Wedding Jewelry: ಮದುಮಗಳ ಸೌಂದರ್ಯ ಹೆಚ್ಚಿಸುತ್ತವೆ ಈ ಮೂಗುಬಟ್ಟುಗಳು

ಭಾರತೀಯ ವಿವಾಹ ಪದ್ಧತಿಯಲ್ಲಿ ಮೂಗುನತ್ತಿಗೆ ತನ್ನದೇ ಆದ ವಿಶೇಷ ಸ್ಥಾನಮಾನವಿದೆ. ಪ್ರತಿಯೊಬ್ಬ ವಧುವೂ ಮೂಗುನತ್ತನ್ನು ಇಷ್ಟಪಟ್ಟು, ತುಂಬಾ ಸೊಗಸಾದ ರೀತಿಯಲ್ಲಿ ಧರಿಸುತ್ತಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಮದುವೆಯ (Wedding) ದಿನದಂದು ಅಲಂಕಾರಕ್ಕಾಗಿ (Makeup) ವಧುಗಳು (Bride) ಸಾಕಷ್ಟು ಹೊಸತು ಟ್ರೈ ಮಾಡುತ್ತಾರೆ. ತಮ್ಮ ಲೆಹೆಂಗಾ, ಮ್ಯಾಚಿಂಗ್ (Matching) ಆಭರಣಗಳ ಮೇಲೆ ಹೆಚ್ಚು ಗಮನ ಹರಿಸುತ್ತಾರೆ. ವಧುವಿನ ನೋಟದಲ್ಲಿ ದೊಡ್ಡ ಟ್ವಿಸ್ಟ್ ಎಂದರೆ ಮೂಗು. ಮೂಗುನತ್ತು (Nose Ring) ನಿಮ್ಮ ಸಂಪೂರ್ಣ ರೂಪವನ್ನು ಮತ್ತಷ್ಟು ಆಕರ್ಷಕವಾಗಿಸುತ್ತದೆ. ಇಂದು ನಾವು ನಿಮಗಾಗಿ ಕೆಲವು ವಿನ್ಯಾಸದ ಮೂಗುನತ್ತುಗಳ ಬಗ್ಗೆ ಹೇಳಲಿದ್ದೇವೆ. ಈ ನತ್ತುಗಳು ನಿಮ್ಮ ಮದುವೆಯ ದಿನಕ್ಕೆ ನಿಮ್ಮನ್ನು ಮತ್ತಷ್ಟು ಸುಂದರ ಕಾಣುವಂತೆ ಮಾಡುತ್ತವೆ. ಭಾರತೀಯ ವಿವಾಹ ಪದ್ಧತಿಯಲ್ಲಿ ಮೂಗುನತ್ತಿಗೆ ತನ್ನದೇ ಆದ ವಿಶೇಷ ಸ್ಥಾನಮಾನವಿದೆ. ಪ್ರತಿಯೊಬ್ಬ ವಧುವೂ ಮೂಗುನತ್ತನ್ನು ಇಷ್ಟಪಟ್ಟು, ತುಂಬಾ ಸೊಗಸಾದ ರೀತಿಯಲ್ಲಿ ಧರಿಸುತ್ತಾರೆ. ವಧುವಿನ ಅಂದವನ್ನು (Beauty) ಇಮ್ಮಡಿಗೊಳಿಸುವುದೇ ಮೂಗುನತ್ತು. ಮೂಗುನತ್ತು ಧರಿಸುವುದರಿಂದ ವಧು ವಿಭಿನ್ನವಾಗಿ ಮತ್ತು ಸುಂದರವಾಗಿ ಕಾಣುತ್ತಾಳೆ.

    ಭಾರತೀಯ ವಿವಾಹಗಳಲ್ಲಿ ಮೂಗನತ್ತು ಬಹಳ ಮುಖ್ಯವಾದ ಪಾತ್ರ ವಹಿಸುತ್ತದೆ. ಇದು ಖಂಡಿತವಾಗಿಯೂ ವಧುವಿನ 16 ಅಲಂಕಾರಗಳ ಒಂದು ಭಾಗವಾಗಿದೆ. ಹಾಗಾಗಿ ನಿಮ್ಮ ಮನಸ್ಸಿನ ನೋಟದಲ್ಲಿ ನೀವು ಯಾವ ಮೂಗನತ್ತು ಧರಿಸಲು ಇಷ್ಟಪಡುತ್ತೀರಿ ಎಂಬುದನ್ನು ಆಯ್ಕೆ ಮಾಡಿಕೊಳ್ಳಿ.

    ದೊಡ್ಡ ರೌಂಡ್ ಆಕಾರದ ಹರಳಿನ ನತ್ತು

    ಈ ದಿನಗಳಲ್ಲಿ ದೊಡ್ಡ ಆಕಾರದ ರೌಂಡ್ ಮೂಗುನತ್ತು ತುಂಬಾ ಟ್ರೆಂಡ್‌ನಲ್ಲಿದೆ. ಇದರಲ್ಲಿ ಅರ್ಧ ವೃತ್ತದಲ್ಲಿ ಹರಳುಗಳಿಂದ ಅಲಂಕರಿಸಲಾಗಿದ್ದು, ಇದು ವಧುವಿನ ಮುಖದ ಮೇಲೆ ವಿಭಿನ್ನ ಹೊಳಪನ್ನು ನೀಡುತ್ತದೆ. ಇದರೊಂದಿಗೆ ನೀವು ಹಗುರವಾದ ಮೂಗುನತ್ತುನ್ನು ಧರಿಸಲು ಬಯಸಿದರೆ ಒಳ್ಳೆಯದು.

    ಇದನ್ನೂ ಓದಿ: ಚಿನ್ನ, ಹಣ ಇನ್ನೂ ಕೊಟ್ಟಿಲ್ಲ, ನನಗೆ ಸರ್ಕಾರಿ ನೌಕರಿ ಇದೆ: ಮೂರು ಬಿಟ್ಟು ವರದಕ್ಷಿಣೆ ಕೇಳಿದ ವರನ ವಿಡಿಯೋ ನೋಡಿ

    ಈ ಸರಳವಾದ ಮೂರು-ಮುತ್ತಿನ ಮೂಗುನತ್ತು ಧರಿಸುವುದು ವಧುವಿಗೆ ಪರಿಪೂರ್ಣ ಸೌಂದರ್ಯ ನೀಡುತ್ತದೆ. ಹಗುರ ಮೂಗುನತ್ತು ಹುಡುಕುತ್ತಿದ್ದೀರಿ ಅಂತಾದರೆ ಸ್ಕ್ರೂಡ್ ಮೂಗುನತ್ತು ಧರಿಸುವುದು ಸೂಕ್ತ. ಇದಕ್ಕಾಗಿ ನೀವು ನಿಮ್ಮ ಮೂಗು ಚುಚ್ಚುವ ಅಗತ್ಯವಿಲ್ಲ.

    ಪಂಜಾಬಿ ಮೂಗುನತ್ತು

    ಇತ್ತೀಚಿನ ದಿನಗಳಲ್ಲಿ ಅತ್ಯಂತ ಭಾರವಾದ ಪಂಜಾಬಿ ಮೂಗುನತ್ತು ಫ್ಯಾಷನ್ ಹೆಚ್ಚು ಕಾಣುತ್ತಿದೆ. ಈ ಮೂಗುನತ್ತುಗಳು ಸಾಕಷ್ಟು ಭಾರವಾಗಿರುತ್ತವೆ ಮತ್ತು ವಧುವಿನ ಮುಖದಲ್ಲಿ ವಿಭಿನ್ನವಾಗಿ ಕಾಣುತ್ತವೆ. ಈ ಮೂಗುನತ್ತು ಸುತ್ತಿನ ಭಾಗವು ಮುಂಭಾಗ ಚೆಂದದ ವಿನ್ಯಾಸ ಮತ್ತು ಕುಸುರಿ ಕಲೆ ಹೊಂದಿರುತ್ತದೆ. ಮತ್ತು ಮತ್ತಷ್ಟು ಕೆಳಗೆ ಇದು ಭವ್ಯವಾದ ಟಸೆಲ್ನಿಂದ ಅಲಂಕರಿಸಲ್ಪಟ್ಟಿದೆ.

    ಕುಂದನ್ ಮೂಗುನತ್ತು

    ಮತ್ತೊಂದೆಡೆ, ದೊಡ್ಡ ಮೂಗುನತ್ತು ಬೇಡ, ಸಣ್ಣ ಮೂಗುನತ್ತು ಚೆಂದ ಇದೇ ಇರಲಿ ಎನ್ನುವವರು ಕುಂದನ್ ಮೂಗುನತ್ತು ಬಳಸಿ. ಇದು ವಧುವಿನ ನಾಚಿಕೆ ಮತ್ತು ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಬಿಳಿ, ನೀಲಿ ಬಣ್ಣದ ಕುಂದನ್ ಮೂಗುನತ್ತು ಹೆಚ್ಚು ಟ್ರೆಂಡಿಂಗ್ ನಲ್ಲಿದೆ.

    ಕುಂದನ್ ಮಾತ್ರವಲ್ಲ ಕುಂದನ್, ಮೀನಾ ಮತ್ತು ಮೋತಿ ಜಾದ್, ಅಂತಹ ಮೂಗುನತ್ತು ತುಂಬಾ ಸ್ಟೈಲಿಶ್ ಆಗಿ ಕಾಣುತ್ತವೆ. ನಿಮ್ಮ ಮದುವೆಯಲ್ಲೂ ಇದನ್ನು ಪ್ರಯತ್ನಿಸಬಹುದು. ನಟಿ ಅನುಷ್ಕಾ ಕೂಡ ತಮ್ಮ ಮದುವೆಯಲ್ಲಿ ಮೂಗುನತ್ತು ಧರಿಸಿದ್ದಳು. ಅವರು ತುಂಬಾ ಸುಂದರವಾಗಿ ಕಾಣುತ್ತಿದ್ದರು.

    ಸಾಂಪ್ರದಾಯಿಕ ನಥನಿ ಮೂಗುನತ್ತು

    ಸಾಂಪ್ರದಾಯಿಕ ನಥನಿ ಮೂಗುನತ್ತು ವಿಶೇಷವಾಗಿರುತ್ತದೆ. ವಧುವಿನ ಮುಖದ ಸೌಂದರ್ಯ ಹೆಚ್ಚಿಸುತ್ತದೆ. ನಥನಿ ಮೂಗುನತ್ತು ವಿನ್ಯಾಸವು ತುಂಬಾ ಸಾಂಪ್ರದಾಯಿಕ ರೂಪ, ನೋಟ ಹೊಂದಿದೆ. ಸಾಂಪ್ರದಾಯಿಕ ಅಲಂಕಾರ ಬಯಸುವ ವಧುಗಳಿಗೆ ನಥನಿ ಮೂಗುನತ್ತು ಉತ್ತಮ ಆಯ್ಕೆ. ಹಲವು ಬಾಲಿವುಡ್ ನಟಿಯರು ಕೂಡ ಇದನ್ನು ತಮ್ಮ ಮದುವೆಗಳಲ್ಲಿ ಧರಿಸಿದ್ದಾರೆ.

    ಸರಳವಾದ ಚಿನ್ನದ ಮೂಗುನತ್ತು

    ನೀವು ನಥನಿಯ ಅಭಿಮಾನಿಯಲ್ಲದಿದ್ದರೆ ಮತ್ತು ನಿಮಗೆ ಸರಳವಾದ ಸರಳವಾದ ಮೂಗುನತ್ತು ಬೇಕಾದರೆ ಚಿನ್ನದ ಮೂಗುನತ್ತುನ್ನು ಪ್ರಯತ್ನಿಸಬಹುದು. ಇದು ನಿಮಗೆ ತುಂಬಾ ಸರಿಹೊಂದುತ್ತದೆ ಮತ್ತು ಮದುವೆಯಲ್ಲಿ ಖಂಡಿತವಾಗಿಯೂ ನಿಮ್ಮನ್ನು ವಿಭಿನ್ನವಾಗಿ ಕಾಣುವಂತೆ ಮಾಡುತ್ತದೆ.

    ಇದನ್ನೂ ಓದಿ: ರಷ್ಯಾದ ಹುಡುಗಿ, ಭಾರತದ ಹುಡುಗ! ಧರ್ಮ, ದೇಶ, ಭಾಷೆಗಳನ್ನು ಮೀರಿದ ಅದ್ಭುತ ಪ್ರೇಮಕಥೆ

    ಮಹಾರಾಷ್ಟ್ರ ಮೂಗುನತ್ತು

    ನೀವು ಅನೇಕ ಬಾಲಿವುಡ್ ಮತ್ತು ಟಿವಿ ಶೋಗಳಲ್ಲಿ ಮಹಾರಾಷ್ಟ್ರ ಮೂಗುನತ್ತು ನೋಡಿರಬಹುದು. ಇದು ತುಂಬಾ ಪ್ರಸಿದ್ಧವಾಗಿದೆ ಮತ್ತು ಜನರು ಇದನ್ನು ಹೆಚ್ಚಾಗಿ ಬಳಸುತ್ತಾರೆ. ಇದು ನಿಮ್ಮ ಗೆಟಪ್‌ಗೆ ಸೌಂದರ್ಯ ಹೆಚ್ಚಿಸುತ್ತದೆ.
    Published by:renukadariyannavar
    First published: