• ಹೋಂ
  • »
  • ನ್ಯೂಸ್
  • »
  • ಟ್ರೆಂಡ್
  • »
  • Shocking News: ಶಿಶುಗಳನ್ನು ಬೆಳೆಸುವ ಕೃತಕ ಗರ್ಭಾಶಯ ವ್ಯವಸ್ಥೆ, ವಿಡಿಯೋ ನೋಡಿ ಶಾಕ್ ಆದ ನೆಟ್ಟಿಗರು!

Shocking News: ಶಿಶುಗಳನ್ನು ಬೆಳೆಸುವ ಕೃತಕ ಗರ್ಭಾಶಯ ವ್ಯವಸ್ಥೆ, ವಿಡಿಯೋ ನೋಡಿ ಶಾಕ್ ಆದ ನೆಟ್ಟಿಗರು!

30,000 ಶಿಶುಗಳನ್ನು ಬೆಳೆಸುವ ಕೃತಕ ಗರ್ಭಾಶಯದ ಸೌಲಭ್ಯ

30,000 ಶಿಶುಗಳನ್ನು ಬೆಳೆಸುವ ಕೃತಕ ಗರ್ಭಾಶಯದ ಸೌಲಭ್ಯ

ಮಾನವನ ಬದುಕಿಗೆ ಬೇಕಾದ ಪರ್ಯಾಯ ಸ್ಥಳಗಳಿರಬಹುದು, ರೊಬೋಟ್‌ಗಳ ಬಳಕೆ, ಹೊಸ ಹೊಸ ತಂತ್ರಜ್ಞಾನಗಳು, ಸಂಶೋಧನೆಗಳು ಹೀಗೆ ದಿನದಿಂದ ದಿನಕ್ಕೆ ಪುರೋಗತಿಯನ್ನು ಮನುಕುಲ ಪಡೆದುಕೊಳ್ಳುತ್ತಿದೆ.

  • Trending Desk
  • 3-MIN READ
  • Last Updated :
  • Share this:

ಇಂದಿನ ಆಧುನಿಕ ಯುಗದಲ್ಲಿ ಪ್ರತಿಯೊಂದಕ್ಕೂ ಒಂದಲ್ಲಾ ಒಂದು ಮಾರ್ಪಾಡುಗಳನ್ನು ವಿಜ್ಞಾನಿಗಳು (Scientists) ಅನ್ವೇಷಿಸುತ್ತಿದ್ದಾರೆ. ಮಾನವನ ಬದುಕಿಗೆ ಬೇಕಾದ ಪರ್ಯಾಯ ಸ್ಥಳಗಳಿರಬಹುದು, ರೊಬೋಟ್‌ಗಳ ಬಳಕೆ, ಹೊಸ ಹೊಸ ತಂತ್ರಜ್ಞಾನಗಳು, ಸಂಶೋಧನೆಗಳು ಹೀಗೆ ದಿನದಿಂದ ದಿನಕ್ಕೆ ಪುರೋಗತಿಯನ್ನು ಮನುಕುಲ ಪಡೆದುಕೊಳ್ಳುತ್ತಿದೆ. ಇದೀಗ ಮಾನವ ಶಿಶುಗಳನ್ನು ಬೆಳೆಸಬಲ್ಲ ಕೃತಕ ಗರ್ಭಾಶಯ ಸೌಲಭ್ಯವಿರುವ (Artificial womb facility) ಗ್ರೋತ್ ಪಾಡ್‌ಗಳ ಕಲ್ಪನೆ ಇಂಟರ್ನೆಟ್‌ನಲ್ಲಿ ಹರಿದಾಡುತ್ತಿದ್ದು ಮುಂದಿನ ದಿನಗಳಲ್ಲಿ ಇಂತಹ ಒಂದು ವಿಜ್ಞಾನ ವಿಸ್ಮಯ ನಡೆಯುವುದು ಖಂಡಿತ ಸಾಕಾರವಾದರೂ ಅಚ್ಚರಿಪಡಬೇಕಾಗಿಲ್ಲ. ಇದೊಂದು ಕಾಲ್ಪನಿಕ ವಿಡಿಯೋವಾಗಿದ್ದರೂ ಮುಂದಿನ ದಿನಗಳಲ್ಲಿ ನೈಜವಾಗಲೂಬಹುದು ಎಂಬುದು ವಿಜ್ಞಾನಿಗಳ ಅಭಿಪ್ರಾಯವಾಗಿದೆ. ಕೃತಕ ಗರ್ಭಾಶಯವನ್ನು ಬಳಸಿಕೊಂಡು 30,000 ಮಾನವ ಶಿಶುಗಳನ್ನು ಬೆಳೆಸಬಹುದು ಎಂಬುದು ತಿಳಿದುಬಂದಿದೆ.


ಜನಸಂಖ್ಯಾ ಕುಸಿತಕ್ಕೆ ಪರಿಹಾರ


ಈ ಸೌಲಭ್ಯ ಇನ್ನೂ ಅಸ್ತಿತ್ವದಲ್ಲಿಲ್ಲದೇ ಇದ್ದರೂ ಇಂತಹ ಸೌಲಭ್ಯಗಳು ಜನಸಂಖ್ಯಾ ಕುಸಿತದಿಂದ ಬಳಲುತ್ತಿರುವ ದೇಶಗಳಿಗೆ ಪ್ರಯೋಜನಕಾರಿಯಾಗಲಿದೆ ಎಂಬ ಆಶಯವನ್ನು ವಿಡಿಯೋ ತಿಳಿಸಿದೆ.


ಯೆಮೆನ್ ಮಾಲಿಕ್ಯುಲರ್ ಬಯೋಟೆಕ್ನಾಲಜಿಸ್ಟ್ ಹಶೆಮ್ ಅಲ್-ಘೈಲಿಯವರು 8:30 ನಿಮಿಷಗಳ ಅನಿಮೇಶನ್ ವಿಡಿಯೋವನ್ನು ಸೆರೆಹಿಡಿದಿದ್ದಾರೆ. ಕಾಲ್ಪನಿಕ ಕೃತಕ ಗರ್ಭಾಶಯದ ಸೌಲಭ್ಯವಾದ ಎಕ್ಟೋಲೈಫ್ ಅನ್ನು ಒಳಗೊಂಡಿರುವುದನ್ನು ವಿಡಿಯೋ ಬಹಿರಂಗಪಡಿಸಿದೆ.


ನವೀಕರಿಸಬಹುದಾದ ಸಂಪನ್ಮೂಲದ ಬಳಕೆ


ಇದಕ್ಕಾಗಿ ದೊಡ್ಡ ಪ್ರಯೋಗಾಲಯಗಳನ್ನು ಹೊಂದಿಸಲಾಗಿದ್ದು ಇಲ್ಲಿ ಹೆಚ್ಚಿನ ಸಂಖ್ಯೆಯ ಕೃತಕ ಗರ್ಭಾಶಯಗಳಿದ್ದು ಆ ಗರ್ಭಾಶಯದೊಳಗೆ ಶಿಶು ಬೆಳೆಯುತ್ತದೆ.


ಈ ಕೃತಕ ಗರ್ಭಾಶಯ ವ್ಯವಸ್ಥೆಯನ್ನು ಸಂಪೂರ್ಣವಾಗಿ ನವೀಕರಿಸಬಹುದಾದ ಸಂಪನ್ಮೂಲದ ಮೂಲಕ ನಿರ್ವಹಿಸಲಾಗುತ್ತದೆ ಎಂಬುದು ವಿಡಿಯೋದಿಂದ ತಿಳಿದುಬಂದಿದೆ. ಎಕ್ಟೋಲೈಫ್ ಮಕ್ಕಳಾಗದ ದಂಪತಿಗಳಿಗೆ ಗರ್ಭಧರಿಸಲು ಮತ್ತು ಅವರದ್ದೇ ಆದ ಸಂತತಿಯ ನೈಜ ಪೋಷಕರಾಗಲು ಅನುವು ಮಾಡಿಕೊಡುತ್ತದೆ.


ಕ್ಯಾನ್ಸರ್ ಅಥವಾ ಇತರ ಆರೋಗ್ಯ ತೊಡಕುಗಳ ಕಾರಣದಿಂದ ತಮ್ಮ ಗರ್ಭಾಶಯವನ್ನು ಶಸ್ತ್ರಚಿಕಿತ್ಸೆಯಿಂದ ತೆಗೆದುಹಾಕಲಾದ ಮಹಿಳೆಯರಿಗೆ ಇದು ಪರಿಪೂರ್ಣ ಪರಿಹಾರವಾಗಿದೆ ಎಂಬುದು ವಿಡಿಯೋದಲ್ಲಿ ಮೂಡಿಬಂದಿದೆ.


ಇದನ್ನೂ ಓದಿ: ಅಬ್ಬಬ್ಬಾ! ಈ ತಾಯಿ ಜನ್ಮ ನೀಡಿದ್ದು ಒಂದಲ್ಲ, ಎರಡಲ್ಲ, ಬರೋಬ್ಬರಿ 9 ಮಕ್ಕಳಿಗೆ!


ತಾಯಿಯ ಗರ್ಭಾಶಯದಂತಹ ವ್ಯವಸ್ಥೆ


ಕೃತಕ ಗರ್ಭಧಾರಣೆ ವ್ಯವಸ್ಥೆಯನ್ನು ಹೊಂದಿರುವ 75 ಲ್ಯಾಬ್‌ಗಳಿದ್ದು ಪ್ರತಿ ಪ್ರಯೋಗಾಲಯವು 400 ಬೆಳೆಯುವ ಕೃತಕ ಗರ್ಭಾಶಯಗಳಿಗೆ ಅವಕಾಶ ಕಲ್ಪಿಸುತ್ತದೆ.


ಈ ಕೃತಕ ಗರ್ಭಾಶಯಗಳನ್ನು ತಾಯಿಯ ಗರ್ಭಾಶಯದ ಹಾಗೆಯೇ ವಿನ್ಯಾಸಗೊಳಿಸಲಾಗಿದೆ. ಮಗುವಿನ ಹೃದಯ ಬಡಿತ, ರಕ್ತದೊತ್ತಡ, ಉಸಿರಾಟದ ದರ ಮತ್ತು ಆಮ್ಲಜನಕದ ಶುದ್ಧತ್ವದಂತಹ ಪ್ರಮುಖ ಚಿಹ್ನೆಗಳನ್ನು ಮೇಲ್ವಿಚಾರಣೆ ಮಾಡುವ ಸಂವೇದಕಗಳನ್ನು ಹೊಂದಿರುತ್ತವೆ.


ಈ ಸಂದರ್ಭದಲ್ಲಿ ಮಗುವಿನ ಜನನ ಕಾಲದಲ್ಲಿ ಸಂಭವಿಸುವ ಅನುವಂಶಿಕ ಅಸಹಜತೆಗಳನ್ನು ಮೇಲ್ವಿಚಾರಣೆ ಮಾಡಬಹುದು ಎಂದು ವಿಡಿಯೋ ಬಣ್ಣಿಸಿದೆ.


ಐವಿಎಫ್ ತಂತ್ರಜ್ಞಾನದ ಬಳಕೆ


ವೀರ್ಯಾಣು ಮತ್ತು ಮೊಟ್ಟೆಯನ್ನು ರಚಿಸಲು ಇನ್ವಿಟ್ರೊ ಫಲೀಕರಣವನ್ನು (IVF) ತಂತ್ರಜ್ಞಾನದ ಸಹಾಯವನ್ನು ಪಡೆದುಕೊಳ್ಳಲಾಗಿದ್ದು ಅತ್ಯಂತ ತಳೀಯವಾದ ಆರೋಗ್ಯವಂತ ಭ್ರೂಣವನ್ನು ಆಯ್ಕೆಮಾಡಲಾಗುತ್ತದೆ.




ಸುಲಭ ಹೆರಿಗೆ


ಕೃತಕ ಗರ್ಭದಲ್ಲಿ ಬೆಳೆದ ಮಗುವು ಗರ್ಭದಿಂದ ಹೊರಬರುವ ಪ್ರಕ್ರಿಯೆ ಕೂಡ ಸುಲಭವಾಗಿದ್ದು ಗುಂಡಿ ಅದುಮಿದರೆ ಕೃತಕ ಗರ್ಭದಿಂದ ಶಿಶು ಹೊರಬರುತ್ತದೆ.


ಇದೊಂದು ಕಾಲ್ಪನಿಕ ವಿಡಿಯೋವಾಗಿದ್ದು ಅದಾಗ್ಯೂ ವಿಡಿಯೋದಲ್ಲಿರುವ ಪರಿಕಲ್ಪನೆಯನ್ನು ಅನೇಕ ಜನರು ತಳ್ಳಿಹಾಕಿದ್ದಾರೆ. ವಿಡಿಯೋ 2.3 ಲಕ್ಷಕ್ಕೂ ಹೆಚ್ಚಿನ ವೀಕ್ಷಣೆಗಳನ್ನು ಪಡೆದುಕೊಂಡಿದೆ.


ಯೂಟ್ಯೂಬ್ ಬಳಕೆದಾರರ ಅನಿಸಿಕೆ


ಯೂಟ್ಯೂಬ್ ಬಳಕೆದಾರರಾದ ಸೂಸೀಸ್ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದು ವಿಡಿಯೋ ನನ್ನನ್ನು ಚಕಿತಗೊಳಿಸಿದ್ದು ಇದನ್ನು ವಿವರಿಸಲು ನನಗೆ ಪದಗಳೇ ಸಿಗುತ್ತಿಲ್ಲ ಎಂದು ಹೇಳಿದ್ದಾರೆ. ನಾನು ಇಂತಹ ವ್ಯವಸ್ಥೆಯಿಂದ ಜನ್ಮತಾಳಿಲ್ಲ ಎಂಬುದೇ ನನಗೆ ಸಮಾಧಾನವನ್ನುಂಟು ಮಾಡಿದೆ ಎಂಬುದಾಗಿ ತಿಳಿಸಿದ್ದಾರೆ


ಟೆಸ್ಲಾ ಮುಖ್ಯಸ್ಥರಿಗೆ ಸಲಹೆ


ಹುಚ್ಚುಚ್ಚು ಅನ್ವೇಷಣೆಗಳಿಂದ ವಿಶ್ವಕ್ಕೆ ಹುಚ್ಚು ಹಿಡಿದಿದೆ ಎಂದು ಇನ್ನೊಬ್ಬ ಬಳಕೆದಾರರು ಖಾರವಾಗಿ ಕಾಮೆಂಟ್ ಮಾಡಿದ್ದಾರೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಬಿಲಿಯನೇರ್ ಎಲೋನ್ ಮಸ್ಕ್ "ಜನಸಂಖ್ಯೆ ಕುಸಿತ" ದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, ಭೂಮಿಯಲ್ಲಿ ಸಾಕಷ್ಟು ಜನಸಂಖ್ಯೆ ಇಲ್ಲದಿದ್ದರೆ ಮಂಗಳ ಗ್ರಹದಲ್ಲಿ ಜನಸಂಖ್ಯೆ ಕೊರತೆ ಉಂಟಾಗಬಹುದು ಎಂದು ತಿಳಿಸಿದ್ದರು.


ಈ ಸಮಯದಲ್ಲಿ ಸಾಕಷ್ಟು ಜನರು ಟೆಸ್ಲಾ ಮುಖ್ಯಸ್ಥರಿಗೆ ಮಾನವ ದೇಹದ ಹೊರಗೆ ಭ್ರೂಣವನ್ನು ಅಭಿವೃದ್ಧಿಪಡಿಸಬಹುದಾದ ಸಂಶ್ಲೇಷಿತ ಅಥವಾ ಕೃತಕ ಗರ್ಭಾಶಯಗಳ ಬಳಕೆಯ ಬಗ್ಗೆ ಸಲಹೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು