• ಹೋಂ
  • »
  • ನ್ಯೂಸ್
  • »
  • ಟ್ರೆಂಡ್
  • »
  • Cold Wave: ಶೀತಗಾಳಿಗೆ ಪ್ರಾಣಿ ಪಕ್ಷಿಗಳ ರಕ್ಷಿಸಲು ಅಸ್ಸಾಂ ಮೃಗಾಲಯದಲ್ಲಿ ಸಖತ್‌ ಐಡಿಯಾ... ಏನು ಗೊತ್ತೇ?

Cold Wave: ಶೀತಗಾಳಿಗೆ ಪ್ರಾಣಿ ಪಕ್ಷಿಗಳ ರಕ್ಷಿಸಲು ಅಸ್ಸಾಂ ಮೃಗಾಲಯದಲ್ಲಿ ಸಖತ್‌ ಐಡಿಯಾ... ಏನು ಗೊತ್ತೇ?

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ಅಸ್ಸಾಂ ಮೃಗಾಲಯದಲ್ಲಿ ಅಧಿಕಾರಿಗಳು ಚಳಿಯಿಂದ ಪ್ರಾಣಿಗಳನ್ನು ಸಂರಕ್ಷಿಸುವ ಸಲುವಾಗಿ ಹೀಟರ್‌ಗಳನ್ನು ಅಳವಡಿಸಿದ್ದು ಪ್ರಾಣಿಗಳ ಆಹಾರದಲ್ಲಿ ಕೂಡ ಕೆಲವೊಂದು ಅಗತ್ಯ ಬದಲಾವಣೆಗಳನ್ನು ಮಾಡಿದ್ದಾರೆ.

  • Share this:

ಚಳಿಗಾಲದ (Winter) ಸಮಯದಲ್ಲಿ ನಮ್ಮನ್ನು ನಾವು ಬೆಚ್ಚಗಿರಿಸಲು (Body warm) ನಾವು ಬೇರೆ ಬೇರೆ ವಿಧಾನಗಳನ್ನು ಅಳವಡಿಸಿಕೊಳ್ಳುತ್ತೇವೆ. ಬೆಚ್ಚಗಿನ ಬಟ್ಟೆಗಳನ್ನು ಧರಿಸುವುದು, (Wearing warm clothes) ಕೊಠಡಿಯಲ್ಲಿ ಹೀಟರ್‌ ಆನ್ ಮಾಡುವುದು, ಬೆಂಕಿ ಕಾಯಿಸಿಕೊಳ್ಳುವುದು ಹೀಗೆ ಅನೇಕ ಸಂರಕ್ಷಣಾ ವಿಧಾನಗಳಿಂದ ದೇಹವನ್ನು ಬೆಚ್ಚಗಿರಿಸಿಕೊಳ್ಳುತ್ತೇವೆ. ಆದರೆ ಪ್ರಾಣಿ ಪಕ್ಷಿಗಳ (Animal birds) ವಿಷಯದಲ್ಲಿ ಅವುಗಳಿಗೆ ಸೂಕ್ತ ಸಂರಕ್ಷಣೆಯನ್ನು(Protection) ಅದನ್ನು ನೋಡಿಕೊಳ್ಳುವವರೇ ಒದಗಿಸಬೇಕಾಗುತ್ತದೆ.ಈಶಾನ್ಯ ಭಾರತವು ಶೀತ ಅಲೆ, ತಾಪಮಾನ ಕುಸಿತ ಸಮಸ್ಯೆಗಳನ್ನು ಎದುರಿಸುತ್ತಿರುವ ಕಾರಣ ಗುವಾಹಟಿಯಲ್ಲಿರುವ (Guwahati) ಅಸ್ಸಾಂ ರಾಜ್ಯ ಮೃಗಾಲಯ (Assam State Zoo) ಹಾಗೂ ಅಸ್ಸಾಂನ ಕಾಜಿರಂಗ ರಾಷ್ಟ್ರೀಯ ಉದ್ಯಾನವನದಲ್ಲಿರುವ ವನ್ಯಜೀವಿ ಪುನರ್ವಸತಿ ಮತ್ತು ಸಂರಕ್ಷಣಾ ಕೇಂದ್ರವು (Wildlife Rehabilitation and Conservation Center) ವನ್ಯಪ್ರಾಣಿಗಳನ್ನು ತೀವ್ರ ಚಳಿಯಿಂದ (Extreme cold) ಸಂರಕ್ಷಿಸುವುದಕ್ಕಾಗಿ ಕ್ರಮಗಳನ್ನು ಕೈಗೊಂಡಿದೆ.


ಮೃಗಾಲಯದಲ್ಲಿ ಹೀಟರ್ ಹಾಗೂ ಬಲ್ಬ್ ಅಳವಡಿಕೆ:
ಅಸ್ಸಾಂ ಮೃಗಾಲಯದಲ್ಲಿ ಅಧಿಕಾರಿಗಳು ಚಳಿಯಿಂದ ಪ್ರಾಣಿಗಳನ್ನು ಸಂರಕ್ಷಿಸುವ ಸಲುವಾಗಿ ಹೀಟರ್‌ಗಳನ್ನು ಅಳವಡಿಸಿದ್ದು ಪ್ರಾಣಿಗಳ ಆಹಾರದಲ್ಲಿ ಕೂಡ ಕೆಲವೊಂದು ಅಗತ್ಯ ಬದಲಾವಣೆಗಳನ್ನು ಮಾಡಿದ್ದಾರೆ. ಮುಖ್ಯ ಪ್ರಾಣಿ ಪಾಲಕಿ ರಜನಿ ಕಾಂತಾ ದೇಖಾ ಈ ಕುರಿತು ಅಭಿಪ್ರಾಯ ನೀಡಿದ್ದು, ಹುಲಿ, ಸಿಂಹ, ಹೆಬ್ಬಾವುಗಳ ಕೊಠಡಿಗಳನ್ನು ಬೆಚ್ಚಗೆ ಇರಿಸುವುದಕ್ಕಾಗಿ ಹೀಟರ್‌ಗಳನ್ನು ಬಳಸಿದ್ದೇವೆ. ಆಮೆಗಳಿಗೆ ನೀರು ಬೆಚ್ಚಗೆ ಮಾಡುವ ಸಲುವಾಗಿಯೂ ಹೀಟರ್‌ಗಳನ್ನು ಅಳವಡಿಸಿದ್ದು ಕೊಠಡಿಗಳಲ್ಲಿ 100 ವಾಲ್ಟ್‌ಗಳ ಬಲ್ಬ್‌ಗಳನ್ನು ಜೋಡಿಸಿದ್ದೇವೆ.


ಇದನ್ನೂ ಓದಿ: Viral Video : ಅಯ್ಯಯ್ಯೋ.. ಸಿಂಹದ ಗುಹೆಗೇ ನುಗಿಬಿಟ್ಟ ಆಸಾಮಿ.. ಆಮೇಲೆನಾಯ್ತು..? ಬೆಚ್ಚಿ ಬೀಳಿಸುವ ವಿಡಿಯೋ ಇಲ್ಲಿದೆ!


ಅಂತೆಯೇ ಜಿಂಕೆಗಳಿಗೆ ಭತ್ತದ ಹುಲ್ಲನ್ನು ಬಳಸಲಾಗಿದೆ ಎಂದು ತಿಳಿಸಿದ್ದಾರೆ. ಪಾದರಸದ ಮಟ್ಟ ಇನ್ನಷ್ಟು ಕಡಿಮೆಯಾದ ಸಂದರ್ಭದಲ್ಲಿ ನೆಲಕ್ಕೆ ಹಾಸುವ ಕಾರ್ಪೆಟ್‌ಗಳನ್ನು ಬಳಸುವುದಾಗಿ ಮೃಗಾಲಯದ ಮತ್ತೊಬ್ಬ ಪ್ರಾಣಿ ಪಾಲಕರಾದ ಪ್ರಬಿನ್ ಹಲೋಯ್ ತಿಳಿಸಿದ್ದಾರೆ. ಮೃಗಾಲಯದಲ್ಲಿ ಪಕ್ಷಿಗಳು ಹಾಗೂ ಇತರ ಪ್ರಾಣಿಗಳನ್ನು ಬೆಚ್ಚಗಿರಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.


ಆನೆ ಮರಿಗಳನ್ನು ಬೆಚ್ಚಗಿರಿಸಲು ಕಂಬಳಿಗಳ ಒದಗಿಸುವಿಕೆ:
ಕಾಜಿರಂಗದಲ್ಲಿರುವ ವನ್ಯಜೀವಿ ಪುನರ್ವಸತಿ ಹಾಗೂ ಸಂರಕ್ಷಣಾ ಕೇಂದ್ರವು (CWRC) ಚಳಿಗಾಲದಲ್ಲಿ 2 ಆನೆಮರಿಗಳನ್ನು ಬೆಚ್ಚಗಿರಿಸಲು ಕಂಬಳಿಗಳನ್ನು ಒದಗಿಸಿದೆ. ಮರಿ ಆನೆಗಳು ಕಂಬಳಿ ಹೊದ್ದುಕೊಂಡು ಬಿಸಿಲಿನಲ್ಲಿ ಮೈಕಾಯಿಸಿಕೊಳ್ಳುತ್ತಿರುವ ಫೋಟೋಗಳನ್ನು ಸುದ್ದಿಮಾಧ್ಯಮ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದೆ. ಕಾಜಿರಂಗದಲ್ಲಿರುವ CWRCನಲ್ಲಿ ಪ್ರಸ್ತುತ 5 ಘೇಂಡಾಮೃಗಗಳು ಹಾಗೂ 9 ಆನೆಗಳಿದ್ದು ಚಳಿಗಾಲದಲ್ಲಿ ಆನೆಮರಿಗಳಿಗೆ ಬೆಚ್ಚನೆಯ ಕಂಬಳಿ ಹೊದೆಸಿ ಆರೈಕೆ ಮಾಡಲಾಗುತ್ತದೆ. ಘೇಂಡಾಮೃಗಗಳನ್ನು ಕೂಡ ನೋಡಿಕೊಳ್ಳುತ್ತಿದ್ದು, ಪಕ್ಷಿಗಳಿಗೂ ಸೂಕ್ತ ರೀತಿಯ ವ್ಯವಸ್ಥೆ ಮಾಡಲಾಗಿದೆ ಎಂದು CWRC ಪಶುವೈದ್ಯರಾದ ಸಂಸೂಲ್ ಅಲಿ ತಿಳಿಸಿದ್ದಾರೆ.


ಪೌಷ್ಟಿಕ ಆಹಾರದ ವಿತರಣೆ:
ಆಹಾರದ ವಿಷಯದಲ್ಲಿ ಕೂಡ ಮೃಗಾಲಯದ ಅಧಿಕಾರಿಗಳು ಹೆಚ್ಚಿನ ಮುತುವರ್ಜಿ ವಹಿಸಿದ್ದು ದೈಹಿಕವಾಗಿ ಸದೃಢವಾಗಿರಿಸಲು ಪೌಷ್ಟಿಕ ಆಹಾರಗಳನ್ನು ಒದಗಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಲಖನೌ ಮೃಗಾಲಯದಲ್ಲಿರುವ ಅಧಿಕಾರಿಗಳು ಕೂಡ ಪ್ರಾಣಿ ಪಕ್ಷಿಗಳ ಸಂರಕ್ಷಣೆಗೆ ಕೆಲವೊಂದು ಕ್ರಮಗಳನ್ನು ಕೈಗೊಂಡಿದ್ದು ಪೌಷ್ಟಿಕ ಆಹಾರ ನೀಡುವುದರೊಂದಿಗೆ ಕಂಬಳಿ ಹೀಟರ್‌ಗಳ ವ್ಯವಸ್ಥೆ ಮಾಡಿದೆ.


ಇದನ್ನೂ ಓದಿ: ಅರಣ್ಯ ಸಚಿವರ ತವರಲ್ಲೇ ಝೂನಲ್ಲಿ ಅನಾರೋಗ್ಯದಿಂದ ಸಿಂಹ ಸಾವು: ಸಾವಿನ ಸುತ್ತ ಅನುಮಾನಗಳ ಹುತ್ತ


ಉತ್ತರ ಪ್ರದೇಶದ ಮಥುರಾದ ವನ್ಯಜೀವಿ SOS ಸಂರಕ್ಷಣೆ ಹಾಗೂ ಆರೈಕೆ ಕೇಂದ್ರದ ಸಮೀಪವಿರುವ ಗ್ರಾಮದ ಮಹಿಳೆಯರು ಆನೆಮರಿಗಳಿಗೆ ಕಂಬಳಿ ನೇಯ್ದು ಸುದ್ದಿಯಾಗಿದ್ದರು. ಹಿಂಸೆಗೊಳಗಾದ ಹಾಗೂ ರಕ್ಷಿಸಲಾದ ಪ್ರಾಣಿಗಳನ್ನು ಈ ಕೇಂದ್ರವು ಕಾಳಜಿ ವಹಿಸುತ್ತಿದ್ದು ಶೀತದಿಂದ ಪ್ರಾಣಿಗಳನ್ನು ರಕ್ಷಿಸುವುದಕ್ಕಾಗಿ ಗ್ರಾಮದ ಮಹಿಳೆಯರು ಸ್ವತಃ ಕಂಬಳಿ ನೇಯುತ್ತಾರೆ ಮತ್ತು ಅದನ್ನು ಕೇಂದ್ರಕ್ಕೆ ಒದಗಿಸುತ್ತಾರೆ.

Published by:vanithasanjevani vanithasanjevani
First published: