'ಆಪರೇಷನ್ ಡೈಮಂಡ್': ದುಬೈನಲ್ಲಿ ವಜ್ರ ಕದ್ದು ಭಾರತದಲ್ಲಿ ಸಿಕ್ಕಿಬಿದ್ದ ದಂಪತಿ..!

ಸಿನಿಮೀಯ ರೀತಿಯಲ್ಲಿ ನಡೆಸಲಾದ  ಈ ಕಳ್ಳತನ ಪ್ರಕರಣವನ್ನು ಕೇವಲ 20 ಗಂಟೆಯೊಳಗೆ ಇತ್ಯಾರ್ಥ ಪಡಿಸುವಲ್ಲಿ ದುಬೈ ಪೊಲೀಸರು ಯಶಸ್ವಿಯಾಗಿದ್ದಾರೆ.

zahir | news18
Updated:November 7, 2018, 7:49 PM IST
'ಆಪರೇಷನ್ ಡೈಮಂಡ್': ದುಬೈನಲ್ಲಿ ವಜ್ರ ಕದ್ದು ಭಾರತದಲ್ಲಿ ಸಿಕ್ಕಿಬಿದ್ದ ದಂಪತಿ..!
ಸಿನಿಮೀಯ ರೀತಿಯಲ್ಲಿ ನಡೆಸಲಾದ  ಈ ಕಳ್ಳತನ ಪ್ರಕರಣವನ್ನು ಕೇವಲ 20 ಗಂಟೆಯೊಳಗೆ ಇತ್ಯಾರ್ಥ ಪಡಿಸುವಲ್ಲಿ ದುಬೈ ಪೊಲೀಸರು ಯಶಸ್ವಿಯಾಗಿದ್ದಾರೆ.
zahir | news18
Updated: November 7, 2018, 7:49 PM IST
-ನ್ಯೂಸ್ 18 ಕನ್ನಡ

ದುಬೈನ ವಜ್ರದಂಗಡಿಯಿಂದ ಕೆಲವೇ ಕ್ಷಣಗಳಲ್ಲಿ 81 ಸಾವಿರ ಡಾಲರ್ (ಸುಮಾರು 58 ಲಕ್ಷ ರೂ.) ಮೌಲ್ಯದ ವಜ್ರವನ್ನು ಎಗರಿಸಿದ ದಂಪತಿಯನ್ನು ಭಾರತದಲ್ಲಿ ಬಂಧಿಸಿದ  ಅಪರೂಪದ ಘಟನೆ ನಡೆದಿದೆ. ಸಿನಿಮೀಯ ರೀತಿಯಲ್ಲಿ ನಡೆಸಲಾದ  ಈ ಕಳ್ಳತನ ಪ್ರಕರಣವನ್ನು ಕೇವಲ 20 ಗಂಟೆಯೊಳಗೆ ಇತ್ಯಾರ್ಥ ಪಡಿಸುವಲ್ಲಿ ದುಬೈ ಪೊಲೀಸರು ಯಶಸ್ವಿಯಾಗಿದ್ದಾರೆ.

ಹಾಕಾಂಗ್ ಮೂಲದ ದಂಪತಿ ಎನ್ನಲಾಗಿರುವ ಇಬ್ಬರು ಗ್ರಾಹಕರ ಸೋಗಿನಲ್ಲಿ ವಜ್ರದಂಗಡಿಗೆ ಭೇಟಿ ನೀಡಿದ್ದಾರೆ. ಅಂಗಡಿಯ ಸೇಲ್ಸ್​ಮೆನ್ ಈ ಇಬ್ಬರಿಗೆ ಬೆಲೆ ಬಾಳುವ ಡೈಮಂಡ್​ಗಳನ್ನು ತೋರಿಸಿದ್ದಾರೆ. ವಿನ್ಯಾಸ ಕುರಿತು ಚರ್ಚಿಸುವ ವೇಳೆ ವಜ್ರವನ್ನು  ದಂಪತಿಗಳು ಕದ್ದಿದ್ದರು. ಆದರೆ ಗ್ರಾಹಕರು ಅಂಗಡಿಯಿಂದ ಹೊರಹೋದ ಬಳಿಕವಷ್ಟೇ  ಮಾಲೀಕನಿಗೆ 3.27 ಕ್ಯಾರೆಟ್​ನ ವಜ್ರ ಕಳುವಾಗಿರುವುದು ಗಮನಕ್ಕೆ ಬಂದಿದೆ. ಈ ವಿಷಯವನ್ನು ಪೊಲೀಸರಿಗೆ ತಿಳಿಸುವಷ್ಟರಲ್ಲಿ ಅದಾಗಲೇ 3 ಗಂಟೆ ತಡವಾಗಿತ್ತು.

ಇನ್ನು ವಜ್ರ ಕದ್ದಿರುವ ದಂಪತಿಗಳು ಶಾಪಿಂಗ್ ಮಾಲ್​ವೊಂದಕ್ಕೆ ತೆರಳಿ, ಅಲ್ಲಿಂದ ತಮ್ಮ ಉಡುಪುಗಳನ್ನು ಬದಲಿಸಿ ಮುಂಬೈಗೆ ವಿಮಾನ ಹತ್ತಿದ್ದಾರೆ. ಅಷ್ಟರಲ್ಲೇ ಸಿಸಿ ಟಿವಿ ಪರಿಶೀಲಿಸಿದ ದುಬೈ ಪೊಲೀಸ್ ಅಧಿಕಾರಿಗಳು ದಂಪತಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಇದಕ್ಕಾಗಿ ಇಂಟರ್​ಪೊಲ್ ಸಹಾಯ ಪಡೆದಾಗ ದಂಪತಿಗಳು ಭಾರತದತ್ತ ತೆರಳಿರುವುದು ತಿಳಿದು ಬಂದಿದೆ. ಶೀಘ್ರದಲ್ಲೇ ಮುಂಬೈ ಏರ್​ಪೋರ್ಟ್​ ತನಿಖಾ ತಂಡಕ್ಕೆ ದುಬೈ ಪೊಲೀಸರು ಮಾಹಿತಿ ಮುಟ್ಟಿಸಿದ್ದಾರೆ.

ಇದನ್ನೂ ಓದಿ: ಕೇವಲ 1313 ರೂ.ಗೆ ವಿಮಾನ ಪ್ರಯಾಣ: ಗೊ ಏರ್ ನೀಡಿದೆ ದೇಶ-ವಿದೇಶ ಸುತ್ತಲು ಭರ್ಜರಿ ಆಫರ್

ಇತ್ತ ಭಾರತದಲ್ಲಿ ಕಳ್ಳ ದಂಪತಿ ಇಳಿಯುತ್ತಿದ್ದಂತೆ ತನಿಖಾ ತಂಡ ವಶಕ್ಕೆ ತೆಗೆದುಕೊಂಡಿದೆ. ಅಲ್ಲದೆ ಇಬ್ಬರನ್ನು ಪರಿಶೀಲಿಸಿ ವಾಪಸ್ ದುಬೈಗೆ ವಿಮಾನ ಹತ್ತಿಸಿದ್ದಾರೆ. ಮತ್ತೆ ಯುಎಇಗೆ ಬಂದಿಳಿಯುತ್ತಿದ್ದಂತೆ ಚೋರ ಜೋಡಿಯನ್ನು ದುಬೈ ಪೊಲೀಸರು ಬಂಧಿಸಿದ್ದಾರೆ. ನಾಟಕೀಯ ರೀತಿಯಲ್ಲಿ ನಡೆದ ಈ ಘಟನೆಯನ್ನು ವಿವರಿಸುವ ವಿಡಿಯೋವೊಂದನ್ನು ದುಬೈ ಪೊಲೀಸ್ ಇಲಾಖೆ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಕೇವಲ 20 ಗಂಟೆಯೊಳಗೆ ಆರೋಪಿಗಳನ್ನು ಬಂಧಿಸಿದ ದುಬೈ ಪೊಲೀಸರ ಕಾರ್ಯಾಚರಣೆಗೆ ಮೆಚ್ಚುಗೆಗಳ ಮಹಾಪೂರವೇ ಹರಿದು ಬರುತ್ತಿದೆ.

ಇದನ್ನೂ ಓದಿ:  10 ಸಾವಿರದೊಳಗೆ ಖರೀದಿಸಬಹುದಾದ ಟಾಪ್ 5 ಸ್ಮಾರ್ಟ್‌ಫೋನ್‌ಗಳು
Loading...


First published:November 7, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ