ಎಷ್ಟೋ ಬಾರಿ ನಾವು ಒಂದು ನಗರದಿಂದ (Place) ಇನ್ನೊಂದು ನಗರಕ್ಕೆ ವಿಮಾನದಲ್ಲಿ ಪ್ರಯಾಣ ಬೆಳೆಸಿರುತ್ತೇವೆ. ಆಗ ನಮಗೆ ಬೇರೆ ಸಾರಿಗೆ ವ್ಯವಸ್ಥೆಗಳಲ್ಲಿ (Transportation System) ಪ್ರಯಾಣಿಸಿದಕ್ಕಿಂತಲೂ ತುಂಬಾನೇ ಸಮಯ ಮತ್ತು ಶಕ್ತಿ ಎರಡು ಉಳಿದಿರುತ್ತದೆ. ಆದರೆ ವಿಮಾನ ನಿಲ್ದಾಣಕ್ಕೆ (Airport) ಬಂದು ಇಳಿದಾಗ, ನಾವು ಹೋಗಬೇಕಾದ ಸ್ಥಳಕ್ಕೆ ಹೋಗಿ ತಲುಪಲು ನಗರದಲ್ಲಿರುವ ಕ್ಯಾಬ್ಗಳನ್ನು ಬುಕ್ ಮಾಡಿದರೆ ನಮಗೆ ವಿಮಾನದ ಟಿಕೆಟ್ ಗೆ (Flight Ticket) ಕೊಟ್ಟ ಹಣಕ್ಕಿಂತಲೂ ಹೆಚ್ಚು ಈ ಕ್ಯಾಬ್ ಗಳಿಗೆ ನೀಡಬೇಕಾಗಿ ಬರುತ್ತದೆ.
ಇಲ್ಲಿಯೂ ಸಹ ನಾವು ಇಂತಹದೇ ಒಂದು ಘಟನೆಯನ್ನು ನೋಡುತ್ತೇವೆ ನೋಡಿ. ಒಬ್ಬ ವ್ಯಕ್ತಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದು ಅಲ್ಲಿಂದ ಎಲೆಕ್ಟ್ರಾನಿಕ್ ಸಿಟಿಗೆ ಹೋಗೋದಕ್ಕೆ ಉಬರ್ ಕ್ಯಾಬ್ ಬುಕ್ ಮಾಡಲು ಪ್ರಯತ್ನಿಸಿದ್ದಾರಂತೆ. ನಂತರ ಆ ವ್ಯಕ್ತಿ ರೈಡರ್ ಅಪ್ಲಿಕೇಶನ್ನಲ್ಲಿ ತೋರಿಸಿದ ಪ್ರಯಾಣ ದರವನ್ನು ನೋಡಿ ಒಂದು ಕ್ಷಣ ಆಘಾತಕ್ಕೊಳಗಾಗಿದ್ದಾರೆ. ಏಕೆಂದರೆ ಆ ಪ್ರಯಾಣದ ದರವು 2500 ರಿಂದ 4000 ರೂಪಾಯಿಯವರೆಗೂ ಇದೆ.
ಟ್ವಿಟ್ಟರ್‌ನಲ್ಲಿ ಹಂಚಿಕೊಂಡ ಸ್ಕ್ರೀನ್‌ಶಾಟ್ ನಲ್ಲಿರುವ ಪ್ರಯಾಣದ ದರಗಳು ನೋಡಿ ಹೇಗಿವೆ?
ಟ್ವಿಟ್ಟರ್ ನಲ್ಲಿ ಹಂಚಿಕೊಂಡ ಸ್ಕ್ರೀನ್‌ಶಾಟ್ ನಲ್ಲಿ ತೋರಿಸಿದ ಉಬರ್ ಕ್ಯಾಬ್ ಶುಲ್ಕವು ತನ್ನ ವಿಮಾನದ ಟಿಕೆಟ್ ಗಾಗಿ ಪಾವತಿಸಿದ ಶುಲ್ಕಕ್ಕೆ ತುಂಬಾನೇ ಹತ್ತಿರದಲ್ಲಿದೆಯಂತೆ ಎಂದು ಆ ವ್ಯಕ್ತಿ ಹೇಳಿದ್ದಾರೆ. ವಿಮಾನ ನಿಲ್ದಾಣ ಮತ್ತು ಎಲೆಕ್ಟ್ರಾನಿಕ್ ಸಿಟಿಯ ನಡುವಿನ ಅಂತರವು 50 ಕಿಲೋ ಮೀಟರ್ ಇದೆ ಎಂದು ಆ ವ್ಯಕ್ತಿಯು ಸಾಮಾಜಿಕ ಮಾಧ್ಯಮ ಬಳಕೆದಾರರಿಗೆ ನೀಡಿದ ಉತ್ತರವೊಂದರಲ್ಲಿ ದೃಢಪಡಿಸಿದ್ದಾರೆ.
Uber fare to Bangalore Airport from E-City
Cost of cab fare is dangerously close to what I paid for the flight ticket 😭 pic.twitter.com/FUw9jygeMh
— Badass Dad 🚬 🍺 (@Badass_Superdad) May 23, 2023
ಈ ಸ್ಕ್ರೀನ್‌ಶಾಟ್ ನಲ್ಲಿ ತೋರಿಸಿರುವಂತೆ ಕಡಿಮೆ ವೆಚ್ಚದ ಕ್ಯಾಬ್ ಎಂದರೆ ಅದು ಉಬರ್ ಪ್ರೀಮಿಯರ್ ನಲ್ಲಿದ್ದು, ಅದು 2,584 ರೂಪಾಯಿ ಆಗಿದೆ. ಅದೇ ಉಬರ್ ಎಕ್ಸ್ ಎಲ್‌ನಲ್ಲಿ ಕ್ಯಾಬ್ ಬುಕ್ ಮಾಡಿದರೆ, ಅದರ ಪ್ರಯಾಣದ ದರವು 4,051 ರೂಪಾಯಿ ಆಗಿದೆ. ಇಲ್ಲಿರುವ ಕ್ಯಾಬ್ ನ ಪ್ರಯಾಣ ದರಗಳು ಬೆಂಗಳೂರಿನಿಂದ ಮುಂಬೈ, ಪುಣೆ ಮತ್ತು ಹೈದರಾಬಾದ್ ಗೆ ಹೋಗುವ ವಿಮಾನದ ಟಿಕೆಟ್ ದರಕ್ಕೆ ತುಂಬಾನೇ ಹತ್ತಿರದಲ್ಲಿದೆ ಅಂತ ಹೇಳಲಾಗುತ್ತಿದೆ.
ಸಿಕ್ಕಾಪಟ್ಟೆ ವೈರಲ್ ಆಗಿದೆ ಈ ಪ್ರಯಾಣದ ದರದ ಹೋಲಿಕೆ ಪೋಸ್ಟ್
ಈ ಟ್ವೀಟ್ ಈಗಾಗಲೇ 88 ಸಾವಿರಕ್ಕೂ ಹೆಚ್ಚು ವೀಕ್ಷಣೆಗಳನ್ನು ಮತ್ತು 800 ಕ್ಕೂ ಹೆಚ್ಚು ಲೈಕ್ ಗಳನ್ನು ಗಳಿಸಿದೆ. ಇಷ್ಟೇ ಅಲ್ಲದೆ ಈ ಟ್ವೀಟ್ ಹಲವಾರು ಕಾಮೆಂಟ್ ಗಳನ್ನು ಸಹ ಪಡೆದಿದೆ. ಕೆಲವರು ಬಸ್ ನಲ್ಲಿ ಹೋಗಿ, ಇಲ್ಲ ನಡೆದುಕೊಂಡು ಹೋಗಿ ಅಂತ ಹೇಳಿದರೆ, ಇನ್ನೂ ಕೆಲವರು ‘ಏನಿದು ಇಷ್ಟೊಂದು ಬೆಲೆ ದುಬಾರಿಯಾಗಿದೆ’ ಅಂತ ಕಾಮೆಂಟ್ ಮಾಡಿದ್ದಾರೆ.
ಇದನ್ನು ನೋಡಿದ ಸಾಮಾಜಿಕ ಮಾಧ್ಯಮ ಬಳಕೆದಾರರೊಬ್ಬರು “ಈ ಬೆಲೆ ನೋಡಿದರೆ, ಮತ್ತೆ ನೀವು ಬಂದ ವಿಮಾನದಲ್ಲಿಯೇ ಮನೆಗೆ ವಾಪಾಸ್ ಹೋಗಿ” ಅಂತ ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು “ಬರೀ ವಿಮಾನದ ಟಿಕೆಟ್ ದರ ಮತ್ತು ಕ್ಯಾಬ್ ದರ ಅಷ್ಟೇ ಅಲ್ಲ, ಪ್ರಯಾಣದ ಸಮಯ ಸಹ ಅಷ್ಟೇ ಆಗಿದೆ” ಅಂತ ಹೇಳಿದ್ದಾರೆ.
“ಬಡವರು ಇನ್ನೇನು ಮಾಡೋದು, ಎರಡು ದಿನಗಳ ಮುಂಚೆಯೇ ವಿಮಾನ ನಿಲ್ದಾಣದಿಂದ ನಡೆದುಕೊಂಡು ಹೋಗುವುದಕ್ಕೆ ಶುರು ಮಾಡಬೇಕು ಅಷ್ಟೇ” ಅಂತ ಮೂರನೇಯ ಬಳಕೆದಾರರು ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ