Atal Pension Scheme- ತಿಂಗಳಿಗೆ 210 ರೂ ಕಟ್ಟಿರಿ, 5000 ಪೆನ್ಷನ್ ಪಡೆಯಿರಿ; ಅಟಲ್ ಪಿಂಚಣಿ ಯೋಜನೆ

How to register for Pension Scheme- ಕೇಂದ್ರ ಸರ್ಕಾರದ ಅಟಲ್ ಪಿಂಚಣಿ ಯೋಜನೆಯು ತಿಂಗಳಿಗೆ ರೂ 42ರಿಂದ 210 ಕಟ್ಟಿದರೆ 5 ಸಾವಿರ ರೂವರೆಗೆ ಮಾಸಿಕ ಪಿಂಚಣಿ ಸಿಗುವಂತೆ ಮಾಡುತ್ತದೆ. ಈ ಯೋಜನೆಗೆ ನೊಂದಾಯಿಸುವ ವಿವರ ಇಲ್ಲಿದೆ:

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

 • News18
 • Last Updated :
 • Share this:
  ನವದೆಹಲಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆ ಅಟಲ್ ಪೆನ್ಷನ್ ಯೋಜನೆ (Atal Pension Scheme) ಒಂದು ಕೋಟಿ ಜನರನ್ನು ತಲುಪುವ ಗುರಿಯನ್ನು ಹೊಂದಿದೆ. 2021-22 ಆರ್ಥಿಕ ವರ್ಷದೊಳಗೆ ಈ ಸಾಧನೆಯನ್ನು ಮಾಡಲು ಸರ್ಕಾರ ಮುಂದಾಗಿದೆ. ಪೆನ್ಷನ್ ಫಂಡ್ ರೆಗ್ಯುಲೇಟರಿ ಆ್ಯಂಡ್ ಡೆವಲಪ್ಮೆಂಟ್ (Pension Fund Regulatory and Development Authority -PFRDA) ನ ಅಂಕಿ ಅಂಶಗಳ ಪ್ರಕಾರ ಕಳೆದ ಆರು ತಿಂಗಳಲ್ಲಿ 39.80 ಲಕ್ಷ ಜನರು ಅಟಲ್ ಪೆನ್ಷನ್ ಯೋಜನೆಯಲ್ಲಿ ಜೊತೆಗೂಡಿದ್ದಾರೆ. ಕಳೆದ ಆರ್ಥಿಕ ವರ್ಷದಲ್ಲಿ 79.40 ಲಕ್ಷ ಜನ ಸರ್ಕಾರಿ ಪೆನ್ಷನ್ ಯೋಜನೆಗೆ ಒಳಪಟ್ಟಿದ್ದರು. ಅಟಲ್ ಪೆನ್ಷನ್ ಯೋಜನೆಗೆ ಒಳಪಡುತ್ತಿರುವ ಸಂಖ್ಯೆ ಏರಿಕೆಯಾಗುತ್ತಿದೆ. ಶೇ.32.13ರಷ್ಟು ಏರಿಕೆಯಾಗಿದ್ದು, ಸುಮಾರು 3.13 ಕೋಟಿ ಫಲಾನುಭವಿಗಳು ಈ ಯೋಜನೆ ಜೊತೆ ಸೇರಿಕೊಳ್ಳುತ್ತಿದ್ದಾರೆ. ನಿಮ್ಮ ವಯಸ್ಸು 40ಕ್ಕಿಂತ ಕಡಿಮೆ ಇದ್ರೆ ನೀವು ಯೋಜನಗೆ ಅರ್ಹರು. ವೃದ್ಯಾಪ್ಯದಲ್ಲಿ ಸುಖಕರ ಜೀವನ ನಡೆಸಲು ಅಟಲ್ ಪೆನ್ಷನ್ ಯೋಜನೆ ಸಹಾಯ ಮಾಡಲಿದೆ.

  ಯೋಜನೆಯತ್ತ ಆಕರ್ಷಿತರಾಗುತ್ತಿರುವ ಯುವ ಜನತೆ:

  ಅಟಲ್ ಪೆನ್ಷನ್ ಯೋಜನೆಯಲ್ಲಿ ಸುಮಾರು ಶೇ. 78 ಜನರು 1 ಸಾವಿರ ರೂಪಾಯಿ ಸ್ಕೀಮ್ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. 1 ಸಾವಿರ ರೂ.ಸ್ಕೀಮ್ ನ್ನು ಶೇ.44 ರಷ್ಟು ಮಹಿಳೆಯರು ಆಯ್ಕೆ ಮಾಡಿಕೊಂಡಿದ್ದಾರೆ. 18 ರಿಂದ 25 ವರ್ಷದೊಳಗಿನ ಶೇ.44ರಷ್ಟು ಯುವ ಜನತೆ ಸಹ 1 ಸಾವಿರ ರೂ. ಸ್ಕೀಮ್ ನತ್ತ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಈ ಯೋಜನೆಗೆ ಒಳಪಡುವ ಫಲಾನುಭವಿಗಳು ವೃದ್ಯಾಪ್ಯದಲ್ಲಿ ಕೇಂದ್ರ ಸರ್ಕಾರದಿಂದ ಪ್ರತಿ ತಿಂಗಳು ನಿಗದಿತ ಮೊತ್ತ ಪಡೆದುಕೊಳ್ಳಲಿದ್ದಾರೆ. ಈ ಬಗ್ಗೆ ಕೇಂದ್ರ ಸರ್ಕಾರವೇ ಗ್ಯಾರೆಂಟಿ ನೀಡುತ್ತಿದೆ.

  ಪ್ರಧಾನಿ ಮೋದಿ ಸರ್ಕಾರ 2015ರಲ್ಲಿ ಅಟಲ್ ಪೆನ್ಷನ್ ಯೋಜನೆಯನ್ನು ಆರಂಭಿಸಿತ್ತು. 1 ರಿಂದ 5 ಸಾವಿರ ರೂ. ಒಳಗಿನ ಮೊದಲ ಹಂತದ ಪೆನ್ಷನ್ ಪಡೆಯಲು ಫಲಾನುಭವಿಗಳು 42 ರಿಂದ 210 ರೂ. ಪಾವತಿಸಬೇಕಾಗುತ್ತದೆ.

  ಇದನ್ನೂ ಓದಿ: Covaxin for Kids| ಮಕ್ಕಳಿಗಾಗಿ ಕೋವ್ಯಾಕ್ಸಿನ್ ಲಸಿಕೆ: ಈ ಬಗ್ಗೆ ನೀವು ತಿಳಿದುಕೊಳ್ಳಲೇಬೇಕಾದ ಮಾಹಿತಿಗಳೇನು?

  ಏನಿದು ಅಟಲ್ ಪೆನ್ಷನ್ ಯೋಜನೆ?:

  ಈ ಯೋಜನೆಗೆ ಒಳಪಡುವ ಜನರು ನಿವೃತ್ತಿ ಬಳಿಕ ಪ್ರತಿ ತಿಂಗಳು ಕೇಂದ್ರ ಸರ್ಕಾರದಿಂದ ನಿಗದಿತ ಮೊತ್ತವನ್ನು ಪಿಂಚಣಿ ರೂಪದಲ್ಲಿ ಪಡೆಯುತ್ತಾರೆ. ಈ ಯೋಜನೆಯ ಲಾಭ ಪಡೆಯಲು ಕನಿಷ್ಠ 20 ವರ್ಷ ನಿಗದಿತ ಮೊತ್ತವನ್ನು ಪಾವತಿಸಬೇಕು. ನಿಮ್ಮ ವಯಸ್ಸು 18 ರಿಂದ 40 ವರ್ಷದೊಳಗೆ ಇದ್ರೆ ನೀವು ಯೋಜನೆಯ ಲಾಭ ಪಡೆಯಬಹುದಾಗಿದೆ. 60 ವರ್ಷದವರೆಗೆ ನೀವು ಪ್ರತಿ ತಿಂಗಳು ನಿಮ್ಮ ಆಯ್ಕೆಯ ಸ್ಕೀಮ್ ಪ್ರಕಾರ ನಿರ್ಧರಿತ ಮೊತ್ತವನ್ನು ಜಮೆ ಮಾಡುತ್ತಿರಬೇಕು. 60 ವರ್ಷದ ನಂತರ ಈ ಯೋಜನೆಯ ಲಾಭ ನೇರವಾಗಿ ನಿಮಗೆ ಸಿಗಲಿದೆ.

  ಈ ಯೋಜನೆಯ ಪ್ರಕಾರ ತಿಂಗಳಿಗೆ 1,000 ರೂ.ಗಳಿಂದ 5,000 ರೂ.ವರೆಗೆ ನೀವು ಪಿಂಚಣಿ ಪಡೆಯಬಹುದಾಗಿದೆ. ನಿಮ್ಮ ವಯಸ್ಸು 18 ಆಗಿದ್ರೆ 60 ವರ್ಷದ ಬಳಿಕ ನೀವು ಪ್ರತಿ ತಿಂಗಳು 5000 ರೂ. ಪಿಂಚಣಿ ಪಡೆಯಲು ಇಚ್ಛಿಸಿದ್ರೆ ನೀವು ಮಾಸಿಕ 210 ರೂ. ಜಮೆ ಮಾಡಬೇಕು. ಒಂದು ವೇಳೆಗೆ ಒಳಪಟ್ಟ ವ್ಯಕ್ತಿಯ ಸಾವು ಸಂಭವಿಸಿದ್ರೆ ಉತ್ತರಾಧಿಕಾರಿಗೆ ಹಣ ಹಿಂದಿರುಗಿಸಲಾಗುತ್ತದೆ. ಇನ್ನೂ 60 ವರ್ಷಕ್ಕೂ ಮೊದಲೇ ವ್ಯಕ್ತಿ ಹಣ ಹಿಂಪಡೆಯುವ ಅವಕಾಶವನ್ನು ಕೆಲವು ಷರತ್ತುಗಳೊಂದಿಗೆ ನೀಡಲಾಗುತ್ತದೆ.

  ಇದನ್ನೂ ಓದಿ: Monster Pumpkin| ಯುರೋಪಿಯನ್ ಚಾಂಪಿಯನ್‌ಶಿಪ್‌ನಲ್ಲಿ ಪ್ರಥಮ ಬಹುಮಾನ ಗೆದ್ದ ಇಟಲಿಯ ದೈತ್ಯ ಕುಂಬಳಕಾಯಿ..!

  ಖಾತೆ ತೆರೆಯೋದು ಹೇಗೆ?:

  ಅಟಲ್ ಪೆನ್ಷನ್ ಯೋಜನೆಗೆ ಲಾಭ ಪಡೆಯಬೇಕಾದ್ರೆ ನೀವು ಬ್ಯಾಂಕ್ ಅಥವಾ ಪೋಸ್ಟ್ ಆಫಿಸ್ ನಲ್ಲಿ ಖಾತೆ ತೆರೆಯಲು ನಿಮ್ಮ ಬಳಿ ಆಧಾರ್ ಕಾರ್ಡ್ ಮತ್ತು ಆ್ಯಕ್ಟಿವ್ ಮೊಬೈಲ್ ನಂಬರ್ ಇರಬೇಕು. ನೇರವಾಗಿ ಬ್ಯಾಂಕಿಗೆ ತೆರಳಿ ಅಥವಾ ಆನ್‍ಲೈನ್ ಮುಖಾಂತರ ಖಾತೆ ತೆರೆಯಬಹುದಾಗಿದೆ. ಇನ್ನು ಹಣ ಜಮೆ ಮಾಡಲು ಮಾಸಿಕ ಮತ್ತು ಆರು ತಿಂಗಳಿಗೊಮ್ಮೆ ಭರ್ತಿ ಮಾಡುವ ಎರಡು ಆಯ್ಕೆಯನ್ನು ನೀಡಲಾಗಿದೆ. ಅಟಲ್ ಪೆನ್ಷನ್ ಜೊತೆ ನಿಮ್ಮ ಖಾತೆ ಲಿಂಕ್ ಆದ್ರೆ ಪ್ರತಿತಿಂಗಳು ತನ್ನಿಂದ ತಾನೇ ಮಾಸಿಕ ಮೊತ್ತ ಅಕೌಂಟ್​ನಿಂದ ಕಡಿತವಾಗುತ್ತದೆ.

  ತೆರಿಗೆ ಉಳಿತಾಯ:

  ಅಟಲ್ ಪೆನ್ಷನ್ ಯೋಜನೆಗೆ ಒಳಪಡೋದರಿಂದ ನಿವೃತ್ತಿಯಲ್ಲಿ ಮಾಸಿಕ ಪಿಂಚಣಿ ಪಡೆಯೋದರ ಜೊತೆ ತೆರಿಗೆ ಉಳಿತಾಯ ಮಾಡಬಹುದಾಗಿದೆ. ಯೋಜನೆಯಲ್ಲಿ ಹಣ ಹೂಡಿಕೆ ಮಾಡೋದರಿಂದ 1,50,000 ರೂ.ವರೆಗೆ ಟ್ಯಾಕ್ಸ್ ಸೇವ್ ಮಾಡಬಹುದು. ಈ ತೆರಿಗೆ ಉಳಿತಾಯ ಸೆಕ್ಷನ್ 80 (ಸಿ) ಸಿಡಿ ಅಡಿಯಲ್ಲಿ ಸಿಗುತ್ತದೆ.

  - ಮಹಮ್ಮದ್ ರಫೀಕ್ ಕೆ.
  Published by:Vijayasarthy SN
  First published: