Gold Price Discount: ಚಿನ್ನ ಕೊಳ್ಳುವವರಿಗೆ ಗುಡ್ ನ್ಯೂಸ್, ಭಾರೀ ಡಿಸ್ಕೌಂಟ್​ನಲ್ಲಿ ಮಾರಾಟವಾಗ್ತಿದೆ ಬಂಗಾರ !

Discount on Gold: ಅಕ್ಟೋಬರ್-ನವೆಂಬರ್ ತಿಂಗಳ ಹಬ್ಬದ ಸಮಯದಲ್ಲಿ ಚಿನ್ನದ ಬೇಡಿಕೆ ಸಾಮಾನ್ಯವಾಗಿ ಏರಿಕೆ ಕಾಣುತ್ತದೆ. ಆದರೆ ಕೋವಿಡ್‌ ಅಲೆಗಳಿಂದ ಜರ್ಝರಿತವಾಗಿರುವ ಮಾರುಕಟ್ಟೆಯು ಏಪ್ರಿಲ್-ಜೂನ್ ತಿಂಗಳಲ್ಲಿಯೇ ಕಾಲು ಭಾಗದಷ್ಟು ಮುಳುಗಡೆ ಕಂಡಿದೆ.

ಪ್ರಾತಿನಿಧೀಕ ಚಿತ್ರ

ಪ್ರಾತಿನಿಧೀಕ ಚಿತ್ರ

  • Share this:

Gold Price Discount: ಚೀನಾ ನಂತರ ಚಿನ್ನದ ಖರೀದಿಯಲ್ಲಿ ಎರಡನೇ ಸ್ಥಾನದಲ್ಲಿರುವ ಭಾರತವು ಇದೀಗ ಚಿನ್ನದ ಮೇಲೆ ವಿನಾಯಿತಿಗಳನ್ನು ನೀಡುತ್ತಿದ್ದು ಖರೀದಿದಾರರನ್ನು ಆಕರ್ಷಿಸಲು ಚಿನ್ನದ ವ್ಯಾಪಾರಿಗಳು ಹೊಸ ವಿಧಾನವನ್ನು ಅನುಸರಿಸಿದ್ದಾರೆ. ಚಿನ್ನದ ಮಾರುಕಟ್ಟೆಯ ಮೇಲೆ ಕೋವಿಡ್ – 19 ಕರಿನೆರಳು ಗಾಢವಾಗಿ ಪರಿಣಾಮ ಬೀರಿದ್ದರಿಂದ ಮಾರುಕಟ್ಟೆ ಕುಸಿದಿದೆ ಎಂದೇ ಹೇಳಬಹುದು. ಕಳೆದ ವಾರ 10 ಗ್ರಾಮ್‌ಗೆ ರೂ 48,300 ವಹಿವಾಟು ನಡೆಸಿದ್ದು, ಕಳೆದ ತಿಂಗಳು ಸಾರ್ವಕಾಲಿಕ ಗರಿಷ್ಠ ದಾಖಲೆ ರೂ. 48,501ಗೆ ಚಿನ್ನದ ಮಾರಾಟವು ತಲುಪಿದೆ. ದೇಶೀಯ ದರಗಳ ಏರಿಕೆ ಹಳದಿ ಲೋಹದ ಬೇಡಿಕೆಯನ್ನು ಕುಂಠಿತಗೊಳಿಸಿರುವ ಕಾರಣ ಭಾರತದ ಚಿನ್ನ ವಿತರಕರು ಅಧಿಕೃತ ಬೆಲೆಗಿಂತ ರಿಯಾಯಿತಿ ದರದಲ್ಲಿ ಚಿನ್ನದ ವ್ಯಾಪಾರ ಮಾಡುವ ಸನ್ನಿವೇಶ ಉಂಟಾಗಿದೆ. ಕಳೆದ ವಾರದ ರೂ. 2,938 ರಿಂದ 12.5% ಆಮದು ಮತ್ತು 3% ಮಾರಾಟ ತೆರಿಗೆಗಳನ್ನು ಒಳಗೊಂಡಂತೆ ಅಧಿಕೃತ ದೇಶೀಯ ಬೆಲೆಗಿಂತ ರಿಯಾಯಿತಿಯು ರೂ 2,238.49 ಕ್ಕೆ ಇಳಿದಿದೆ.


ಅಕ್ಟೋಬರ್-ನವೆಂಬರ್ ತಿಂಗಳ ಹಬ್ಬದ ಸಮಯದಲ್ಲಿ ಚಿನ್ನದ ಬೇಡಿಕೆ ಸಾಮಾನ್ಯವಾಗಿ ಏರಿಕೆ ಕಾಣುತ್ತದೆ. ಆದರೆ ಕೋವಿಡ್‌ ಅಲೆಗಳಿಂದ ಜರ್ಝರಿತವಾಗಿರುವ ಮಾರುಕಟ್ಟೆಯು ಏಪ್ರಿಲ್-ಜೂನ್ ತಿಂಗಳಲ್ಲಿಯೇ ಕಾಲು ಭಾಗದಷ್ಟು ಮುಳುಗಡೆ ಕಂಡಿದೆ. ಹಠಾತ್ ಬೆಲೆ ಏರಿಕೆಯಿಂದಾಗಿ ಆಭರಣ ವ್ಯಾಪಾರಿಗಳು ಗೊಂದಲಕ್ಕೀಡಾಗಿದ್ದಾರೆ. ಅಂತೆಯೇ ದಾಸ್ತಾನುಗಳನ್ನು ಮರು ತುಂಬಿಸಲು ಬಯಸಿದರೂ ಚಿಲ್ಲರೆ ಬೇಡಿಕೆಯ ಕುರಿತು ಖಚಿತವಾಗಿಲ್ಲ ಎಂಬುದು ಮುಂಬೈ ಮೂಲದ ಚಿನ್ನ ಆಮದು ಮಾಡುವ ವ್ಯಾಪಾರಿಯ ಹೇಳಿಕೆಯಾಗಿದೆ.


ಇದನ್ನೂ ಓದಿ: Gold Price Today: ಚಿನ್ನದ ಬೆಲೆಯಲ್ಲಿ ಅಲ್ವಸ್ವಲ್ಪ ಏರಿಳಿತ ಸಹಜ, ಸದ್ಯಕ್ಕೆ ಹೆಚ್ಚೇನೂ ಜಾಸ್ತಿಯಾಗಲ್ವಂತೆ ಬಂಗಾರದ ರೇಟ್; ಇಂದಿನ ಬೆಲೆ ಹೀಗಿದೆ..

ಹಬ್ಬಗಳ ಸಮಯದಲ್ಲೂ, ಹೆಚ್ಚಿನ ಬೆಲೆಗಳಿಂದಾಗಿ ಬೇಡಿಕೆ ಸಾಮಾನ್ಯಕ್ಕಿಂತ ಕಡಿಮೆಯಿರುತ್ತದೆ” ಎಂದು ಮುಂಬೈ ಮೂಲದ ವ್ಯಾಪಾರಿ ಹೇಳುತ್ತಾರೆ. ಜಾಗತಿಕ ಬೆಲೆ ಕುಸಿತದಿಂದಾಗಿ ಸಿಂಗಾಪುರ್‌ ಗ್ರಾಹಕರು ಕೂಡ ಇಲ್ಲಿ ಖರೀದಿ ಮಾಡುತ್ತಾರೆ ಎಂಬುದು ವ್ಯಾಪಾರಿಯ ಮಾತಾಗಿದೆ. ಬೆಲೆ ಕಡಿಮೆಯಾದಂತೆ ಚಿನ್ನದ ಖರೀದಿಯಲ್ಲಿ ಏರಿಕೆಯಾಗುತ್ತದೆ. ಅಲ್ಲದೆ ಹೆಚ್ಚಿನ ಗ್ರಾಹಕರು ಚಿನ್ನ ಖರೀದಿಯ ಮೇಲೆ ಆಸಕ್ತಿ ತೋರಿಸುತ್ತಿದ್ದಾರೆ ಎಂದು ಚಿನ್ನ ಬೆಳ್ಳಿ ವ್ಯಾಪಾರಿ ಬ್ರಿಯಾನ್ ಲ್ಯಾನ್ ಹೇಳುತ್ತಾರೆ. ಸದ್ಯಕ್ಕೆ ಚಿಲ್ಲರೆ ಖರೀದಿಗಳನ್ನು ಸ್ಥಗಿತಗೊಳಿಸಲಾಗಿದೆ.


ಮಾರಾಟವು ತಕ್ಕಮಟ್ಟಿಗೆ ಉತ್ತಮವಾಗಿದ್ದರೂ ಕಳೆದ ನಾಲ್ಕು ವಾರಗಳಲ್ಲಿ ಇದು ಅತ್ಯಂತ ಕಡಿಮೆ ಎಂಬುದು ಸಿಲ್ವರ್ ಬುಲಿಯಾನ್ ಸಂಸ್ಥೆಯ ಮಾರಾಟ ವ್ಯವಸ್ಥಾಪಕ ವಿನ್ಸೆಂಟ್ ಟೈ ಅಭಿಪ್ರಾಯವಾಗಿದೆ. ಲಾಕ್‌ಡೌನ್ ನಿರ್ಬಂಧಗಳ ಸಡಿಲಿಕೆಯ ನಂತರ ಚಿನ್ನದ ಬೇಡಿಕೆ ನಿಧಾನವಾಗಿ ಚೇತರಿಸಿಕೊಳ್ಳುತ್ತಿದೆ. ಆದರೆ ಹಠಾತ್ ಬೆಲೆ ಏರಿಕೆಯಿಂದಾಗಿ ವ್ಯಾಪಾರದ ಮೇಲೆ ಪರಿಣಾಮ ಬೀರಿದೆ ಎಂಬುದು ಕೋಲ್ಕತ್ತಾದ ಸಗಟು ವ್ಯಾಪಾರಿ ಜೆ ಜೆ ಗೋಲ್ಡ್ ಹೌಸ್ ಮಾಲೀಕ ಹರ್ಷ ಮಾತಾಗಿದೆ. ವೈಯಕ್ತಿಕ ಖಾತೆಗಳ ಅಂತ್ಯದಿಂದಾಗಿ ಚೀನಾದಲ್ಲಿ ಪ್ರೀಮಿಯಂಗಳ ಕುಸಿತವನ್ನು ನಾವು ನಿರೀಕ್ಷಿಸುತ್ತೇವೆ. ಸ್ಪಾಟ್ ಚಿನ್ನದ ಬೆಲೆಗಳಲ್ಲಿ ಏರಿಕೆ ಕಂಡಿದ್ದರಿಂದ ಹಾಂಗ್ ಕಾಂಗ್ ಮತ್ತು ಸಿಂಗಾಪುರದಲ್ಲಿ ಬೇಡಿಕೆ ಶಾಂತವಾಗಿದೆ ಎಂಬುದಾಗಿ ಗ್ರೇಟರ್ ಚೀನಾದ ಪ್ರಾದೇಶಿಕ ನಿರ್ದೇಶಕ ಬರ್ನಾರ್ಡ್ ಸಿನ್ ಹೇಳಿದ್ದಾರೆ. ಸಿಂಗಾಪುರದಲ್ಲಿ ಪ್ರೀಮಿಯಂಗಳು ಪ್ರತಿ ಔನ್ಸ್‌ಗೆ (ಅಂದಾಜು 28 ಗ್ರಾಮ್) $1.20 ರಿಂದ $1.80 (ರೂ 89.49 ರಿಂದ ರೂ 134.24) ಆಗಿದೆ.
ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.
Published by:Soumya KN
First published: