23ನೇ ಏಷ್ಯನ್ ಚಾಂಪಿಯನ್ಶಿಪ್ನಲ್ಲಿ ಭಾಗವಹಿಸಿದ ತಿರುಚಿಯ ಗೋಮತಿ ಮಾರಿಮುತ್ತು ಭಾರತಕ್ಕೆ ಚಿನ್ನದ ಪದಕವನ್ನು ತಂದುಕೊಟ್ಟಿದ್ದಾರೆ. 800 ಮೀಟರ್ ಓಟದ ಸ್ಪರ್ಧೆಯಲ್ಲಿ 2 ನಿಮಿಷ 02.70 ಸೆಕೆಂಡುಗಳಲ್ಲಿ ಜಯದ ರೇಖೆಯನ್ನು ದಾಟಿದ್ದಾರೆ. 30 ವರ್ಷದ ಗೋಮತಿಯವರ ಸಾಧನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಸಾಕಷ್ಟು ಜನರಿಂದ ಪ್ರಶಂಸೆಗಳು ಲಭಿಸುತ್ತಿದೆ.
ದೋಹದಲ್ಲಿ ನಡೆದ 23ನೇ ಏಷ್ಯನ್ ಚಾಂಪಿಯನ್ಶಿಪ್ನಲ್ಲಿ ಭಾಗವಹಿಸಿದ್ದ ಗೋಮತಿ ಅವರು ಮೊದಲ ಬಾರಿಗೆ ಚಿನ್ನದ ಪದಕ ಗೆದ್ದಿದ್ದಾರೆ. 30ನೇ ವಯಸ್ಸಿನಲ್ಲೂ ಛಲಬಿಡದೆ ಓಟದ ಸ್ಪರ್ಧೆಯಲ್ಲಿ ಭಾಗವಹಿಸಿ ಚಿನ್ನದ ಪದಕಗಳಿಸಿ ಭಾರತೀಯರಿಗೆ ಸ್ಪೂರ್ತಿದಾಯಕ ಸಂದೇಶ ನೀಡಿದ್ದಾರೆ.
ಇದನ್ನೂ ಓದಿ: ಅನುಮತಿ ಪಡೆಯದೇ ಚುನಾವಣಾ ರ್ಯಾಲಿ ನಡೆಸಿದ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ವಿರುದ್ಧ ದೂರು
ತಮಿಳುನಾಡು ಮೂಲದ ಗೋಮತಿ ಕಡು ಬಡವಳಾಗಿದ್ದು, ಹರಿದ ಶೂ ಧರಿಸಿ ಏಷ್ಯನ್ ಚಾಂಪಿಯನ್ನಲ್ಲಿ ಭಾರತಕ್ಕೆ ಚಿನ್ನವನ್ನು ತಂದುಕೊಟ್ಟಿದ್ದಾರೆ. ಗೋಮತಿಯ ಓಟದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಈ ಓಟಗಾರ್ತಿ ಬಳಸಿದ ಶೂಸ್ನ ಬಗ್ಗೆ ಅನೇಕರು ಕನಿಕರ ವ್ಯಕ್ತಪಡಿಸಿದ್ದಾರೆ.
ಕ್ರೀಡೆಯ ಸಾಮಾನ್ಯ ಸೌಲಭ್ಯಗಳಲ್ಲಿ ಒಂದಾದ ಶೂಸ್ ಕೂಡ ಗೋಮತಿ ಬಳಿ ಇರಲಿಲ್ಲ. ಆದರೆ ಅವರು ಇಂತಹ ಮಹಾ ಸಾಧನೆ ಮಾಡಿದ್ದಾರೆ. ಇದನ್ನು ಪ್ರಸ್ತಾಪಿಸಿ ಅನೇಕರು ಕ್ರೀಡಾ ಆಯೋಗವನ್ನು ಸಾಮಾಜಿಕ ಜಾಲತಾಣದಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ