Dogs Tears: ನಾಯಿಗಳೂ ಅಳುತ್ತವೆ ಗೊತ್ತಾ! ಏನೆನ್ನುತ್ತಾರೆ ಪ್ರಾಣಿ ತಜ್ಞರು?

ನಮ್ಮ ಮನೆಯಲ್ಲಿ ಸಾಕಿರುವ ಶ್ವಾನಗಳು ಅಳುತ್ತವೆಯೇ? ನೀವು ನೋಡಿದ್ದೀರಾ? ಅಯ್ಯೋ ಶ್ವಾನಗಳು ಅಳುವುದಾ? ಎಂದು ನೀವು ಮೂಗು ಮುರಿದರೆ, ಅಧ್ಯಯನಗಳು ಈ ಮಾತಿಗೆ ಹೌದು ಎನ್ನುತ್ತಿವೆ! ಬಹಳ ದಿನಗಳ ನಂತರ ಶ್ವಾನಗಳ ಮಾಲೀಕ ಎದುರಿಗೆ ಬಂದಾಗ ಶ್ವಾನಗಳು ಕಣ್ಣು ತುಂಬಿಕೊಳ್ಳುವುದು ಅಧ್ಯಯನಗಳಿಂದ ತಿಳಿದು ಬಂದಿದೆ!

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ವಾಷಿಂಗ್ಟನ್: ಶ್ವಾನಗಳೆಂದರೆ  (Dogs) ಎಲ್ಲರಿಗೂ ಅಚ್ಚುಮೆಚ್ಚು. ಅವುಗಳ ಮೋಡಿಗೆ ಮನಸೋಲದೇ ಇರುವವರು ಯಾರೂ ಇಲ್ಲ. ಅವುಗಳನ್ನು ಒಮ್ಮೆ ನೀವು ಬಾಚಿ ತಬ್ಬಿಬಿಟ್ಟರೆ ಸಾಕು, ಜೀವನಪರ್ಯಂತ ನಿಮ್ಮ ಸಹವಾಸಿಗಳಾಗಿ ನಿಮ್ಮ ಜೊತೆಯೇ ಇದ್ದು ಬಿಡುತ್ತವೆ. ಅಂತಹ ಪ್ರೀತಿಪಾತ್ರ (Lovable) ಶ್ವಾನಗಳ ಬಗ್ಗೆ ಇಲ್ಲಿ ಒಂದು ಸಂಶೋಧನಾ ಅಧ್ಯಯನವು ಅಚ್ಚರಿಯ ಸಂಗತಿಯನ್ನು ಹೊರ ಹಾಕಿದೆ. ಆ ಸಂಗತಿ ಏನು? ಶ್ವಾನಗಳ ನಡವಳಿಕೆಯನ್ನು ಈ ಅಧ್ಯಯನವು (Study) ತಿಳಿಸುತ್ತದೆಯೇ? ನಮ್ಮ ಮನೆಯಲ್ಲಿ ಸಾಕಿರುವ ಶ್ವಾನಗಳು ಅಳುತ್ತವೆಯೇ (Cry)? ನೀವು ನೋಡಿದ್ದೀರಾ? ಅಯ್ಯೋ ಶ್ವಾನಗಳು ಅಳುವುದಾ? ಎಂದು ನೀವು ಮೂಗು ಮುರಿದರೆ, ಅಧ್ಯಯನಗಳು ಈ ಮಾತಿಗೆ ಹೌದು ಎನ್ನುತ್ತಿವೆ. ಈ ಎಲ್ಲ ಮಾಹಿತಿಗಳನ್ನು ನಾವಿಂದು ಈ ಲೇಖನದಲ್ಲಿ ಸವಿಸ್ತಾರವಾಗಿ ತಿಳಿಯೋಣ.

ಬಹಳ ದಿನಗಳ ನಂತರ ಶ್ವಾನಗಳ ಮಾಲೀಕ ಎದುರಿಗೆ ಬಂದಾಗ ಶ್ವಾನಗಳು ಕಣ್ಣು ತುಂಬಿಕೊಳ್ಳುವುದು ಅಧ್ಯಯನಗಳಿಂದ ತಿಳಿದು ಬಂದಿದೆ. ಹಾಗಿದ್ರೆ ಅಧ್ಯಯನಗಳು ಏನ್‌ ಹೇಳುತ್ತಿವೆ ಎಂಬುದನ್ನು ಇಲ್ಲಿ ನೋಡಿ.

ಹಾಗಿದ್ರೆ ಸಂಶೋಧನಾ ಅಧ್ಯಯನ ತಜ್ಞರು ಏನ್‌ ಹೇಳ್ತಿದಾರೆ?
ಶ್ವಾನಗಳು ಕಣ್ಣಿರು ಸುರಿಸುವುದರ ಬಗ್ಗೆ "ಶ್ವಾನಗಳು ತಮ್ಮ ಸಕಾರಾತ್ಮಕ ಭಾವನೆಗಳೊಂದಿಗೆ ತಮ್ಮ ಶ್ವಾನ ಬಳಗದ ಮುಂದೆ ಕಣ್ಣೀರು ಸುರಿಸುವುದನ್ನು ನಾವು ಅಧ್ಯಯನದಿಂದ ಕಂಡುಕೊಂಡಿದ್ದೇವೆ" ಎಂದು ಜಪಾನ್‌ನ ಅಜಾಬು ವಿಶ್ವವಿದ್ಯಾಲಯದ ಟೇಕ್‌ಫುಮಿ ಕಿಕುಸುಯಿ ಸಂಶೋಧನಾ ತಜ್ಞರು ಹೇಳುತ್ತಾರೆ.

ಇದನ್ನೂ ಓದಿ: Video: ವಿಶ್ವದ ವಿಷಕಾರಿ ಪಕ್ಷಿ ಇದು! ಭಾರತದಲ್ಲಿದೆಯಾ ಈ ಡೇಂಜರಸ್​ ಹಕ್ಕಿ?

ಸಂಶೋಧನಾ ತಜ್ಞ ಕಿಕುಸುಯಿ ಮತ್ತು ಅವರ ವಿಶ್ವವಿದ್ಯಾಲಯದ ಸಹೋದ್ಯೋಗಿಗಳ ಪ್ರಕಾರ “6 ವರ್ಷಗಳ ಹಿಂದೆ ಅವರ ಎರಡು ಶ್ವಾನ ಮರಿಗಳಲ್ಲಿ ಒಂದು ಶ್ವಾನ ಮರಿಯನ್ನು ತೆಗೆದುಕೊಂಡು ಸಂಶೋಧನೆ ಮಾಡಿದಾಗ ಆಶ್ಚರ್ಯವಾದ ಸಂಗತಿ ಹೊರ ಬಿದ್ದಿತು. ಅದೇನೆಂದರೆ ಅವರ ಶ್ವಾನವು ತನ್ನ ಶ್ವಾನ ಮರಿಗಳಿಗೆ ಶುಶ್ರೂಷೆ ಮಾಡುತ್ತಿದ್ದಾಗ, ಅದರ ಮುಖದಲ್ಲಿ ಏನೋ ಬದಲಾವಣೆ ಕಾಣುತ್ತಿರುವುದನ್ನು ಅವರು ಗಮನಿಸಿದರು. ಆ ಶ್ವಾನದ ಕಣ್ಣಿನಲ್ಲಿ ಕಣ್ಣೀರು ಇರುವುದನ್ನು ಗಮನಿಸಿದ್ದಾರೆ. ಆ ಕಣ್ಣೀರು ಕಣ್ಣಿನಿಂದ ಹೊರಗಡೆ ಬರದೇ ಇದ್ದರೂ ಕೂಡ ಕಣ್ಣಿನಲ್ಲಿ ಕಣ್ಣೀರು ಇರುವುದರ ಜೊತೆಗೆ ಅವುಗಳ ಮುಖ ಭಾವವು ಬದಲಾವಣೆ ಆಗುತ್ತಿರುವುದು ಸಂಶೋಧನೆಯಿಂದ ತಿಳಿದು ಬಂದಿದೆ. ಆಕ್ಸಿಟೋಸಿನ್ ಕಣ್ಣೀರನ್ನು ಹೆಚ್ಚಿಸಬಹುದು ಎಂಬ ಕಲ್ಪನೆಯನ್ನು ಸಹ ಈ ಅಧ್ಯಯನವು ನಮಗೆ ನೀಡಿದೆ” ಎಂದು ಕಿಕುಸುಯಿ ಹೇಳುತ್ತಾರೆ.

ಅವರು ತಮ್ಮ ಮಾತು ಮುಂದುವರಿಸುತ್ತಾ, “ಆಕ್ಸಿಟೋಸಿನ್ ಅನ್ನು ಪ್ರೀತಿಯ ಹಾರ್ಮೋನ್ ಎಂದು ಕರೆಯಲಾಗುತ್ತದೆ. ತಾಯಿ ಶ್ವಾನಗಳು ತಮ್ಮ ಪ್ರೀತಿಯ ಶ್ವಾನ ಮರಿಗಳ ಜೊತೆ ಆಟವಾಡುವಾಗ ಅವುಗಳಲ್ಲಿ ಉಂಟಾಗುವ ಪ್ರೀತಿಯ ಭಾವನೆಯಿಂದ ಈ ಆಕ್ಸಿಟೋಸಿನ್ ಹಾರ್ಮೊನ್‌ ಬಿಡುಗಡೆಯಾಗುತ್ತದೆ ಎಂದು ಹಿಂದೆ ನಡೆಸಿದ ಅಧ್ಯಯನಗಳಿಂದ ಸಂಶೋಧಕರು ತಿಳಿದಿದ್ದರು. ಆದ್ದರಿಂದ, ಅವರು ಇದು ಸತ್ಯವೇ ಎಂಬುದನ್ನು ಮತ್ತೆ ಮನಗಾಣಲು ಮರು ಪ್ರಯೋಗವನ್ನು ನಡೆಸಲು ನಿರ್ಧರಿಸಿದರು ಮತ್ತು ಆಕ್ಸಿಟೋಸಿನ್‌ ಹಾರ್ಮೊನ್‌ ಶ್ವಾನಗಳಿಗೆ ಕಣ್ಣೀರು ತರುತ್ತದೆಯೇ ಎಂದು ತಿಳಿಯಲು ಈ ಹೊಸ ಸಂಶೋಧನಾ ಅಧ್ಯಯನವನ್ನು ಕೈಗೊಳ್ಳಲು ನಿರ್ಧರಿಸಿದ್ದರು.

ಈ ಸಂಶೋಧನೆಯನ್ನು ಹೇಗೆ ನಡೆಸಲಾಯಿತು?
ಮೊದಲನೆಯದಾಗಿ, ಶ್ವಾನಗಳು ತಮ್ಮ ಮನೆ ಮಾಲೀಕರು ಅಥವಾ ತಾಯಿ ಶ್ವಾನ ಅಥವಾ ಹಿರಿಯ ಶ್ವಾನಗಳ ಜೊತೆ ಮತ್ತೆ ಒಂದಾಗುವ ಮೊದಲು ಮತ್ತು ನಂತರ ಶ್ವಾನಗಳ ಕಣ್ಣೀರಿನ ಪ್ರಮಾಣವನ್ನು ಅಳೆಯಲು ಪ್ರಮಾಣಿತ ಪರೀಕ್ಷೆಯನ್ನು ಮಾಡಿದರು. ಶ್ವಾನಗಳು ಪರಿಚಿತ ವ್ಯಕ್ತಿಯೊಂದಿಗೆ ಮತ್ತೆ ಒಟ್ಟಿಗೆ ಸೇರಿದಾಗ ಕಣ್ಣೀರಿನ ಪ್ರಮಾಣವು ನಿಜವಾಗಿಯೂ ಹೆಚ್ಚಾಗಿದೆ ಎಂದು ಅವರು ಕಂಡುಕೊಂಡರು. ಪರಿಚಯವಿಲ್ಲದ ವ್ಯಕ್ತಿ ಅಥವಾ ಪ್ರಾಣಿಗಳನ್ನು ನೋಡಿದಾಗ ಅವುಗಳಲ್ಲಿ ಯಾವುದೇ ಭಾವನೆ ಕಾಣಿಸಿಕೊಂಡಿಲ್ಲದೇ ಇರುವುದು ಈ ಸಂಶೋಧನೆಯಿಂದ ಕಂಡುಬಂದಿದೆ.

ಇನ್ನು ಎರಡನೆಯದಾಗಿ ಶ್ವಾನಗಳ ಕಣ್ಣುಗಳಿಗೆ ಆಕ್ಸಿಟೋಸಿನ್ ಅನ್ನು ಸೇರಿಸಿದಾಗ, ಅವುಗಳ ಕಣ್ಣೀರಿನ ಪ್ರಮಾಣವೂ ಹೆಚ್ಚಾಯಿತು. ಇದರಿಂದ ಶ್ವಾನಗಳು ತಮ್ಮ ಪ್ರೀತಿ ಪಾತ್ರರನ್ನು ನೋಡಿದಾಗ ಕಣ್ಣೀರು ಸುರಿಸುತ್ತವೆ ಎಂಬುದು ಸತ್ಯವಾಗಿದೆ.

ಇದನ್ನೂ ಓದಿ:  Video: ಕೈಚಳಕದಿಂದ ಕಾಳಿಂಗ ಸರ್ಪವನ್ನು ಹಿಡಿದ ವ್ಯಕ್ತಿ! ದೃಶ್ಯ ನೋಡಿದ್ರೆ ಮೈ ಜುಂ ಅನ್ನುತ್ತೆ

ಇದರಿಂದ ತಿಳಿದು ಬರುವ ಸಂಗತಿ ಎಂದರೆ ಶ್ವಾನಗಳು ಸಂಘಜೀವಿಗಳೆಂದು ಮತ್ತೊಮ್ಮೆ ನಿರೂಪಿಸಲಾಗಿದೆ. ಮನುಷ್ಯರ ಜೀವನದಲ್ಲಿ ಶ್ವಾನಗಳಿಗೂ ಅತ್ಯಂತ ಮಹತ್ವದ ಪಾತ್ರವಿದೆ ಎಂದು ಈ ಅಧ್ಯಯನಗಳಿಂದ ತಿಳಿದು ಬರುತ್ತದೆ. ಮನುಷ್ಯ ಮತ್ತು ಶ್ವಾನಗಳಿಗೆ ಇರುವ ಸಂಬಂಧ ಅವಿನಾಭಾವ ಸಂಬಂಧವಾಗಿದೆ.
Published by:Ashwini Prabhu
First published: