ಮಾಡೆಲಿಂಗ್ ಕಾಂಟ್ರಾಕ್ಟ್ ರದ್ದು ಮಾಡುತ್ತಾರೆ. ಅಥವಾ ಶೂಟಿಂಗ್ ಹೆಸರಿನಲ್ಲಿ ಹಿಂಸೆ ಕೊಡುತ್ತಾರೆ. ಹೀಗೆಂದು ಜ್ಯಾಜ್ ತನ್ನ ಇನ್ಸ್ಟಗ್ರಾಮ್ನಲ್ಲಿ ಬರೆದದ್ದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ