• Home
  • »
  • News
  • »
  • trend
  • »
  • Viral News: ವಿಮಾನ ಹಾರಾಟದ ಸಮಯದಲ್ಲಿ ಪೈಲಟ್‌ಗಳಿಂದ ಹೆಚ್ಚಾದ ತಪ್ಪುಗಳು: ಎಲ್ಲದಕ್ಕೂ ಕಾರಣ ಕೊರೊನಾ..!

Viral News: ವಿಮಾನ ಹಾರಾಟದ ಸಮಯದಲ್ಲಿ ಪೈಲಟ್‌ಗಳಿಂದ ಹೆಚ್ಚಾದ ತಪ್ಪುಗಳು: ಎಲ್ಲದಕ್ಕೂ ಕಾರಣ ಕೊರೊನಾ..!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Pilot: ಕೆಲವು ವಲಯಗಳಲ್ಲಿ ಹೆಚ್ಚಿನ ಮೇಲ್ವಿಚಾರಣೆಯ ಅಗತ್ಯವಿದೆ ಎಂದು ಪುರಾವೆಗಳು ಸೂಚಿಸುತ್ತವೆ. ಕಾಕ್‌ಪಿಟ್‌ನಲ್ಲಿ ಹೆಚ್ಚು ನುರಿತ ಸಿಬ್ಬಂದಿ ಸೇರಿಸುವುದು ಮತ್ತು ಹೆಚ್ಚುವರಿ ಸಿಮ್ಯುಲೇಟರ್ ಸೆಷನ್‌ಗಳನ್ನು ನಡೆಸುವುದು ಮೊದಲಾದ ಹೆಚ್ಚುವರಿ ಸುರಕ್ಷತೆಯ ಕ್ರಮಗಳನ್ನು ಅನುಸರಿಸಬಹುದು.

ಮುಂದೆ ಓದಿ ...
  • Trending Desk
  • 4-MIN READ
  • Last Updated :
  • Share this:

ಕೋವಿಡ್-19(Covid 19)ನಿಂದ ಚೇತರಿಸಿಕೊಂಡ ನಂತರ ಕಾಕ್‌ಪಿಟ್‌ಗೆ ಮರಳಿದ ಪೈಲಟ್ ಟೇಕ್‌ಆಫ್‌ಗಾಗಿ(Take -OFF) ವಿಮಾನದ ಎರಡನೇ ಎಂಜಿನ್ ಆರಂಭಿಸಲು ಮರೆತಿದ್ದು, ಆ ಪೈಲಟ್(Pilot) ಎಲ್ಲಿಯಾದರೂ ವಿಮಾನವನ್ನು ಸ್ಥಗಿತಗೊಳಿಸದೇ ಇದ್ದಿದ್ದರೆ ಖಂಡಿತ ದೊಡ್ಡ ಅನಾಹುತವೇ ಸಂಭವಿಸುತ್ತಿತ್ತು. ಇದು ಒಂದು ಘಟನೆಯಾದರೆ  ಇನ್ನೊಬ್ಬ ಪೈಲಟ್  ಕೊರೊನಾ(Coronavirus) ಕಾರಣದಿಂದ  ಏಳು-ತಿಂಗಳ ತಾತ್ಕಾಲಿಕ ನಿವೃತ್ತಿಯಿಂದ ಮರಳಿ ಮುಂಜಾನೆ ವಿಮಾನ ಇಳಿಸುವಾಗ ಆತ ವಿಮಾನದ ಚಕ್ರಗಳನ್ನು ಇಳಿಸಲಿಲ್ಲ ಹಾಗೂ ಟಾರ್‌ಮ್ಯಾಕ್‌ನಿಂದ ಬರೇ 800 ಫೀಟ್ ಸಮೀಪವಿರುವಾಗ ಚಕ್ರವನ್ನು ಎಳೆದಿದ್ದರು. ವಾರಗಳ ಮೊದಲು ಪ್ರಯಾಣಿಕ ವಿಮಾನವು ನಿಬಿಡವಾಗಿದ್ದ ವಿಮಾನ ನಿಲ್ದಾಣದಿಂದ ತಪ್ಪಾದ ದಿಕ್ಕಿನಲ್ಲಿ ಹೊರಟಿತು. ಇದಕ್ಕೆ ಕಾರಣ ಆರು ತಿಂಗಳಿಗಿಂತ ಹೆಚ್ಚು ಕಾಲದ ನಂತರ ಮೊದಲ ಬಾರಿಗೆ ಮರಳಿದ ಕ್ಯಾಪ್ಟನ್ ವಿಮಾನವನ್ನು ಚಲಾಯಿಸಿರುವುದು. 


ಈ ಎಲ್ಲಾ ಘಟನೆಗಳು ಇತ್ತೀಚೆಗೆ ತಾನೇ ಅಮೆರಿಕಾದಲ್ಲಿ ಸಂಭವಿಸಿದೆ. ಪೈಲಟ್‌ಗಳು ವೃತ್ತಿಗೆ ಮರಳಿದ ಕೆಲವೇ ತಿಂಗಳುಗಳಲ್ಲಿ ನಡೆದಿರುವ ಘಟನೆಗಳು ಇದಾಗಿವೆ. ಪ್ರ 1918 ಇನ್‌ಫ್ಲುಯನ್ಜಾ ಸಾಂಕ್ರಾಮಿಕದ ನಂತರ ಸಂಭವಿಸಿರುವ ವಿನಾಶಕಾರಿ ಸಾಂಕ್ರಾಮಿಕವಾಗಿದ್ದು ಜಾಗತಿಕ ವಾಯುಯಾನ ಉದ್ಯಮದ ಮೇಲೆ ವಿನಾಶಕಾರಿ ಅಂಶಗಳನ್ನು ಸೃಷ್ಟಿಸಿವೆ.


ಸಾಂಕ್ರಾಮಿಕದ ಆರಂಭದಿಂದ ತರಬೇತಿ ಇಲ್ಲದ ಪೈಲಟ್‌ಗಳು ಮಾಡಿರುವ ತಪ್ಪುಗಳಿಂದ ಈ ಘಟನೆಗಳು ಸಂಭವಿಸಿವೆ. ಉದಯೋನ್ಮುಖ ಸುರಕ್ಷತಾ ಬೆದರಿಕೆಗಳನ್ನು ಗುರುತಿಸಲು ವಿನ್ಯಾಸಗೊಳಿಸಲಾದ ಕಡಿಮೆ ಪ್ರೊಫೈಲ್ ಡೇಟಾಬೇಸ್‌ನಲ್ಲಿ ಈ ದೋಷಗಳನ್ನು ಸಂಗ್ರಹಿಸಲಾಗಿದೆ. ಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಶನ್‌ನಿಂದ ಧನ ಸಹಾಯ ಪಡೆದುಕೊಂಡಿರುವ ಮಾನಿಟರಿಂಗ್ ಪ್ರೊಗ್ರಾಮ್ ದಶಕಗಳಷ್ಟು ಹಳೆಯದಾಗಿದೆ. ಆದರೀಗ ವಿಮಾನಗಳು ಪುನಃ ಹಾರಾಟ ನಡೆಸಿರುವುದರಿಂದ ಈ ರೀತಿಯ ಪ್ರಮಾದಗಳು ಬಹುಶಃ ಅನಾಹುತವನ್ನೇ ಸೃಷ್ಟಿಸಬಹುದು.


ಇದನ್ನೂ ಓದಿ: ಮಹಿಳೆಯರೇ… ನೀವು ವಿವಾಹವಾಗುವ ಪುರುಷರ ವಯಸ್ಸಿನ ಅಂತರ ಎಷ್ಟಿರಬೇಕು ಗೊತ್ತಾ?


ಅಪಾಯಗಳ ಸರಮಾಲೆಯೇ ತಿಂಗಳುಗಳಿಂದ ಸಂಭವಿಸುತ್ತಿವೆ


ಕನ್ಸಲ್ಟಿಂಗ್ ಸಂಸ್ಥೆ ಆಲಿವರ್ ವೈಮನ್ ಪ್ರಕಾರ, ವಿಮಾನಯಾನ ಸಂಸ್ಥೆಗಳ ಔದ್ಯೋಗಿಕ ವಜಾ ಹಾಗೂ ಪೈಲಟ್‌ಗಳು ದೀರ್ಘ-ಅವಧಿಯ ರಜೆಗೆ ಹೋದಲ್ಲಿ 100,000 ಪೈಲಟ್‌ಗಳು ಅವಿರತವಾಗಿ ವಿಶ್ರಾಂತಿ ಇಲ್ಲದೆಯೇ ದುಡಿಯುತ್ತಾರೆ ಎಂಬುದನ್ನು ವರದಿ ಮಾಡಿದೆ. ಕೆಲವರು 18 ತಿಂಗಳುಗಳಿಗಿಂತ ಹೆಚ್ಚು ಕಾಲ ವಿಮಾನಯಾನ ನಡೆಸಿಲ್ಲ. ಇದೀಗ ವ್ಯಾಕ್ಸಿನೇಶನ್‌ನಿಂದಾಗಿ ವಿಮಾನಯಾನಗಳನ್ನು ಪುನಃ ಆರಂಭಿಸಿದ್ದು, ಪೈಲಟ್‌ಗಳು ಅತಿಯಾದ ಆತ್ಮವಿಶ್ವಾಸ ಪ್ರಾವೀಣ್ಯದ ಕೊರತೆಯಿಂದಾಗಿ ಪುನಃ ಉದ್ಯೋಗಕ್ಕೆ ಮರಳಿದ್ದು ಅವರ ಒಂದು ಕ್ಷಣದ ಮೈಮರೆವು ದುರಂತಕ್ಕೆ ಕಾರಣವಾಗಬಹುದು ಎಂಬ ಆತಂಕಗಳು ಹೆಚ್ಚುತ್ತಿವೆ.


ಇದು ಅತ್ಯಂತ ಕ್ಲಿಷ್ಟಕರವಾದ ಸನ್ನಿವೇಶ ಎಂದು ಡ್ಯೂಚೆ ಲುಫ್ಥಾನ್ಸ ಎಜಿಯ (Deutsche Lufthansa AG) ಪರಿಣಿತ Airbus SE A380 ಪೈಲಟ್ ಯುವೆ ಹಾರ್ಟರ್ ಹೇಳುತ್ತಾರೆ. ಇದೇ ಸಮಯದಲ್ಲಿ ಏಷ್ಯಾ ಹಾಗೂ ಯುರೋಪ್‌ನಲ್ಲಿ ನಡೆದ ಪೈಲಟ್ ಸಂದರ್ಶನಗಳು ಹಾಗೂ ತರಬೇತಿ ಕಾರ್ಯಕ್ರಮಗಳನ್ನು ಪೂರ್ಣಗೊಳಿಸಿ ಮರಳಿದ ಪೈಲಟ್‌ಗಳಲ್ಲಿ ವಿಭಿನ್ನ ಮಟ್ಟದ ಸಾಮರ್ಥ್ಯ ಹಾಗೂ ವಿಶ್ವಾಸವನ್ನು ಬಹಿರಂಗಪಡಿಸುತ್ತದೆ.


ವಿಮಾನಯಾನ ಕ್ಷೇತ್ರವು ಪ್ರಸ್ತುತ ಆರ್ಥಿಕ ನಷ್ಟಗಳಿಗೆ ಒಳಗಾಗಿದೆ. ಈ ನಷ್ಟಗಳ ಅಂದಾಜು ಕಳೆದ ವರ್ಷ 138 ಬಿಲಿಯನ್ ಡಾಲರ್‌ ಆಗಿದ್ದರೆ, 2021ರಲ್ಲಿ 52 ಬಿಲಿಯನ್ ಡಾಲರ್ ಎಂಬುದಾಗಿ ಅಂದಾಜಿಸಲಾಗಿದೆ. ಉದ್ಯಮವು ಕಳೆದಹೋದ ಆದಾಯ ಮರಳಿ ಪಡೆಯುವ ನಿಟ್ಟಿನಲ್ಲಿ, ಕರ್ತವ್ಯಕ್ಕೆ ಮರಳಿರುವ ಪೈಲಟ್‌ಗಳಿಂದ ಉಂಟಾಗುವ ಸುರಕ್ಷತಾ ಅಪಾಯಗಳನ್ನು ನಿರ್ವಹಿಸುವುದು ಹೆಚ್ಚುವರಿ ಹೊರೆಯಾಗಿ ಪರಿಣಮಿಸಿದೆ. ಹೆಚ್ಚಿನ ಪೈಲಟ್‌ಗಳು ಕೋವಿಡ್‌ ಸೋಂಕಿನಿಂದ ಚೇತರಿಸಿಕೊಂಡಿದ್ದು ಇದರಿಂದ ಗಮನ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.


ವಾಯುಯಾನ ಉದ್ಯಮಕ್ಕೆ ಸಲಹೆ ನೀಡುವ ವರ್ಜಿನಿಯಾ ಮೂಲದ ಲಾಭರಹಿತ ಗುಂಪು ಫ್ಲೈಟ್ ಸೇಫ್ಟಿ ಫೌಂಡೇಶನ್, ASRS ಡೇಟಾಬೇಸ್‌ನಲ್ಲಿನ ಘಟನೆಗಳ ಬಗ್ಗೆ ತಿಳಿದಿದೆ ಮತ್ತು ಜಾಗತಿಕವಾಗಿ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದೆ ಎಂದು ತಿಳಿಸಿದೆ. ಸಂಭಾವ್ಯ ಸುರಕ್ಷತೆ ಸಮಸ್ಯೆಗಳ ಬಗ್ಗೆ ನಮಗೆ ಹೆಚ್ಚು ತಿಳಿದಿರುವುದರಿಂದ, ನಾವು ಅಪಾಯ ತಗ್ಗಿಸಲು ಸಾಧ್ಯವಾಗುತ್ತದೆ" ಎಂದು ಫ್ಲೈಟ್ ಸೇಫ್ಟಿ ಫೌಂಡೇಶನ್ ಅಧ್ಯಕ್ಷ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಸನ್ ಶಾಹಿದಿ ಹೇಳಿದರು.


ಪೈಲಟ್ ಪ್ರಾವೀಣ್ಯತೆಯ ಕೊರತೆ


ವೃತ್ತಿಪರ ದೋಷಕ್ಕೆ ಅವಕಾಶವಿರುವ ಕ್ಷೇತ್ರದಲ್ಲಿ ಅಪಾಯಗಳು ತೀವ್ರವಾಗಿರುತ್ತವೆ. ಹೆಚ್ಚಿನ ದೋಷಗಳು ಸಣ್ಣದಾಗಿದ್ದರೂ ಕ್ಷಣಾರ್ಧದಲ್ಲಿ ತಪ್ಪಾದ ಎತ್ತರ ಅಥವಾ ವೇಗದಲ್ಲಿ ಹಾರುವುದು ತಪ್ಪಾದ ಸ್ಥಳದಲ್ಲಿ ರನ್‌ವೇಗೆ ಅಡ್ಡಲಾಗಿ ಟ್ಯಾಕ್ಸಿಯಿಂಗ್ ಮಾಡುವುದು ಮೊದಲಾದ ಅಂಶಗಳು ಸೇರಿವೆ. ವಿಶ್ವವಿದ್ಯಾನಿಲಯದ ಸಹಾಯಕ ಪ್ರಾಧ್ಯಾಪಕರಾದ ರಾಜೀ ಓಲಗನಾಥನ್ ಅವರು ASRS ವರದಿಯಲ್ಲಿ ಪತ್ತೆಮಾಡಿರುವ ಅಂಶದ ಪ್ರಕಾರ ವಿಮಾನವನ್ನು ಇಳಿಸುವ ಪ್ರಕ್ರಿಯೆಯಲ್ಲಿನ ಸಮಸ್ಯೆಗಳನ್ನು ಉಲ್ಲೇಖಿಸಿದ್ದಾರೆ.


ಪೈಲಟ್ ತುಂಬಾ ಎತ್ತರದಲ್ಲಿ ರನ್‌ವೇಗೆ ಸಮೀಪಿಸುತ್ತಿರುವುದನ್ನು ವಿವರಿಸಿದ್ದಾರೆ. ಓಲಗನಾಥನ್ ತನ್ನ ಸಂಶೋಧನೆಗಳು ವಿಮಾನಯಾನ ಸಂಸ್ಥೆಗಳು ಕೌಶಲ್ಯ ಕುಸಿತದ ಬಗ್ಗೆ ಪೈಲಟ್‌ಗಳಿಗೆ ಶಿಕ್ಷಣ ನೀಡುವುದು ಮತ್ತು ಸೂಕ್ತ ರೀತಿಯಲ್ಲಿ ತರಬೇತಿ ಕಾರ್ಯಕ್ರಮಗಳನ್ನು ನಿರ್ಮಿಸುವುದು ಅಗತ್ಯವೆಂದು ತೋರಿಸುತ್ತದೆ ಎಂದು ಹೇಳಿದರು. "ಪೈಲಟ್‌ಗಳು ಕೆಲಸಕ್ಕೆ ಮರಳಿದ ಮೇಲೆ ಅವರ ಕೌಶಲ್ಯ ಮತ್ತು ಆತ್ಮವಿಶ್ವಾಸದ ಪ್ರಾಮಾಣಿಕ ಮೌಲ್ಯಮಾಪನ ಮಾಡಬೇಕಾಗಿದೆ" ಎಂದು ಅವರು ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.


ಇದನ್ನೂ ಓದಿ: ಮೂರನೇ ಬಾರಿಗೆ ತಾಯಿಯಾದ ಮಹಿಳೆ ಒಂದೇ ಸಲಕ್ಕೆ 7 ಮಕ್ಕಳನ್ನು ಹೆತ್ತಳು!


ಅಪಾಯಗಳನ್ನು ನಿಯಂತ್ರಸಲಾಗಿದೆ ಎಂದು ವಿಮಾನಯಾನ ಸಂಸ್ಥೆಗಳು ತಿಳಿಸಿವೆ


ಸಾಂಕ್ರಾಮಿಕ ರೋಗದಿಂದ ಪೈಲಟ್‌ಗಳು ಮಾಡಿದ ತಪ್ಪುಗಳ ಹೊರತಾಗಿಯೂ, IATA, ಪ್ರಮುಖ ನಿಯಂತ್ರಕರು ಮತ್ತು ಕೆಲವು ದೊಡ್ಡ ವಿಮಾನ ಸಂಸ್ಥೆಗಳು ಅಪಾಯಗಳನ್ನು ನಿಯಂತ್ರಿಸಲಾಗಿದೆ ಎಂದು ತಿಳಿಸಿವೆ. ಬಿಕ್ಕಟ್ಟು ಮುಂದುವರಿದಂತೆ, ಕಳೆದ 18 ತಿಂಗಳುಗಳಲ್ಲಿ ಉಂಟಾದ ಅಪಾಯಗಳನ್ನು ತಗ್ಗಿಸುವ ಕಾರ್ಯಗಳು ನಡೆಯುತ್ತಿವೆ ಎಂದು IATAನ ಸುರಕ್ಷತಾ ನಿರ್ದೇಶಕ ಮಾರ್ಕ್ ಸಿಯರ್ಲೆ ಹೇಳಿದರು.


ಸಮಗ್ರ ಡೇಟಾ-ಚಾಲಿತ ಸುರಕ್ಷತಾ ಮೇಲ್ವಿಚಾರಣಾ ವ್ಯವಸ್ಥೆಯು ಏಜೆನ್ಸಿಯ ಅಪಾಯಗಳನ್ನು ಪತ್ತೆಹಚ್ಚಲು ಮತ್ತು ಸಮಸ್ಯೆಗಳನ್ನು ಪರಿಹರಿಸಲು ಸಹಾಯ ಮಾಡುತ್ತದೆ, ಇದರಲ್ಲಿ ಪೈಲಟ್‌ಗಳು ಕೋವಿಡ್-ಸಂಬಂಧಿತ ರಜೆಗಳ ನಂತರ ಕೆಲಸಕ್ಕೆ ಮರಳಬಹುದು ಎಂದು FAA ಹೇಳಿಕೆಯಲ್ಲಿ ತಿಳಿಸಿದೆ.


ವಿಮಾನ ಹಾರಾಟ ನಡೆಸುವ ಕಡಿಮೆ ಅನುಭವದೊಂದಿಗೆ ಕರ್ತವ್ಯಕ್ಕೆ ಮರಳಿರುವ ಪೈಲಟ್‌ಗಳು ದುರಂತದ ಸಮೀಪಕ್ಕೆ ಬರುತ್ತಿರುವ ಘಟನೆಗಳು ಹಲವಾರಿವೆ. ಕಳೆದ ವರ್ಷ ಸಪ್ಟೆಂಬರ್‌ನಲ್ಲಿ 307 ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ಲಯನ್ ಏರ್ ಗ್ರೂಪ್ ವಿಮಾನವು ಉತ್ತರ ಇಂಡೋನೇಷ್ಯಾದ ಮೆಡಾನ್‌ನಲ್ಲಿ ಲ್ಯಾಂಡ್ ಆದ ನಂತರ ರನ್‌ವೇಯಲ್ಲಿ ತಟ್ಟನೆ ಮಾರ್ಗ ನಿರ್ದೇಶನವನ್ನು ಬದಲಾಯಿಸಿತು. ಹಿಂದಿನ 90 ದಿನಗಳಲ್ಲಿ ಮೂರು ಗಂಟೆಗಳಿಗಿಂತ ಕಡಿಮೆ ಸಮಯ ಪೈಲಟ್ ಹಾರಾಟ ನಡೆಸಿದ್ದರು. ಈ ಘಟನೆಯಲ್ಲಿ ಪ್ರಯಾಣಿಕರಿಗೆ ಯಾವುದೇ ಹಾನಿ ಸಂಭವಿಸಿದೇ ಇದ್ದರೂ ಇದು ಅತ್ಯಂತ ಗಂಭೀರವಾಗಿರುವ ಹಾಗೂ ಅಪಾಯಕಾರಿಯಾಗಿರುವ ಘಟನೆಯಾಗಿದೆ ಎಂಬುದಂತೂ ಸುಳ್ಳಲ್ಲ. IATAಯ ಇತ್ತೀಚಿನ ಸುರಕ್ಷತಾ ವರದಿಯ ಪ್ರಕಾರ, 2016 ಮತ್ತು 2020ರ ನಡುವೆ ಪ್ರತಿ 5 ಮಿಲಿಯನ್ ಜೆಟ್ ವಿಮಾನಗಳಿಗೆ ಕೇವಲ ಒಂದು ದೊಡ್ಡ ಅಪಘಾತ ಸಂಭವಿಸಿದೆ ಎಂದಾಗಿದೆ.


ಆದಾಗ್ಯೂ, ಕೆಲವು ವಲಯಗಳಲ್ಲಿ ಹೆಚ್ಚಿನ ಮೇಲ್ವಿಚಾರಣೆಯ ಅಗತ್ಯವಿದೆ ಎಂದು ಪುರಾವೆಗಳು ಸೂಚಿಸುತ್ತವೆ. ಕಾಕ್‌ಪಿಟ್‌ನಲ್ಲಿ ಹೆಚ್ಚು ನುರಿತ ಸಿಬ್ಬಂದಿ ಸೇರಿಸುವುದು ಮತ್ತು ಹೆಚ್ಚುವರಿ ಸಿಮ್ಯುಲೇಟರ್ ಸೆಷನ್‌ಗಳನ್ನು ನಡೆಸುವುದು ಮೊದಲಾದ ಹೆಚ್ಚುವರಿ ಸುರಕ್ಷತೆಯ ಕ್ರಮಗಳನ್ನು ಅನುಸರಿಸಬಹುದು.


ಪೈಲಟ್‌ಗೆ ಹೆಚ್ಚಿನ ತರಬೇತಿ ನೀಡುವುದು:


ಸಾಂಕ್ರಾಮಿಕದ ಹೊರತಾಗಿಯೂ ಅತ್ಯಂತ ಬಲವಾದ ಬ್ಯಾಲನ್ಸ್ ಶೀಟ್‌ಗಳನ್ನು ಹೊಂದಿರುವ ವಿಮಾನಯಾನ ಸಂಸ್ಥೆ ಕ್ವಾಂಟಾಸ್, ಪೈಲಟ್ ಸ್ಥಿತಿ ಗುರುತಿಸಲು ಸಂಪೂರ್ಣ ತಂಡವನ್ನು ನಿಯೋಜಿಸಿತು. ಉತ್ತಮ ಮೋಟಾರ್ ಕೌಶಲ್ಯಗಳು ದೀರ್ಘಕಾಲದ ಅಪಾಯ ತಡೆಯುತ್ತವೆ ಎಂಬುದನ್ನು ಸಂಶೋಧನಾ ತಂಡವು ತೋರಿಸಿದೆ.


ಇದೀಗ ಕ್ವಾಂಟಾಸ್ Boeing Co. 737 ಪೈಲಟ್‌ಗಳನ್ನು ಹಾರಾಟ ನಡೆಸುವ ಮುನ್ನ ಆರು-ದಿನಗಳ ಕೋರ್ಸ್‌ಗೆ ನಿಯೋಜಿಸುತ್ತದೆ. ಇದೇ ಸಮಯದಲ್ಲಿ ಹಿರಿಯ ತರಬೇತಿ ಪೈಲಟ್‌ಗಳು ಅವರಿಗೆ ತರಬೇತಿ ನೀಡುವ ಸಮಯದಲ್ಲಿ ಅವರ ಜೊತೆ ವಿಮಾನದಲ್ಲಿ ಕುಳಿತುಕೊಳ್ಳುತ್ತಾರೆ. ವಿಮಾನದ A380 ಪೈಲಟ್‌ಗಳು ಮೈದಾನದಲ್ಲಿ ಮತ್ತು ಸಿಮ್ಯುಲೇಟರ್‌ನಲ್ಲಿ ಪ್ರತಿ 90 ದಿನಗಳಿಗೊಮ್ಮೆ ಎರಡು ದಿನಗಳ ತರಬೇತಿ ಹೊಂದಿರುತ್ತಾರೆ, ಆದರೂ ಕ್ವಾಂಟಾಸ್ ಇನ್ನೂ ಹೆಚ್ಚಿನ ಜೆಟ್‌ಗಳ ಹಾರಾಟ ಆರಂಭಿಸಿಲ್ಲ.


ಇದನ್ನೂ ಓದಿ: ಪರ್ಸ್ ಕಳೆದುಕೊಂಡರೂ ಸಮಯಕ್ಕೆ ಸರಿಯಾಗಿ ಡೆಲಿವರಿ ಮಾಡಿದ Zomato ಸಿಬ್ಬಂದಿ


ಕಳೆದ ವರ್ಷ ಜೂನ್‌ನಲ್ಲಿ, ಸುಮಾರು ಮೂರು ತಿಂಗಳಲ್ಲಿ ಹಾರಾಟ ನಡೆಸದ ಅಮೆರಿಕದ ವಿಮಾನಯಾನ ಸಂಸ್ಥೆಯ ಮೊದಲ ಅಧಿಕಾರಿಯು ವಿಮಾನದ ಏರ್‌ಸ್ಪೀಡ್ ಸೆನ್ಸರ್‌ಗಳಿಗೆ ಆಂಟಿ-ಐಸಿಂಗ್ ಕಾರ್ಯವಿಧಾನವನ್ನು ಬದಲಾಯಿಸಲು ಮರೆತಿದ್ದರು. 2009ರಲ್ಲಿ, ಅದೇ ಸೆನ್ಸರ್‌ಗಳು ಘನೀಕೃತಗೊಂಡಿದ್ದವು, ರಿಯೋ ಡಿ ಜನೈರೋದಿಂದ ಪ್ಯಾರಿಸ್‌ಗೆ ಹೋಗುವ ದಾರಿಯಲ್ಲಿ ಏರ್ ಫ್ರಾನ್ಸ್ ಫ್ಲೈಟ್ 447ರ ಪತನಕ್ಕೆ ಕಾರಣವಾಯಿತು ಮತ್ತು ಅದರಲ್ಲಿದ್ದ 228 ಜನರು ಮೃತಪಟ್ಟರು.

Published by:Sandhya M
First published: