• Home
 • »
 • News
 • »
 • trend
 • »
 • Pyramid: ವಿಶ್ವದ ಅತಿ ದೊಡ್ಡ ಪಿರಮಿಡ್‌ ಮರೆಯಾಗುತ್ತಿದೆ ಅಂತೆ, ಯಾವ ಪಿರಮಿಡ್​ ಅಂತ ನೀವು ತಿಳಿದುಕೊಳ್ಳಿ

Pyramid: ವಿಶ್ವದ ಅತಿ ದೊಡ್ಡ ಪಿರಮಿಡ್‌ ಮರೆಯಾಗುತ್ತಿದೆ ಅಂತೆ, ಯಾವ ಪಿರಮಿಡ್​ ಅಂತ ನೀವು ತಿಳಿದುಕೊಳ್ಳಿ

ಮೆಕ್ಸಿಕೊದ ಚೋಲುಲಾದಲ್ಲಿರುವ ಮಣ್ಣಿನಿಂದ ಮಾಡಿದ ಬೃಹತ್‌ ಪಿರಮಿಡ್‌

ಮೆಕ್ಸಿಕೊದ ಚೋಲುಲಾದಲ್ಲಿರುವ ಮಣ್ಣಿನಿಂದ ಮಾಡಿದ ಬೃಹತ್‌ ಪಿರಮಿಡ್‌

ಈಜಿಪ್ಟ್‌ನ ಗಿಜಾದಲ್ಲಿರುವ ಪಿರಮಿಡ್‌ಗಳು ಯಾರಿಗೆ ನೆನಪಿಲ್ಲ ಹೇಳಿ. ಎಲ್ಲರಿಗೂ ಅವುಗಳ ಬಗ್ಗೆ ಸಾಮಾನ್ಯವಾಗಿ ಗೊತ್ತೆ ಇರುತ್ತೆ. ಗಿಜಾದಲ್ಲಿರುವ ಪಿರಮಿಡ್‌ಗಳೇ ಜಗತ್ತಿನ ಅತ್ಯಂತ ದೊಡ್ಡ ಪಿರಮಿಡ್‌ಗಳೆಂದು ನಾವೇನಾದ್ರೂ ತಿಳ್ಕೊಂಡಿದ್ರೆ ಅದು ನಮ್ಮ ತಪ್ಪು ತಿಳುವಳಿಕೆ ಅಂತಾನೇ ಹೇಳಬಹುದು. ಯಾಕೆ ಗೊತ್ತಾ?

ಮುಂದೆ ಓದಿ ...
 • News18 Kannada
 • 4-MIN READ
 • Last Updated :
 • New Delhi, India
 • Share this:

  ಈಜಿಪ್ಟ್‌ನ (Egypt) ಗಿಜಾದಲ್ಲಿರುವ (Gija) ಪಿರಮಿಡ್‌ಗಳು (Pyramid) ಯಾರಿಗೆ ನೆನಪಿಲ್ಲ ಹೇಳಿ. ಎಲ್ಲರಿಗೂ ಅವುಗಳ ಬಗ್ಗೆ ಸಾಮಾನ್ಯವಾಗಿ ಗೊತ್ತೆ ಇರುತ್ತೆ. ಗಿಜಾದಲ್ಲಿರುವ ಪಿರಮಿಡ್‌ಗಳೇ ಜಗತ್ತಿನ ಅತ್ಯಂತ ದೊಡ್ಡ ಪಿರಮಿಡ್‌ಗಳೆಂದು ನಾವೇನಾದ್ರೂ ತಿಳ್ಕೊಂಡಿದ್ರೆ ಅದು ನಮ್ಮ ತಪ್ಪು ತಿಳುವಳಿಕೆ ಅಂತಾನೇ ಹೇಳಬಹುದು. ಏಕೆಂದರೆ ಗಿಜಾದ ಪಿರಮಿಡ್‌ಗಿಂತ ಇನ್ನೊಂದು ಪಿರಮಿಡ್‌ ದೊಡ್ಡದಾಗಿದೆ. ಅದು ಎಲ್ಲಿದೆ ಎಂಬ ಮಾಹಿತಿ (Information) ನಿಮ್ಮ ಮುಂದೆ. ಗಿಜಾದ ಗ್ರೇಟ್‌ ಪಿರಮಿಡ್‌ಗಿಂತ ಮೆಕ್ಸಿಕೊದ ಚೋಲುಲಾದಲ್ಲಿರುವ ಮಣ್ಣಿನಿಂದ ಮಾಡಿದ ಬೃಹತ್‌ ಪಿರಮಿಡ್‌ ಹಸಿರು ಬೆಟ್ಟಗಳ (Hills) ಅಡಿಯಲ್ಲಿ ಮರೆಯಾಗಿದೆ ಎನ್ನಲಾಗಿದೆ.


  ಈ ಮಣ್ಣಿನ ಪಿರಮಿಡ್‌ ಗಾತ್ರದಲ್ಲಿ ವಿಶ್ವದ ಅತಿ ದೊಡ್ಡ ಪಿರಮಿಡ್‌ ಆಗಿದೆ. ಇದೇನು ಇಷ್ಟು ದಿನ ಗಿಜಾದ ಪಿರಮಿಡ್‌ ಅತಿ ದೊಡ್ಡ ಪಿರಮಿಡ್‌ ಅಂತಿದ್ದರು. ಆದರೆ ಈಗ ಮೆಕ್ಸಿಕೊದ ಪಿರಮಿಡ್‌ ಗಿಜಾದ ಪಿರಮಿಡ್‌ಗಿಂತ ದೊಡ್ಡದಾಗಿದೆ. ಅಂದ್ರೆ ಈಜಿಪ್ಟಿನ ಪಿರಮಿಡ್‌ಗೆ ಸಿಕ್ಕಿರುವ ಮಾಧ್ಯಮ ಪ್ರಚಾರ ಮೆಕ್ಸಿಕೊದ ಪಿರಮಿಡ್‌ಗೆ ಸಿಕ್ಕಿಲ್ಲ ಅನ್ನೋದು ಸತ್ಯ.


  ಆಶ್ಚರ್ಯಕರ ಸಂಗತಿ ಏನು ಗೊತ್ತಾ?


  ಹಳೆ ಕಾಲದಲ್ಲಿ ಚೋಲುಲಾ ನಗರವು ಮೆಕ್ಸಿಕೋದ ಪವಿತ್ರ ನಗರಗಳಲ್ಲಿ ಒಂದಾಗಿತ್ತು. ಪ್ರಮುಖ ವ್ಯಾಪಾರ ಕೇಂದ್ರವಾಗಿತ್ತು. ಇಲ್ಲಿ, ನೀವು ವರ್ಷಪೂರ್ತಿ ಪಿರಮಿಡ್‌ ಅನ್ನು ವೀಕ್ಷಣೆ ಮಾಡಬಹುದು. ಈ ಪಿರಮಿಡ್‌ ಅನ್ನು ವಿವಿಧ ಮೆಸೊ ಅಮೆರಿಕನ್ ನಂಬಿಕೆಗಳ ದೇವರುಗಳಿಗೆ ಸಮರ್ಪಿಸಲಾಗಿದೆ.


  ಆಶ್ಚರ್ಯಕರ ಸಂಗತಿಯೆಂದರೆ 1519 ರಲ್ಲಿ ಸ್ಪ್ಯಾನಿಷ್ಷರು ನಗರವನ್ನು ವಶಪಡಿಸಿಕೊಂಡಾಗ, ಅವರು ಈ ರಚನೆಯ ಮೇಲೆ ನಿಂತು ಅದನ್ನು ಬೆಟ್ಟ ಎಂದು ತಪ್ಪಾಗಿ ಗ್ರಹಿಸಿದರು ಎಂಬ ನಂಬಿಕೆಗಳಿವೆ.


  ಇಂದಿಗೂ ಈ ಸ್ಥಳಕ್ಕೆ ಭೇಟಿ ನೀಡುವ ಪ್ರವಾಸಿಗರು ಈ ಪಿರಮಿಡ್‌ನ ಸಂಪೂರ್ಣ ಪ್ರಮಾಣ ಅಥವಾ ಗಾತ್ರದ ಬಗ್ಗೆ ಸೂಕ್ತ ಮಾಹಿತಿ ಇಲ್ಲದೇ ಇದನ್ನು ಅತಿ ದೊಡ್ಡ ಪಿರಮಿಡ್‌ ಎಂದು ಅರಿಯುತ್ತಿಲ್ಲ.


   As the world s largest pyramid is disappearing find out which pyramid it is
  ಮೆಕ್ಸಿಕೊದ ಚೋಲುಲಾದಲ್ಲಿರುವ ಮಣ್ಣಿನಿಂದ ಮಾಡಿದ ಬೃಹತ್‌ ಪಿರಮಿಡ್‌


  ಮಣ್ಣಿನಿಂದ ಸಂಪೂರ್ಣವಾಗಿ ಮುಚ್ಚಿಹೋದ ಪಿರಮಿಡ್‌


  ಈ ಹಿಂದೆ ಪಿರಮಿಡ್, ಗಾಳಿ ಮತ್ತು ಮಳೆಯ ಅಜ್ಟೆಕ್ ದೇವರಾದ ಕ್ವೆಟ್ಜಾಲ್‌ಕೋಟ್ಲ್‌ಗೆ ಸಮರ್ಪಿತವಾದ ಪ್ರಮುಖ ದೇವಾಲಯವಾಗಿ ಕಾರ್ಯನಿರ್ವಹಿಸುತ್ತಿತ್ತು.


  ಆದರೆ ಆಕ್ರಮಣದ ಮೊದಲು ಅದನ್ನು ಬಳಕೆ ಮಾಡಿರಲಿಲ್ಲ. ಈ ಪಿರಮಿಡ್‌ನ ಮಣ್ಣಿನ ರಚನೆಯು ಕೀಟಗಳಿಗೆ ಆಶ್ರಯದ ದಾರಿಯನ್ನು ಮಾಡಿಕೊಟ್ಟಿತು. ಇದರ ನಂತರ ಸುತ್ತಮತ್ತಲಿನ ಪ್ರದೇಶಗಳಿಂದ ಮರೆಯಾಗುತ್ತಾ ಹೋಯಿತು.


  ಕೆಲವು ದಂತಕಥೆಗಳ ಪ್ರಕಾರ, ಸ್ಪ್ಯಾನಿಷ್ ಆಕ್ರಮಣಕಾರರು ಆ ಸ್ಥಳವನ್ನು ಆಕ್ರಮಣ ಮಾಡಿದಾಗ ಸ್ಥಳೀಯರು ಪಿರಮಿಡ್ ಅನ್ನು ನಾಶವಾಗದಂತೆ ರಕ್ಷಿಸಲು ಹೆಚ್ಚಿನ ಮಣ್ಣಿನಿಂದ ಮುಚ್ಚಿದರು ಎಂದು ಹೇಳಲಾಗುತ್ತದೆ.


  ಪಿರಮಿಡ್, ಮಣ್ಣು ಮತ್ತು ಹಸಿರಿನಿಂದ ಸಂಪೂರ್ಣವಾಗಿ ಮರೆಮಾಚಲ್ಪಟ್ಟಿದೆ. ಇದು ಪ್ರಾಚೀನ ದೇವಾಲಯ ಎಂದು ಗುರುತಿಸಲು ಸ್ಪೇನ್ ದೇಶದವರು ವಿಫಲರಾದರು ಮತ್ತು ಅದನ್ನು ನೈಸರ್ಗಿಕವಾಗಿರುವ ಬೆಟ್ಟ ಎಂದು ತಪ್ಪಾಗಿ ಗ್ರಹಿಸಿದರು.


  ಇದನ್ನೂ ಓದಿ: Gold Mine: ಕೆಜಿಎಫ್ ಅನ್ನೇ ಮೀರಿಸುವಷ್ಟು ಚಿನ್ನ ಇಲ್ಲಿದ್ಯಂತೆ! ಈ ಅಣೆಕಟ್ಟಿನೊಳಗೇ ಹುದುಗಿದೆಯಾ ಸಂಪತ್ತು?


  ಈ ಪಿರಮಿಡ್‌ನ ಗಾತ್ರವೇನು?


  1,476-ಅಡಿ ಅಗಲದ ಗ್ರೇಟ್ ಪಿರಮಿಡ್ ಆಫ್ ಚೋಲುಲಾ ಅಥವಾ ಟ್ಲಾಚಿಹುಲ್ಟೆಪೆಟ್ಲ್ ಇದಾಗಿದೆ. ಇದು ತಳದಲ್ಲಿ ಒಂಬತ್ತು ಒಲಿಂಪಿಕ್ ಗಾತ್ರದ ಈಜುಕೊಳಗಳಷ್ಟು ದೊಡ್ಡದಾಗಿದೆ! ಇದು ಗಿಜಾದ ಗ್ರೇಟ್ ಪಿರಮಿಡ್‌ಗಿಂತ ನಾಲ್ಕು ಪಟ್ಟು ದೊಡ್ಡದಾಗಿದೆ.


  ಇನ್ನು ಎರಡನೆಯ ಅಂಶವೆಂದ್ರೆ ಇದರ ಎತ್ತರ. ಈ ಪಿರಮಿಡ್‌ ಎತ್ತರದಲ್ಲಿಯೂ ಸಹ ಗಿಜಾ ಪಿರಮಿಡ್‌ ಅನ್ನು ಹಿಂದಿಕ್ಕುತ್ತದೆ. ಪಿರಮಿಡ್‌ ಆಫ್‌ ಚೋಲುಲಾ ಒಟ್ಟಾರೆಯಾಗಿ ಗಾತ್ರ ಮತ್ತು ಎತ್ತರದಲ್ಲಿ ಮುಂದೆ ಇದೆ. ಇದು ಈಜಿಪ್ಟಿನ ಪಿರಮಿಡ್‌ಗಿಂತ ದ್ವಿಗುಣವಾದ ಗಾತ್ರವನ್ನು ಹೊಂದಿದೆ.


  ಪುರಾತತ್ತ್ವಜ್ಞರು ಏನ್‌ ಹೇಳ್ತಿದಾರೆ?


  19 ನೇ ಶತಮಾನದಲ್ಲಿ ಉತ್ಖನನಗಳು ಪ್ರಾರಂಭವಾದಾಗಿನಿಂದ, ಪುರಾತತ್ತ್ವಜ್ಞರು ಈ ಪ್ರಾಚೀನ ಸ್ಮಾರಕದೊಳಗೆ ಏನಾಯಿತು ಎಂಬುದನ್ನು ಅರ್ಥಮಾಡಿಕೊಳ್ಳಲು ನಿರಂತರವಾಗಿ ಅಧ್ಯಯನ ನಡೆಸುತ್ತಲೇ ಇದ್ದಾರೆ.


  ಈ ಪಿರಮಿಡ್ ಧಾರ್ಮಿಕ ಸ್ಥಳವಾಗಿದ್ದರಿಂದ, ಈ ಸ್ಥಳದಲ್ಲಿ ಯುಗಯುಗಾಂತರಗಳಿಂದ ಅನೇಕ ಧಾರ್ಮಿಕ ಆಚರಣೆಗಳು, ಬಲಿದಾನಗಳು ಮತ್ತು ಅರ್ಪಣೆಗಳು ನಡೆಯುತ್ತಲೇ ಇದ್ದವು. ಇದರ ಒಳಗೆ ಕೆತ್ತಿದ ತಲೆಬುರುಡೆಗಳ ಒಳಾಂಗಣ ಎಂದು ಕರೆಯಲ್ಪಡುವ ಸ್ಥಳವಿದೆ.


  ಅಸ್ಥಿಪಂಜರದ ಅವಶೇಷಗಳನ್ನು ಹೊಂದಿರುವ ಬಲಿಪೀಠ ಮತ್ತು ಮಕ್ಕಳ ತಲೆಬುರುಡೆಗಳು ಸೇರಿದಂತೆ ಪುರುಷರು ಮತ್ತು ಮಹಿಳೆಯರ ಸಮಾಧಿಗಳು ಇಲ್ಲಿವೆ.


  ಇನ್ನು ಅನೇಕ ರಹಸ್ಯಗಳು ಬಹಿರಂಗಗೊಳ್ಳಬೇಕಿದೆ. ವಿಶ್ವದ ಅತಿ ದೊಡ್ಡ ಪಿರಮಿಡ್‌ ಆಗಿರುವ ಇದು ಪ್ರಚಾರವನ್ನೆ ಪಡೆದಿಲ್ಲ. ಮೆಕ್ಸಿಕೋದ ಪಿರಮಿಡ್‌ಗಳು ಆಧುನಿಕ ಜಗತ್ತಿಗೆ ತಮ್ಮನ್ನು ತಾವು ಬಹಿರಂಗಗೊಳಿಸಿಕೊಳ್ಳುವ ಅವಶ್ಯಕತೆ ಖಂಡಿತ ಇದೆ.

  Published by:Gowtham K
  First published: