• Home
  • »
  • News
  • »
  • trend
  • »
  • ಇಡೀ ದೇಶ ಗೋಂಡಾ ಜಿಲ್ಲೆಯ ಈ ಗ್ರಾಮದತ್ತ ತಿರುಗಿ ನೋಡುವಂತೆ ಮಾಡಿದ 21 ವರ್ಷದ ಯುವತಿ..!

ಇಡೀ ದೇಶ ಗೋಂಡಾ ಜಿಲ್ಲೆಯ ಈ ಗ್ರಾಮದತ್ತ ತಿರುಗಿ ನೋಡುವಂತೆ ಮಾಡಿದ 21 ವರ್ಷದ ಯುವತಿ..!

Arushi Singh | Image credit: Twitter

Arushi Singh | Image credit: Twitter

ಆರುಷಿ ಸಿಂಗ್ ಸುಮಾರು 384 ಮತಗಳ ಅಂತರದಲ್ಲಿ ಪ್ರತಿಸ್ಪರ್ಧಿ ಎದುರು ಜಯಶಾಲಿಯಾಗಿ ಗ್ರಾಮ ಸಭಾಗೆ ಪ್ರಧಾನ್‍ಗೆ ಆಯ್ಕೆಯಾದಾಗ ಕಂಡ ಕನಸು ನನಸಾದಂತಾಗಿ ಖುಷಿ ಆಯಿತು ಎಂದು ಹರ್ಷ ವ್ಯಕ್ತಪಡಿಸಿದರು.

  • Share this:

ನಮ್ಮ ದೇಶದ ಚುನಾವಣಾ ಆಯೋಗದ ಪ್ರಕಾರ ವ್ಯಕ್ತಿಯೊಬ್ಬರು ಚುನಾವಣೆಗೆ ಸ್ಪರ್ಧಿಸಲು ಕನಿಷ್ಠ 21 ವರ್ಷ ವಯೋಮಿತಿ ಹೊಂದಿರಬೇಕು. ಆದರೆ ಇದೇ ವಯಸ್ಸಿನ ಆರುಷಿ ಸಿಂಗ್ ಎಂಬುವವರು ಗ್ರಾಮ ಸಭಾಗೆ ಆಯ್ಕೆಯಾಗಿದ್ದಾರೆ. ಇವರು ಉತ್ತರಪ್ರದೇಶದ ಗೋಂಡಾ ಜಿಲ್ಲೆಯ ವಾಜೀರ್‌ ಘರ್‌ನ ಸೆಹೆರಿಯಾ ಎಂಬ ಗ್ರಾಮಕ್ಕೆ ಚುನಾಯಿತರಾಗಿದ್ದಾರೆ ಎಂದು ಹಿಂದೂಸ್ತಾನ್ ಟೈಮ್ಸ್‌ಗೆ ಸಿಂಗ್ ಎಂಬುವರು ಮಾಹಿತಿ ನೀಡಿದ್ದಾರೆ.


ಆರುಷಿ ಸಿಂಗ್ ಸುಮಾರು 384 ಮತಗಳ ಅಂತರದಲ್ಲಿ ಪ್ರತಿಸ್ಪರ್ಧಿ ಎದುರು ಜಯಶಾಲಿಯಾಗಿ ಗ್ರಾಮ ಸಭಾಗೆ ಪ್ರಧಾನ್‍ಗೆ ಆಯ್ಕೆಯಾದಾಗ ಕಂಡ ಕನಸು ನನಸಾದಂತಾಗಿ ಖುಷಿ ಆಯಿತು ಎಂದು ಹರ್ಷ ವ್ಯಕ್ತಪಡಿಸಿದರು. ಇನ್ನು ಸೆಹೆರಿಯಾ ಗ್ರಾಮವನ್ನು ಸ್ಮಾರ್ಟ್ ಗ್ರಾಮವಾಗಿ ಮಾಡುವ, ಇಂಟರ್ನೆಟ್ ವ್ಯವಸ್ಥೆ ಕಲ್ಪಿಸುವ, ಉತ್ತಮ ಸಾರ್ವಜನಿಕ ಸೇವೆ ಒದಗಿಸುವುದು ನನ್ನ ಕರ್ತವ್ಯ ಎಂದು ಹೇಳುತ್ತಾರೆ ಆರುಷಿ. ಇವರು ಲಖನೌ ವಿಶ್ವವಿದ್ಯಾಲಯದ ಸಿಟಿ ಲಾ ಕಾಲೇಜಿನಲ್ಲಿ ಎಲ್‍ಎಲ್‍ಬಿ ಓದುತ್ತಿದ್ದಾರೆ. ಈ ಕಾಲೇಜು ಅವರ ಊರಿನಿಂದ 50 ಕಿ.ಮೀ ದೂರದಲ್ಲಿದೆ. ಲಾ ಮುಗಿದ ಮೇಲೆ ಪ್ರಾವಿನ್ಶಿಯಲ್ ಸಿವಿಲ್ ಸರ್ವೀಸ್ ಪರೀಕ್ಷೆ ಬರೆಯುವ ಆಕಾಂಕ್ಷೆ ಹೊಂದಿದ್ದಾರೆ.


ಒಟ್ಟಾರೆಯಾಗಿ ಆರುಷಿ ಅವರ ಬದುಕು ಭಾರತೀಯ ಪ್ರಜಾಪ್ರಭುತ್ವದ ಮೂರು ಭಾಗಗಳಾಗಿ ವಿಂಗಡಿಸಲ್ಪಡುತ್ತದೆ. ಇವರು ನಮ್ಮ ಸಂವಿಧಾನವನ್ನು ಅಧ್ಯಯನ ಮಾಡುತ್ತಿದ್ದಾರೆ. ಇದು ನ್ಯಾಯಾಂಗದ ಒಂದು ಭಾಗವಾಗಿ ಪರಿಗಿಣಿತವಾಗಿದೆ. ಇನ್ನು ಇವರು ಅಧಿಕಾರ ಶಾಹಿಯ ಕನಸು ಕಾಣುತ್ತಿದ್ದಾರೆ. ಇದಕ್ಕೆ ಬೆಂಬಲವಾಗಿ ರಾಜ್ಯ ವಿಧಾನಸಭೆಯ ಅತ್ಯಮತ ಪ್ರಾಥಮಿಕ ವ್ಯವಸ್ಥೆಯಾದ ಗ್ರಾಮಸಭೆಗೆ ಆಯ್ಕೆಯಾಗಿದ್ದಾರೆ. ಇದೀಗ ಇವರು ಜೀವನದ ಮೂಲಭೂತ ಸೌಲಭ್ಯಗಳಾದ ಮನೆ, ಕುಡಿಯುವ ನೀರು, ವಿದ್ಯಾಭ್ಯಾಸ, ಗ್ರಾಮದ ನೈರ್ಮಲೀಕರಣ ಸೇರಿದಂತೆ ಇತರೆ ಜನರಿಗೆ ಅನುಕೂಲ ಕಲ್ಪಿಸುವ ಸೌಲಭ್ಯಗಳ ಕಡೆ ಹೆಚ್ಚಿನ ಗಮನಹರಿಸಬೇಕಾಗಿದೆ. ಆರೋಗ್ಯ ಮತ್ತು ನೈರ್ಮಲ್ಯಕ್ಕೆ ಒತ್ತು ನೀಡುವ ಅವರು ಗ್ರಾಮಸ್ಥರ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಗಳನ್ನು ಸುಧಾರಿಸುವತ್ತಲೂ ಶ್ರಮಿಸಬೇಕಾಗಿದೆ.



ಇವರ ಬಗ್ಗೆ ಹರ್ಷ್ ಜೈ ಎನ್ನುವವರು 21 ವರ್ಷದ ಬಿಎ ಎಲ್‍ಎಲ್‍ಬಿ ಎರಡನೇ ವರ್ಷ ಓದುತ್ತಿರುವ ಆರುಷಿ ಅವರು ಗೋಂಡಾ ಜಿಲ್ಲೆಯ ವಾಜೀರ್‌ಘರ್‌ನ ಸೆಹೆರಿಯಾ ಎಂಬ ಗ್ರಾಮಕ್ಕೆ ಗ್ರಾಮಸಭಾ ಪ್ರಧಾನ್ ಆಗಿ ಆಯ್ಕೆಗೊಂಡಿದ್ದಾರೆ ಎಂದು #ಯೂತ್ ಎಂಬ ಹ್ಯಾಶ್ ಟ್ಯಾಗ್ ಅಡಿ ಟ್ವೀಟ್ ಮಾಡಿದ್ದಾರೆ.


ಇವರ ತಂದೆ ಧರ್ಮೇಂದ್ರ ಸಿಂಗ್ ಲಖನೌದ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಸ್ಟೆನೋಗ್ರಾಫರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರ ತಾಯಿ ಗರಿಮಾ ಸಿಂಗ್ ಅವರು ಸಿವಿಲ್ ಕೋರ್ಟ್‍ನ ಜಿಲ್ಲಾ ನ್ಯಾಯಾಧೀಶರಾಗಿದ್ದಾರೆ. ಏಪ್ರಿಲ್ 19ರಂದು ಇದ್ದ ಚುನಾವಣೆ ನಿಮಿತ್ತ ಗೋಂಡಾಗೆ ಮಾರ್ಚ್ 2ರಂದು ತೆರಳಿದ ಆರುಷಿ ಮನೆಮನೆಗೂ ತೆರಳಿ ಮತಪ್ರಚಾರ ಮಾಡಿ ಮತಯಾಚಿಸಿದ್ದರು. ಕೋವಿಡ್ ಸಮಯದಲ್ಲಿ ನಿಮ್ಮ ಬೆಂಗಾವಲಿನಂತಿರಲು ಯುವಕರು ಪ್ರೋತ್ಸಾಹಿಸಿ ಎಂದು ಮನವಿ ಮಾಡಿದ್ದರು. ಅದರಂತೆ ಕೋವಿಡ್ ಸಮಯದಲ್ಲಿ ಗೋಂಡಾ ಜಿಲ್ಲೆಯ ಈ ಗ್ರಾಮದತ್ತ ಇಡೀ ದೇಶ ತಿರುಗಿ ನೋಡುವಂತೆ ಮಾಡಿರುವುದಂತೂ ಸತ್ಯ.

First published: