ಚಂದ್ರನ ಹತ್ತಿರದಲ್ಲಿರುವ ರಾಕೆಟ್ SpaceX ಸಂಸ್ಥೆಯದ್ದಲ್ಲ, ಚೀನಾ ದೇಶದ್ದು: ತಪ್ಪು ಒಪ್ಪಿಕೊಂಡ ಖಗೋಳ ಶಾಸ್ತ್ರಜ್ಞರು

Moon Built by China Not by SpaceX: ಚೀನಾ ದೇಶದ ರಾಕೆಟ್ ಹಂತವು ಸರಿಯಾದ ಕಕ್ಷೆಯಲ್ಲಿ ಚಲಿಸುತ್ತಿದ್ದು, ಮಾರ್ಚ್ 4 ರಂದು 7:25 a.m. EDT (1225 GMT) ಕ್ಕೆ ಚಂದ್ರನ ದೂರದ ಭಾಗದಲ್ಲಿ ತಲುಪುವ ನಿರೀಕ್ಷೆಯಿದೆ ಮತ್ತು ಅದು ಭೂಮಿಯಿಂದ ಗೋಚರಿಸುವುದಿಲ್ಲ. ಅದೇನೇ ಇದ್ದರೂ, ಗುರುತನ್ನು ಗುರುತಿಸುವಲ್ಲಿ ತಪ್ಪನ್ನು ಏಕೆ ಮಾಡಿದ್ದಾರೆಂದು ಗ್ರೇ ತಮ್ಮ ವೆಬ್‌ಸೈಟ್‌ನಲ್ಲಿ ವಿವರಿಸಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಇತ್ತೀಚೆಗೆ ಚಂದ್ರನನ್ನು (Moon) ಸಮೀಪಿಸುತ್ತಿರುವ ರಾಕೆಟ್ (Rocket)ಒಂದರ ಬಗ್ಗೆ ಖಗೋಳ ಶಾಸ್ತ್ರಜ್ಞರು (Astronomers) ತಪ್ಪಾದ ಹೇಳಿಕೆಯನ್ನು ನೀಡಿದ್ದು, ಪ್ರಸ್ತುತ ಅದನ್ನು ಒಪ್ಪಿಕೊಂಡು ಮಾಹಿತಿ ತಪ್ಪಾಗಿದೆ ಎಂದು ಸರಿಯಾದ ಹೇಳಿಕೆಯನ್ನು ಘೋಷಿಸಿದ್ದಾರೆ. ಚೀನಾ (China) ದೇಶವು ಚಂದ್ರನ ತಲುಪಲು ರಾಕೆಟ್ ಒಂದನ್ನು ಉಡಾವಣೆ ಮಾಡಿತ್ತು. ಆದರೆ ಖಗೋಳಶಾಸ್ತ್ರಜ್ಞರು ಈ ರಾಕೆಟ್ ಅನ್ನು ಸ್ಪೇಸ್‌ಎಕ್ಸ್ ಸಂಸ್ಥೆ (SpaceX) ಉಡಾಯನ ಮಾಡಿದೆ ಎಂದು ವರದಿ ಮಾಡಿತ್ತು.

ಚಂದ್ರನೊಂದಿಗೆ ಘರ್ಷಣೆಯ ಹಾದಿಯಲ್ಲಿ ಬಾಹ್ಯಾಕಾಶ ಒಂದನ್ನು ಆರಂಭದಲ್ಲಿ SpaceX ರಾಕೆಟ್ ಎಂದು ಹಲವಾರು ಖಗೋಳಶಾಸ್ತ್ರಜ್ಞರು ಭಾವಿಸಿದ್ದರು . ಆದರೆ ಈದೀಗ ಖಗೋಳ ಶಾಸ್ತ್ರಜ್ಞರಿಗೆ ಚಂದ್ರನ ಹತ್ತಿರ ಹೋಗಿರುವ ರಾಕೆಟ್ ಸ್ಪೇಸ್‌ಎಕ್ಸ್ ಸಂಸ್ಥೆಯದ್ದಲ್ಲ, ಬದಲಿಗೆ ಚೀನಾ ದೇಶದ ರಾಕೆಟ್ ಎಂದು ತಡವಾಗಿ ತಿಳಿದಿದೆ.

ತಪ್ಪು ಅರಿತ ಖಗೋಳ ಶಾಸ್ತ್ರಜ್ಞರು ರಾಕೆಟ್ ಹಾರಿಸಿದ್ದು ಸ್ಪೇಸ್‌ಎಕ್ಸ್ ಅಲ್ಲ. ಚೀನಾ ದೇಶದ ರಾಕೆಟ್ ಚಂದ್ರನ ಪರಿಶೋಧನಾ ಕಾರ್ಯಕ್ರಮಕ್ಕೆ ಸಂಬಂಧಿಸಿರುವ ಬೂಸ್ಟರ್ ಇದು ಎಂದು ತಪ್ಪಾದ ಹೇಳಿಕೆಯನ್ನು ವಿವರಿಸಿ ಸರಿಯಾದ ವಿವರವನ್ನು ಬಹಿರಂಗವಾಗಿ ಒಪ್ಪಿಕೊಂಡು ಘೋಷಿಸಿದ್ದಾರೆ. ಈ ಬಗ್ಗೆ ಖಗೋಳಶಾಸ್ತ್ರಜ್ಞ ಬಿಲ್ ಗ್ರೇ ಘೋಷಣೆ ಮಾಡಿದರು.

ರಾಕೆಟ್ ಭಾಗವು ಬಹುಶಃ 7 ವರ್ಷಗಳ ಹಿಂದೆ ಬಾಹ್ಯಾಕಾಶಕ್ಕೆ ಉಡಾವಣೆಯಾಗಿದೆ ಎಂದು ನಾಸಾ ಹೇಳಿದೆ, 2016 ಮತ್ತು 2017 ರ ನಡುವಿನ ವಸ್ತುವಿನ ಕಕ್ಷೆಗಳನ್ನು ವಿಶ್ಲೇಷಿಸಿದ ನಂತರ ನಾಸಾ ಬೂಸ್ಟರ್ ಅನ್ನು ಗುರುತಿಸಿದೆ ಎಂದು ವಿವರಿಸಿದೆ.

ನಾಸಾದ ಖಗೋಳವಿಜ್ಞಾನ ತಜ್ಞರು ಹೇಳುವಂತೆ ಅವರು ಕಳೆದ ತಿಂಗಳು ರಾತ್ರಿಯ ಆಕಾಶದ ರಹಸ್ಯಗಳನ್ನು ಮೂಲತಃ ತಪ್ಪಾಗಿ ಓದಿದ್ದಾರೆ. ಮಾರ್ಚ್ ಆರಂಭದಲ್ಲಿ ಚಂದ್ರನಿಗೆ ಅಪ್ಪಳಿಸುವ ನಿರೀಕ್ಷೆಯ ರಾಕೆಟ್ ಅನ್ನು ಚೀನಾ ನಿರ್ಮಿಸಿದೆ, SpaceX ಅಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಮಾರ್ಚ್ 4 ರಂದು ರಾಕೆಟ್ ಚಂದ್ರನ ಮೇಲ್ಮೈಗೆ ಅಪ್ಪಳಿಸುವ ನೀರಿಕ್ಷೆ ಇದೆ. ಆದರೆ ನಾವು ಘೋಷಿಸಿದ್ದು ತಪ್ಪಾಗಿದ್ದು, ಇದನ್ನು ಎಲೋನ್ ಮಸ್ಕ್ ಕಂಪನಿಯಿಂದ ನಿರ್ಮಿಸಲಾಗಿಲ್ಲ, ಬದಲಿಗೆ ಬೀಜಿಂಗ್‌ನಿಂದ ನಿರ್ಮಿಸಲಾಗಿದೆ ಎಂದು ತಜ್ಞರು ಹೇಳುತ್ತಿದ್ದಾರೆ.

ಇದನ್ನೂ ಓದಿ: ಈ ವ್ಯಕ್ತಿ ಆಸ್ಪತ್ರೆಗೆ ದಾಖಲಾಗಲು ಕಾರಣ ಒಂದು ಜೇಡ ಅಂತೆ- ಹೇಗೆ ಅಂತೀರಾ? ಈ ಸ್ಟೋರಿ ಓದಿ

ಚಂದ್ರನ ಹತ್ತಿರಕ್ಕೆ ತಲುಪುತ್ತಿರುವ ರಾಕೆಟ್ ಅನ್ನು ಈಗ 2014-065B ಬಾಹ್ಯಕಾಶ ಎಂದು ಹೇಳಲಾಗುತ್ತಿದೆ, ಇದು ಚೀನೀ ಬಾಹ್ಯಾಕಾಶ ಸಂಸ್ಥೆಯ ಚಂದ್ರನ ಪರಿಶೋಧನಾ ಕಾರ್ಯಕ್ರಮದ ಭಾಗವಾಗಿ 2014ರಲ್ಲಿ ಉಡಾವಣೆಯಾದ Chang'e 5-T1 ಎಂಬ ಬೂಸ್ಟರ್ ಆಗಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ತಮ್ಮ ತಪ್ಪನ್ನು ಒಪ್ಪಿಕೊಂಡ, ಆರ್ಬಿಟಲ್ ಡೈನಾಮಿಕ್ಸ್‌ನ ಖಗೋಳಶಾಸ್ತ್ರಜ್ಞ ಬಿಲ್ ಗ್ರೇ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಇತ್ತೀಚೆಗೆ, NASA ಸಂಸ್ಥೆಯ ಜೆಟ್ ಪ್ರೊಪಲ್ಷನ್ ಲ್ಯಾಬೊರೇಟರಿ ಇಂಜಿನಿಯರ್ ಇದರ ಅಧಿಕೃತ ಮಾಹಿತಿಯನ್ನು ನಮಗೆ ನೀಡಿದರು. ಅದರನ್ವಯ ನಮ್ಮ ತೀರ್ಮಾನವನ್ನು ಮರುಮೌಲ್ಯಮಾಪನ ಮಾಡಲು ಸಾಧ್ಯವಾಯಿತು ಎಂದು ಗ್ರೇ ಹೇಳಿದ್ದಾರೆ.

"ಇದು ಪ್ರಾಮಾಣಿಕ ತಪ್ಪು, ಈ ಆಳವಾದ ಬಾಹ್ಯಾಕಾಶ ವಸ್ತುಗಳ ಸರಿಯಾದ ಟ್ರ್ಯಾಕಿಂಗ್ ಕೊರತೆಯ ಸಮಸ್ಯೆಯನ್ನು ಸೃಷ್ಠಿಮಾಡಿತು" ಎಂದು ಖಗೋಳಶಾಸ್ತ್ರಜ್ಞ ಜೊನಾಥನ್ ಮೆಕ್‌ಡೊವೆಲ್ ಟ್ವೀಟ್ ಮಾಡಿದ್ದಾರೆ.

ಚೀನಾ ದೇಶದ ರಾಕೆಟ್ ಹಂತವು ಸರಿಯಾದ ಕಕ್ಷೆಯಲ್ಲಿ ಚಲಿಸುತ್ತಿದ್ದು, ಮಾರ್ಚ್ 4 ರಂದು 7:25 a.m. EDT (1225 GMT) ಕ್ಕೆ ಚಂದ್ರನ ದೂರದ ಭಾಗದಲ್ಲಿ ತಲುಪುವ ನಿರೀಕ್ಷೆಯಿದೆ ಮತ್ತು ಅದು ಭೂಮಿಯಿಂದ ಗೋಚರಿಸುವುದಿಲ್ಲ. ಅದೇನೇ ಇದ್ದರೂ, ಗುರುತನ್ನು ಗುರುತಿಸುವಲ್ಲಿ ತಪ್ಪನ್ನು ಏಕೆ ಮಾಡಿದ್ದಾರೆಂದು ಗ್ರೇ ತಮ್ಮ ವೆಬ್‌ಸೈಟ್‌ನಲ್ಲಿ ವಿವರಿಸಿದ್ದಾರೆ.

ಇದನ್ನೂ ಓದಿ: 80 ಕಿಮೀ ಆಳದ ನದಿಯಲ್ಲಿ ಮುಳುಗಿದ್ದ ಗೂಳಿ ಬದುಕಿ ಬಂದಿದ್ದೇ ರೋಚಕ!

ಸದ್ಯ ಚಂದ್ರನ ಹತ್ತಿರದಲ್ಲಿರುವ ರಾಕೆಟ್ ಅನ್ನು ಸ್ಪೇಸ್ ಎಕ್ಸ್ ಸಂಸ್ಥೆಯದ್ದಲ್ಲ, ಚೀನಾ ದೇಶದ್ದು ಎಂದು ಹೇಳುವಲ್ಲಿ ಖಗೋಳ ಶಾಸ್ತ್ರಜ್ಞರು ಖಚಿತಪಡಿಸಿದ್ದಾರೆ.
Published by:Sandhya M
First published: