Viral Video:  ಇನ್ನೊಬ್ಬರ ಸಂಸಾರದಲ್ಲಿ ಹುಳಿ ಹಿಂಡೋ ಕೆಲಸ ಮಾಡಿದ ಮಹಿಳೆ: ನೋಡಿದವರೆಲ್ಲ ಏನಂದ್ರು ಗೊತ್ತಾ?

ಈ ಸಮಯವನ್ನು ಬಳಸಿಕೊಂಡ ಮಹಿಳೆ ಕ್ಲಬ್ ನಲ್ಲಿ ಪುರುಷ ಬಿಳಿ ಟಿ ಶರ್ಟ್  ಗಳ ಮೇಲೆ ಕಿಸ್ ಮಾಡುತ್ತಾರೆ.  ಪದೇ ಪದೇ ಲಿಪ್ ಸ್ಟಿಕ್ ಹಂಚಿಕೊಂಡು ಟಿ ಶರ್ಟ್ ಮೇಲೆ ಕಿಸ್ ಕೊಡುತ್ತಾರೆ.

ಕಿಸ್ ಮಾಡುತ್ತಿರುವ ಮಹಿಳೆ

ಕಿಸ್ ಮಾಡುತ್ತಿರುವ ಮಹಿಳೆ

  • Share this:
ಸೋಶಿಯಲ್ ಮೀಡಿಯಾ(Social Media)ದಲ್ಲಿ ಫನ್ನಿ ವಿಡಿಯೋ(Funny Video)ಗಳು ವೈರಲ್ ಆಗುತ್ತಿರುತ್ತವೆ. ಇಂತಹ ವಿಡಿಯೋಗಳನ್ನು ನೋಡಿ ನೆಟ್ಟಿಗರು ಎಂಜಾಯ್ ಮಾಡುತ್ತಾರೆ. ಇನ್ನು ಇಷ್ವವಾದ್ರೆ ವಿಡಿಯೋವನ್ನು ಶೇರ್ (Video Share) ಮಾಡಿಕೊಳ್ಳುತ್ತಾರೆ. ಆದ್ರೆ ಕೆಲವೊಮ್ಮೆ ಗಂಭೀರ ವಿಷಯವನ್ನು ಒಳಗೊಂಡಿರುವ  ವಿಡಿಯೋಗಳು ಸಹ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುತ್ತವೆ. ಇದೀಗ ಆಸ್ಟ್ರೇಲಿಯಾ (Australia Woman) ಮೂಲದ ಮಹಿಳೆಯೊಬ್ಬರು ತಮ್ಮ ಟಿಕ್ ಟಾಕ್ (Tiktok) ನಲ್ಲಿ ವಿಚಿತ್ರ ವಿಡಿಯೋ ಹಂಚಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಇದು ನಿಮಗೆ ತಮಾಷೆಯಾಗಿ ಕಾಣಬಹುದು. ಆದರೆ ಮತ್ತೊಬ್ಬರ ಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದ ಎಂದು ನೆಟ್ಟಿಗರು ಕ್ಲಾಸ್ ತೆಗದುಕೊಂಡಿದ್ದಾರೆ.

ಈ ವಿಡಿಯೋವನ್ನು ಸೇಂಟ್ ಪ್ಯಾಟ್ರಿಕ್ಸ್ ಡೇಯಂದು ಸೆರೆ ಹಿಡಿಯಲಾಗಿದೆ. ಸಿಡ್ನಿಯ ಕ್ಲಬ್‌ನ ಲ್ಲಿ ಮಹಿಳೆ ಸಿಕ್ಕ ಸಿಕ್ಕ ಪುರಷರ ಟೀ ಶರ್ಟ್ ಮೇಲೆ ಕಿಸ್ ಕೊಟ್ಟಿದ್ದಾಳೆ . ಇದೀಗ ಈ ವಿಡಿಯೋ ವೈರಲ್ ಆಗಿದೆ.

ಕ್ಲಬ್ ಅಂದ್ರೆ ಅಲ್ಲಿ ಮೋಜು ಮಸ್ತಿ ಇರುತ್ತೆ. ಅಲ್ಲಿ ಜನರು ತಮ್ಮ ಸಂಗಾತಿ ಅಥವಾ ಗೆಳಯ/ತಿ ಜೊತೆ ಬಿಂದಾಸ್ ಆಗಿ ಹೆಜ್ಜೆ ಹಾಕುತ್ತಿರುತ್ತಾರೆ. ಕಿರಿದಾದ ಸ್ಥಳದಲ್ಲಿ ಹೆಚ್ಚು ಜನ ಇರುವ ಕಾರಣ ಒಬ್ಬರಿಗೊಬ್ಬರು ತಾಗಿಕೊಂಡು ಡ್ಯಾನ್ಸ್ ಮಾಡುತ್ತಿರುತ್ತಾರೆ.

ವೈರಲ್ ವಿಡಿಯೋದಲ್ಲಿ ಏನಿದೆ?

ಈ ಸಮಯವನ್ನು ಬಳಸಿಕೊಂಡ ಮಹಿಳೆ ಕ್ಲಬ್ ನಲ್ಲಿ ಪುರುಷ ಬಿಳಿ ಟಿ ಶರ್ಟ್  ಗಳ ಮೇಲೆ ಕಿಸ್ ಮಾಡುತ್ತಾರೆ.  ಪದೇ ಪದೇ ಲಿಪ್ ಸ್ಟಿಕ್ ಹಂಚಿಕೊಂಡು ಟಿ ಶರ್ಟ್ ಮೇಲೆ ಕಿಸ್ ಕೊಡುತ್ತಾರೆ. ಆದ್ರೆ ಇದು ಆ ಪುರುಷರಿಗೆ ತಿಳಿಯಲ್ಲ. ಕಿಸ್ ಮಾಡುತ್ತಾ ಮಹಿಳೆ  ಕ್ಯಾಮೆರಾ ನೋಡಿ ನಗುತ್ತಾಳೆ. ಈ ವಿಡಿಯೋದಲ್ಲಿ ತನ್ನ ಲಿಪ್ ಸ್ಟಿಕ್ ತುಂಡಾಗಿರೋದನ್ನು ಗಮನಿಸಬಹುದು.

ಇದನ್ನೂ ಓದಿ:  Russia: ಯುದ್ಧದ ಪರಿಣಾಮ, ಕಾಂಡೋಮ್ ಸಂಗ್ರಹಣೆಗೆ ಮುಂದಾಗಿದ್ದೇಕೆ ರಷ್ಯಾದ ಜನತೆ? ಶೇ.170ರಷ್ಟು ಮಾರಾಟ ಏರಿಕೆ

ಸದ್ಯ ಈ ವಿಡಿಯೋ 30 ಲಕ್ಷಕ್ಕೂ ಅಧಿಕ ವ್ಯೂವ್ ಪಡೆದುಕೊಂಡಿದ್ದು, 19 ಸಾವಿರಕ್ಕೂ ಹೆಚ್ಚು ಲೈಕ್ಸ್  ಪಡೆದಿದೆ.  ನೆಟ್ಟಿಗರು ವಿಡಿಯೋ ನೋಡಿ, ಇದೆಂಥ ತಮಾಷೆ. ಆತನ ಪತ್ನಿ ಟಿ ಶರ್ಟ್ ಮೇಲೆ ಕಿಸ್ ಕೊಟ್ಟಿರೋದನ್ನು ನೋಡಿದರೆ ಏನಾಗಬಹುದು ಎಂದು ನಾವೆಲ್ಲ ಊಹಿಸಬಹುದಾಗಿದೆ ಎಂದು ಹೇಳಿದ್ದಾರೆ.




ಅನುಮತಿ ಇಲ್ಲದೇ ಕಿಸ್ ಮಾಡಿದ್ದು ತಪ್ಪು!

ಪುರುಷನ ಅನುಮತಿ ಇಲ್ಲದೇ ಈ ರೀತಿ ಚುಂಬಿಸೋದು ತಪ್ಪು. ಈ ನಿಯಮ ಇಬ್ಬರಿಗೂ ಅನ್ವಯ ಆಗಲಿದೆ. ಇದು ಮತ್ತೊಬ್ಬರ ಸಂಸಾರ ಹಾಳು ಮಾಡುವ ಷಡ್ಯಂತ್ರ ಅಂತ ಮಹಿಳೆಗೆ ಛೀಮಾರಿ ಹಾಕಿದ್ದಾರೆ.

ಈತನ ಸೆಲ್ಫಿ ವಿಡಿಯೋದಲ್ಲಿ ಕಾಣಿಸಿದ್ದು ಏನು ಗೊತ್ತಾ? ನೀವೂ ಒಮ್ಮೆ ನೋಡಿ

ಈಗ ಜನರು ಎಲ್ಲೇ ಹೋದ್ರು ಅಲ್ಲಿ ಫೋಟೋ (Photo) ಕ್ಲಿಕ್ಕಿಸಿಕೊಂಡು ಸೋಶಿಯಲ್ ಮೀಡಿಯಾ(Social Media)ದಲ್ಲಿ ಹಂಚಿಕೊಳ್ಳುತ್ತಾರೆ. ವಿಡಿಯೋ (Video) ಹುಚ್ಚು ಇದ್ರೂ ತಾವು ಭೇಟಿ ನೀಡಿದ ಸ್ಥಳ(Tourist Place)ಗಳನ್ನು ಸೆರೆ ಹಿಡಿದು ಶೇರ್ ಮಾಡಿಕೊಳ್ಳುತ್ತಾರೆ. ಈ ಮೂಲಕ ಇಂದಿನ ಜನರು ತಮ್ಮ ಪ್ರವಾಸ(Tour)ವನ್ನು ಆನಂದಿಸುತ್ತಾರೆ.

ಪ್ರವಾಸದ ಬಳಿಕ ತಾವು ಕ್ಲಿಕ್ಕಿಸಿಕೊಂಡ ಮತ್ತು ಸೆರೆ ಹಿಡಿದ ಫೋಟೋ ಹಾಗೂ ವಿಡಿಯೋಗಳನ್ನು ನೋಡಿ ಸಂಭ್ರಮಿಸುತ್ತಾರೆ. ಆದ್ರೆ ಕೆಲವೊಮ್ಮೆ ತಮಗೆ ಗೊತ್ತಿಲ್ಲದ ಕುತೂಹಲಕಾರಿ ದೃಶ್ಯಗಳು ತಮ್ಮಕ್ಯಾಮೆರಾದಲ್ಲಿ ಸೆರೆ ಆಗಿರೋದದನ್ನು ಕಂಡು ಆಶ್ಚರ್ಯ ವ್ಯಕ್ತಪಡಿಸುತ್ತಾರೆ. ಇದೀಗ ಅಂತಹವುದೇ ಒಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ. ಆ ಪ್ರವಾಸಿಗನ ತನ್ನ ಹಿಂದೆ ಏನು ನಡೆಯುತ್ತಿದೆ ಎಂಬುವುದೇ ಗೊತ್ತಿರಲಿಲ್ಲ. ಆತ ಸಂತೋಷದಿಂದ ಸೆಲ್ಫಿ ವಿಡಿಯೋ (Selfie Video) ಮಾಡುತ್ತಿರೋದನ್ನು ಗಮನಿಸಬಹುದಾಗಿದೆ.

ಇದನ್ನೂ ಓದಿ:  Viral News: ಈ ಮನೆ ಉಚಿತವಾಗಿ ಸಿಗಲಿದೆಯಂತೆ, ಆದರೆ ಅಲ್ಲಿ ಹೋಗಿ ವಾಸಿಸುವಂತಿಲ್ಲ..!

ಬ್ರೆಜಿಲಿಯನ್ ವ್ಯಕ್ತಿ , ಫ್ರೆಂಚ್ ಆಲ್ಪ್ಸ್ ನಲ್ಲಿ ಸ್ನೋ ಬೋರ್ಡಿಂಗ್ ವೇಳೆ ಮಾಡಿರುವ ಸೆಲ್ಫಿ ವಿಡಿಯೋ ವೈರಲ್ ಆಗಿದೆ. ಈ ವ್ಯಕ್ತಿಗೆ ತನ್ನ ಹಿಂದೆ ಕರಡಿ ಬರುತ್ತಿರೋದು ತಿಳಿದಿರಲಿಲ್ಲ. ಸ್ನೋ ಬೋರ್ಡಿಂಗ್ ನಿಂದ ಬಂದ ಬಳಿಕ ಪ್ರವಾಸಿಗನಿಗೆ ತನ್ನನ್ನು ಕರಡಿ ಹಿಂಬಾಲಿಸಿರೋದು ಗಮನಕ್ಕೆ ಬಂದಿದೆ.








View this post on Instagram






A post shared by Alok (@alok)






ಡಿಜೆ ಅಲೋಕ್ ಸ್ನೋ ಬೋರ್ಡಿಂಗ್ ಮಾಡುವ ವೇಳೆ ಎತ್ತರ ಪ್ರದೇಶದಲ್ಲಿ ವಿಶ್ರಾಂತಿ ತೆಗೆದುಕೊಂಡಿದ್ದಾರೆ. ನಂತರ ಅಲ್ಲಿಂದ ಸ್ನೋ ಬೋರ್ಡಿಂಗ್ ಸ್ಲೈಡ್ ಆರಂಭಿಸಿದ್ದಾರೆ. ಈ ಸಮಯದಲ್ಲಿ ಡಿಜೆ ಅಲೋಕ್ ಮುಂದೆ ಬಂದ ಕೆಲವೇ ಕ್ಷಣಗಳಲ್ಲಿ ಹಿಂದೆ ದೈತ್ಯ ಕರಡಿ ಪ್ರತ್ಯಕ್ಷವಾಗಿದೆ. ಸ್ವಲ್ಪ ದೂರದವರೆಗೆ ಓಡಿ ಬಂದು ಹೋಗಿದೆ.
Published by:Mahmadrafik K
First published: