ವಿದ್ಯಾರ್ಥಿಯನ್ನು ಚುಂಬಿಸಿ ಕೆಲಸ ಕಳೆದುಕೊಂಡ ಶಿಕ್ಷಕಿ

ಶಿಕ್ಷಕಿಯ ಈ ಮುತ್ತಿನ ಮತ್ತಿನ ವಿಡಿಯೋ ಬೆಳಕಿಗೆ ಬಂದ ನಂತರ ಶಾಲಾ ಮಂಡಳಿ ರಾಚೆಲ್​ ಅವರನ್ನು ಕಡ್ಡಾಯ ರಜೆಯ ಮೇಲೆ ಕಳುಹಿಸಲಾಯಿತು.

zahir | news18
Updated:May 11, 2019, 5:36 PM IST
ವಿದ್ಯಾರ್ಥಿಯನ್ನು ಚುಂಬಿಸಿ ಕೆಲಸ ಕಳೆದುಕೊಂಡ ಶಿಕ್ಷಕಿ
(Image:liverpoolecho.co.uk)
zahir | news18
Updated: May 11, 2019, 5:36 PM IST
ಗುರು ಬ್ರಹ್ಮ, ಗುರು ವಿಷ್ಣು, ಗುರು ದೇವೋ ಮಹೇಶ್ವರಃ ಎಂದು ಹೇಳಲಾಗುತ್ತದೆ. ಅಂದರೆ ಶಿಕ್ಷಕರು ಅಥವಾ ಶಿಕ್ಷಕಿಯರು ಕೇವಲ ಪುಸ್ತಕದಲ್ಲಿರುವ ವಿಷಯಗಳನ್ನು ಮಾತ್ರ ವಿದ್ಯಾರ್ಥಿಗಳಿಗೆ ಕಲಿಸುವುದಲ್ಲ. ಶಿಕ್ಷಣದ ಜೊತೆಗೆ ಸಮಾಜದಲ್ಲಿ ಹೇಗೆ ನಡೆದುಕೊಳ್ಳಬೇಕೆಂಬುದನ್ನು ತಿಳಿಸಿಕೊಡುವ ದೈವ ಸ್ವರೂಪಿ. ಹೀಗಾಗಿಯೇ ಗುರುಗಳನ್ನು ದೇವರಿಗೆ ಹೋಲಿಸಲಾಗುತ್ತದೆ. ಆದರೆ ಇಲ್ಲೊಬ್ಬರು ಶಿಕ್ಷಕಿ ವಿದ್ಯಾರ್ಥಿಯನ್ನು ಚುಂಬಿಸಿ ಕೆಲಸ ಕಳೆದುಕೊಂಡಿರುವ ಘಟನೆ ನಡೆದಿದೆ.

ಸ್ಪೇನ್​ನ ಶಾಲೆಯೊಂದರೆ ಶಿಕ್ಷಕಿ ರಾಚೆಲ್ ಕ್ಲಿಂಟ್ ವಿದ್ಯಾರ್ಥಿಯೊಂದಿಗೆ ಕಿಸ್ಮತ್ ಕನೆಕ್ಷನ್ ನಡೆಸಿರುವ ವಿಡಿಯೋವೊಂದು ವೈರಲ್ ಆಗಿತ್ತು. ರೈಲಿನಲ್ಲಿ ಪ್ರಯಾಣಿಸುತ್ತಿದ್ದ 18 ವರ್ಷದ ವಿದ್ಯಾರ್ಥಿಯ ಕಾಲಿನ ಮೇಲೆ ಕುಳಿತು ಚುಂಬಿಸಿದ್ದರು. 30ರ ಹರೆಯದ ಶಿಕ್ಷಕಿಯ ಈ ಕಿಸ್ಸಿಂಗ್ ವಿಡಿಯೋವನ್ನು ಜತೆಗಿದ್ದವರು ಸೆರೆ ಹಿಡಿದು ಹರಿ ಬಿಟ್ಟಿದ್ದರು. ಇದು ಶಾಲೆಯ ಹೊಸ್ತಿಲಿಗೂ ಬಂದು ನಿಲ್ಲುತ್ತಿದ್ದಂತೆ ಶಾಲಾ ಮಂಡಳಿ ಎಚ್ಚೆತ್ತುಕೊಂಡಿತು.

ಶಿಕ್ಷಕಿಯ ಈ ಮುತ್ತಿನ ಮತ್ತಿನ ವಿಡಿಯೋ ಬೆಳಕಿಗೆ ಬಂದ ನಂತರ ಶಾಲಾ ಮಂಡಳಿ ರಾಚೆಲ್​ ಅವರನ್ನು ಕಡ್ಡಾಯ ರಜೆಯ ಮೇಲೆ ಕಳುಹಿಸಲಾಯಿತು. ಸಾರ್ವಜನಿಕ ಸ್ಥಳದಲ್ಲಿ ಶಿಕ್ಷಕಿಯೊಬ್ಬರು ಆದರ್ಶಪ್ರಾಯ ಆಗಿರಬೇಕು. ಆದರೆ ರಾಚೆಲ್​ ಮೈ ಮರೆತು ವಿದ್ಯಾರ್ಥಿಯೊಂದಿಗೆ ವರ್ತಿಸಿದ್ದಾರೆ. ಹೀಗಾಗಿ ಅವರ ವಿರುದ್ದ ಕ್ರಮಕೈಗೊಳ್ಳಬೇಕೆಂಬ ದೂರುಗಳು ಕೇಳಿ ಬಂದವು. ಈ ಬಗ್ಗೆ ವಿಚಾರಣೆ ನಡೆಸಿದ ಶಾಲಾ ಆಡಳಿತ ಮಂಡಳಿ ಕ್ಲಿಂಟ್ ವರ್ತನೆಯನ್ನು ಖಂಡಿಸಿ, ಅವರನ್ನು ಶಿಸ್ತು ಸಮತಿಯ ಮುಂದೆ ಹಾಜರಾಗುವಂತೆ ತಿಳಿಸಿದ್ದರು.

ಈ ವೇಳೆ ತಾನು ಅಂದು ಪಾರ್ಟಿವೊಂದರಲ್ಲಿ ಭಾಗವಹಿಸಿದ್ದಾಗಿ ತಿಳಿಸಿದ ರಾಚೆಲ್, ಅಲ್ಲಿ  ಖಾಲಿ ಹೊಟ್ಟೆಯಲ್ಲಿ ಆಲ್ಕೋಹಾಲ್ ಸೇವಿಸಿದ್ದೆ. ಇದರಿಂದ ಮೈಮರೆತಿರುವುದಾಗಿ ಶಿಸ್ತು ಸಮತಿ ಮುಂದೆ ಸಮಜಾಯಿಷಿ ನೀಡಿದರು. ಶಿಕ್ಷಕಿಯ ವಾದವನ್ನು ಆಲಿಸಿದ ಮಂಡಳಿ, ಬಳಿಕ ಇದೊಂದು ಲೈಂಗಿಕ ಚಟುವಟಿಕೆ ಎಂದು ಆರೋಪಿಸಿತು. ಅಲ್ಲದೆ ವಿಡಿಯೋದಲ್ಲಿ ವಿದ್ಯಾರ್ಥಿ ಕಡೆಯಿಂದ ಯಾವುದೇ ಫ್ಲರ್ಟ್​ಗಳಿಲ್ಲದಿದ್ದರೂ, ಶಿಕ್ಷಕಿಯೇ ವಿದ್ಯಾರ್ಥಿಯ ಮೇಲೆರಗಿ ಚುಂಬಿಸಿರುವುದು ಸ್ಪಷ್ಟವಾಗಿತ್ತು. ಹೀಗಾಗಿ ಶಿಕ್ಷಕಿಯನ್ನು ಈ ವೃತ್ತಿಯಿಂದಲೇ ಅಮಾನತು ಮಾಡಲು ನಿರ್ಧರಿಸಲಾಯಿತು.

ಇದನ್ನೂ ಓದಿ: ಮದುವೆಗೂ ಮುನ್ನವೇ ಗರ್ಭವತಿಯಾದ ಸಲ್ಮಾನ್​ ಖಾನ್ ಚಿತ್ರದ ನಾಯಕಿ!

ಆದರೆ ತಾನು ಶಿಕ್ಷಕರ ವೃತ್ತಿಯಲ್ಲಿ ಕಳೆದ 10 ವರ್ಷದಿಂದ ಕಾರ್ಯನಿರ್ವಹಿಸುತ್ತಿದ್ದು, ಆದರೆ ಇದೇ ಮೊದಲ ಬಾರಿ ಇಂತಹದೊಂದು ಪ್ರಕರಣಕ್ಕೆ ಒಳಗಾಗಿದ್ದೇನೆ. ಇದನ್ನು ತಪ್ಪೆಂದು ಮಾತ್ರ ಪರಿಗಣಿಸಬೇಕೆಂದು ಶಾಲಾ ಮಂಡಳಿಯಲ್ಲಿ ರಾಚೆಲ್​ ವಿನಂತಿಸಿಕೊಂಡರು. ಆದರೆ  15 ವರ್ಷಕ್ಕಿಂತ ಕಡಿಮೆ ವಯಸ್ಸಿನನೊಂದಿಗೆ ಅನುಚಿತ ವರ್ತನೆ ತೋರಿದ್ದೀರಿ. ಇದರಿಂದ ಶಾಲೆಯ ಮೇಲೆ ಕೆಟ್ಟ ಹೆಸರು ಬರುವುದಲ್ಲದೆ, ಇತರ ವಿದ್ಯಾರ್ಥಿಗಳಿಗೆ ಕೆಟ್ಟ ಸಂದೇಶ ನೀಡಿದಂತಾಗುತ್ತದೆ ಎಂದು ವಾದಿಸಿದ ಆಡಳಿತ ಮಂಡಳಿ, ಕೊನೆಗೆ ಶಿಸ್ತು ಸಮಿತಿಯ ಅಭಿಪ್ರಾಯದಂತೆ ರಾಚೆಲ್ ಕ್ಲಿಂಟ್​ರನ್ನು ಶಾಲೆಯಿಂದ ಮಾತ್ರ ತೆಗೆದು ಹಾಕಲು ನಿರ್ಧರಿಸಿತು. 

First published:May 11, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...