Heart Surgery: 25 ವರ್ಷಗಳ ಹಿಂದೆಯೇ ಹಂದಿ ಹೃದಯವನ್ನು ಮನುಷ್ಯನಿಗೆ ಕಸಿ ಮಾಡಿದ್ದ ಅಸ್ಸಾಂನ ವೈದ್ಯ..! ಮುಂದೇನು ಆಯ್ತು..?

ಡಾ. ಧನಿ ರಾಮ್ ಬರುವಾ ಮತ್ತು ಡಾ. ಜೊನಾಥನ್ ಹೋ ಕೀ-ಶಿಂಗ್ ಅವರು 1997ರಲ್ಲಿ ಗುವಾಹಟಿಯಲ್ಲಿ ಹಂದಿಯಿಂದ ಮನುಷ್ಯರಿಗೆ ಹೃದಯ ಮತ್ತು ಶ್ವಾಸಕೋಶದ ಕಸಿ ಮಾಡಿದರು.

ಅಸ್ಸಾಂನ ವೈದ್ಯ

ಅಸ್ಸಾಂನ ವೈದ್ಯ

  • Share this:
1997ರಲ್ಲಿ, ಅಂದಿನ ಅಂತಾರಾಷ್ಟ್ರೀಯ ಮನ್ನಣೆ ಗಳಿಸಿದ್ದ ಡಾ. ಧನಿ ರಾಮ್ ಬರುವಾ(Dr. Dhani Ram Barua) ಅವರನ್ನು ಹಂದಿ (Pig's Heart) ಹೃದಯವನ್ನು ಮನುಷ್ಯನಿಗೆ ಕಸಿ (Operation) ಮಾಡಿದ್ದಕ್ಕಾಗಿ ಬಂಧಿಸಲಾಗಿತ್ತು. ಏಕೆಂದರೆ, ರೋಗಿಯು ಒಂದು ವಾರದಲ್ಲೇ ಸೋಂಕಿಗೆ ಒಳಪಟ್ಟು ನಿಧನರಾಗಿದ್ದರು.ಇತ್ತೀಚೆಗೆ, USನ ವೈದ್ಯರು, ಮೇರಿಲ್ಯಾಂಡ್‌ನಲ್ಲಿ ತಳೀಯವಾಗಿ ಮಾರ್ಪಡಿಸಿದ ಹಂದಿಯ ಹೃದಯವನ್ನು ಪಡೆದ ನಂತರ ರೋಗಿಯೊಬ್ಬರು ಚೇತರಿಸಿಕೊಂಡಂತಹ ಅದ್ಭುತ ಕಾರ್ಯಾಚರಣೆಯನ್ನು ಶ್ಲಾಘಿಸುತ್ತಿದ್ದಾರೆ, ಆದರೆ ಇದು ನಮಗೆ 20 ವರ್ಷಗಳ ಹಿಂದೆ ಇದೇ ರೀತಿಯ ಕಾರ್ಯಾಚರಣೆಯೊಂದನ್ನು ಪ್ರಯತ್ನಿಸಿದ್ದ ಅಸ್ಸಾಮಿನ (Assamese doctor) ವೈದ್ಯರೊಬ್ಬರನ್ನು ನೆನಪಿಸುತ್ತದೆ.

40  ದಿನಗಳ ಕಾಲ ಜೈಲು ವಾಸ
US ವೈದ್ಯ ಡೇವಿಡ್ ಬೆನೆಟ್ 57 ವರ್ಷದ ಸಾವು ಬದುಕಿನ ಜೊತೆ ಹೋರಾಡುತ್ತಿದ್ದ ವ್ಯಕ್ತಿಯ ಜೀವವನ್ನು ಉಳಿಸುವ ಕೊನೆಯ ಅಸ್ತ್ರವಾಗಿ ಹಂದಿ ಹೃದಯವನ್ನು ಕಸಿ ಮಾಡಿದರು. ಅತ್ಯಂತ ಪ್ರಾಯೋಗಿಕ ಶಸ್ತ್ರಚಿಕಿತ್ಸೆಯ ಮೂರು ದಿನಗಳ ನಂತರ ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಮೇರಿಲ್ಯಾಂಡ್ ಆಸ್ಪತ್ರೆ ತಿಳಿಸಿದೆ. ಅಸ್ಸಾಂನ ಕಸಿ ಶಸ್ತ್ರಚಿಕಿತ್ಸಕ ಡಾ. ಧನಿ ರಾಮ್ ಬರುವಾ ಗುವಾಹಟಿಯಲ್ಲಿ ಹಂದಿಯಿಂದ ಮನುಷ್ಯನಿಗೆ ಹೃದಯ ಮತ್ತು ಶ್ವಾಸಕೋಶದ ಕಸಿ ಹೇಗೆ ನಡೆಸಿದರು..? ಮತ್ತು ಈ ಘಟನೆಯು ಹೇಗೆ ವಿವಾದಕ್ಕೆ ಕಾರಣವಾಯಿತು ಮತ್ತು ಅವರನ್ನು 40 ದಿನಗಳ ಕಾಲ ಜೈಲು ವಾಸಕ್ಕೆ ಹೇಗೆ ತಳ್ಳಿತು..? ಎಂಬುದನ್ನು ನೋಡೋಣ .

ಇದನ್ನೂ ಓದಿ: Heart Surgery: ಇದೇ ಮೊದಲ ಬಾರಿಗೆ ಮನುಷ್ಯನಿಗೆ ಹಂದಿ ಹೃದಯದ ಕಸಿ..!

ಘಟನೆ ವಿವರ:
ಡಾ. ಧನಿ ರಾಮ್ ಬರುವಾ ಮತ್ತು ಡಾ. ಜೊನಾಥನ್ ಹೋ ಕೀ-ಶಿಂಗ್ ಅವರು 1997ರಲ್ಲಿ ಗುವಾಹಟಿಯಲ್ಲಿ ಹಂದಿಯಿಂದ ಮನುಷ್ಯರಿಗೆ ಹೃದಯ ಮತ್ತು ಶ್ವಾಸಕೋಶದ ಕಸಿ ಮಾಡಿದರು. ಟೈಮ್ಸ್ ಆಫ್ ಇಂಡಿಯಾದ ವರದಿಯ ಪ್ರಕಾರ, ಹೃದಯದಲ್ಲಿ ರಂಧ್ರವಿರುವ 32 ವರ್ಷದ ವ್ಯಕ್ತಿಗೆ ಡಾ. ಬರುವಾ ಹಂದಿಯ ಹೃದಯವನ್ನು ಕಸಿ ಮಾಡಿದರು. ಡಾ ಬರುವಾ ಅವರು , ತಮ್ಮದೇ ಸೌಲಭ್ಯವಾದ ಧನಿ ರಾಮ್ ಬರುವಾ ಹಾರ್ಟ್ ಇನ್‌ಸ್ಟಿಟ್ಯೂಟ್ ಮತ್ತು ಗುವಾಹಟಿಯ ಹೊರಗಿನ ಸೋನಾಪುರದಲ್ಲಿರುವ ಇನ್‌ಸ್ಟಿಟ್ಯೂಟ್ ಆಫ್ ಅಪ್ಲೈಡ್ ಹ್ಯೂಮನ್ ಜೆನೆಟಿಕ್ ಎಂಜಿನಿಯರಿಂಗ್‌ನಲ್ಲಿ ಸುಮಾರು 15 ಗಂಟೆಗಳಲ್ಲಿ ಇಂತಹ ಒಂದು ವಿಚಿತ್ರ ಶಸ್ತ್ರಚಿಕಿತ್ಸೆಯನ್ನು ಪೂರ್ಣಗೊಳಿಸಿದರು ಎಂದು ವರದಿ ಮಾಡಿದ್ದಾರೆ.

ಚಿಕಿತ್ಸೆ ಫಲಕಾರಿಯಾಗದೆ ನಿಧನ
ಅವರು 32 ವರ್ಷ ವಯಸ್ಸಿನ ರೋಗಿಯ ಹೃದಯ ಮತ್ತು ಶ್ವಾಸಕೋಶಕ್ಕೆ ಚಿಕಿತ್ಸೆ ನೀಡಲು ಹೊಸ ಆ್ಯಂಟಿ-ಹೈಪರ್‌ಕ್ಯೂಟ್ ರಿಜೆಕ್ಷನ್ ಬಯೋಕೆಮಿಕಲ್ ಪರಿಹಾರವನ್ನು ಅಭಿವೃದ್ಧಿಪಡಿಸಿದರು ಮತ್ತು ನಿರಾಕರಣೆ ತಡೆಯಲು ಅದರ ಪ್ರತಿರಕ್ಷಣಾ ವ್ಯವಸ್ಥೆಯನ್ನು ಕುರುಡು ಗೊಳಿಸಿದರು ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ಆದರೆ ಆ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಒಂದು ವಾರದಲ್ಲೇ ನಿಧನರಾದರು.

ಈ ಕಸಿ, ತೀವ್ರವಾದ ವಿವಾದವನ್ನು ಹುಟ್ಟುಹಾಕಿದ ನಂತರ, 1994ರ ಮಾನವ ಅಂಗಾಂಗ ಕಸಿ ಕಾಯಿದೆ ಮತ್ತು ನರಹತ್ಯೆಯ ಆರೋಪಗಳ ಅಡಿಯಲ್ಲಿ ಇಬ್ಬರೂ ವೈದ್ಯರನ್ನು 2 ವಾರದೊಳಗೆ ಬಂಧಿಸಿ 40 ದಿನಗಳ ಕಾಲ ಜೈಲಿನಲ್ಲಿರಿಸಲಾಯಿತು.ಪ್ರಕರಣದ ತನಿಖೆಯಲ್ಲಿ, ಅಸ್ಸಾಂ ಸರ್ಕಾರವು ಈ ಪ್ರಕ್ರಿಯೆಯನ್ನು ಅನೈತಿಕವೆಂದು ಪರಿಗಣಿಸಿತು. ಅಷ್ಟು ಮಾತ್ರವಲ್ಲದೆ, ಡಾ. ಧನಿರಾಮ್ ಹಾರ್ಟ್ ಇನ್‌ಸ್ಟಿಟ್ಯೂಟ್ ಮತ್ತು ರಿಸರ್ಚ್ ಸೆಂಟರ್ ಕಸಿ ಕಾನೂನುಗಳ ಅಡಿಯಲ್ಲಿ ಅಗತ್ಯವಿರುವಂತೆ "ನೋಂದಣಿಗೆ ಅರ್ಜಿ ಸಲ್ಲಿಸಿಲ್ಲ ಅಥವಾ ಪಡೆದಿಲ್ಲ" ಎಂದು ವಿಚಾರಣೆಯಲ್ಲಿ ಕಂಡು ಬಂದಿತು .

ಇದನ್ನೂ ಓದಿ: ಅನಸ್ಥೇಸಿಯಾಗೆ ಒಳಗಾದರೂ ಫೋನ್‌ ಸ್ವೈಪ್ ಮಾಡಿ ವೈದ್ಯರನ್ನು ರಂಜಿಸಿದ ಮಹಿಳಾ ರೋಗಿ..

ಮುಂದೆ ಏನಾಯಿತು..?
ವೈದ್ಯರು 40 ದಿನಗಳ ಕಾಲ ಜೈಲುವಾಸ ಅನುಭವಿಸಿ ತಮ್ಮ ಕ್ಲಿನಿಕ್‌ಗೆ ಹಿಂತಿರುಗಿದಾಗ ಅವರ ಕ್ಲಿನಿಕ್‌ ಸಂಪೂರ್ಣವಾಗಿ ನಾಶಗೊಂಡಿತ್ತು. ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ, ಅವರು ಮುಂದಿನ 18 ತಿಂಗಳುಗಳನ್ನು ಗೃಹಬಂಧನದಲ್ಲಿ ಕಳೆದರು. ಅಪಹಾಸ್ಯಗಳ ಹೊರತಾಗಿಯೂ, ವೈದ್ಯರು ತಮ್ಮ ಸಂಶೋಧನೆಯನ್ನು ಮತ್ತೆ ಮುಂದುವರೆಸಿದರು.
Published by:vanithasanjevani vanithasanjevani
First published: