Costly Tea Powder: 1 ಕೆಜಿ ಟೀ ಪುಡಿಗೆ 99,999 ರೂಪಾಯಿ! ಇದರಲ್ಲಿ ಅಂಥದ್ದೇನಿದೆ?

Manohari Tea: ಅಸ್ಸಾಂನಲ್ಲಿ ಬೆಳೆಯುವ ಮನೋಹರಿ ಗೋಲ್ಡ್ ಟೀ ಬಲು ಟೇಸ್ಟಿ ಟೇಸ್ಟಿ ಎನಿಸಿದ್ದು ಇದು ಸಾಮಾನ್ಯ ಜನರಿಗೆ ಎಟುಕದ ಚಹವಾಗಿದೆ. ಇದುವರೆಗೂ ಎಪ್ಪತ್ತು-ಎಂಬತ್ತು ಸಾವಿರ ರೂಪಾಯಿಗಳವರೆಗೂ ಮಾರಾಟವಾಗುತ್ತಿದ್ದ ಅಸ್ಸಾಂನ ಮನೋಹರಿ ಗೋಲ್ಡ್ ಟೀ ಈಗ ಮಾರಾಟವಾಗಿರುವ ಬೆಲೆ ಕೇಳಿದ್ರೆ ನಿಮಗೆ ಅಚ್ಚರಿಯಾಗಬಹುದು

ಟೀ ಪುಡಿ

ಟೀ ಪುಡಿ

 • Share this:
  ಚಹಾದ(Tea) ಸ್ವಾದಕ್ಕೆ ಮನಸೋಲದವರು ಯಾರಿದ್ದಾರೆ? ಎಂಥ ಒತ್ತಡವನ್ನೂ(Stress) ಕಡಿಮೆ ಮಾಡಿ, ಒಂದಿಷ್ಟು ನಿರಾಳತೆ ಒದಗಿಸುವ ಚಹಾ ಆಪ್ತಮಾತುಗಳಿಗೆ, ಆತ್ಮೀಯ ಕ್ಷಣಗಳಿಗೂ ನೆಪವಾಗುತ್ತದೆ, ಸಾಕ್ಷಿಯಾಗುತ್ತದೆ. ಇದೇ ಚಹಾ ಅಸಂಖ್ಯ ಜನರ ಜೀವನವನ್ನು(Life) ರೂಪಿಸಿದೆ. ಈ ವೃತ್ತಿಗೆ(Job) ಹೊಸತನ ನೀಡಿ, ಮತ್ತಷ್ಟು ಮೆರುಗು ತುಂಬಿದವರು ಚಹಾ ಜೀವನಮಂತ್ರ- ದಾರಿಯೂ ಆಗಬಹುದು. ಅದ್ರಲ್ಲೂಚಹಾ ಭಾರತದ ಮಂದಿಗೆ ಇದು ಕೇವಲ ಪಾನೀಯವಲ್ಲ. ಅದೊಂದು ಉತ್ಸಾಹ. ಭರವಸೆ(Trust). ಒಂದು ಸಿಪ್ ಟೀಗೆ ಸಂಪೂರ್ಣ ಒತ್ತಡವನ್ನು ಶಮನ ಮಾಡುವಷ್ಟು ಶಕ್ತಿ ಇರುತ್ತದೆ. ಭಾರತಕ್ಕೂ(India), ಟೀಗೂ ಅಷ್ಟೊಂದು ಅವಿನಾಭಾವ ಸಂಬಂಧ. ಟೀಯ ಸುವಾಸನೆ, ರುಚಿ, ಸ್ವಾದದ ಮುಂದೆ ಯಾವ ಅನುಭವವೂ ದಕ್ಕದು. ಹೀಗಾಗಿ ಭಾರತೀಯರು ಹೆಚ್ಚು ಸೇವನೆ ಮಾಡುವ ಪಾನೀಯಗಳ ಸಾಲಿನಲ್ಲಿ ಚಹಾಗೆ ಅಗ್ರಸ್ಥಾನವಿದೆ.. ಜೊತೆಗೆ ಭಾರತದಲ್ಲಿ ಹೆಚ್ಚು ಬೆಳೆಯುವ ವಾಣಿಜ್ಯ ಬೆಳೆಗಳಲ್ಲಿ ಸಹ ಚಹಾ ಒಂದು. ಹೀಗಾಗಿಯೇ ದೇಶದಲ್ಲಿ ಮಾತ್ರವಲ್ಲ ವಿದೇಶದಲ್ಲೂ ಸಹ ನಮ್ಮ ದೇಶದ ಅಸ್ಸಾಂನಲ್ಲಿ ಬೆಳೆದಂತಹ ಚಹಾ ಅಂದರೆ ವಿದೇಶಿಯರಿಗೂ ಅಚ್ಚುಮೆಚ್ಚು. ಜೊತೆಗೆ ಇದಕ್ಕೆ ದುಬಾರಿ ಬೆಲೆಯು ಕೂಡ ಇದೆ. ಅದು ಎಷ್ಟು ದುಬಾರಿ ಅಂದ್ರೆ ಭಾರತದಲ್ಲಿ ಸಿಗುವ ಈ ದುಬಾರಿ ಚಹಾದ ಬೆಲೆ ಕೇಳಿ ನಿಮಗೂ ಆಶ್ಚರ್ಯ ಆಗುವಷ್ಟು ಚಹಾ ದುಬಾರಿ..

  ಅಸ್ಸಾಂನಲ್ಲಿ ಮಾರಾಟವಾಯಿತು ದುಬಾರಿ ಚಹಾ

  ಟೀ ತೋಟಗಳ ಸಾಲು ಇರುವ ಅಸ್ಸಾಂನಲ್ಲಿ ಬೆಳೆಯುವ ಪ್ರತಿಯೊಂದು ಚಹಾವು ದುಬಾರಿ ಬೆಲೆ ಇದೆ.. ಅದ್ರಲ್ಲೂ ಅಸ್ಸಾಂನಲ್ಲಿ ಬೆಳೆಯುವ ಮನೋಹರಿ ಗೋಲ್ಡ್ ಟೀ ಬಲು ಟೇಸ್ಟಿ ಟೇಸ್ಟಿ ಎನಿಸಿದ್ದು ಇದು ಸಾಮಾನ್ಯ ಜನರಿಗೆ ಎಟುಕದ ಚಹವಾಗಿದೆ. ಇದುವರೆಗೂ ಎಪ್ಪತ್ತು-ಎಂಬತ್ತು ಸಾವಿರ ರೂಪಾಯಿಗಳವರೆಗೂ ಮಾರಾಟವಾಗುತ್ತಿದ್ದ ಅಸ್ಸಾಂನ ಮನೋಹರಿ ಗೋಲ್ಡ್ ಟೀ ಈಗ ಮಾರಾಟವಾಗಿರುವ ಬೆಲೆ ಕೇಳಿದ್ರೆ ನಿಮಗೆ ಅಚ್ಚರಿಯಾಗಬಹುದು.. ಒಂದು ಲಕ್ಷ ರೂಪಾಯಿಗೆ ಕೇವಲ ಒಂದು ರೂಪಾಯಿ ಕಡಿಮೆ ಬೆಲೆಯಲ್ಲಿ ಮನೋಹರಿ ಗೋಲ್ಡ್ ಟೀ ಮಾರಾಟವಾಗಿದೆ.

  ಇದನ್ನೂ ಓದಿ: ರಷ್ಯಾದ ಬಾಹ್ಯಾಕಾಶ ಮುಖ್ಯಸ್ಥರನ್ನು ನೆಚ್ಚಿನ ಚಹಾ ಬಗ್ಗೆ ಕೇಳಿದ ಎಲಾನ್‌ ಮಸ್ಕ್: ಅವರು ನೀಡಿದ ಉತ್ತರಕ್ಕೂ ಭಾರತಕ್ಕೂ ಸಂಬಂಧ ಹೀಗಿದೆ!

  ₹99,999ರೂಗೆ ಮಾರಾಟವಾದ ಮನೋಹರಿ ಗೋಲ್ಡ್ ಟೀ

  ಮನೋಹರಿ ಗೋಲ್ಡ್ ಟೀ ಅಸ್ಸಾಂನ ದಿಬ್ರುಗಡ್ ಜಿಲ್ಲೆಯಲ್ಲಿ ಮಾರಾಟವಾಗುವ ಅತ್ಯಂತ ಅಪರೂಪದ ಟೀ. ಔಷಧೀಯ ಗುಣಗಳಿಂದ ಹೆಚ್ಚು ಸಮೃದ್ಧವಾಗಿರುವ ಈ ಚಹಾದ ಮೊಗ್ಗುಗಳನ್ನು ಬೆಳಗ್ಗೆ ತರಿದುಹಾಕುವುದರಿಂದ ಅವುಗಳ ಗುಣಮಟ್ಟ ಮತ್ತು ಸುವಾಸನೆಯಲ್ಲಿ ಯಾವುದೇ ವ್ಯತ್ಯಾಸ ಕಾಣುವುದಿಲ್ಲ. ಹೀಗಾಗಿ ಮನೋಹರಿ ಗೋಲ್ಡ್ ಟೀ ಖರೀದಿಗೆ ಭಾರಿ ಡಿಮ್ಯಾಂಡ್ ಇದೆ.. ಇಂತಹ ಚಹಾಪುಡಿಯನ್ನು 75 ಸಾವಿರ ರೂಪಾಯಿಗೆ ಈ ಮೊದಲು ಗುಹಾವಟಿ ಮೂಲದ ವಿಷ್ಣು ಟೀ ಕಂಪನಿ ಖರೀದಿಸಿತ್ತು. ಇದೀಗ ಸೌರವ್​ ಟೀ ಟ್ರೇಡರ್ಸ್​ ಎಂಬ ಕಂಪನಿ 99,999ರೂ ಗೆ ಬಿಡ್‌ ಮಾಡಿ ಇದನ್ನು ಖರೀದಿಸಿದೆ.​ ಈ ಮೂಲಕ ವಿಶ್ವದ ಅತ್ಯಂತ ದುಬಾರಿ ಟೀ ಪೌಡರ್‌ ಎಂದು ಪ್ರಸಿದ್ಧಿ ಗಳಿಸಿದೆ.

  Assams Manohari Gold Tea sold at record Rs 99,999 per kg
  ಮನೋಹರಿ ಗೋಲ್ಡ್ ಟೀ


  ಇದನ್ನೂ ಓದಿ: ಬ್ರೌನ್ ರೈಸ್ ಟೀ ಬಗ್ಗೆ ನಿಮಗೆಷ್ಟು ಗೊತ್ತು? ಇಲ್ಲಿದೆ ಅದರ ಸಂಪೂರ್ಣ ಮಾಹಿತಿ

  ಮನೋಹರಿ ಗೋಲ್ಡ್ ಟೀ ವಿಶೇಷ ಏನು..?

  ಚಹಾಪುಡಿ ಬಹಳ ವಿಶೇಷವಾಗಿದ್ದು, ಇದನ್ನು ಅತ್ಯುತ್ತಮವಾದ ಮತ್ತು ಎಳೆಯ ಪಕಳೆಗಳಿಂದ ತಯಾರು ಮಾಡಲಾಗುತ್ತದೆ. ಮನೋಹರಿ ಗೋಲ್ಡ್​ ಮಾದರಿಯ ಟೀ ಎಲೆಗಳು ಬೆಳಗಿನ ಜಾವ 4 ಗಂಟೆಯಿಂದ 6 ಗಂಟೆಯವರೆಗೆ ಮಾತ್ರ ದೊರೆಯುತ್ತದೆ. ಹೀಗಾಗಿ ಅಸ್ಸಾಂನ ಮನೋಹರಿ ಗೋಲ್ಡ್​ ಚಹಾಪುಡಿಗೆ ದೇಶ ಮಾತ್ರವಲ್ಲದೆ ವಿದೇಶಗಳಲ್ಲೂ ಭಾರೀ ಬೇಡಿಕೆಯಿದೆ. ಜೊತೆಗೆ ಪ್ರಕಾಶಮಾನವಾದ ಹಳದಿ ಬಣ್ಣ ಹೊಂದಿರುವ ಮನೋಹರಿ ಗೋಲ್ಡ್ ಚಹಾಪುಡಿ ಆಹ್ಲಾದಕರ ರುಚಿಯನ್ನ ನೀಡುತ್ತದೆ ಮತ್ತು ಅನೇಕ ಆರೋಗ್ಯ ಪ್ರಯೋಜನಗಳಿಗೆ ಹೆಸರುವಾಸಿಯಾಗಿದೆ
  Published by:ranjumbkgowda1 ranjumbkgowda1
  First published: