Atal Pension Yojana: ದಿನಕ್ಕೆ ಕೇವಲ 7 ರೂ. ಉಳಿತಾಯ ಮಾಡಿ ತಿಂಗಳಿಗೆ 5,000 ರೂ. ಪಿಂಚಣಿ ಪಡೆಯಿರಿ

Save Rs 7 a day get Rs 5,000 monthly: ನೀವು 18 ನೇ ವಯಸ್ಸಿನಲ್ಲಿ ಈ ಯೋಜನೆಗೆ ಸೇರಿಕೊಂಡರೆ, ಈ ಯೋಜನೆಯಲ್ಲಿ ಪ್ರತಿ ದಿನ ಕೇವಲ 7 ರೂಪಾಯಿಗಳನ್ನು ಜಮಾ ಮಾಡುವ ಮೂಲಕ ನೀವು ಪ್ರತಿ ತಿಂಗಳು 5,000 ರೂ. ಪಿಂಚಣಿ ಪಡೆಯಬಹುದು. 

ಪ್ರಾತಿನಿಧಿಕ ಚಿತ್ರ.

ಪ್ರಾತಿನಿಧಿಕ ಚಿತ್ರ.

  • Share this:
Pension Scheme: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು 2015ರ ಮೇ 9 ರಂದು ಅಸಂಘಟಿತ ವಲಯದ ಕಾರ್ಮಿಕರಿಗೆ ಪಿಂಚಣಿ ನೀಡಲು ಅಟಲ್ ಪಿಂಚಣಿ ಯೋಜನೆಯನ್ನು ಆರಂಭಿಸಿದರು. ಈ ಯೋಜನೆ ಜನರನ್ನು ಶೀಘ್ರವಾಗಿ ತಲುಪುವ ಮೂಲಕ ಯಶಸ್ವಿಯಾಗಿದೆ.  PFRDA ಮಾಹಿತಿಯ ಪ್ರಕಾರ  ಆಗಸ್ಟ್ 25, 2021 ರವರೆಗೆ ಅಟಲ್ ಪಿಂಚಣಿ ಯೋಜನೆ (APY) ಚಂದಾದಾರರ ಸಂಖ್ಯೆಯು 3.30 ಕೋಟಿಗಳಷ್ಟು ಇದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಈ ಪಿಂಚಣಿ ಯೋಜನೆಯಡಿ 28 ಲಕ್ಷಕ್ಕೂ ಹೆಚ್ಚು ಖಾತೆಗಳನ್ನು ತೆರೆಯಲಾಗಿದೆ.

ಪಿಂಚಣಿ ಯೋಜನೆ ಆಯ್ಕೆಗಳು 

ಪಿಎಫ್‌ಆರ್‌ಡಿಎ (PFRDA) ಮಾಹಿತಿಯ ಪ್ರಕಾರ ಸುಮಾರು 78% ಚಂದಾದಾರರು 1,000 ರೂಪಾಯಿ ಪಿಂಚಣಿ ಯೋಜನೆಯನ್ನು ಆರಿಸಿಕೊಂಡಿದ್ದಾರೆ. ಸುಮಾರು 14% ಚಂದಾದಾರರು 5,000 ರೂಪಾಯಿ ಪಿಂಚಣಿ ಯೋಜನೆಯನ್ನು ಆರಿಸಿಕೊಂಡಿದ್ದಾರೆ. ಈ ಯೋಜನೆಯಡಿ  60 ವರ್ಷಗಳ ನಂತರ, 1,000, 2,000, 3,000, 4,000 ಮತ್ತು 5,000 ರೂಪಾಯಿಗಳ ಪಿಂಚಣಿ ಲಭ್ಯವಿದೆ. ಬ್ಯಾಂಕ್ ಅಥವಾ ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆ ಹೊಂದಿರುವ 18 ರಿಂದ 40 ವರ್ಷದ ಯಾವುದೇ ನಾಗರಿಕರು ಈ ಯೋಜನೆಯ ಪ್ರಯೋಜನವನ್ನು ಪಡೆಯಬಹುದು.

ಪ್ರತಿ ತಿಂಗಳು 210 ರೂ. ಹೂಡಿಕೆ

ಈ ಯೋಜನೆಯಡಿ ನೀವು ಖಾತೆಯನ್ನು ತೆರೆದರೆ  ಪ್ರತಿ ತಿಂಗಳು 210 ರೂ. ಅದರಂತೆ, ಒಂದು ವರ್ಷದಲ್ಲಿ 2,520 ರೂ. ತುಂಬಬೇಕು. ಈ 210 ರೂಗಳನ್ನು 60 ವರ್ಷ ವಯಸ್ಸಿನವರೆಗೆ ಮುಂದುವರೆಸಬೇಕು. ನಂತರ ಪ್ರತಿ ತಿಂಗಳು  5,000 ರೂ. ನಿಮ್ಮ ಖಾತೆಗೆ ಬರುತ್ತಲೇ ಇರುತ್ತದೆ. ವಾರ್ಷಿಕವಾಗಿ ರೂ. 60,000 ನಿಮ್ಮ ಕೈ ಸೇರುತ್ತದೆ.  ಗರಿಷ್ಠ ಲಾಭ ಪಡೆಯಲು ನೀವು ಆದಷ್ಟು ಬೇಗ ಈ ಯೋಜನೆಯನ್ನು ಆರಂಭಿಸಬೇಕು.

ನೀವು 18 ನೇ ವಯಸ್ಸಿನಲ್ಲಿ ಈ ಯೋಜನೆಗೆ ಸೇರಿಕೊಂಡರೆ, ಈ ಯೋಜನೆಯಲ್ಲಿ ಪ್ರತಿ ದಿನ ಕೇವಲ 7 ರೂಪಾಯಿಗಳನ್ನು ಜಮಾ ಮಾಡುವ ಮೂಲಕ ನೀವು ಪ್ರತಿ ತಿಂಗಳು 5,000 ರೂ. ಪಿಂಚಣಿ ಪಡೆಯಬಹುದು.  ಪ್ರತಿ ತಿಂಗಳು 1,000 ರೂಪಾಯಿ ಮಾಸಿಕ ಪಿಂಚಣಿಗೆ, ಕೇವಲ 42 ರೂಪಾಯಿ ತಿಂಗಳಿಗೆ ಜಮಾ ಮಾಡಬೇಕಾಗುತ್ತದೆ. 2,000 ರೂ. ಪಿಂಚಣಿಗೆ 84 ರೂ. ತುಂಬಬೇಕು. 3,000ಕ್ಕೆ 126 ರೂ. ಮತ್ತು ಮಾಸಿಕ 4,000 ರೂ. ಪಿಂಚಣಿಗೆ 168 ರೂ. ಪ್ರತಿ ತಿಂಗಳು ಠೇವಣಿ ಇಡಬೇಕಾಗುತ್ತದೆ.

ಇದನ್ನೂ ಓದಿ: Post Office Scheme: ಅಂಚೆ ಕಚೇರಿಯಲ್ಲಿ ಕೇವಲ 50 ಸಾವಿರ ಹೂಡಿಕೆ ಮಾಡಿ 3,300 ರೂ. ಪಿಂಚಣಿ ಪಡೆಯಿರಿ

ಅಟಲ್ ಪಿಂಚಣಿ ಯೋಜನೆಯಲ್ಲಿ ಹೂಡಿಕೆ ಮಾಡಲು https://enps.nsdl.com/eNPS/NationalPtensionSystem.html ವೆಬ್‌ಸೈಟ್‌ಗೆ ಭೇಟಿ ನೀಡಿ.

 ನಿಮ್ಮ ಆಧಾರ್ ಕಾರ್ಡ್ ವಿವರಗಳನ್ನು ಇಲ್ಲಿ ಸಲ್ಲಿಸಿ.

  1. ಸಲ್ಲಿಸಿದ ತಕ್ಷಣ, ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ OTP ಸ್ವೀಕರಿಸುತ್ತೀರಿ, ಅದನ್ನು ನಮೂದಿಸಿ ಮತ್ತು ನಿಮ್ಮ ವಿವರಗಳನ್ನು ಪರಿಶೀಲಿಸಲಾಗುತ್ತದೆ.

  2. ಈಗ ಬ್ಯಾಂಕಿನ ಮಾಹಿತಿಯನ್ನು ನೀಡಿ, ಇದರಲ್ಲಿ ಖಾತೆ ಸಂಖ್ಯೆ ಮತ್ತು ವಿಳಾಸವನ್ನು ಟೈಪ್ ಮಾಡಿ, ತಕ್ಷಣ ನಿಮ್ಮ ಖಾತೆ ಸಕ್ರಿಯಗೊಳ್ಳುತ್ತದೆ.

  3. ಇದರ ನಂತರ, ನೀವು ನಾಮಿನಿ ಮತ್ತು ಪ್ರೀಮಿಯಂ ಪಾವತಿಯ ಬಗ್ಗೆ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿ.

  4. ಈಗ ಪರಿಶೀಲನೆಗಾಗಿ ಫಾರ್ಮ್‌ಗೆ ಸಹಿ ಮಾಡಿ. ಇದರೊಂದಿಗೆ, ಅಟಲ್ ಪಿಂಚಣಿ ಯೋಜನೆಗೆ ನಿಮ್ಮ ನೋಂದಣಿ ಪೂರ್ಣಗೊಳ್ಳುತ್ತದೆ.


ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
Published by:Kavya V
First published: