Australian Bride: ಕೊರೊನಾ ಬರ್ಲಿ ಅಂತಾನೇ ಕಂಡ ಕಂಡವರನೆಲ್ಲಾ ತಬ್ಬಿಕೊಳ್ಳುತ್ತಿದ್ದಾಳಂತೆ..! ವಿಡಿಯೋ ನೋಡಿ..

ಸಾಮಾಜಿಕ ಜಾಲತಾಣದಲ್ಲಿ ಈ ವೀಡಿಯೋ ನೋಡಿ ನೆಟ್ಟಿಗರು ತುಂಬಾನೇ ಗರಂ ಆಗಿದ್ದಾರೆ ಮತ್ತು ಜನರು ಕೋವಿಡ್ ಸೋಂಕಿನಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳುವ ಸಮಯದಲ್ಲಿ ಈ ರೀತಿಯ ವರ್ತನೆಯನ್ನು ನೋಡಿ ಬೇಸರ ವ್ಯಕ್ತ ಪಡಿಸಿದ್ದಾರೆ.

 ಆಸ್ಟ್ರೇಲಿಯಾದ ಮಹಿಳೆ

ಆಸ್ಟ್ರೇಲಿಯಾದ ಮಹಿಳೆ

  • Share this:
ಕಳೆದ ಎರಡು ವರ್ಷಗಳಿಂದ ಕೋವಿಡ್-19 ಸಾಂಕ್ರಾಮಿಕ (Covid-19 Epidemic) ರೋಗದಿಂದ ಇಡೀ ಜಗತ್ತಿನಲ್ಲಿರುವ (World) ಜನರು ಭಯದ ಭೀತಿಯಲ್ಲಿ ಬದುಕುತ್ತಿದ್ದಾರೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಎಲ್ಲಿ ಮನೆಯಿಂದ ಹೊರಗೆ ಹೋದರೆ ಕೋವಿಡ್ ಸೋಂಕು(Infection) ತಗಲುವುದು ಎಂದು ಅನೇಕ ಜನರು (People) ತಮ್ಮ ಮನೆಗೆ ಸೀಮಿತವಾಗಿದ್ದಾರೆ ಎಂದು ಹೇಳಬಹುದು. ಇಂತಹ ಭಯದ ಸಂದರ್ಭದಲ್ಲಿಯೂ ಕೆಲವು ಉಡಾಫೆ ಮನಸ್ಥಿತಿಯಿರುವವರು ರಸ್ತೆಗಳ ಮೇಲೆ ಇವತ್ತಿಗೂ ಒಂದು ಮಾಸ್ಕ್ ಹಾಕದೇ ಬೇಕಾಬಿಟ್ಟಿ ಓಡಾಡುತ್ತಿರುವವರನ್ನು ನಾವು ನೋಡಬಹುದು. ಎರಡು ವರ್ಷಗಳು ಕಳೆಯುವುದಕ್ಕೆ ಬಂದರೂ ಈ ಕೋವಿಡ್ ಸೋಂಕು ಪ್ರಕರಣಗಳು ಮಾತ್ರ ತನ್ನ ಅಟ್ಟಹಾಸವನ್ನು ಕಡಿಮೆ ಮಾಡುತ್ತಿಲ್ಲ.

ಮದುವೆಗೆ ಕೋವಿಡ್ ಅಡ್ಡವಾಗಬಾರದೆಂದು ಪ್ಯ್ಲಾನ್
ಇಲ್ಲಿಯೂ ಸಹ ಅಂತಹ ಒಬ್ಬ ಮಹಿಳೆ ಇದ್ದಾಳೆ ನೋಡಿ, ಆಕೆಗೆ ಕೋವಿಡ್ ಸೋಂಕು ತಗುಲಲಿ ಎಂದು ಏನು ಮಾಡುತ್ತಿದ್ದಾಳೆ ನೋಡಿ. ಇದನ್ನು ನೋಡಿದರೆ ನೀವು ಹೀಗೂ ಇರುತ್ತಾರೆಯೇ ಜನರು ಎಂದು ಆಶ್ಚರ್ಯ ಪಡುತ್ತೀರಿ. ಈ ಮಹಿಳೆ ನಮ್ಮ ದೇಶದವಳಲ್ಲ, ಆಸ್ಟ್ರೇಲಿಯಾ ದೇಶದವಳಾಗಿದ್ದು ಸದ್ಯದಲ್ಲೇ ಹಸೆ ಮಣೆ ಏರಲಿರುವ ಈಕೆ ತನಗೆ ಕೋವಿಡ್ ಸೋಂಕು ತಗುಲಲಿ ಎಂದು ಕಂಡ ಕಂಡವರನ್ನೆಲ್ಲಾ ತಬ್ಬಿ ಕೊಳ್ಳುತ್ತಿದ್ದಾಳಂತೆ ಎಂದು ಹೇಳಲಾಗುತ್ತಿದೆ.

ಏನಪ್ಪಾ ಇದು ವಿಚಿತ್ರ ಅಂತ ನೀವು ಎಂದು ಕೊಳ್ಳಬಹುದು, ಬನ್ನಿ ಹಾಗಾದರೆ ಇದರ ಹಿಂದಿನ ಕಾರಣವೇನು ಎಂದು ನಾವು ತಿಳಿಯೋಣ. ಈ ಮಹಿಳೆ ಆಕೆಯ ಮದುವೆಗೆ ಈ ಕೋವಿಡ್ ಅಡ್ಡವಾಗಬಾರದು ಎಂದು ಮದುವೆಗೆ ಮುಂಚೆಯೇ ಕೋವಿಡ್ ಸೋಂಕು ತಗುಲಿಸಿಕೊಂಡರೆ ಮದುವೆಗೆ ಯಾವುದೇ ಅಡ್ಡಿ ಆತಂಕ ಬರುವುದಿಲ್ಲ ಎಂಬುದು ಈಕೆಯ ಪ್ಲ್ಯಾನ್ ಅಂತೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: Inter caste Marriage: ಅಂತರ್ಜಾತಿ ಮದುವೆಯಾಗುವ ಜೋಡಿಗೆ ಸಿಗುತ್ತೆ ಸರ್ಕಾರದಿಂದ ಧನ ಸಹಾಯ

ಕೋವಿಡ್ ಬಂದಿಲ್ಲವೇ
ಇದೇ ಕಾರಣಕ್ಕೆ ಅಪರಿಚಿತರನ್ನು ತಬ್ಭಿಕೊಳ್ಳುತ್ತಿದ್ದಾರೆ ಮತ್ತು ಅವರೊಂದಿಗೆ ಕುಳಿತು ಮದ್ಯವನ್ನು ಸಹ ಕುಡಿಯುತ್ತಿದ್ದಾರೆಂದು ಹೇಳಲಾಗುತ್ತಿದೆ. ಸುದ್ದಿ ಮಾಧ್ಯಮದ ಪ್ರಕಾರ, ಮೆಲ್ಬೊರ್ನ್ ಮೂಲದ ಮಹಿಳೆಯು ಯಾವುದೇ ಮಾಸ್ಕ್ ಧರಿಸದೆ ನೈಟ್ ಕ್ಲಬ್ ಗಳಲ್ಲಿ ಮತ್ತು ಯಾವುದೇ ಸ್ಥಳಕ್ಕೆ ಹೋದರೂ ಯಾವುದೇ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸದೆ ಇರುವುದನ್ನು ವೀಡಿಯೋ ಮಾಡಿ ಟಿಕ್ ಟಾಕ್ ನಲ್ಲಿ ಹಂಚಿಕೊಂಡಿದ್ದಾರೆ. ಇವರು ಈ ನೈಟ್ ಕ್ಲಬ್ ಗಳಲ್ಲಿ ಜನರನ್ನು ತಬ್ಭಿಕೊಳ್ಳುತ್ತಾ ತುಂಬಾನೇ ಮಜಾ ಮಾಡಿರುವುದನ್ನು ಆ ವೀಡಿಯೋದಲ್ಲಿ ನಾವು ನೋಡಬಹುದು. ಈ ವೀಡಿಯೋ ಹಂಚಿಕೊಳ್ಳುವುದರ ಜೊತೆಗೆ “ನಿನ್ನ ಮದುವೆ ಆಗಲು ಇನ್ನೂ ಆರು ವಾರಗಳಿವೆ, ನಿನಗೆ ಇನ್ನೂ ಕೋವಿಡ್ ಬಂದಿಲ್ಲವೇ” ಎಂದು ಶೀರ್ಷಿಕೆಯನ್ನು ಬರೆದು ಕೊಂಡಿದ್ದಾಳೆ.

ವಿಡಿಯೋ ನೋಡಿ:ನೆಟ್ಟಿಗರು ಗರಂ
ಸಾಮಾಜಿಕ ಮಾಧ್ಯಮದಲ್ಲಿ ಈ ವೀಡಿಯೋ ನೋಡಿ ನೆಟ್ಟಿಗರು ನೋಡಿ ತುಂಬಾನೇ ಗರಂ ಆಗಿದ್ದಾರೆ ಮತ್ತು ಜನರು ಕೋವಿಡ್ ಸೋಂಕಿನಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳುವ ಸಮಯದಲ್ಲಿ ಈ ರೀತಿಯ ವರ್ತನೆಯನ್ನು ನೋಡಿ ಬೇಸರ ವ್ಯಕ್ತ ಪಡಿಸಿದ್ದಾರೆ. ಈ ವೀಡಿಯೋ ನೋಡಿದ ಆರೋಗ್ಯ ಇಲಾಖೆಯ ಸಿಬ್ಬಂದಿಗಳಂತೂ ತಮ್ಮ ತಲೆಯ ಮೇಲೆ ಕೈ ಇರಿಸಿಕೊಂಡು ಕೂತಿದ್ದಾರೆ ಎಂದು ಹೇಳಲಾಗುತ್ತಿದೆ.

ಆದಾಗ್ಯೂ ಈ ವೀಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ 1,21,000 ಜನರು ನೋಡಿದ್ದಾರೆ. ಈ ಟಿಕ್ ಟಾಕ್ ಖಾತೆಯನ್ನು ನಂತರ ಖಾಸಗಿಯನ್ನಾಗಿ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.ಮದುವೆ ಸಮಾರಂಭವನ್ನು ಹೊರತು ಪಡಿಸಿ ಎಲ್ಲಾ ತರಹದ ಸಮಾರಂಭಗಳನ್ನು ಜನವರಿ 12 ರಿಂದ ನಿಷೇಧಿಸಲಾಗಿದೆ ಎಂದು ವಿಕ್ಟೋರಿಯಾ ಸರ್ಕಾರವು ತಿಳಿಸಿತ್ತು.

ಇದನ್ನೂ ಓದಿ: Pink Marriage: ಪಿಂಕ್‌ ಬಣ್ಣದ ಜೊತೆಗೆ 40 ವರ್ಷ ಡೇಟಿಂಗ್, ನಂತರ ಮದುವೆ! ಹೀಗೂ ಇರ್ತಾರೆ

ಇದರ ಮುಂಚೆಯೇ ಈ ರೀತಿಯ ವೀಡಿಯೋ ಹೊರ ಬಂದದ್ದು ನಿಜಕ್ಕೂ ಅಧಿಕಾರಿಗಳಿಗೆ ತಲೆ ನೋವಾಗಿ ಪರಿಣಮಿಸಿದೆ ಎಂದು ಹೇಳಬಹುದು. ಎರಡು ವರ್ಷಗಳಿಂದ ಹಿಡಿದು ಇವತ್ತಿನವರೆಗೆ ಆಸ್ಟ್ರೇಲಿಯಾದಲ್ಲಿ ಸುಮಾರು 11.24 ಲಕ್ಷ ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, ಕಳೆದ 24 ಗಂಟೆಗಳಲ್ಲಿ ಆಸ್ಟ್ರೇಲಿಯಾ ದೇಶದಲ್ಲಿ ಸುಮಾರು 80,000 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ ಎಂದು ಹೇಳಲಾಗುತ್ತಿದೆ.
Published by:vanithasanjevani vanithasanjevani
First published: