Lottery: ಅಸ್ಸಾಂ ಕಾರ್ಮಿಕನಿಗೆ ಬಂತು 80 ಲಕ್ಷ ಹಣ! ಎದ್ನೋ ಬಿದ್ನೋ ಅಂತ ಪೊಲೀಸ್ ಠಾಣೆಗೆ ಓಡಿದ ಆಸಾಮಿ!

ಅಸ್ಸಾಂ ಮೂಲದ ಅಲಾಲುದ್ದೀನ್ ಎಂಬಾತನಿಗೆ ಕೇರಳದಲ್ಲಿ ಬರೋಬ್ಬರಿ 80 ಲಕ್ಷ ರೂಪಾಯಿ ಲಾಟರಿ ಹಣ ಬಂದಿದೆ. ಅಲಾಲುದ್ದೀನ್ ಮನೆ ಮನೆಗೆ ತೆರಳಿ ಟಿಕೆಟ್ ಮಾರುವ ವ್ಯಕ್ತಿಯಿಂದ ಟಿಕೆಟ್ ಖರೀದಿಸಿದ್ದರು.

ಅಸ್ಸಾಂ ಕಾರ್ಮಿಕನಿಗೆ 88 ಲಕ್ಷ ಲಾಟರಿ ಹಣ

ಅಸ್ಸಾಂ ಕಾರ್ಮಿಕನಿಗೆ 88 ಲಕ್ಷ ಲಾಟರಿ ಹಣ

  • Share this:
ಕೇರಳ: ಆತ ಅಸ್ಸಾ (Assam) ಮೂಲದ ಕೂಲಿ ಕಾರ್ಮಿಕ (Labor). ಹೆಂಡತಿ (Wife), ಮಕ್ಕಳನ್ನು (Children) ತನ್ನ ಹಳ್ಳಿಯಲ್ಲೇ (Village) ಬಿಟ್ಟು ಕೇರಳದಲ್ಲಿ (Kerala) ಕೂಲಿ ಕೆಲಸ ಮಾಡಿ, ಬದುಕು ಸಾಗಿಸುತ್ತಿದ್ದ. ಹೇಗಾದರೂ ಸಂಪಾದಿಸಿ, ಹೆಂಡತಿ ಮಕ್ಕಳನ್ನು ಚೆನ್ನಾಗಿ ಸಾಕಬೇಕು ಎಂದುಕೊಂಡಿದ್ದ. ಹೀಗೆ ಕೂಲಿ ಕೆಲಸ ಮಾಡಿ ಬದುಕುತ್ತಿದ್ದ ಆ ಕಾರ್ಮಿಕನಿಗೆ ರಾತ್ರೋ ರಾತ್ರಿ ಅದೃಷ್ಟ (Luck) ಒಲಿದು ಬಂದಿತ್ತು. ಹೌದು ಕೇರಳ ಲಾಟರಿ ಟಿಕೆಟ್ (Kerala Lottery Ticket) ಖರೀದಿಸಿದ್ದ ಆ ಕಾರ್ಮಿಕನಿಗೆ ಲಾಟರಿ ಹಣ (Money) ಬಂದಿತ್ತು. ಅದು ಒಂದೆರಡಲ್ಲ ಬರೋಬ್ಬರಿ 80 ಲಕ್ಷ ರೂಪಾಯಿ (80 Lakh Rupees). ಆತನಿಗೆ ಇದು ಕನಸೋ ನನಸೋ ಅಂತ ನಂಬೋದಕ್ಕೆ ಆಗಲಿಲ್ಲ. ಹೀಗಾಗಿ ಸಖತ್ ಕನ್ಪ್ಯೂಸ್ (Confuse) ಆದ ಆತ, ಸೀದಾ ಪೊಲೀಸ್ ಠಾಣೆಗೆ (Police Station) ಓಡೋಡಿ ಹೋಗಿದ್ದಾನೆ.  

ಲಾಟರಿಯಲ್ಲಿ ಬಂತು 80 ಲಕ್ಷ ಹಣ

ಅಸ್ಸಾಂ ಮೂಲದ ಅಲಾಲುದ್ದೀನ್ ಎಂಬಾತನಿಗೆ ಕೇರಳದಲ್ಲಿ ಬರೋಬ್ಬರಿ 80 ಲಕ್ಷ ರೂಪಾಯಿ ಲಾಟರಿ ಹಣ ಬಂದಿದೆ. ಅಲಾಲುದ್ದೀನ್ ಮನೆ ಮನೆಗೆ ತೆರಳಿ ಟಿಕೆಟ್ ಮಾರುವ ವ್ಯಕ್ತಿಯಿಂದ ಟಿಕೆಟ್ ಖರೀದಿಸಿದ್ದರು. ಅನಿರೀಕ್ಷಿತವಾಗಿ ತನಗೆ ಅದೃಷ್ಟ ಒಲಿದಿದೆ ಎಂದು ಅಸ್ಸಾಂ ಮೂಲದ ಅಲಾಲುದ್ದೀನ್ ಸಂತಸ ವ್ಯಕ್ತಪಡಿಸಿದ್ದಾರೆ. ಕಳೆದ ದಿನ ಡ್ರಾ ಮಾಡಿದ ಕಾರುಣ್ಯ ಪ್ಲಸ್ ಲಾಟರಿಯಲ್ಲಿ ಅಲಾಲುದ್ದೀನ್ ಪ್ರಥಮ ಬಹುಮಾನ ಪಡೆದಿದ್ದಾರೆ.

ಲಾಟರಿ ಹಣ ಬಂದಿದ್ದೇ ಪೊಲೀಸ್ ಠಾಣೆಗೆ ಓಡಿದ ಕಾರ್ಮಿಕ

ಹೌದು, ಮೊದಲು ಕೈಗೆ 80 ಲಕ್ಷ ಹಣ ಸಿಗುತ್ತದೆ ಎಂದು ಹೆದರಿಸಿದರೂ ನಂತರ ನೇರವಾಗಿ ಠಾಣೆಗೆ ತೆರಳಿದ್ದರು. ಅವರು ಮುವಾಟ್ಟುಪುಳ ಠಾಣೆಗೆ ಬಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಲಾಟರಿ ಮತ್ತು ಗುರುತಿನ ಚೀಟಿಯನ್ನು ಪರಿಶೀಲಿಸಿದ ನಂತರ ಖುದ್ದು ಪೊಲೀಸರೇ ಅವರನ್ನು ಬ್ಯಾಂಕ್ ಆಫ್ ಬರೋಡಾದ ಮುವಾಟ್ಟುಪುಳ ಶಾಖೆಗೆ ಕರೆದೊಯ್ದರು. ಪೊಲೀಸರು ಮ್ಯಾನೇಜರ್‌ಗೆ ವಿಷಯ ವಿವರಿಸಿದರು. ಬ್ಯಾಂಕ್ ಮ್ಯಾನೇಜರ್ ಆಗಿದ್ದ ಬಿಜೋಮೋನ್ ಮರುದಿನವೇ ಶಾಖೆಗೆ ತೆರಳಿದ್ದಾರೆ. ಹಾಗಾಗಿ ಉಳಿದ ಪ್ರಕ್ರಿಯೆಗಳನ್ನು ಆ ದಿನವೇ ಪೂರ್ಣಗೊಳಿಸುವುದಾಗಿ ಭರವಸೆ ನೀಡಿದರು.

ಇದನ್ನೂ ಓದಿ: Viral Photo: ಪ್ರದರ್ಶನಕ್ಕೆ ಇಟ್ಟ ಕಮೋಡ್‌ನಲ್ಲೇ ಶ್ಯು ಶ್ಯು ಮಾಡಿದ ಮಕ್ಕಳು! ಪೋಷಕರ ಸ್ಥಿತಿ ಶೇಮ್ ಶೇಮ್ ಪಪ್ಪಿ ಶೇಮ್

15 ವರ್ಷಗಳಿಂದ ಕೂಲಿ ಕೆಲಸ ಮಾಡುತ್ತಿದ್ದ ಕಾರ್ಮಿಕ

ಅಸ್ಸಾಂನ ನಾಗಾಂವ್ ಮೂಲದ ಈತ ಕಳೆದ 15 ವರ್ಷಗಳಿಂದ ಕೇರಳದಲ್ಲಿ ನೆಲೆಸಿದ್ದಾನೆ. ಅವರ ಮುಖ್ಯ ಕೆಲಸ ಅಂದರೆ ಮರಗೆಲಸ. ಅವರು ಮುವಾಟ್ಟುಪುಳದ ಪೆಝಕ್ಕಪ್ಪಲ್ಲಿ ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ. ಅವರ ಪತ್ನಿ ಮತ್ತು ಮಕ್ಕಳು ಅಸ್ಸಾಂನಲ್ಲಿದ್ದಾರೆ.

ಅಮೆರಿಕದ ಮಹಿಳೆಗೆ ಒಲಿಯಿತು 3.3 ಕೋಟಿ ರೂಪಾಯಿ

ಅಮೆರಿಕಾದ ಸೌತ್ ಕೆರೋಲಿನಾದ ಮಹಿಳೆಯೊಬ್ಬರಿಗೆ ಈ ಅದೃಷ್ಟ ಒಲಿದು ಬಂದಿದೆ. ಇವರು ಒಂದೇ ಅಂಗಡಿಯಿಂದ ಎರಡು ಬಾರಿ ಖರೀಸಿದ ಲಾಟರಿ ಟಿಕೆಟುಗಳಿಗೆ ಬರೊಬ್ಬರಿ 3.4 ಕೋಟಿ ರು.ಗಳನ್ನು ಗೆದ್ದಿದ್ದಾರೆ. 2020ರಲ್ಲಿ ಅವರು ಖರೀದಿಸಿದ್ದ ಸ್ಕ್ರಾಚ್‌ ಲಾಟರಿ ಟಿಕೆಟ್‌ನಿಂದ 1.9 ಕೋಟಿ ರೂಪಾಯಿ ಗೆದ್ದಿದ್ದರು. ಮತ್ತೊಮ್ಮೆ 2022ರಲ್ಲಿ ಹಾಲು ಖರೀದಿಸಲು ಅದೇ ಅಂಗಡಿಗೆ ಹೋದ ಮಹಿಳೆಗೆ ಸಿಕ್ಕ ಸ್ಕ್ರಾಚ್‌ ಲಾಟರಿ ಟಿಕೆಟ್‌ನಿಂದ 1.5 ಕೋಟಿ ರೂ. ಗೆದ್ದಿದ್ದಾರೆ. ಹೀಗಾಗಿ 2 ಲಾಟರಿ ಟಿಕೆಟ್‌ನಿಂದ ಆ ಮಹಿಳೆ ಕೋಟ್ಯಧಿಪತಿಯಾಗಿದ್ದಾರೆ.

ಇದನ್ನೂ ಓದಿ: Viral Video: ಥೇಟ್ ಸುನಾಮಿ ಅಪ್ಪಳಿಸಿದಂತೆ ಕಾಣುತ್ತಿದೆ ಮೋಡಗಳ ಈ ದೃಶ್ಯ! ಪ್ರಕೃತಿ ವೈಭವಕ್ಕೆ ನೋಡುಗರು ಮೂಕಸ್ತಬ್ಧ

ಹಾಲು ತರಲು ಹೋಗಿದ್ದಾಗ ತಿಳಿಯಿತು ಖುಷಿ ವಿಚಾರ

ನಾನು ಮನೆಯಲ್ಲಿ ಹಾಲು ಖಾಲಿಯಾದ ಕಾರಣ ಹಾಲು ಖರೀದಿಸಲು ಅಂಗಡಿಗೆ ತೆರಳಿದೆ. ಅಂಗಡಿಯಿಂದ ಹೊರ ಬರುತ್ತಿದ್ದಾಗ  ಗ್ರಾಹಕ ಸೇವಾ ಕೌಂಟರ್‌ನಲ್ಲಿ ಪವರ್‌ಬಾಲ್ ಟಿಕೆಟ್  ಗಮನಿಸಿ ಅದನ್ನು ಖರೀದಿಸಲು ನಿರ್ಧರಿಸಿದೆ. ಮರುದಿನ ಅವರು ಆನ್‌ಲೈನ್‌ನಲ್ಲಿ ಅವರ ಟಿಕೆಟ್ ಸಂಖ್ಯೆಯನ್ನು ನೋಡಿದಾಗ 15 ಕೋಟಿಯ ಒಡೆಯರಾಗಿರುವುದು ಗಮನಕ್ಕೆ ಬಂದಿತ್ತು ಎಂದು ಅವರು  ದಕ್ಷಿಣ ಕೆರೊಲಿನಾ ರಾಜ್ಯ ಲಾಟರಿ ಏಜೆನ್ಸಿಯೊಂದಿಗೆ ಹೇಳಿದ್ದಾರೆ.
Published by:Annappa Achari
First published: