Viral News: ಬುಟ್ಟಿಯಲ್ಲಿ ಚಿಲ್ಲರೆ ಹಣ ತಂದು ಸ್ಕೂಟರ್ ಖರೀದಿಸಿದ, ಪುಟ್ಟ ಅಂಗಡಿ ಮಾಲೀಕನ ಇನ್​ಟ್ರೆಸ್ಟಿಂಗ್ ಸ್ಟೋರಿ

ಪುಟ್ಟ ಅಂಗಡಿಯ ಮಾಲೀಕರೊಬ್ಬರು ತನ್ನ ದುಡಿಮೆಯ ಒಂದೊಂದು ರೂಪಾಯಿ ಹಣವನ್ನೂ ಕೂಡಿಸಿಟ್ಟು, ಬುಟ್ಟಿಯಲ್ಲಿ ಶೋ ರೂಮ್​ಗೆ ಹಣ ತಂದು ಸ್ಕೂಟರ್ ​ಖರೀದಿಸಿದ್ದಾರೆ. 

ಸ್ಕೂಟರ್ ಖರೀದಿಸಿದ ಅಂಗಡಿ ಮಾಲೀಕ

ಸ್ಕೂಟರ್ ಖರೀದಿಸಿದ ಅಂಗಡಿ ಮಾಲೀಕ

  • Share this:
ಒಂದೊಂದು ರೂಪಾಯಿಯನ್ನು ಕೂಡಿಟ್ಟು ತಮ್ಮ ಆಸೆಗಳನ್ನು ಈಡೇರಿಸಿಕೊಳ್ಳುವ  ಬಯಕೆ ಎಲ್ಲರಿಗೂ ಇರುತ್ತೆ. ಅದ್ರಲ್ಲೂ ಮಧ್ಯಮ ವರ್ಗದ (Middle class) ಜನ ತಮ್ಮ ಕೈಯಲ್ಲಿ ಆದಷ್ಟು ಹಣ ಸಂಗ್ರಹಿಸಿ ಸಣ್ಣಪುಟ್ಟ ಆಸೆಗಳನ್ನು ಈಡೇರಿಸಿಕೊಳ್ತಾರೆ. ನಾವು ಅಥವಾ ನಮ್ಮ ಮಕ್ಕಳು ಹುಂಡಿಯಲ್ಲಿ ಒಂದೊಂದು ರೂಪಾಯಿ ಹಾಕಿ ಹಣ ಕೂಡಿಡುತ್ತೇವೆ. ಆ ಹಣದಿಂದ ಸಣ್ಣಪುಟ್ಟ ವಸ್ತು ಖರೀದಿ ಮಾಡ್ತೀವಿ ಆದ್ರೆ ಇಲ್ಲೊಬ್ಬ ವ್ಯಕ್ತಿ 3-4 ಬುಟ್ಟಿಯಲ್ಲಿ (Basket) ಹಣ ತಂದು ಸ್ಕೂಟರ್​ ​(Scooter) ಖರೀದಿಸಿದ್ದಾನೆ. ಅಸ್ಸಾಂ (Assam) ಮೂಲದ ವ್ಯಕ್ತಿಯೊಬ್ಬರು ಸಣ್ಣ ಅಂಗಡಿಯಲ್ಲಿ ವ್ಯಾಪಾರ (Business) ಮಾಡುತ್ತಾ ಜೀವನ ನಡೆಸುತ್ತಿದ್ದರು. ತನ್ನ ದುಡಿಮೆಯ ಒಂದೊಂದು ರೂಪಾಯಿ ಹಣವನ್ನೂ ಕೂಡಿಸಿಟ್ಟು ಸ್ಕೂಟರ್ ಖರೀದಿಸಿದ್ದಾರೆ. ಬ್ರಾಂಡ್ ಮೊಬಿಲಿಟಿ ಸ್ಕೂಟರ್‌ನ್ನು ಖರೀದಿಸಿದ್ದಾರೆ.

ಅಂಗಡಿ ಮಾಲೀಕನಿಂದ ಸ್ಕೂಟರ್​ ಖರೀದಿ

ಹನಿ ಹನಿ ಕೂಡಿದರೆ ಹಳ್ಳ ಎನ್ನುವ  ಮಾತು ಎಲ್ಲೆಡೆ ಪರಿಚಿತ. ಇಲ್ಲೊಂದು ಘಟನೆ ಅದನ್ನು ಮತ್ತೆ ಸಾಬೀತುಪಡಿಸಿದೆ. ಪುಟ್ಟ ಅಂಗಡಿಯ ಮಾಲೀಕರೊಬ್ಬರು ತನ್ನ ದುಡಿಮೆಯ ಒಂದೊಂದು ರೂಪಾಯಿ ಹಣವನ್ನೂ ಕೂಡಿಸಿಟ್ಟು ಸ್ಕೂಟರ್ ​ಖರೀದಿಸಿದ್ದಾರೆ.  ಬ್ರಾಂಡ್​ ಮೊಬಿಲಿಟಿ ಸ್ಕೂಟರ್​ಅನ್ನು ಅವರು ಖರೀದಿಸಿದ್ದಾರೆ. ಅಸ್ಸಾಂ ಮೂಲದ ವ್ಯಕ್ತಿ, ಸಣ್ಣ ಅಂಗಡಿ ಮಾಲೀಕ  ಬುಟ್ಟಿಯಲ್ಲಿ ಚಿಲ್ಲರೆಯನ್ನು ತೆಗೆದುಕೊಂಡು ಹೋಗಿ ಶೋರೂಮ್​ಗೆ ನೀಡಿ ಗಾಡಿಯನ್ನು ಖರೀದಿಸಿದ್ದಾರೆ. ಇದರ ಫೋಟೋ ಹಾಗೂ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಇದನ್ನೂ ಓದಿ: Heart Emoji Ban: ಹಾರ್ಟ್​ ಇಮೋಜಿ ಬಳಸಿದ್ರೆ ಬೀಳುತ್ತೆ ಫೈನ್, ಸೇರ್ತಿರಾ ಜೈಲ್​! ಎಲ್ಲಿ ಗೊತ್ತಾ ಈ ರೂಲ್ಸ್​?

ಸೋಶಿಯಲ್ ಮೀಡಿಯಾದಲ್ಲಿ ವೈರಲ್

ಬುಟ್ಟಿಯಲ್ಲಿ ಚಿಲ್ಲರೆಯನ್ನು ತೆಗೆದುಕೊಂಡು ಹೋಗಿ ಶೋರೂಮ್‍ಗೆ ನೀಡಿ ಗಾಡಿಯನ್ನು ಖರೀದಿಸಿದ್ದಾರೆ. ಈ ಫೋಟೋ ಹಾಗೂ ವೀಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕನಸನ್ನು ನನಸಾಗಿಸಲು ಸಾಕಷ್ಟು ಹಣ ಬೇಕಾಗುತ್ತದೆ. ಅದು ಸಣ್ಣ ಸಣ್ಣ ಉಳಿತಾಯದಿಂದಲೂ ಸಾಧ್ಯವಾಗುತ್ತದೆ ಎಂದು ಕ್ಯಾಪ್ಷನ್ ನೀಡಲಾಗಿದೆ.

8 ತಿಂಗಳ ಸಂಪಾದನೆ ಉಳಿಸಿ ಸ್ಕೂಟರ್​ ಖರೀದಿ

ಈ ಕುರಿತು ಪೇಸ್​ಬುಕ್​ನಲ್ಲಿ ವೋಲ್ಗ್​ ಮಾಡುವ ಹಿರಾಕ್​ ಜೆ ದಾಸ್​ ಎನ್ನುವವರು ವಿಡಿಯೋವನ್ನು ಹಂಚಿಕೊಂಡಿದ್ದಾರೆ,  ಕನಸನ್ನು ನನಸಾಗಿಸಲು ಸಾಕಷ್ಟು ಹಣ ಬೇಕಾಗುತ್ತದೆ. ಅದು ಸಣ್ಣ ಸಣ್ಣ ಉಳಿತಾಯದಿಂದಲೂ ಸಾಧ್ಯವಾಗುತ್ತದೆ ಎಂದು ಕ್ಯಾಪ್ಷನ್​ ನೀಡಲಾಗಿದೆ.  ಯುಟ್ಯೂಬ್​ನಲ್ಲೂ ಇದರ ವಿಡಿಯೋವನ್ನು ಅವರು ಹಂಚಿಕೊಂಡಿದ್ದು, ನಾಣ್ಯಗಳನ್ನು ಚೀಲದಲ್ಲಿ ತುಂಬಿಸಿಕೊಂಡು ಬಂದು ಅದನ್ನು ಬುಟ್ಟಿಗೆ ಹಾಕಿ ನಂತರ ಅದನ್ನು ಎಣಿಸುವುದನ್ನು ಕಾಣಬಹುದು. ಸದ್ಯ ಈ ವಿಡಿಯೋ ಎಲ್ಲೆಡೆ ವೈರಲ್​ ಆಗಿದೆ.

ಇದನ್ನೂ ಓದಿ: Viral Video: 12ನೇ ಫ್ಲೋರ್​ನಲ್ಲಿ ನೇತಾಡುತ್ತಾ ವ್ಯಾಯಾಮ, ವಿಡಿಯೋ ನೋಡಿ ಬೆಚ್ಚಿಬಿದ್ರು ನೆಟ್ಟಿಗರು

ಎಷ್ಟೋ ಜನರಿಗೆ ಸ್ವಂತ ಹಣದಲ್ಲಿ ವಾಹನವನ್ನು ಖರೀದಿಸಬೇಕು ಎನ್ನುವ ಆಸೆ ಇರುತ್ತದೆ. ಆದರೆ ಅದು ಕೆಲವರಿಗೆ ಮಾತ್ರ ಸಾಧ್ಯವಾಗುತ್ತದೆ. ಇಲ್ಲಿ ಅಸ್ಸಾಂನ ಮಧ್ಯಮ ವರ್ಗದ ವ್ಯಕ್ತಿಯೊಬ್ಬ ತನ್ನ 8 ತಿಂಗಳ ಸಂಪಾದನೆಯನ್ನು ಉಳಿಸಿ ಸ್ವಂತ ಸ್ಕೂಟಿಯನ್ನು ಖರೀದಿಸಿದ್ದಾರೆ. ವಿಡಿಯೋ ನೋಡಿದ ನೆಟ್ಟಿಗರು ವ್ಯಕ್ತಿಯನ್ನು ಶ್ಲಾಘಿಸಿದ್ದಾರೆ. ಕನಸನ್ನು ಕಾಣುವುದು ಸುಲಭ. ಅದನ್ನು ಈಡೇರಿಸಿಕೊಳ್ಳಲು ಕಷ್ಟಪಟ್ಟರೆ ಕನಸನ್ನು ನನಸಾಗಿಸಿಕೊಳ್ಳಬಹುದು ಎಂದು ಕೆಲವರು ಕಾಮೆಂಟ್​ ಮಾಡಿದ್ದಾರೆ.

ಸಣ್ಣ ಸಣ್ಣ ಆಸೆಗಳನ್ನು ಈಡೇರಿಸಿಕೊಳ್ಳಲು ಹಲವರು ಕಂತೆ ಕಂತೆ ಹಣ ಇಲ್ಲ ಅಂತಾರೆ ಆದ್ರೆ ನಮ್ಮ ಆಸೆಗಳನ್ನ ಈಡೇರಿಸಿಕೊಳ್ಳಲು ಈ ರೀತಿ ಒಂದೊಂದು ರೂಪಾಯಿ ಅಥವಾ ನಮಗೆ ಸಿಗೋ ಹಣದಲ್ಲಿ ಸ್ವಲ್ಪ ಕೂಡಿಟ್ರೆ ಇಂತಹ ಖುಷಿಗಳು ಕೂಡ ನಮ್ಮದಾಗುತ್ತೆ. ಇನ್ನು ಈ ಪುಟ್ಟ ಅಂಗಡಿ ಮಾಲೀಕನ ಸ್ಕೂಟರ್​ ಖರೀದಿ ಸ್ಟೋರಿ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗ್ತಿದ್ದು, ಎಲ್ಲರೂ ಈ ಅಂಗಡಿ ಮಾಲೀಕ ಎಷ್ಟು ದಿನದಿಂದ ಅಂಗಡಿಯಿಂದ ಬಂದ ಹಣ ಕೂಡಿಟ್ಟು ಗಾಡಿ ಖರೀದಿಸಿದ್ದಾನೆ ಅಂತ ಶ್ಲಾಘಿಸಿದ್ದಾರೆ.
Published by:Pavana HS
First published: