ಆಗಸ್ಟ್ ತಿಂಗಳು ಒಂಥರ ವಿಚಿತ್ರವಾದದ್ದು. ಈ ತಿಂಗಳಲ್ಲಿ ಹೆಚ್ಚಿನ ಮಹತ್ವದ ದಿನಗಳು ಬರುತ್ತವೆ. ಹಬ್ಬಗಳು, ಕ್ರೀಡಾಕೂಟಗಳು ಹಾಗೂ ಬ್ಯಾಂಕ್ ರಜೆಗಳು ಸಹ ಇದೇ ತಿಂಗಳಲ್ಲಿ ಹೆಚ್ಚಿದೆ. ಇನ್ನೊಂದು ವಿಶೇಷ ಎಂದರೆ ಭಾರತ ಈ ಬಾರಿ 75ನೇ ಸ್ವತಂತ್ರ ದಿನವನ್ನು ಆಚರಿಸುವ ತಿಂಗಳು. ಅಲ್ಲದೇ, ಬಲರಾಮ್ ಜಯಂತಿ, ಹರಿಯಲಿ ತೀಜ್, ನಾಗರಪಂಚಮಿ, ರಕ್ಷಾ ಬಂಧನ, ಓಣಂ, ಕೃಷ್ಣ ಜನ್ಮಾಷ್ಟಮಿ ಸೇರಿದಂತೆ ವಿವಿಧ ಹಬ್ಬಗಳನ್ನು ಆಚರಿಸಲಾಗುತ್ತದೆ. ಇದಿಷ್ಟೇ ಅಲ್ಲದೇ, ಜನಮಾನಸದ ಅತಿ ದುರಂತ ಹಿರೋಷಿಮಾ ನಾಗಸಾಕಿ ದುರಂತವನ್ನು ಸಹ ಈ ತಿಂಗಳು ನೆನಪು ಮಾಡುತ್ತದೆ. ಅಲ್ಲದೇ ಹೇಗೆ ಪರಮಾಣು ಶಸ್ತ್ರಾಸ್ತ್ರಗಳು ಪರಿಣಾಮ ಬೀರಬಹುದು ಎಂಬುದನ್ನು ಸಾರಿ ಹೇಳುತ್ತದೆ. ಇನ್ನು ವಿಶ್ವಸಂಸ್ಥೆ ಮತ್ತು ಅದರ ಅಡಿಯಲ್ಲಿ ಬರುವ ಸಂಸ್ಥೆಗಳು ಈ ತಿಂಗಳಲ್ಲಿ, ವಿಶ್ವ ಸ್ತನಪಾನ ವಾರ, ಅಂತರಾಷ್ಟ್ರೀಯ ಯುವ ದಿನ, ಮಾನವೀಯ ದಿನ ಮತ್ತು ಅಂತರಾಷ್ಟ್ರೀಯ ಪರಮಾಣು ಪರೀಕ್ಷೆಗಳ ವಿರುದ್ಧದ ದಿನ, ಹಾಗೂ ವಿಶ್ವ ಜಲವಾರವನ್ನು ಸಹ ಆಚರಿಸುತ್ತವೆ.
ಇನ್ನೊಂದು ಪ್ರಮುಖ ವಿಚಾರವೆಂದರೆ ಈ ತಿಂಗಳು ಭಾರತದ ಬ್ಯಾಂಕುಗಳಿಗೆ 15 ದಿನ ದಿನ ರಜೆಗಳಿವೆ. ಆ 15 ದಿನ ರಜಾದಿನಗಳಲ್ಲಿ 7 ದಿನಗಳು ಕೇವಲ ವಾರಾಂತ್ಯದ ರಜೆಗಳಾಗಿದ್ದು, ಉಳಿದ ಎಂಟು ರಜೆಗಳು ಆರ್ಬಿಐ ಪಟ್ಟಿ ಮಾಡಿ ನೀಡಿದ ರಜೆಗಳಾಗಿವೆ. ಇವೆಲ್ಲ ಒಂದೆಡೆಯಾದರೆ ಕ್ರೀಡಾ ಕ್ಷೇತ್ರದಲ್ಲಿ ವಿಶ್ವದ ಅತಿ ದೊಡ್ಡ ಕ್ರೀಡಾಕೂಟ ಟೋಕಿಯೋ ಒಲಂಪಿಕ್ನ ಸಮಾರೋಪ ಸಮಾರಂಭವಿದೆ. ಹಾಗೆಯೇ ಭಾರತ ಕ್ರಿಕೆಟ್ ಪಂದ್ಯಾವಳಿಗೆ ಇಂಗ್ಲೆಂಡ್ ಪ್ರವಾಸಕ್ಕೆ ತೆರಳಲಿದೆ. ಅಲ್ಲಿ ಆಗಸ್ಟ್ 4, ಆಗಸ್ಟ್ 12 ಮತ್ತು ಆಗಸ್ಟ್ 25 ರಂದು ಕ್ರಮವಾಗಿ ಮೂರು ಟೆಸ್ಟ್ ಪಂದ್ಯಾ ಆಡಲಿದೆ.
ಇವುಗಳನ್ನು ಹೊರತುಪಡಿಸಿ ಆಗಸ್ಟ್ನಲ್ಲಿ ಇನ್ನು ಹಲವಾರು ವಿಶಿಷ್ಟ ದಿನಗಳಿವೆ. ಯಾವುದು ಆ ಘಟನೆಗಳು ಇಲ್ಲಿದೆ ಪಟ್ಟಿ
ಆಗಸ್ಟ್ 1
ಸ್ನೇಹ ದಿನ
ರಾಷ್ಟ್ರೀಯ ಸಹೋದರಿಯರ ದಿನ
ರಾಷ್ಟ್ರೀಯ ಪರ್ವತಾರೋಹಣ ದಿನ
ರೆಸ್ಪೆಕ್ಟ್ ಪೇರೆಂಟ್ಸ್ ಡೇ
ಮುಸ್ಲಿಂ ಮಹಿಳಾ ಹಕ್ಕುಗಳ ದಿನ
ವಿಶ್ವ ಶ್ವಾಸಕೋಶದ ಕ್ಯಾನ್ಸರ್ ದಿನ
ವಿಶ್ವ ಸ್ತನ್ಯಪಾನ ವಾರ (ಆಗಸ್ಟ್ 1-7)
ವೆಸ್ಟ್ ಇಂಡೀಸ್ vs ಪಾಕಿಸ್ತಾನ, 3 ನೇ ಟಿ 20
ಆಗಸ್ಟ್ 2
ಬಾಂಗ್ಲಾದೇಶ ವಿರುದ್ಧ ಆಸ್ಟ್ರೇಲಿಯಾ, ಮೊದಲ ಟಿ 20
ಆಗಸ್ಟ್ 3
ಬಾಂಗ್ಲಾದೇಶ ವಿರುದ್ಧ ಆಸ್ಟ್ರೇಲಿಯಾ, 2 ನೇ ಟಿ 20
ಆಗಸ್ಟ್ 4
ಭಾರತ vs ಇಂಗ್ಲೆಂಡ್ ಮೊದಲ ಟೆಸ್ಟ್
ಯುಎಸ್ ಕೋಸ್ಟ್ ಗಾರ್ಡ್ ದಿನ
ಆಗಸ್ಟ್ 5
ಆರ್ಟಿಕಲ್ 370 ರದ್ದತಿ ದಿನ
ಆಗಸ್ಟ್ 6
ಹಿರೋಷಿಮಾ ದಿನ
ಅಂತರಾಷ್ಟ್ರೀಯ ಕ್ಷಮೆ ದಿನ
ಆಗಸ್ಟ್ 7
ರಾಷ್ಟ್ರೀಯ ಕೈಮಗ್ಗ ದಿನ
ಆಗಸ್ಟ್ 8
ಒಲಿಂಪಿಕ್ ಕ್ರೀಡಾಕೂಟದ ಸಮಾರೋಪ ಸಮಾರಂಭ
ಭಾರತ ಬಿಟ್ಟು ತೊಲಗಿ ಚಳುವಳಿ ದಿನ
ವಿಶ್ವ ಬೆಕ್ಕು ದಿನ
ವಿಶ್ವ ಹಿರಿಯ ನಾಗರಿಕರ ದಿನ
ಐರ್ಲೆಂಡ್ ವಿರುದ್ಧ ಜಿಂಬಾಬ್ವೆ, 2 ನೇ ಏಕದಿನ
ಆಗಸ್ಟ್ 9
ನಾಗಸಾಕಿ ದಿನ
ಬಲರಾಮ್ ಜಯಂತಿ
ಆಗಸ್ಟ್ 10
ವಿಶ್ವ ಜೈವಿಕ ಇಂಧನ ದಿನ
ವಿಶ್ವ ಸಿಂಹ ದಿನ
ಆಗಸ್ಟ್ 11
ಹರಿಯಲಿ ತೀಜ್
ಐರ್ಲೆಂಡ್ ವಿರುದ್ಧ ಜಿಂಬಾಬ್ವೆ, 3 ನೇ ಏಕದಿನ
ಆಗಸ್ಟ್ 12
ಭಾರತ vs ಇಂಗ್ಲೆಂಡ್ ಎರಡನೇ ಟೆಸ್ಟ್
ಅಂತರಾಷ್ಟ್ರೀಯ ಯುವ ದಿನ
ವಿಶ್ವ ಆನೆ ದಿನ
ಆಗಸ್ಟ್ 13
ಅಂತರರಾಷ್ಟ್ರೀಯ ಎಡಪಂಥೀಯರ ದಿನ
ವಿಶ್ವ ಅಂಗಾಂಗ ದಾನ ದಿನ
ನಾಗ ಪಂಚಮಿ
ಆಗಸ್ಟ್ 14
ಪಾಕಿಸ್ತಾನ ಸ್ವಾತಂತ್ರ್ಯ ದಿನ
ಆಗಸ್ಟ್ 15
ಸ್ವಾತಂತ್ರ್ಯ ದಿನಾಚರಣೆ
ಐರ್ಲೆಂಡ್ vs ಜಿಂಬಾಬ್ವೆ ಮೊದಲ ಟಿ 20
ಆಗಸ್ಟ್ 16
ಪಾರ್ಸಿ ಹೊಸ ವರ್ಷ
ಆಗಸ್ಟ್ 17
ಇಂಡೋನೇಷಿಯನ್ ಸ್ವಾತಂತ್ರ್ಯ ದಿನ
ಐರ್ಲೆಂಡ್ vs ಜಿಂಬಾಬ್ವೆ, 2 ನೇ ಟಿ 20
ಆಗಸ್ಟ್ 19
ಮೊಹರಂ
ವಿಶ್ವ ಛಾಯಾಗ್ರಹಣ ದಿನ
ಅಂತರಾಷ್ಟ್ರೀಯ ಬಿಲ್ಲು ದಿನ
ವಿಶ್ವ ಮಾನವೀಯ ದಿನ
ಆಗಸ್ಟ್ 20
ವಿಶ್ವ ಸೊಳ್ಳೆ ದಿನ
ಭಾರತೀಯ ಅಕ್ಷಯ್ ಉರ್ಜಾ ದಿನ
ಐರ್ಲೆಂಡ್ vs ಜಿಂಬಾಬ್ವೆ, 3 ನೇ ಟಿ 20
ಆಗಸ್ಟ್ 21
ಓಣಂ
ಆಗಸ್ಟ್ 22
ರಕ್ಷಾ ಬಂಧನ
ಆಗಸ್ಟ್ 23
ಗುಲಾಮರ ವ್ಯಾಪಾರದ ಸ್ಮರಣಾರ್ಥ ಅಂತರಾಷ್ಟ್ರೀಯ ದಿನ
ಆಗಸ್ಟ್ 25
ಭಾರತ vs ಇಂಗ್ಲೆಂಡ್ ಮೂರನೇ ಟೆಸ್ಟ್
ಆಗಸ್ಟ್ 23 ರಿಂದ 27
ವಿಶ್ವ ಜಲ ವಾರ
ಆಗಸ್ಟ್ 26
ಮಹಿಳಾ ಸಮಾನತೆಯ ದಿನ
ಅಂತರಾಷ್ಟ್ರೀಯ ನಾಯಿ ದಿನ
ಆಗಸ್ಟ್ 29
ರಾಷ್ಟ್ರೀಯ ಕ್ರೀಡಾ ದಿನ
ಪರಮಾಣು ಪರೀಕ್ಷೆಗಳ ವಿರುದ್ಧ ಅಂತರರಾಷ್ಟ್ರೀಯ ದಿನ
ತೆಲುಗು ಭಾಷಾ ದಿನ
ಸಂಸ್ಕೃತ ದಿನ
ಆಗಸ್ಟ್ 30
ಜನ್ಮಾಷ್ಟಮಿ
ಸಣ್ಣ ಕೈಗಾರಿಕಾ ದಿನ
(ಸಂಧ್ಯಾ ಎಂ)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ