• ಹೋಂ
  • »
  • ನ್ಯೂಸ್
  • »
  • ಟ್ರೆಂಡ್
  • »
  • Sculpture: ನ್ಯೂಯಾರ್ಕ್‌ನ ಸೆಂಟ್ರಲ್‌ ಉದ್ಯಾನವನದಲ್ಲಿ ಭಾರತಿ ಖೇರ್‌ ಅವರಿಂದ ಅನಾವರಣಗೊಂಡ ಕಲಾಕೃತಿ; ಹೇಗಿದೆ ನೋಡಿ

Sculpture: ನ್ಯೂಯಾರ್ಕ್‌ನ ಸೆಂಟ್ರಲ್‌ ಉದ್ಯಾನವನದಲ್ಲಿ ಭಾರತಿ ಖೇರ್‌ ಅವರಿಂದ ಅನಾವರಣಗೊಂಡ ಕಲಾಕೃತಿ; ಹೇಗಿದೆ ನೋಡಿ

ವಿಭಿನ್ನ ಶಿಲ್ಪಕಲಾಕೃತಿ

ವಿಭಿನ್ನ ಶಿಲ್ಪಕಲಾಕೃತಿ

ನ್ಯೂಯಾರ್ಕ್‌ನ ಸಾರ್ವಜನಿಕ ಕಲಾ ನಿಧಿಯಿಂದ ನಿಯೋಜಿಸಲ್ಪಟ್ಟಿರುವ ಇದು ದೆಹಲಿಯ ಕಿರಣ್ ನಾಡರ್ ಮ್ಯೂಸಿಯಂ ಆಫ್ ಆರ್ಟ್‌ನ ಸಂಗ್ರಹದಲ್ಲಿದೆ. ಈ ಕಲಾಕೃತಿ ಕುರಿತು ಪಬ್ಲಿಕ್ ಆರ್ಟ್ ಫಂಡ್ ಸಂಸ್ಥೆಯು “ಭಾರತಿ ಖೇರ್‌ ಅವರ ಈ ಸೃಷ್ಟಿ ಇಲ್ಲಿಯವರೆಗಿನ ಅತ್ಯಂತ ಮಹತ್ವಾಕಾಂಕ್ಷೆಯ ಕಲಾಕೃತಿ" ಎಂದು ಹೇಳಿಕೆಯಲ್ಲಿ ತಿಳಿಸಿದೆ.

ಮುಂದೆ ಓದಿ ...
  • Share this:

ನವ ದೆಹಲಿ: ನ್ಯೂಯಾರ್ಕ್‌ನ (New York) ಸೆಂಟ್ರಲ್ ಪಾರ್ಕ್‌ಗೆ ಅದರ ಆಗ್ನೇಯ ದಿಕ್ಕಿನ ಪ್ರವೇಶದ್ವಾರದಿಂದ ನಡೆದುಕೊಂಡು ಹೋಗುವಾಗ, ನಮಗೆ ಕಾಣುವ ಕಲಾಕೃತಿಯನ್ನು ನೀವು ನೋಡಿದರೆ ಆಶ್ಚರ್ಯಚಕಿತರಾಗುತ್ತೀರಿ. ಏಕೆಂದರೆ, ಅತ್ಯಂತ ಅಮೋಘ ಕಲಾಕೃತಿ ಅದಾಗಿದೆ. ಆ ಕಲಾಕೃತಿಯು ಸೀರೆ ಧರಿಸಿದ ಸುಂದರ ಮಹಿಳೆಯ ಶಿಲ್ಪಾಕೃತಿ ಆಗಿದೆ. ಇನ್ನೊಂದು ವಿಶೇಷತೆ ಎಂದರೆ ಆ ಶಿಲ್ಪಾಕೃತಿಯ ಮುಂಭಾಗದಲ್ಲಿ ಮಕ್ಕಳ ತಲೆಗಳಿಂದ (Children Head) ತುಂಬಿ ಹೋಗಿದೆ. ಈ ಅದ್ಭುತ ಶಿಲ್ಪಾಕೃತಿಯು ಬರೋಬ್ಬರಿ 18 ಅಡಿ ಎತ್ತರ ಇದೆ. ಈ ಶಿಲ್ಪಕಲಾಕೃತಿಯನ್ನು (Sculpture) ʼಪೂರ್ವಜʼ ಎಂದು ಕರೆಯುತ್ತಾರೆ. ಇದನ್ನು ಪ್ರಸಿದ್ಧ ಬ್ರಿಟಿಷ್-ಭಾರತೀಯ ಶಿಲ್ಪಿ ಭಾರತಿ ಖೇರ್ ಕೆತ್ತನೆ ಮಾಡಿದ್ದಾರೆ. ಇದನ್ನು ನ್ಯೂಯಾರ್ಕ್‌ನ ಸೆಂಟ್ರಲ್‌ ಉದ್ಯಾನವನದಲ್ಲಿ (New York's Central Park) ಅನಾವರಣಗೊಳಿಸಲಾಗಿದೆ.


ಅತ್ಯಂತ ಮಹತ್ವಾಕಾಂಕ್ಷೆಯ ಕಲಾಕೃತಿ
ಇದು ನ್ಯೂಯಾರ್ಕ್‌ನ ಸಾರ್ವಜನಿಕ ಕಲಾ ನಿಧಿಯಿಂದ ನಿಯೋಜಿಸಲ್ಪಟ್ಟಿರುವ ಇದು ದೆಹಲಿಯ ಕಿರಣ್ ನಾಡರ್ ಮ್ಯೂಸಿಯಂ ಆಫ್ ಆರ್ಟ್‌ನ ಸಂಗ್ರಹದಲ್ಲಿದೆ. ಈ ಕಲಾಕೃತಿ ಕುರಿತು ಪಬ್ಲಿಕ್ ಆರ್ಟ್ ಫಂಡ್ ಸಂಸ್ಥೆಯು “ಭಾರತಿ ಖೇರ್‌ ಅವರ ಈ ಸೃಷ್ಟಿ ಇಲ್ಲಿಯವರೆಗಿನ ಅತ್ಯಂತ ಮಹತ್ವಾಕಾಂಕ್ಷೆಯ ಕಲಾಕೃತಿ" ಎಂದು ಹೇಳಿಕೆಯಲ್ಲಿ ತಿಳಿಸಿದೆ.


ಭಾರತಿ ಖೇರ್‌ ಅವರು ಕೆತ್ತನೆ ಮಾಡಿದ ಕಲಾಕೃತಿ 
“ನಮ್ಮ ಸಾಂಸ್ಕೃತಿಕ ವಿಷಯಗಳಿಗೆ ನಮ್ಮ ಪೂರ್ವಜರೇ ಆಧಾರವಾಗಿದ್ದಾರೆ. ನಮ್ಮ ವೈಯಕ್ತಿಕ ಭೂತಕಾಲ ಮತ್ತು ಭವಿಷ್ಯವನ್ನು ಜೋಡಿಸುವ ಸಾರ್ವತ್ರಿಕ ತಾಯಿಯ ಆಕೃತಿಯನ್ನು ಭಾರತಿ ಖೇರ್‌ ಅವರು ಕೆತ್ತನೆ ಮಾಡಿರುವುದು ನಿಜಕ್ಕೂ ಬಹಳ ಸಂತಸದ ಸಂಗತಿ ಆಗಿದೆ” ಎಂದು ಪಬ್ಲಿಕ್ ಆರ್ಟ್ ಫಂಡ್ ಹೇಳಿಕೆ ನೀಡಿದೆ.


"ಈ ಕಲಾಕೃತಿಯು ಪೂರ್ವಜರ ಸಂಕೀರ್ಣತೆ ಮತ್ತು ಸಾಮರ್ಥ್ಯವನ್ನು ಒಳಗೊಂಡಿರುವುದನ್ನು ಬಿಂಬಿಸುತ್ತದೆ. ಅದಲ್ಲದೇ, ಪುರುಷ ಮತ್ತು ಸ್ತ್ರೀ ಅನ್ನು ಒಂದೇ ತಾತ್ವಿಕ ರೂಪಕ್ಕೆ ತರುವ ಪ್ರಯತ್ನವನ್ನು ಈ ಕಲಾಕೃತಿಯು ಮಾಡಿದೆ ಎಂದರೆ ತಪ್ಪಾಗದು. ಇದು ಭಾರತೀಯ ದೇವತೆಗಳು ಮತ್ತು ಜಾಗತಿಕ ಸಂಪ್ರದಾಯಗಳನ್ನು ಒಳಗೊಂಡಿದೆ" ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.


ಈ ಕಲಾಕೃತಿಯ ಸಂದೇಶವೇನು?
ಈ ಕಂಚಿನ ಶಿಲ್ಪವು ಇತರ ವಿಷಯಗಳ ಜೊತೆಗೆ 23 ಮಕ್ಕಳ ತಲೆಗಳಿಂದ ರಚನೆಗೊಂಡಿದೆ. ಆ ಮಕ್ಕಳ ತಲೆಗಳು ಅವಳ ದೇಹದಿಂದ ವಿಸ್ತರಿಸಲ್ಪಟ್ಟಿವೆ. ಇದು ಬಹುಸಂಸ್ಕೃತಿ, ಬಹುತ್ವ ಮತ್ತು ಪರಸ್ಪರ ಸಂಪರ್ಕವನ್ನು ಹೊಂದಿರುವ ಸಂದೇಶವನ್ನು ಸಾರುತ್ತದೆ.


ಇದನ್ನೂ ಓದಿ: Stone Age skeleton: ಪ್ರಾಚೀನ ಕಾಲದಲ್ಲಿಯೇ ಇತ್ತಂತೆ ಶಸ್ತ್ರಚಿಕಿತ್ಸೆ! ಅಸ್ಥಿಪಂಜರದಲ್ಲಿ ಸಿಕ್ತು ಐತಿಹಾಸಿಕ ಕುರುಹು 


“ನಾವು ಪರಸ್ಪರ ಪೂರ್ವಜ ತಾಯಿಯೊಂದಿಗೆ ಸರಪಳಿಯ ಕೊಂಡಿಗಳಂತೆ ಸಂಪರ್ಕ ಹೊಂದಿದ್ದೇವೆ ಎಂಬುದನ್ನು ನಮಗೆ ನೆನಪಿಸಲು ಈ ಪೂರ್ವಜ ತಾಯಿಯ ಕಲಾಕೃತಿಯನ್ನು ನಾನು ಕೆತ್ತನೆ ಮಾಡಿದ್ದೇನೆ. ಆದರೆ ನಾವು ಜೀವನದಲ್ಲಿ ಏನೇ ಸಂಪಾದನೆ ಮಾಡಲಿ ಜೀವನದ ಕೊನೆಯಲ್ಲಿ ನಾವೆಲ್ಲರೂ ಕುಟುಂಬವೇ ಹೌದು ತಾನೇ..! ನಾವು ಅವಳ ಮಕ್ಕಳು ಆದ್ದರಿಂದ ಈ ಜಗತ್ತಿನಲ್ಲಿರುವ ಪ್ರತಿಯೊಬ್ಬರು ಸಹ ಸಮಾನರು. ಇದನ್ನು ನಾವು ನೆನಪಿನಲ್ಲಿಟ್ಟುಕೊಳ್ಳಬೇಕಾದ ವಿಷಯ ಆಗಿದೆ ” ಎಂದು ಭಾರತೀ ಖೇರ್‌ ಅವರು ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಶಿಲ್ಪಾಕಲಾಕೃತಿಯ ಪೋಟೋ ಸೇರಿಸಿ ಹೇಳಿದ್ದಾರೆ.


ಸೆಂಟ್ರಲ್ ಪಾರ್ಕ್‌ನ ಡೋರಿಸ್ ಸಿ. ಫ್ರೀಡ್‌ಮನ್ ಪ್ಲಾಜಾದಲ್ಲಿರುವ ಈ ಕಲಾಕೃತಿಯನ್ನು 27 ಆಗಸ್ಟ್, 2023 ರವರೆಗೆ ಮಾತ್ರ ನೋಡಲು ಮುಕ್ತ ಅವಕಾಶ ಎಲ್ಲರಿಗೂ ಇದೆ.


ಈ ಕುರಿತು ಭಾರತಿ ಖೇರ್‌ ಅವರು ಏನು ಹೇಳಿದ್ದಾರೆ?
“ನಾನು ಈ ಕಲಾಕೃತಿಯನ್ನು ನೋಡಲು ಬರುವ ಪ್ರತಿಯೊಬ್ಬರಿಗೂ ತಮ್ಮ ಆಸೆಗಳನ್ನು, ಕನಸುಗಳನ್ನು ಮತ್ತು ಪ್ರಾರ್ಥನೆಗಳನ್ನು ಕೇಳಿಕೊಳ್ಳಲು ಇಲ್ಲಿ ಆಹ್ವಾನಿಸುತ್ತೇನೆ. ಜೀವನ ಮತ್ತು ಪ್ರೀತಿಯ ಬುದ್ಧಿವಂತಿಕೆಯನ್ನು ಮುಂದಿನ ಪೀಳಿಗೆಗೆ ವರ್ಗಾಯಿಸಲು ಇಲ್ಲಿ ಆ ತಾಯಿಯನ್ನು ತುಂಬು ಮನಸ್ಸಿನಿಂದ ಕೇಳಿಕೊಳ್ಳಿ” ಎಂದು ಭಾರತಿ ಖೇರ್ ಸಾರ್ವಜನಿಕ ಕಲಾ ನಿಧಿಯ ಹೇಳಿಕೆಯಲ್ಲಿ ಮಾತನ್ನು ಉಲ್ಲೇಖಿಸಿದ್ದಾರೆ.


"ಈ ಪೂರ್ವಜ ತಾಯಿಯು ನಮ್ಮ ಎಲ್ಲಾ ನೆನಪುಗಳು ಮತ್ತು ಸಮಯದ ಕೀಪರ್ ಆಗಿದ್ದಾರೆ. ನೀವು ಭವಿಷ್ಯದಲ್ಲಿ ಪ್ರಯಾಣಿಸಲು ಒಂದು ಹಡಗು, ನಮ್ಮ ಹಿಂದಿನ ಇತಿಹಾಸಗಳನ್ನು ಹುಡುಕಲು ಮತ್ತು ಅದನ್ನು ಗೌರವಿಸಲು ಅದಕ್ಕೆ ಬೇಕಾದ ಮಾರ್ಗದರ್ಶನ ನೀಡಲು ಮಾರ್ಗದರ್ಶಿ ಮತ್ತು ಸಹವರ್ತಿಯಾಗಿ ನ್ಯೂಯಾರ್ಕ್‌ನ ಈ ಪೂರ್ವಜ ತಾಯಿ ನಿಮಗೆ ಸಹಾಯ ಮಾಡುತ್ತಾಳೆ” ಎಂದು ಖೇರ್‌ ಅವರು ಹೇಳಿದ್ದಾರೆ.


ಭಾರತಿ ಖೇರ್ ಅವರ ಬಗ್ಗೆ ಒಂದಿಷ್ಟು ಮಾಹಿತಿ 
ಭಾರತಿ ಖೇರ್ 1969 ರಲ್ಲಿ ಲಂಡನ್‌ನಲ್ಲಿ ಜನಿಸಿದರು. ಆದರೆ 1993 ರಿಂದ ನವದೆಹಲಿಯಲ್ಲಿ ವಾಸಿಸುತ್ತಿದ್ದಾರೆ. ಅವರು ಎರಡು ದಶಕಗಳಿಂದ ಚಿತ್ರಕಲೆ, ಶಿಲ್ಪಕಲೆ ಮತ್ತು ಶಿಲ್ಪಾಕಲಾಕೃತಿಗಳ ಸ್ಥಾಪನೆ ಮಾಡುವ ಕೆಲಸವನ್ನು ಮಾಡುತ್ತಿದ್ದಾರೆ.


ಇದನ್ನೂ ಓದಿ:  Viral Photo: ರಾಷ್ಟ್ರೀಯ ಉದ್ಯಾನವನದಲ್ಲಿ ಹಿಮದ ಗುಹೆ! ಅಪರೂಪದ ಚಿತ್ರ ನೀವೂ ನೋಡಿ


ಅವರು ಐರ್ಲೆಂಡ್, ಕೆನಡಾ, ಚೀನಾ, ಜಪಾನ್, ಸ್ವಿಟ್ಜರ್ಲೆಂಡ್ ಮತ್ತು ಯುಕೆ ಸೇರಿದಂತೆ ಪ್ರಪಂಚದಾದ್ಯಂತ ಪ್ರದರ್ಶನಗಳನ್ನು ನಡೆಸಿದ್ದಾರೆ. ಆಕೆಯ ಕೃತಿಗಳು ಲಂಡನ್, ಕ್ವೀನ್ಸ್‌ಲ್ಯಾಂಡ್, ನವದೆಹಲಿ, ಮಿನ್ನಿಯಾಪೋಲಿಸ್, ಸಿಯೋಲ್, ಕೊರಿಯಾ, ದುಬೈ ಮತ್ತು ಅಬುಧಾಬಿ, ಇತರ ಸ್ಥಳಗಳಲ್ಲಿ ಸಂಗ್ರಹಿಸಲ್ಪಟ್ಟಿವೆ. ಭಾರತಿ ಖೇರ್ ಅವರು ನವದೆಹಲಿ ಮತ್ತು ಲಂಡನ್ ಎರಡು ದೇಶಗಳಲ್ಲಿ ಕೆಲಸ ಮಾಡುತ್ತಾರೆ.

top videos
    First published: