Viral Video: ಸಣ್ಣ ಮಕ್ಕಳಂತೆ ಜಾರುಬಂಡೆ ಆಡಲು ಹೋಗಿ ಜಾರಿ ಬಿದ್ದ ಆಂಟಿ, ನಗೆಗಡಲಲ್ಲಿ ನೆಟ್ಟಿಗರು

Viral Video: ಇನ್ನೊಬ್ಬರು ಬಿದ್ದಾಗ ನಗುವವರು ಬಹಳಷ್ಟು ಜನರಿದ್ದಾರೆ. ಆದರೆ ತಾನೇ ಬಿದ್ದು, ಹೊಟ್ಟೆ ಹುಣ್ಣಾಗುವಷ್ಟು ನಗುವವರ ಸಂಖ್ಯೆ ಕಮ್ಮಿ. ಆಟ ಆಡೋಕೆ ವಯಸ್ಸಿನಿ ಮಿತಿ ಇಲ್ಲ ಅಲ್ವಾ? ನಾನು ಯಾವ ಪುಟ್ಟ ಮಕ್ಕಳಿಗಿಂತನೂ ಕಮ್ಮಿ ಇಲ್ಲ ಎಂದು ಹೇಗೆ ಜಾರುಬಂಡಿಯನ್ನು ಆಡಲು ಓರ್ವ ಮಹಿಳೆ ಹೋಗುತ್ತಾಳೆ ಮತ್ತು ಮುಂದೆ ಏನಾಗುತ್ತೆ ಅಂತ ನೀವೇ ನೋಡಿ.

ಸಾಂಧರ್ಬಿಕ ಚಿತ್ರ

ಸಾಂಧರ್ಬಿಕ ಚಿತ್ರ

  • Share this:
 ಕೋವಿಡ್‌  (Covid) ಕಾರಣದಿಂದ ಹೆಚ್ಚು ಕಾಲ ಸ್ತಬ್ಧಗೊಂಡಿದ್ದಂತಹ ಜಗತ್ತು ಸಹಜ ಸ್ಥಿತಿಯತ್ತ ಸಾಗಲು ಪ್ರಯತ್ನಿಸುತ್ತಿದ್ದಂತೆ, ಭಾಷೆ ಅಥವಾ ರಾಷ್ಟ್ರೀಯತೆಯ (Language or Nationality)  ಅಡೆತಡೆಗಳನ್ನು ಲೆಕ್ಕಿಸದೆ ಜನರು ಈಗ ಮನೋರಂಜನೆ ನೀಡುವ ವ್ಯಕ್ತಿಗಳ ಕಡೆಗೆ ಆಕರ್ಷಿತರಾಗುತ್ತಿದ್ದಾರೆ. ಜಗತ್ತಿನ ಯಾವುದೇ ಮೂಲೆಯಲ್ಲಿ ಕುಳಿತು ಕೈಯಲ್ಲಿ ಸ್ಮಾರ್ಟ್‌ಫೋನ್ (Smart Phone)  ಹಿಡಿದು ಸದಾ ಇಂಟರ್‌ನೆಟ್‌ನಲ್ಲಿ (Internet ) ಜಾಲಾಡುವ ಜನಕ್ಕೆ ಇಡೀ ಜಗತ್ತಿನ ಇನ್ಯಾವುದೋ ಮೂಲೆಯಲ್ಲಿ ಕುಳಿತ ವ್ಯಕ್ತಿ ನೀಡಿದ ಮನೋರಂಜನೆ ಇಷ್ಟವಾಗ ತೊಡಗಿದೆ ಎಂದರೆ ಸುಳ್ಳಾಗದು. ನೆಟ್ಟಿಗರು ದೇಶ, ಭಾಷೆ, ಧರ್ಮಗಳ ಎಲ್ಲೆ ಮೀರಿ ತಮಾಷೆಯ ವೀಡಿಯೊಗಳನ್ನು ಎಂಜಾಯ್ ಮಾಡುತ್ತಿದ್ದಾರೆ. ಹೀಗೆ ಜನರನ್ನು ಕುಳಿತಲ್ಲಿಂದಲೇ ಮನೋರಂಜಿಸುವುದು ಎಂದರೆ ಈ ವೈರಲ್‌ ವಿಡಿಯೋಗಳು ಆಗಿವೆ.

ಇಂಟರ್‌ನೆಟ್‌ ಬಂದಾಗಿನಿಂದ ಹೊಸ ಹೊಸ ವಿಡಿಯೋಗಳು ದಿನಕ್ಕೆ ಸಾವಿರಾರು ವಿಡಿಯೋಗಳು ವೈರಲ್‌ ಆಗುತ್ತಲೇ ಇರುತ್ತವೆ. ಆದ್ದರಿಂದ ಇಂದು ಇಂಟರ್ನೆಟ್ ಸಂಪೂರ್ಣವಾಗಿ ಆಸಕ್ತಿದಾಯಕ ಮತ್ತು ಆಕರ್ಷಕ ವೀಡಿಯೊಗಳಿಂದ ತುಂಬಿ ಹೋಗಿದೆ ಎಂದು ಹೇಳಬಹುದು.

ಈ ಆಸಕ್ತಿದಾಯಕ ವಿಡಿಯೋಗಳು ನಿಮ್ಮ ಬೇಸರವನ್ನು ಕಳೆಯುತ್ತವೆ. ನಿಮಗೆ ಸಂತೋಷವನ್ನು ನೀಡಿ, ಮನರಂಜನೆಯನ್ನು ಸಹ ನೀಡುತ್ತವೆ. ಕೆಲವು ವಿಡಿಯೋಗಳಂತೂ ನಕ್ಕು ನಕ್ಕು ಕೆಲವು ಸಲ ಹೊಟ್ಟೆ ಹುಣ್ಣಾಗಿ ಹೋಗುವಂತಿರುತ್ತವೆ.

ಇದನ್ನೂ ಓದಿ:  ಓಡುವ ಮಹಿಳೆಯನ್ನು ಹಿಂಬಾಲಿಸಿದ ಕುರಿ ಹಿಂಡು, ನೋಡಿದವರಿಗೆ ಖುಷಿ ಕೊಡುತ್ತೆ ಈ ವೈರಲ್‌ ವಿಡಿಯೋ!

ನಮ್ಮ ಬಾಲ್ಯದಲ್ಲಿ ನಾವೆಲ್ಲ‌ ಏನೇನೊ ಆಟವಾಡುತ್ತಿದ್ದೆವು. ಬಾಲ್ಯದಲ್ಲಿ, ನಾವೆಲ್ಲರೂ ಸ್ವಿಂಗ್ ಅಥವಾ ಜಾರು ಬಂಡೆ ಎಂದು ಕರೆಯುವ ಆಟಗಳನ್ನು ಹೆಚ್ಚು ಇಷ್ಟಪಡುತ್ತೇವೆ, ಏಕೆಂದರೆ ಅವು ಅತ್ಯಂತ ವಿನೋದಮಯ ಆಟಗಳಾಗಿರುತ್ತವೆ. ಆ ಆಟಗಳನ್ನು ಆಡುವಾಗ ನಮಗೆ ಎಲ್ಲಿಲ್ಲದ ಆನಂದ ಹಾಗೂ ಉತ್ಸಾಹಗಳುಂಟಾಗುತ್ತವೆ ಎಂದು ಹೇಳಬಹುದು.

ಮಕ್ಕಳಷ್ಟೆ ಅಲ್ಲ ಈ ಜಾರುವ ಆಟವನ್ನು ಎಲ್ಲರೂ ಕೂಡ ಇಷ್ಟಪಡುತ್ತಾರೆ. ದೊಡ್ಡವರೂ ಕೂಡ ಈ ಜಾರುವ ಆಟವನ್ನು ಬಹಳ ಪ್ರೀತಿಸುತ್ತಾರೆ. ಇದನ್ನು ಹೆಚ್ಚು ಆನಂದಿಸುತ್ತಾರೆ. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಸಾವಿರಾರು ವಿಡಿಯೋಗಳು ವೈರಲ್ ಆಗುತ್ತಿದ್ದು, ಅಂತಹ ವಿಡಿಯೋದಲ್ಲಿ ಒಂದಾದ ಈ ವಿಡಿಯೋ ಒಬ್ಬ ವಯಸ್ಸಾದ ಅಜ್ಜಿಯು ಜಾರು ಬಂಡೆ ಹತ್ತಿ ಆಟವಾಡುತ್ತಾ, ಜೋರಾಗಿ ಬಿದ್ದಾಗ ಸುತ್ತಮುತ್ತಲಿನವರೆಲ್ಲ ಜೋರಾಗಿ ನಕ್ಕಿದ್ದಾರೆ. ಅವರ ಜೊತೆ ಈ ಅಜ್ಜಿಯು ನಕ್ಕಿದೆ. ಆ ವಿಡಿಯೋ ಆನ್‌ಲೈನ್‌ನಲ್ಲಿ ಎಲ್ಲೆಡೆ ಹರಿದಾಡುತ್ತಿದೆ.

ಇಲ್ಲೊಬ್ಬ ವಯಸ್ಸಾದ ಮಹಿಳೆಯು ಕೂಡ ಈ ಜಾರುವ ಆಟವನ್ನು ಒಂದು ಸ್ಲೈಡ್‌ನಲ್ಲಿ ಆಡಿ ತಮ್ಮ ಸಮಯವನ್ನು ಆನಂದಿಸುತ್ತಿರುವ ವಿಡಿಯೋ ಒಂದು ಈಗ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದೆ.
ಈ ವೀಡಿಯೋದಲ್ಲಿ ಮಕ್ಕಳು ಸ್ಲೈಡ್ ಅಥವಾ ಜಾರುವ ಬಂಡೆ ಮೇಲೆ ಕುಳಿತು ಒಬ್ಬೊಬ್ಬರಾಗಿ ಕೆಳಗೆ ಜಾರುತ್ತಿರುವುದನ್ನು ಕಾಣಬಹುದು. ಮಕ್ಕಳು ನಿಂತಿರುವ ಲೈನ್‌ನಲ್ಲಿ ಒಬ್ಬ ವಯಸ್ಸಾದ ವ್ಯಕ್ತಿಯು ಸಹ ನಿಂತಿದ್ದಾರೆ. ಅವರನ್ನು ಎಲ್ಲರೂ ಚಿಕ್ಕಮ್ಮ ಚಿಕ್ಕಮ್ಮ‌ ಎಂದು ಕರೆಯುತ್ತಿದ್ದಾರೆ. ಮಕ್ಕಳು ಒಬ್ಬೊಬ್ಬರೇ ಆ ಜಾರುವ ಬಂಡೆ ಮೇಲೆ ಬಂದ ನಂತರ ವಯಸ್ಸಾದ ಆಂಟಿಯೂ ಅಲ್ಲಿ ಕಾಣಿಸಿಕೊಳ್ಳುತ್ತಾಳೆ.

ಆ ಆಂಟಿಯು ಬಂಡೆಯ ಮೇಲೆ ಕುಳಿತು ಜಾರುತ್ತಾರೆ, ಆದರೆ ಕೊನೆಯಲ್ಲಿ ನಿಯಂತ್ರಣ ಕಳೆದುಕೊಂಡು ಧೊಪ್ಪನೆ ಬೀಳುತ್ತಾಳೆ. ಕೆಲವು ಸೆಕೆಂಡುಗಳ ನಂತರವೇ ಅವಳು ಮತ್ತೆ ಎದ್ದೇಳಲು ಸಾಧ್ಯವಾಗುತ್ತದೆ. ಇದನ್ನೆಲ್ಲ ಗಮನಿಸುತ್ತಿದ್ದ ಸುತ್ತ ಮುತ್ತಲಿನ ವ್ಯಕ್ತಿಗಳು ಆ ಆಂಟಿಯ ಹರಸಾಹಸವನ್ನು ನೋಡಿ ತಡೆಯಲಾಗದೆ ನಕ್ಕಾಗ, ಆಂಟಿಯೂ ಎಲ್ಲರೊಂದಿಗೆ ಜೋರಾಗಿ ನಗುತ್ತಿರುವುದು ಈ ವಿಡಿಯೋದಲ್ಲಿ ಸೆರೆ ಆಗಿದೆ. ಈ ವಿಡಿಯೋ ಈಗ ಇಂಟರ್‌ನೆಟ್‌ನಲ್ಲಿ ಸಖತ್‌ ವೈರಲ್‌ ಆಗ್ತಿದೆ.

ಇದನ್ನೂ ಓದಿ:  ಆಟೋ ಡ್ರೈವರ್‌ಗೆ ಒಲಿದ ಅದೃಷ್ಟ, ಕೊನೆ ಕ್ಷಣದಲ್ಲಿ ಖರೀದಿಸಿದ ಟಿಕೆಟ್‌ಗೆ ಬಂತು 25 ಕೋಟಿ ಬಹುಮಾನ!

ಈ ವಿಡಿಯೊವನ್ನು ನೋಡುವವರು ಖಂಡಿತವಾಗಿಯೂ ತಮ್ಮ ನಗುವನ್ನು ತಡೆಯಲಾಗುವುದಿಲ್ಲ ಎಂದೇ ಹೇಳಬಹುದು. ಒಬ್ಬ ಸಾಮಾಜಿಕ ಬಳಕೆದಾರರು "ಅವಳಿಗೆ ಏನೂ ಆಗಲಿಲ್ಲ. ಅವಳು ಆ ಆಟವನ್ನು ನಿಜಕ್ಕೂ ಆನಂದಿಸುತ್ತಿರುವುದನ್ನು ನೋಡಿ ಸಂತೋಷವಾಗಿದೆ." ಎಂದು ಕಮೆಂಟ್‌ ಬರೆದಿದ್ದಾರೆ. ಇನ್ನೊಬ್ಬರು "ಭಾಯ್ ಲಗ್ ಗಯಿ ಉನ್ಹೆ ಯಾರ್ ಯೇ ಲೋಗ್ ಹಸ್ ರಹೇ" ಎಂದು ಸಹಾನುಭೂತಿ ವ್ಯಕ್ತಪಡಿಸಿ ಪ್ರತಿಕ್ರಿಯಿಸಿದ್ದಾರೆ.
First published: