HOME » NEWS » Trend » ASSAM MAN TURNS OLD TELEVISION SETS INTO SMALL HOUSES FOR STRAY DOGS HG

ಹಳೆಯ ಟಿವಿಯನ್ನು ಬೀದಿನಾಯಿಗಳ ಆಶ್ರಯಕ್ಕಾಗಿ ಬಳಸಿದ ಅಸ್ಸಾಂ ಮೂಲದ ವ್ಯಕ್ತಿ; ಈತನ ಪ್ರಾಣಿ ಪ್ರೀತಿಗೆ ಮನಸೋತ ನೆಟ್ಟಿಗರು!

ಬೀದಿ ನಾಯಿಗಳು ರಸ್ತೆಯಲ್ಲೋ, ಕಸದ ತೊಟ್ಟಿಯಲ್ಲೋ ಅಥವಾ ಸಿಕ್ಕ ಜಾಗದಲ್ಲಿ ಮಲಗುತ್ತವೆ. ಆದರೆ ಇಲ್ಲೊಬ್ಬ ವ್ಯಕ್ತಿ ಅವುಗಳಿಗೆ ಮಲಗಲು ಆಶ್ರಯ ನೀಡಿದ್ದಾರೆ. ಹಳೆಯ ಟಿವಿಗಳಲ್ಲಿ ಬೀದಿ ನಾಯಿಗಳು ಮಲಗಲು ಉಪಯೋಗವಾಗುವಂತೆ ಮಾಡಿದ್ದಾರೆ.

news18-kannada
Updated:December 26, 2020, 2:37 PM IST
ಹಳೆಯ ಟಿವಿಯನ್ನು ಬೀದಿನಾಯಿಗಳ ಆಶ್ರಯಕ್ಕಾಗಿ ಬಳಸಿದ ಅಸ್ಸಾಂ ಮೂಲದ ವ್ಯಕ್ತಿ; ಈತನ ಪ್ರಾಣಿ ಪ್ರೀತಿಗೆ ಮನಸೋತ ನೆಟ್ಟಿಗರು!
ಅಭಿಜಿತ್​ ದೊರಾಹ್
  • Share this:
ಬೀದಿ ನಾಯಿಗಳ ಬಗ್ಗೆ ಕಾಳಜಿ ತೋರುವವರು ಕೆಲವೇ ಕೆಲವು ಮಂದಿ. ಅದರಲ್ಲೂ ಪ್ರಾಣಿಗಳ ಮೇಲೆ ಕೊಂಚ ಪ್ರೀತಿ ಇದ್ದವರು ಮಾತ್ರ ಆಹಾರ, ನೀರು ನೀಡಿ ಎಲ್ಲರಂತೆ ಅವುಗಳನ್ನು ಪೋಷಿಸುತ್ತಾರೆ. ಅದರಂತೆ ಇಲ್ಲೊಬ್ಬ ವ್ಯಕ್ತಿ ಬೀದಿ ನಾಯಿಗಳ ವಾಸಿಸಲು ಏನು ಮಾಡಿದ್ದಾರೆ ಗೊತ್ತಾ? ಆತನ ಮಹಾಕಾರ್ಯಕ್ಕೆ ಜನರು ಭೇಷ್​​ ಎಂದಿದ್ದಾರೆ. ಅಷ್ಟಕ್ಕೂ ಆ ವ್ಯಕ್ತಿ ಮಾಡಿದ್ದೇನು? ಈ ಸ್ಟೋರಿ ನೋಡಿ.

ಬೀದಿ ನಾಯಿಗಳು ರಸ್ತೆಯಲ್ಲೋ, ಕಸದ ತೊಟ್ಟಿಯಲ್ಲೋ ಅಥವಾ ಸಿಕ್ಕ ಜಾಗದಲ್ಲಿ ಮಲಗುತ್ತವೆ. ಆದರೆ ಇಲ್ಲೊಬ್ಬ ವ್ಯಕ್ತಿ ಅವುಗಳಿಗೆ ಮಲಗಲು ಆಶ್ರಯ ನೀಡಿದ್ದಾರೆ. ಹಳೆಯ ಟಿವಿಗಳಲ್ಲಿ ಬೀದಿ ನಾಯಿಗಳು ಮಲಗಲು ಉಪಯೋಗವಾಗುವಂತೆ ಮಾಡಿದ್ದಾರೆ. ಇವರ ಕಾರ್ಯದ ಕುರಿತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಅಸ್ಸಾಂ ಮೂಲದ ಅಭಿಜಿತ್​ ದೊರಾಹ್​ ಅವರು ಹಳೆಯ ಟಿವಿಯನ್ನು ಬೀದಿ ನಾಯಿಗಳಿಗೆ ವಾಸಿಸಲು ಬಳಸಿಕೊಂಡಿದ್ದಾರೆ. ಗೂಡಿನಂತೆ ನಿರ್ಮಿಸಿ ಬೀದಿ ನಾಯಿಗಳು ಅದರಲ್ಲೇ ಮಲಗುವಂತೆ ವಿನ್ಯಾಸ ಮಾಡಿದ್ದಾರೆ.

ಅಭಿಜಿತ್​ ಪ್ರಾಣಿ ಪ್ರೀತಿ!

ಬೀದಿ ನಾಯಿಗಳು ಮಳೆಯಲ್ಲಿ ಒದ್ದೆಯಾಗುತ್ತಾ ಸಿಕ್ಕ ಜಾಗದಲ್ಲಿ ಮಲಗುತ್ತಿದ್ದನ್ನು ಅಭಿಜಿತ್​ ಗಮನಿಸಿದ್ದರು. ಇನ್ನು ಕೆಲವು ನಾಯಿಗಳು ವಾಹನ ಕೆಲಗೆ ಮಲಗಿ ಸಾವನ್ನಪ್ಪಿರುವುದನ್ನು ನೋಡಿದ್ದರು. ಇವೆಲ್ಲವನ್ನು ಗಮನಿಸಿ ಬೀದಿ ನಾಯಿಗಳಿಗೆ ಆಶ್ರಯ ಒದಗಿಸಲು ಏನಾದರು ಮಾಡಬೇಕು ಎಂಬುದು ಅಭಿಜಿತ್​ ಮನಸಲ್ಲಿ ಬೇರೂರಿತ್ತು.






ಒಂದು ದಿನ ಹಳೆಯ ಟಿವಿಗಳನ್ನು ಬೀದಿ ನಾಯಿಗಳಿಗೆ ಮಲಗಳು ಬಳಸಿಕೊಳ್ಳಬಹುದು ಎಂದು ಅರಿತುಕೊಂಡರು. ನಂತರ ಅದಕ್ಕೆ ‘ಬಾಟರ್​ ಘೋರ್‘​ ಎಂದು ಹೆಸರಿಟ್ಟರು.

ಈ ಬಗ್ಗೆ ಮಾತನಾಡಿದ್ದ ಅಭಿಜಿತ್,​ ‘ನಾಯಿಗಳು ವಾಸಿಸಲು ಹಳೆಯ ಟಿವಿ ಸೆಟ್​​ಗಳನ್ನು ಬಳಸಿಕೊಳ್ಳುತ್ತಿದ್ದೇನೆ. ಟಿವಿಗಳು ಸಿಗದಿದ್ದರೆ ಮರದ ಪೆಟ್ಟಿಗೆ ಬಳಸುತ್ತಿದ್ದೇನೆ’ ಎಂದರು.

ಇನ್​​ಸ್ಟಾಗ್ರಾಂನಲ್ಲಿ ಅಭಿಜಿತ್​ ಅವರ ಕುರಿತಾದ ವಿಡಿಯೋಗಳು ಹರಿದಾಡುತ್ತಿದೆ. ಅನೇಕರು ಅವರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತ ಪಡಿಸುತ್ತಿದ್ದಾರೆ.
Published by: Harshith AS
First published: December 26, 2020, 2:37 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories