ಈ ಮದುವೆಯಲ್ಲಿ ನವ ದಂಪತಿಗೆ ಉಡುಗೊರೆಯಾಗಿ ಸಿಕ್ಕಿದ್ದು ಹಳೆ ಬಟ್ಟೆಗಳು, ಪುಸ್ತಕಗಳು!

ಮದುವೆಗೆ ಸುಮಾರು 300 ಕ್ಕೂ ಹೆಚ್ಚು ಮಂದಿ ಆಗಮಿಸಿದ್ದು, ಸಾಕಷ್ಟು ಬಟ್ಟೆ ಮತ್ತು ಪುಸ್ತಕಗಳು ಸಂಗ್ರವಾಗಿವೆ ಎನ್ನಲಾಗಿದೆ. ಸಂಗ್ರಹವಾದ ಬಟ್ಟೆಗಳನ್ನು ಅಗತ್ಯವಿರುವವರಿಗೆ, ಬಡ-ಬಗ್ಗರಿಗೆ ನೀಡುವುದೇ ಈ ನವ ದಂಪತಿಯ ಉದ್ದೇಶವಾಗಿದೆ.

Latha CG | news18
Updated:February 3, 2019, 12:02 PM IST
ಈ ಮದುವೆಯಲ್ಲಿ ನವ ದಂಪತಿಗೆ ಉಡುಗೊರೆಯಾಗಿ ಸಿಕ್ಕಿದ್ದು ಹಳೆ ಬಟ್ಟೆಗಳು, ಪುಸ್ತಕಗಳು!
ಸಾಂದರ್ಭಿಕ ಚಿತ್ರ
Latha CG | news18
Updated: February 3, 2019, 12:02 PM IST
ಡಿಸ್ಪುರ್​, (ಫೆ.03): ಇತ್ತೀಚಿನ ದಿನಗಳಲ್ಲಿ ಮದುವೆ ಸಮಾರಂಭಗಳು ಪ್ರತಿಷ್ಠೆಯ ಪ್ರತೀಕವಾಗಿ ಬದಲಾಗುತ್ತಿವೆ. ದುಂದುವೆಚ್ಚ ಮಾಡಿ ಅದ್ದೂರಿಯಾಗಿ ಮದುವೆಯಾಗಬೇಕೆನ್ನುವ ಬಯಕೆ ಹಲವರದ್ದು. ಮದುವೆ ವಿಜೃಂಭಣೆಯಿಂದ ನಡೆದಾಗ ಅದಕ್ಕೆ ಸಿಗುವ ಉಡುಗೊರೆ ಕೂಡ ದುಬಾರಿಯದ್ದೇ ಆಗಿರುತ್ತದೆ. ಆದರೆ, ಅಸ್ಸಾಂನಲ್ಲಿ ನಡೆದ ಮದುವೆ ಮಾತ್ರ ಇದಕ್ಕೆ ಅಪವಾದ. ಇಲ್ಲಿ ನಡೆದ ಅದ್ದೂರಿ ಮದುವೆಯಲ್ಲಿ ಉಡುಗೊರೆಯಾಗಿ ಸಿಕ್ಕಿದ್ದು ಹಳೆ ಬಟ್ಟೆಗಳು!

ಒಂದಿಬ್ಬರು ಹಳೆಯ ಬಟ್ಟೆಗಳನ್ನು ಉಡುಗೊರೆಯಾಗಿ ನೀಡಿದರೆ ಅದನ್ನು ಒಪ್ಪಬಹುದು. ಅಷ್ಟಕ್ಕೂ ಎಲ್ಲರೂ ಇದೇ ರೀತಿ ಮಾಡಿದ್ದೇಕೆ ಎನ್ನುವ ಪ್ರಶ್ನೆಗೆ ಉತ್ತರವಿದೆ. ವಧು-ವರರಿಗೆ ಸಿಕ್ಕ ಉಡುಗೊರೆಯ ಹಿಂದೆ ಸಮಾಜಮುಖಿ ಸೇವೆ  ಇದೆ. ಪ್ರಾಧ್ಯಾಪಕರಾಗಿರುವ ನವ ದಂಪತಿ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿದ್ದಾರೆ. ತಮ್ಮ ಮದುವೆಯ ಆಹ್ವಾನ ಪತ್ರಿಕೆಯಲ್ಲಿಯೇ ಹಳೆ ಬಟ್ಟೆ ಹಾಗೂ ಹಳೆ ಪುಸ್ತಕಗಳನ್ನು ಉಡುಗೊರೆಯಾಗಿ ತನ್ನಿ ಎಂದು ತಿಳಿಸಿದ್ದರು. ಹಾಗಾಗಿ ಮದುವೆಗೆ ಬಂದ ಸಂಬಂಧಿಕರು ತಮ್ಮ ಮನೆಯಲ್ಲಿದ್ದ ಹಳೆಯ ಬಟ್ಟೆಗಳು ಮತ್ತು ಪುಸ್ತಕಗಳನ್ನು ತಂದು ಉಡುಗೊರೆಯಾಗಿ ನೀಡಿದ್ದಾರೆ.

ಈ ದೇಶದವರಿಗೆ ಮದುವೆ ಭಯ!; ಇಲ್ಲಿ ಹುಡುಗ-ಹುಡುಗಿಯರು ಜೊತೆಯಾಗಿ ಓಡಾಡಲ್ಲ

ಮದುವೆಗೆ ಸುಮಾರು 300 ಕ್ಕೂ ಹೆಚ್ಚು ಮಂದಿ ಆಗಮಿಸಿದ್ದು, ಸಾಕಷ್ಟು ಬಟ್ಟೆ ಮತ್ತು ಪುಸ್ತಕಗಳು ಸಂಗ್ರವಾಗಿವೆ ಎನ್ನಲಾಗಿದೆ. ಸಂಗ್ರಹವಾದ ಬಟ್ಟೆಗಳನ್ನು ಅಗತ್ಯವಿರುವವರಿಗೆ, ಬಡ-ಬಗ್ಗರಿಗೆ ನೀಡುವುದೇ ಈ ನವ ದಂಪತಿಯ ಉದ್ದೇಶವಾಗಿದೆ. ಇನ್ನೂ ಹಳೆಯ ಪುಸ್ತಕಗಳನ್ನು ತಮ್ಮ ಗ್ರಾಮದಲ್ಲಿರುವ ಗ್ರಂಥಾಲಯದಲ್ಲಿಡಲಿದ್ದಾರೆ. ಪುಸ್ತಕಗಳು ಜ್ಞಾನಾರ್ಜನೆಗೆ ಸಹಕಾರಿಯಾಗಲಿವೆ ಎನ್ನುವುದು ಅವರ ಆಶಯ.

ಇನ್ನೂ, ವಧು-ವರರು ಬುಡಕಟ್ಟು ಜನಾಂಗದವರಾಗಿದ್ದು, ತಮ್ಮ ಹಳ್ಳಿಯನ್ನು ಮಾದರಿ ಗ್ರಾಮವಾಗಿಸಲು ಶ್ರಮಿಸುತ್ತಿದ್ದಾರೆ. ಸ್ವಚ್ಛತಾ ಕಾರ್ಯಗಳಲ್ಲೂ ಸಹ ತೊಡಗಿಸಿಕೊಂಡಿದ್ದಾರೆ. ಅವರ ಹಳ್ಳಿಯಲ್ಲಿ ಮದ್ಯಪಾನ ನಿಷೇಧ ಮಾಡಲಾಗಿದೆ. ಒಂದು ವೇಳೆ ಮದ್ಯಸೇವನೆ ಮಾಡಿದರೆ ಒಂದು ಸಾವಿರ ರೂ. ದಂಡ ವಿಧಿಸಲಾಗುತ್ತದೆ.

First published:February 3, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...