Viral News: ಕಣ್ಣಿಲ್ಲದವರಿಗೆ ದಾರಿದೀಪವಾಗುತ್ತೆ ಈ Special Shoe! ಬಾಲಕನ ಕಾರ್ಯಕ್ಕೆ ಸಾರ್ವಜನಿಕರ ಶಹಬ್ಬಾಸ್
ಅಸ್ಸಾನ ಈ ಬಾಲಕ ಕಣ್ಣಿಲ್ಲದವರ ಕಷ್ಟ ನೋಡಿ ಮರುಕ ಪಟ್ಟಿದ್ದ. ಅವರಿಗೆ ಹೇಗಾದರೂ ಮಾಡಿ ಸಹಾಯ ಮಾಡಲೇಬೇಕು ಅಂತ ನಿರ್ಧರಿಸಿದ್ದ. ದುಡ್ಡು ಕಾಸು ಕೊಟ್ಟರೆ ಒಂದೆರಡು ದಿನ ಅವರಿಗೆ ಹೆಲ್ಪ್ ಆಗಬಹುದು. ಆದರೆ ಮೂರನೇ ದಿನ ಅವರ ಸಂಕಷ್ಟಕ್ಕೆ ಸ್ಪಂದಿಸುವವರು ಯಾರು ಅಂತ ಚಿಂತಿಸಿದ. ದುಡ್ಡಿನ ಬದಲು ಕಣ್ಣಿಲ್ಲದವರಿಗೆ ಶಾಶ್ವತವಾಗಿ ಏನಾದರೂ ಸಹಾಯ ಮಾಡಬೇಕು ಅಂತ ಯೋಚಿಸಿದ. ಆಗ ಹುಟ್ಟಿಕೊಂಡಿದ್ದೇ ಈ ಸಾರ್ಟ್ ಶೂ.
ಅಸ್ಸಾಂ: ‘ಸರ್ವೇಂದ್ರಿಯಾಣಾಂ ನಯನಂ ಪ್ರಧಾನಂ’ ಎಂಬ ಉಕ್ತಿ ಇದೆ. ಅಂದರೆ, ಶರೀರಕ್ಕೆ (Body) ಪಂಚೇಂದ್ರಿಯಗಳು ಮುಖ್ಯವಾದರೂ, ಅವುಗಳ ಪೈಕಿ ಕಣ್ಣುಗಳು (Eyes) ಹೆಚ್ಚಿನ ಪ್ರಾಧಾನ್ಯತೆ ಪಡೆಯುತ್ತದೆ. ಕಣ್ಣು ಇಲ್ಲದ ಮನುಷ್ಯನ ಜೀವನ ತುಂಬಾ ಕಷ್ಟ. ನಮ್ಮ ನಡುವೆಯೇ ದೃಷ್ಟಿ ಕಳೆದುಕೊಂಡ ಅದೆಷ್ಟೋ ದೃಷ್ಟಿ ವಿಶೇಷ ಚೇತನರು ಸಂಕಷ್ಟದಲ್ಲಿ ಜೀವನ ಮಾಡುತ್ತಾರೆ. ಅಸ್ಸಾ (Assam) ರಾಜ್ಯದ ಈ ಬಾಲಕನೂ (Biy) ಹಾಗೆಯೇ ಕಣ್ಣಿಲ್ಲದವರ ಕಷ್ಟ ನೋಡಿ ಮರುಕ ಪಟ್ಟಿದ್ದ. ಅವರಿಗೆ ಹೇಗಾದರೂ ಮಾಡಿ ಸಹಾಯ (Help) ಮಾಡಲೇಬೇಕು ಅಂತ ನಿರ್ಧರಿಸಿದ್ದ. ದುಡ್ಡು ಕಾಸು (Money) ಕೊಟ್ಟರೆ ಒಂದೆರಡು ದಿನ ಅವರಿಗೆ ಹೆಲ್ಪ್ ಆಗಬಹುದು. ಆದರೆ ಮೂರನೇ ದಿನ ಅವರ ಸಂಕಷ್ಟಕ್ಕೆ ಸ್ಪಂದಿಸುವವರು ಯಾರು ಅಂತ ಚಿಂತಿಸಿದ. ದುಡ್ಡಿನ ಬದಲು ಕಣ್ಣಿಲ್ಲದವರಿಗೆ ಶಾಶ್ವತವಾಗಿ ಏನಾದರೂ ಸಹಾಯ ಮಾಡಬೇಕು ಅಂತ ಯೋಚಿಸಿದ. ಆಗ ಹುಟ್ಟಿಕೊಂಡಿದ್ದೇ ಈ ಸಾರ್ಟ್ ಶೂ (Smart Shoe).
ಅಸ್ಸಾಂನ ಬಾಲಕ ಶೋಧಿಸಿದ ಸ್ಮಾರ್ಟ್ ಶೂ
ದೃಷ್ಟಿ ಇಲ್ಲದ ಜನರಿಗೆ ಸಹಾಯ ಮಾಡುವ ಉದ್ದೇಶದಿಂದ ಅಸ್ಸಾಂನ ಕರೀಮ್ ಗಂಜ್ ಜಿಲ್ಲೆಯ ಬಾಲಕನೊಬ್ಬ ಸಂವೇದಕ-ಸಕ್ರಿಯಗೊಳಿಸಿದ ಸ್ಮಾರ್ಟ್ ಶೂ ಅನ್ನು ವಿನ್ಯಾಸಗೊಳಿಸಿದ್ದಾನೆ. ಕರೀಮ್ಗಂಜ್ ಜಿಲ್ಲೆಯ ರೋಲ್ಯಾಂಡ್ಸ್ ಮೆಮೋರಿಯಲ್ ಹೈಸ್ಕೂಲ್ನ 9 ನೇ ತರಗತಿಯ ವಿದ್ಯಾರ್ಥಿ ಅಂಕುರಿತ್ ಕರ್ಮಾಕರ್ ಈ ವಿಶೇಷ ಶೂ ತಯಾರಿಸಿದ ಬಾಲಕ. ದೃಷ್ಟಿ ವಿಶೇಷ ಚೇತನರು ನಡೆಯುವಾಗ ದಾರಿಯಲ್ಲಿ ಬರುವ ಅಡೆತಡೆಗಳಿಂದ ಸುರಕ್ಷಿತವಾಗಿರಲು ಸ್ಮಾರ್ಟ್ ಶೂ ಅನ್ನು ವಿನ್ಯಾಸಗೊಳಿಸಿದ್ದಾರೆ.
ದಾರಿಯಲ್ಲಿ ಅಪಾಯ ಆದರೆ ಎಚ್ಚರಿಸುವ ಶೂ
“ನಾನು ಅಂಧರಿಗಾಗಿ ಈ ಸ್ಮಾರ್ಟ್ ಶೂ ತಯಾರಿಸಿದ್ದೇನೆ. ಕುರುಡರ ದಾರಿಯಲ್ಲಿ ಅಡ್ಡಿ ಉಂಟಾದರೆ ಶೂ ಸೆನ್ಸರ್ ಅಡೆತಡೆಯನ್ನು ಪತ್ತೆ ಹಚ್ಚಿ ಬಜರ್ ಎಚ್ಚರಿಕೆ ನೀಡುತ್ತದೆ. ಬಜರ್ ರಿಂಗಣಿಸಿದಾಗ, ದೃಷ್ಟಿ ವಿಕಲಚೇತನರು ಅದನ್ನು ಕೇಳಲು ಸಾಧ್ಯವಾಗುತ್ತದೆ ಮತ್ತು ಅವರು ಜಾಗರೂಕರಾಗುತ್ತಾರೆ ಮತ್ತು ಅಡಚಣೆಯನ್ನು ತಪ್ಪಿಸಲು ಅದಕ್ಕೆ ಅನುಗುಣವಾಗಿ ಕಾರ್ಯನಿರ್ವಹಿಸಬಹುದು ”ಎಂದು ಅಂಕುರಿತ್ ಕರ್ಮಾಕರ್ ಎಎನ್ಐಗೆ ತಿಳಿಸಿದ್ದಾರೆ.
ಬಾಲಕನಿಗೆ ಭವಿಷ್ಯದಲ್ಲಿ ದೊಡ್ಡ ವಿಜ್ಞಾನಿಯಾಗುವ ಆಸೆ ಇದೆ. ಇಂತಹ ಜನೋಪಯೋಗಿ ಯಂತ್ರ ಸಂಶೋಧಿಸುವ ಗುರಿ ಇದೆ. ಬಾಲಕ ಅಂಕುರಿತ್ ಕರ್ಮಾಕರ್ ಅವರು ಗ್ರೇಟ್ ಬ್ರಿಟನ್ನ ವ್ಯಕ್ತಿಯಿಂದ ಸ್ಮಾರ್ಟ್ ಶೂ ಅನ್ನು ವಿನ್ಯಾಸಗೊಳಿಸಲು ಪ್ರೇರಣೆ ಪಡೆದಿದ್ದಾರಂತೆ. ಅವರಿಂದಲೇ ಸ್ಪೂರ್ತಿ ಪಡೆದು ಅವರು ಅದೇ ರೀತಿಯ ಶೂಗಳನ್ನು ತಯಾರಿಸಿದ್ದಾರೆ ಎಂದು ಹೇಳಿದ್ದಾರೆ. ಭವಿಷ್ಯದಲ್ಲಿ ವಿಜ್ಞಾನಿಯಾಗುವ ಆಸೆಯೂ ಇದೆ ಎಂದರು. “ನನ್ನ ಗುರಿ ವಿಜ್ಞಾನಿಯಾಗುವುದು. ಜನರಿಗೆ ಸಹಾಯವಾಗುವಂಥ ಕೆಲಸ ಮಾಡುತ್ತೇನೆ'' ಎಂದಿದ್ದಾನೆ.
ಬ್ರೈಲ್ ಪಠ್ಯ ಪುಸ್ತಕಗಳನ್ನು ಇ-ಪಠ್ಯಕ್ಕೆ ಟೆಂಡರ್ ಅಂತಿಮಗೊಳಿಸಲು ಗಡುವು
ಕರ್ನಾಟಕ ರಾಜ್ಯದ ವಿವಿಧ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅಂಧ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಬ್ರೈಲ್ ಪಠ್ಯ ಪುಸ್ತಕಗಳನ್ನು ಇ-ಪಠ್ಯಕ್ಕೆ ಪರಿವರ್ತಿಸುವ ಕಾರ್ಯ ಪೂರೈಸಿಕೊಡುವುದಕ್ಕೆ ಕರೆದಿರುವ ಟೆಂಡರ್ ಅಂತಿಮಗೊಳಿಸಲು ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಜೂನ್ವರೆಗೆ ಕಾಲಾವಕಾಶ ನೀಡಿದೆ. ದೃಷ್ಟಿ ವಿಶೇಷ ಚೇತನ ಮಕ್ಕಳಿಗೆ ಪಠ್ಯ ಪುಸ್ತಕಗಳನ್ನು ಒದಗಿಸಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ‘ದಿ ನ್ಯಾಷನಲ್ ಫೆಡರೇಷನ್ ಆಫ್ ದಿ ಬ್ಲೈಂಡ್’ ಸಂಸ್ಥೆ ಸಲ್ಲಿಸಿರುವ ಪಿಐಎಲ್ ಅರ್ಜಿಯನ್ನು ಸಿಜೆ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ ಇಂದು ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು ಪೀಠಕ್ಕೆ ಮಾಹಿತಿ ನೀಡಿ, ಸರ್ವೆ ಮಾಹಿತಿಯಂತೆ ರಾಜ್ಯದಲ್ಲಿ 1,692 ದೃಷ್ಟಿ ವಿಶೇಷ ಚೇತನ ಮಕ್ಕಳು ವಿವಿಧ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಸದ್ಯ ಬ್ರೈಲ್ ಲಿಪಿಯ 152 ಪಠ್ಯ ಪುಸ್ತಕಗಳ ಇ-ಸಾಫ್ಟ್ವೇರ್ ಅಭಿವೃದ್ಧಿಪಡಿಸಲಾಗಿದ್ದು, ವಿದ್ಯಾರ್ಥಿಗಳಿಗೆ ಒದಗಿಸಲಾಗಿದೆ. ಉಳಿದಂತೆ ತಮಿಳು, ತೆಲುಗು ಸೇರಿದಂತೆ ಒಟ್ಟು ಏಳು ಭಾಷೆಯಲ್ಲಿ 403 ಪುಸ್ತಕಗಳನ್ನು ಇ-ಪಠ್ಯಕ್ಕೆ ಪರಿವರ್ತಿಸಿ ಅಪ್ಲೋಡ್ ಮಾಡಬೇಕಿದೆ ಎಂದು ತಿಳಿಸಿದರು.
Published by:Annappa Achari
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ