• ಹೋಂ
  • »
  • ನ್ಯೂಸ್
  • »
  • ಟ್ರೆಂಡ್
  • »
  • World Happiness Survey: ಸಂತೋಷವಾಗಿರೋ ದೇಶಗಳಲ್ಲಿ ಫಿನ್​ಲ್ಯಾಂಡ್ ಮೊದಲ ಸ್ಥಾನ; ಭಾರತ ಯಾವ ಪ್ಲೇಸ್​ನಲ್ಲಿದೆ?

World Happiness Survey: ಸಂತೋಷವಾಗಿರೋ ದೇಶಗಳಲ್ಲಿ ಫಿನ್​ಲ್ಯಾಂಡ್ ಮೊದಲ ಸ್ಥಾನ; ಭಾರತ ಯಾವ ಪ್ಲೇಸ್​ನಲ್ಲಿದೆ?

ಸಂತೋಷಮಯ ದೇಶ (ಸಾಂದರ್ಭಿಕ ಚಿತ್ರ)

ಸಂತೋಷಮಯ ದೇಶ (ಸಾಂದರ್ಭಿಕ ಚಿತ್ರ)

ಫಿನ್​​ಲ್ಯಾಂಡ್ ಶಾಲೆಗಳು, ಅತ್ಯುತ್ತಮ ಗೃಹ ನೀತಿ, ನಿರಾಶ್ರಿತರ ನೆಲೆ, ಆರೋಗ್ಯ ಸೇವೆ, ಕೋವಿಡ್​ ಕಾಲಘಟ್ಟದ ಸಮರ್ಥ ನಿರ್ವಹಣೆ, ಆರ್ಥಿಕ ಸಾಮಾಜಿಕ ಯಶಸ್ಸಿನಲ್ಲೂ ನಾರ್ವೆಯನ್ನು ಮೀರಿಸಿದೆ.

  • Share this:

‘ಯಾಕೋ ಖುಷಿನೇ (Happiness) ಇಲ್ಲಪ್ಪಾ! ಎಲ್ಲಿಗಾದ್ರೂ ಹೋಗಿಬಿಡೋಣ’ ಅಂತಾ ಅನ್ನಿಸಿದ್ರೆ ನೀವು ಖಂಡಿತಾ ಫಿನ್​​ಲ್ಯಾಂಡ್​ಗೆ (Finland) ಹೋಗಬಹುದು. ಯಾಕಂದ್ರೆ ವರ್ಲ್ಡ್​ ಹ್ಯಾಪಿನೆಸ್​​ ವರದಿ (Happiness Report) ಹೇಳುತ್ತೆ ಫಿನ್​​ಲ್ಯಾಂಡ್​ ಪ್ರಪಂಚದಲ್ಲೇ ಹೆಚ್ಚು ಸಂತೋಷವಾಗಿರುವ ದೇಶ ಅಂತ. ಆದ್ರೆ ನಮ್ಮ ಭಾರತ (India) ದೇಶಕ್ಕೆ ಇದರಲ್ಲಿ 125 ನೇ ಸ್ಥಾನ ದಕ್ಕಿದೆ. ಅರೇ, ಅಂತಹ ವಿಶೇಷತೆ ಫಿನ್​ಲ್ಯಾಂಡ್​ನಲ್ಲಿ ಏನಿದೆ ಅಂತೀರಾ? ಖಂಡಿತಾ ಇದೆ. ಫಿನ್​​ಲ್ಯಾಂಡ್​ ಏರ್​ಪೋರ್ಟ್​​ನಿಂದಲೇ (Finland Airport) ನಿಮಗೆ ಒತ್ತಡ ರಹಿತ ಸುವ್ಯವಸ್ಥಿತ ಕ್ಷಣಗಳು ಆರಂಭವಾಗುತ್ತವೆ. ಇಲ್ಲಿ ಏರ್​ಪೋರ್ಟ್​ ಕೂಡ ಉತ್ತರ ಯುರೋಪ್​ನಲ್ಲೇ (Europe) ಬೆಸ್ಟ್ ಎನ್ನುವ ಹೆಗ್ಗಳಿಕೆ ಇದೆ. ಅಲ್ಲಿಂದ ಸಾರ್ವಜನಿಕ ಸಾರಿಗೆಯಲ್ಲೂ ನಿಮ್ಮ ಪರ್ಸ್​​ ಫುಲ್​ ಖುಷ್ ಆಗಿಬಿಡತ್ತೆ.


ಅತ್ಯುತ್ತಮ ಸಾರಿಗೆ


ಸಾರಿಗೆಗಾಗಿ ಗಂಟೆ ಗಟ್ಟಲೇ ಕಾಯುವಿಕೆಯೂ ಇಲ್ಲ. ಅಷ್ಟೇ ಅಲ್ಲದೇ ಅಲ್ಲಿ ಎಲ್ಲರೂ ಆದಷ್ಟು ದೈಹಿಕವಾಗಿ, ಮಾನಸಿಕವಾಗಿ ಆರೋಗ್ಯವಂತರಾಗಿರುವ ಜನರು ನಿಮ್ಮನ್ನು ಭೇಟಿಯಾಗ್ತಾರೆ. ನಗು, ಧಾವಂತವಿಲ್ಲದ ಜನರನ್ನು ನೋಡಿದ್ರೆ ನಿಮಗೆ ಗುಡ್​ ವೈಬ್ಸ್​ ಫೀಲ್ ಆಗುತ್ತೆ..


ಆರೋಗ್ಯ ದುಬಾರಿಯಲ್ಲ


ಫಿನ್​ಲ್ಯಾಂಡ್​ನಲ್ಲಿ ಕೆಲವು ದೇಶಗಳಂತೆ ದುಡಿದ ದುಡ್ಡೆಲ್ಲಾ ಖಾಸಗಿ ಆಸ್ಪತ್ರೆ ಖಜಾನೆ ಸೇರುವುದಿಲ್ಲ. ಇಲ್ಲಿ ತೆರಿಗೆ ಹಣದ ಸಮಗ್ರ ಬಳಕೆ ಆರೋಗ್ಯಕ್ಕೆ ಮೀಸಲಿದೆ.


ವಿಕೇಂದ್ರಿಕೃತ ಸಾರ್ವಜನಿಕ ನಿಧಿ ಆರೋಗ್ಯ ವ್ಯವಸ್ಥೆ ಸೌಲಭ್ಯವಿದೆ. ಕಡಿಮೆ ಮತ್ತು ಹೆಚ್ಚಿನ ಆದಾಯ ಇರುವ ಎಲ್ಲರಿಗೂ ಇಲ್ಲಿ ಚಿಕಿತ್ಸೆ ಲಭ್ಯವಿದೆ. ಇದೇ ಕಾರಣಕ್ಕೆ ಇಲ್ಲಿ ಖಾಸಗಿ ಆಸ್ಪತ್ರೆಗಳು ಕಡಿಮೆ. ಆ ಮೂಲಕ ದುಡಿಮೆಯ ಬಹುತೇಕ ಹಣ ಜನರ ಬಳಿಯೇ ಉಳಿದು ನೆಮ್ಮದಿಯ ನಿಟ್ಟುಸಿರಿಗೆ ಕಾರಣವಾಗಿದೆ.


ಆರೋಗ್ಯದ ಬಗ್ಗೆ ಜಾಗೃತಿ


ಅಷ್ಟೇ ಅಲ್ಲದೇ ಆರೋಗ್ಯದ ಬಗ್ಗೆ ನಿರಂತರವಾಗಿ ಜಾಗೃತಿ ಮೂಡಿಸಲಾಗುತ್ತದೆ. ಪರಿಣಾಮ ಅನಾರೋಗ್ಯದ ಸಮಸ್ಯೆ ಕಡಿಮೆ.


As per World Happiness Report Finland ranks first stg mrq
ಸಂತೋಷಮಯ ದೇಶ (ಸಾಂದರ್ಭಿಕ ಚಿತ್ರ)


ವಿಶ್ವ ಅಸಮಾನತೆಯ ಡೇಟಾ ಬೇಸ್​ ಪ್ರಕಾರ ಫಿನ್​ಲ್ಯಾಂಡ್​ನ ಜನರು ಎಲ್ಲಾ ಆದಾಯದ 33 % ಭಾಗ ಮನೆಗೆ ತೆಗೆದುಕೊಂಡು ಹೋಗುತ್ತಾರೆ. ಈ ಪ್ರಮಾಣ ಯುಕೆಯಲ್ಲಿ 36% ಇದ್ದು, ಅಮೆರಿಕಾದಲ್ಲಿ 46% ಇದೆ.


ಇದಕ್ಕೆ ಕಾರಣ ಮಿತವಾದ ಆದಾಯ ಅವರನ್ನು ಭಯದಿಂದ ಮುಕ್ತರನ್ನಾಗಿಸಿದೆ. ಇದು ಕೆಟ್ಟ ಅಭ್ಯಾಸ, ಕೆಟ್ಟ ಹೂಡಿಕೆ, ಅಸಮರ್ಪಕ ಜೀವನ ಶೈಲಿ, ಸಂಪತ್ತಿನ ಕಳವು ಈ ಭಯವನ್ನು ನಿಯಂತ್ರಿಸಿದೆ.


ನಾರ್ವೆ ಮತ್ತು ಫಿನ್​ಲ್ಯಾಂಡ್​ ಹೋಲಿಕೆ


ಈ ದೇಶಗಳು ಹೆಚ್ಚು ಸಂತೋಷದ ದೇಶಗಳು ಎನ್ನಲಾಗುತ್ತದೆ. ಆದರೆ ಫಿನ್​​ಲ್ಯಾಂಡ್ ಶಾಲೆಗಳು, ಅತ್ಯುತ್ತಮ ಗೃಹ ನೀತಿ, ನಿರಾಶ್ರಿತರ ನೆಲೆ, ಆರೋಗ್ಯ ಸೇವೆ, ಕೋವಿಡ್​ ಕಾಲಘಟ್ಟದ ಸಮರ್ಥ ನಿರ್ವಹಣೆ, ಆರ್ಥಿಕ ಸಾಮಾಜಿಕ ಯಶಸ್ಸಿನಲ್ಲೂ ನಾರ್ವೆಯನ್ನು ಮೀರಿಸಿದೆ.


ಫಿನ್​ಲ್ಯಾಂಡ್, ನಾರ್ವೆಗಿಂತಲೂ ಹಂಗೇರಿ ಆದಾಯದಲ್ಲಿ ಹೆಚ್ಚಿನ ವ್ಯತ್ಯಾಸವಿಲ್ಲ. ಆದರೂ ಅದು ಹಿಂದಿದೆ. ಸಂಪೂರ್ಣ ಪ್ರಜಾಪ್ರಭುತ್ವವಿಲ್ಲ.




ಸಾಮಾಜಿಕ ವ್ಯವಸ್ಥೆಯ ಕೊರತೆ


ಭಾರತ ಮತ್ತು ಟರ್ಕಿ ಎಡವಿರುವುದು ಎಲ್ಲಿ ಎನ್ನುವುದನ್ನು ವಿಮರ್ಶಿಸಲಾಗಿದೆ. ಸ್ವಾತಂತ್ರ್ಯದ ಭಯವೂ ಅಸಂತೋಷಕ್ಕೆ ಕಾರಣವಾಗಬಹುದು. ಇನ್ನೂ ದಕ್ಷಿಣ ಆಫ್ರಿಕಾ ಮತ್ತು ಚೀನಾ ಕೂಡ ತಮ್ಮ ಆದಾಯದ ಅಸಮಾನತೆ ನಡುವೆ ಸಂತೋಷವಾಗಿವೆ.


ಇದನ್ನೂ ಓದಿ:  Snailfish: ಜಪಾನ್‌ ಸಮುದ್ರದಾಳದಲ್ಲಿ ಕಾಣಿಸಿತು ಸ್ನೈಲ್​​ ಫಿಶ್! 8 ಸಾವಿರ ಮೀಟರ್‌ ಆಳಕ್ಕೆ ಹೋಗಿ ವಿಡಿಯೋ ಸೆರೆ ಹಿಡಿದ ವಿಜ್ಞಾನಿಗಳು


ಇಸ್ರೇಲ್​ ಕೂಡ 2022 ರ ಪ್ರತಿಭಟನೆ ನಂತರ ಸ್ವಲ್ಪ ಸುಧಾರಿಸಿಕೊಂಡಿದೆ. ಮಾನವ ಪ್ರತಿಭೆ ಮತ್ತು ಯೋಗಕ್ಷೇಮ ನಮ್ಮ ಶಕ್ತಿ. ನಮ್ಮ ಜಿಡಿಪಿ 8 ಪ್ರತಿಶತವನ್ನು ಶಿಕ್ಷಣಕ್ಕೆ ಹೂಡಿಕೆ ಮಾಡಲಾಗಿದೆ.


ಹೆಚ್ಚಿನ ಸಾಮಾಜಿಕ ಸಹಕಾರ, ಉತ್ತಮ ನಿರ್ಧಾರಕ್ಕೆ ಅವಕಾಶ, ಭ್ರಷ್ಟಚಾರರಹಿತ ವ್ಯವಸ್ಥೆ, ಆದಾಯದ ವಿಚಾರದಲ್ಲಿ ಸಮಾನತೆ, ಶಿಕ್ಷಣ, ವಸತಿ, ಆರೋಗ್ಯ ಮತ್ತು ಸ್ವಾತಂತ್ರ್ಯವು ಮನುಷ್ಯನನ್ನು ವ್ಯವಸ್ಥೆಯಲ್ಲಿ ಸಂತೋಷವಾಗಿಡುತ್ತದೆ.

First published: