ಮುಗಿದ ಕಥೆ: ಮಾಯವಾಯಿತು ಲಂಡನ್​ನಿಂದ ಮಲ್ಯ ತಂದಿದ್ದ ಟಿಪ್ಪು ಸುಲ್ತಾನ್​ ಖಡ್ಗ

news18
Updated:April 18, 2018, 1:54 PM IST
ಮುಗಿದ ಕಥೆ:  ಮಾಯವಾಯಿತು ಲಂಡನ್​ನಿಂದ ಮಲ್ಯ ತಂದಿದ್ದ ಟಿಪ್ಪು ಸುಲ್ತಾನ್​ ಖಡ್ಗ
Former Indian politician and billionaire businessman Vijay Mallya, center, leaves after his extradition hearing at Westminster Magistrates Court in London, Tuesday, June 13, 2017. Mallya was arrested in London in April on behalf of authorities in India, where he is wanted on charges of money laundering and bank demands that he pay back more than a billion dollars in loans extended to his now-defunct airline. (AP Photo/Matt Dunham)
news18
Updated: April 18, 2018, 1:54 PM IST
ನ್ಯೂಸ್​ 18 ಕನ್ನಡ 

ಮೈಸೂರನ್ನು ಆಳಿದ್ದ ಟಿಪ್ಪು ಸುಲ್ತಾನ್​ ಖಡ್ಗದ ಕಥೆ ಇನ್ನು ಮುಗಿದಂತೆ. ಈ ಖಡ್ಗ ಏನಾಯಿತು, ಎಲ್ಲಿ ಹೋಯಿತು ಎಂಬ ಯಾವ ಮಾಹಿತಿಯೂ ಇಲ್ಲ.

2004ರಲ್ಲಿ ಲಂಡನ್​ನಲ್ಲಿ ನಡೆದಿದ್ದ ಖಾಸಗಿ ಹರಾಜಿನಲ್ಲಿ 1.5 ಕೋಟಿಗೆ ಈ ಖಡ್ಗವನ್ನು ಮಲ್ಯ ಭಾರತಕ್ಕೆ ತಂದಿದ್ದರು. ಆದರೆ ಈ ಖಡ್ಗ ತಂದ ನಂತರ ಮದ್ಯದ ದೊರೆಯಾಗಿದ್ದ ಮಲ್ಯ ಕುಟುಂಬಕ್ಕೆ ಕೆಟ್ಟಕಾಲ ಆಂಭವಾಗಿತ್ತಂತೆ. ಇದರಿಂದಾಗಿಯೇ 2016ರಲ್ಲಿ ಮಲ್ಯ ಇದನ್ನು ಯಾರಿಗೋ ಕೊಟ್ಟಿಬಿಟ್ಟರು ಎಂದು ಅವರ ಕುಟುಂಬದವರು ತಿಳಿಸಿದ್ದಾರೆ.

9 ಸಾವಿರ ಕೋಟಿ ಸಾಲ ಮಾಡಿ ವಿದೇಶಕ್ಕೆ ಪರಾರಿಯಾಗಿರುವ ಮಲ್ಯ ಅವರ ವಿರುದ್ಧ ಹಾಗೂ ಸಾಲ ನೀಡಿರುವ 13 ಬ್ಯಾಂಕ್​ಗಳನ್ನು ಪ್ರತಿನಿಧಿಸುತ್ತಿರುವ ವಕೀಲರು ಮಂಗಳವಾರ ಲಂಡನ್​ ಹೈಕೋರ್ಟ್​ನಲ್ಲಿ ಈ ಖಡ್ಗದ ವಿಷಯ ತೆಗೆದಿದ್ದಾರೆ. ಸದ್ಯದ ಮಾರುಕಟ್ಟೆಯಲ್ಲಿ ಈ ಖಡ್ಗದ ಬೆಲೆ 1.8 ಕೋಟಿ ಎಂದಿದ್ದಾರೆ. ಅಲ್ಲದೆ ಮಲ್ಯ ಅವರಿಂದಾಗಿ ಸಾಲ ನೀಡಿರುವ ಬ್ಯಾಂಕ್​ಗಳು ಈಗ ಅಪಾಯದಲ್ಲಿವೆ. ಮಲ್ಯ ಅವರ ಚದುರಿರುವ ಆಸ್ತಿಯಿಂದಾಗಿ ಇನ್ನೂ ಅದನ್ನು ವಶಕ್ಕೆ ತೆಗೆದುಕೊಳ್ಳುವುದು ಕಷ್ಟವಾಗುತ್ತಿದೆ. ಇನ್ನೂ ಜಾಗತಿಕವಾಗಿ ಇರುವ ಮಲ್ಯನ ಆಸ್ತಿಯ ಮೇಲೆ ಇರುವ ಫ್ರೀಜಿಂಗ್​ ಆದೇಶವನ್ನು (ಮಲ್ಯ ಈ ಆಸ್ತಿಗಳನ್ನು ಬಳಕೆ ಮಾಡುವಂತಿಲ್ಲ) ಸದ್ಯಕ್ಕೆ ತೆರವುಗೊಳಿಸಬಾರದು ಎಂದು ಮನವಿ ಮಾಡಿದ್ದಾರೆ.

ಬ್ಯಾಂಕ್​ ಹಣವನ್ನು ದುರುಪಯೋಗ ಮಾಡಿಕೊಂಡ ನಂತರ ಕಳ್ಳತನದಲ್ಲಿ ಲಂಡನ್​ಗೆ ಹಾರಿದ ಮಲ್ಯ ವಿಚಾರಣೆಗಾಗಿ ತನಿಖಾಧಿಕಾರಿಗಳು ಹಾಗೂ ಕೋರ್ಟ್​ ಮುಂದೆ ಹಾಜರಾಗಲಿಲ್ಲ.
First published:April 18, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ