• Home
 • »
 • News
 • »
 • trend
 • »
 • Viral Video: ನಿವೃತ್ತಿಗೂ ಮೊದಲು ತಾಯಿಗೆ ಸೆಲ್ಯೂಟ್ ಹೊಡೆದ ಸೇನಾಧಿಕಾರಿ; ವೈರಲ್ ಆಯ್ತು ವಿಡಿಯೋ

Viral Video: ನಿವೃತ್ತಿಗೂ ಮೊದಲು ತಾಯಿಗೆ ಸೆಲ್ಯೂಟ್ ಹೊಡೆದ ಸೇನಾಧಿಕಾರಿ; ವೈರಲ್ ಆಯ್ತು ವಿಡಿಯೋ

ಸೇನಾಧಿಕಾರಿ ಸೆಲ್ಯೂಟ್ ಹೊಡೆಯುವ ದೃಶ್ಯ

ಸೇನಾಧಿಕಾರಿ ಸೆಲ್ಯೂಟ್ ಹೊಡೆಯುವ ದೃಶ್ಯ

ಭಾರತೀಯ ಸೇನೆಯ ಅಧಿಕಾರಿಯೊಬ್ಬರು ತಮ್ಮ ತಾಯಿ ಮುಂದೆ ಬಂದು ವಿಶೇಷವಾದ ಮತ್ತು ಅನಿರೀಕ್ಷಿತವಾದ ಒಂದು ಕೆಲಸವನ್ನು ಮಾಡಿದ್ದಾರೆ. ಈಗ ವೈರಲ್ ಆಗಿರುವ ವಿಡಿಯೋದಲ್ಲಿ, ಅವರ ತಾಯಿಯ ಮುಖದಲ್ಲಿನ ಸಂತೋಷಕ್ಕೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ ಅಂತ ಹೇಳಬಹುದು.

 • Share this:

  ಒಬ್ಬ ಮನುಷ್ಯ ತನ್ನ ತಾಯಿಯ (Mother) ಬಗ್ಗೆ ಎಂತಹ ಅಭಿಪ್ರಾಯವನ್ನು ಹೊಂದಿದ್ದಾರೆ ಮತ್ತು ಅವರ ಜೊತೆಗೆ ಹೇಗೆ ವರ್ತಿಸುತ್ತಾರೆ ಅನ್ನೋದರ ಮೇಲೆ ಆ ವ್ಯಕ್ತಿಯ ನಿಜವಾದ ಚಾರಿತ್ರ್ಯವನ್ನು ತಿಳಿಯಬಹುದು ಅಂತ ಹೇಳುವ ಮಾತನ್ನು ನಾವು ಅನೇಕ ಬಾರಿ ಕೇಳಿರುತ್ತೇವೆ ಅಂತ ಹೇಳಬಹುದು. ಹೌದು, ತಂದೆ-ಮಗಳ ಮತ್ತು ತಾಯಿ-ಮಗನ ಸಂಬಂಧವು ಬೇರೆ ಎಲ್ಲಾ ಸಂಬಂಧಕ್ಕಿಂತಲೂ ವಿಭಿನ್ನವಾಗಿ ಇರುತ್ತದೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ವ್ಯಕ್ತಿಯ ವ್ಯಕ್ತಿತ್ವ ಅವನ ಒಟ್ಟಾರೆ ಜೀವನದ ಮೇಲೆ ತುಂಬಾನೇ ಗಮನಾರ್ಹವಾದ ಪರಿಣಾಮವನ್ನು ಬೀರುತ್ತದೆ. ತನ್ನ ತಾಯಿ ತನಗಾಗಿ ಮಾಡಿದ ಎಲ್ಲಾ ತ್ಯಾಗಗಳ ಬಗ್ಗೆ ನಿಜವಾದ ಪ್ರೀತಿ ಮತ್ತು ಗೌರವವನ್ನು (Respect) ತೋರಿಸುವ ಒಂದು ಉದಾಹರಣೆ ಇಲ್ಲಿದೆ ನೋಡಿ.


  ಭಾರತೀಯ ಸೇನೆಯ ಅಧಿಕಾರಿಯೊಬ್ಬರು ತಮ್ಮ ತಾಯಿ ಮುಂದೆ ಬಂದು ವಿಶೇಷವಾದ ಮತ್ತು ಅನಿರೀಕ್ಷಿತವಾದ ಒಂದು ಕೆಲಸವನ್ನು ಮಾಡಿದ್ದಾರೆ. ಈಗ ವೈರಲ್ ಆಗಿರುವ ವಿಡಿಯೋದಲ್ಲಿ, ಅವರ ತಾಯಿಯ ಮುಖದಲ್ಲಿನ ಸಂತೋಷಕ್ಕೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ ಅಂತ ಹೇಳಬಹುದು.


  ತಾಯಿಯ ಮುಖದಲ್ಲಿ ಸಂತೋಷ ತರಿಸಿದ ವಿಡಿಯೋದಲ್ಲಿ ಏನಿದೆ?


  ವಿಡಿಯೋವನ್ನು ಮೇಜರ್ ಜನರಲ್ ರಂಜನ್ ಮಹಾಜನ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯ ಪುಟದಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ, ಸೇನಾಧಿಕಾರಿಯು ತಮ್ಮ ಸಮವಸ್ತ್ರವನ್ನು ಧರಿಸಿಕೊಂಡು ಮನೆಗೆ ಪ್ರವೇಶಿಸಿ ತಮ್ಮ ತಾಯಿಯನ್ನು ಭೇಟಿಯಾಗುತ್ತಿರುವುದನ್ನು ಕಾಣಬಹುದು.


  ಇದನ್ನೂ ಓದಿ: ಮದುವೆಯ ಡ್ಯಾನ್ಸ್ ಫ್ಲೋರ್ ಕುಸಿದು ಕೆಳಕ್ಕೆ ಬಿದ್ದ ಅತಿಥಿಗಳು, ವೈರಲ್‌ ಆಯ್ತು ಆ ವೀಡಿಯೋ


  ಅವರ ತಾಯಿ ಸೋಫಾದ ಮೇಲೆ ಕುಳಿತಿದ್ದರು ಮತ್ತು ಮಗನನ್ನು ನೋಡಿ ಆಹ್ಲಾದಕರವಾಗಿ ಆಶ್ಚರ್ಯಚಕಿತಳಾಗಿದ್ದಾರೆ. ಮಗನು ಸಹ ತಾಯಿ ಕುಳಿತಿರುವ ಸೋಫಾವನ್ನು ತಲುಪುತ್ತಿದ್ದಂತೆ, ತಮ್ಮ ತಾಯಿಯ ಮುಂದೆ ನಿಂತು ಸೆಲ್ಯೂಟ್ ಹೊಡೆಯುತ್ತಾರೆ.


  ಇದರಲ್ಲೇನಿದೆ ವಿಶೇಷ ಅಂತೀರಾ? ವಿಶೇಷ ಎಂದರೆ ಸೇನಾಧಿಕಾರಿ ಇನ್ನೇನು ನಿವೃತ್ತಿ ಹೊಂದುತ್ತಾರೆ ಎನ್ನುವಾಗ ಕೊನೆಯದಾಗಿ ತಮ್ಮ ತಾಯಿಗೆ ಸೆಲ್ಯೂಟ್ ಹೊಡೆದಿದ್ದಾರೆ. ಇದು ತಾಯಿ ಮತ್ತು ಮಗನಿಗೆ ಭಾವನಾತ್ಮಕವಾದ ಕ್ಷಣವಾಗಿತ್ತು ಮತ್ತು ತಾಯಿ-ಮಗ ಜೋಡಿ ನಂತರ ಪರಸ್ಪರ ಅಪ್ಪಿಕೊಳ್ಳುತ್ತಾರೆ. ಅಷ್ಟೇ ಅಲ್ಲದೆ ಆ ಮಗ ತನ್ನ ತಾಯಿಯ ಕೊರಳಿಗೆ ಹಾರವನ್ನು ಹಾಕುತ್ತಾನೆ. ಮೇಜರ್ ಜನರಲ್ ಹೇಳುವಂತೆ, ಅವರ ತಾಯಿ ಅವರನ್ನು "ಈ ಜೀವನ ಮತ್ತು ಸಮವಸ್ತ್ರಕ್ಕೆ ಯೋಗ್ಯನನ್ನಾಗಿ ಮಾಡಿದರು."

  View this post on Instagram


  A post shared by Smiley (@iranjanmahajan)

  ವಿಡಿಯೋಗೆ ಎಷ್ಟು ಮುದ್ದಾದ ಶೀರ್ಷಿಕೆ ನೀಡಿದ್ದಾರೆ ಗೊತ್ತೇ?


  "ನನ್ನ ಸಮವಸ್ತ್ರವನ್ನು ಗೋಡೆಗೆ ನೇತುಹಾಕುವ ಮೊದಲು ನನ್ನ ತಾಯಿಗೆ ಅಂತಿಮ ನಮಸ್ಕಾರ" ಎಂದು ಅವರು ವಿಡಿಯೋಗೆ ಶೀರ್ಷಿಕೆಯನ್ನು ನೀಡಿದ್ದಾರೆ. ನಾವು ಅಂಬಾಲಾದಿಂದ ದೆಹಲಿಗೆ ಹೋದೆವು ಮತ್ತು ನನ್ನ ತಾಯಿಗೆ ಇದ್ಯಾವುದು ಗೊತ್ತಿರಲಿಲ್ಲ, ಇದು ಆಕೆಗೆ ನಾವು ನೀಡಿದ ಸರ್‌ಪ್ರೈಸ್ ಅಂತಾನೆ ಹೇಳಬಹುದು. ಅವರು ಮಗುವಿಗೆ ಜನ್ಮ ನೀಡಿದರು ಮತ್ತು 35 ವರ್ಷಗಳ ಕಾಲ ನನ್ನ ತಾಯ್ನಾಡಿಗೆ ಹೆಮ್ಮೆಯಿಂದ ಸೇವೆ ಸಲ್ಲಿಸಲು ಈ ಜೀವನ ಮತ್ತು ಸಮವಸ್ತ್ರಕ್ಕೆ ನನ್ನನ್ನು ಅರ್ಹರನ್ನಾಗಿ ಮಾಡಿದರು. ಅವಕಾಶ ಸಿಕ್ಕರೆ ಮತ್ತೊಮ್ಮೆ ಭಾರತೀಯ ಸೇನೆಗೆ ಸೇವೆ ಸಲ್ಲಿಸಲು ಸದಾ ಸಿದ್ಧನಿರುತ್ತೇನೆ' ಎಂದು ಹೇಳಿದರು.


  ವಿಡಿಯೋ ನೋಡಿದ ನೆಟ್ಟಿಗರು ‘ಸೋ ಸ್ವೀಟ್’ ಅಂದ್ರು


  ಡಿಸೆಂಬರ್ 13 ರಂದು ಈ ವಿಡಿಯೋವನ್ನು ಹಂಚಿಕೊಂಡಿದ್ದು, ಈ ಕ್ಲಿಪ್ 38,000 ಕ್ಕೂ ಹೆಚ್ಚು ಲೈಕ್ ಗಳನ್ನು ಮತ್ತು ನಾಲ್ಕು ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ. ಸೆಲೆಬ್ರಿಟಿ ರಣವಿಜಯ್ ಸಂಘ ಕಾಮೆಂಟ್ ಮಾಡಿ "ಸ್ಮೈಲಿ ಅಂಕಲ್, ನಿಮ್ಮ ಬಗ್ಗೆ ತುಂಬಾ ಹೆಮ್ಮೆ ಇದೆ! ಇದು ತುಂಬಾ ಮುದ್ದಾಗಿದೆ!" ಎಂದು ಬರೆದಿದ್ದಾರೆ.


  "ಎಂತಹ ಸುಂದರವಾದ ವಿಡಿಯೋ ಅಂಕಲ್! ನಿಮ್ಮ ಎರಡನೇ ಇನ್ನಿಂಗ್ಸ್ ಗೆ ಶುಭ ಹಾರೈಸುತ್ತೇನೆ" ಎಂದು ಮತ್ತೊಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.


  "ಎಂತಹ ಒಳ್ಳೆಯ ಹಾವಭಾವ ಎಂತಹ ಸಂಸ್ಕೃತಿ, ಎಂತಹ ನೈತಿಕತೆ... ಅದ್ಭುತ. ಭಾರತೀಯ ಸಶಸ್ತ್ರ ಪಡೆಗಳ ನೈತಿಕತೆ ಮತ್ತು ಸೌಂದರ್ಯ ಭಾರತೀಯ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಪ್ರತಿಬಿಂಬಿಸುತ್ತದೆ. ಜೀವನದಲ್ಲಿ ನಾವು ಎಷ್ಟೇ ದೊಡ್ಡವರಾಗಿದ್ದರೂ ಅಥವಾ ನಾವು ಎಷ್ಟೇ ವಯಸ್ಸಾಗಿದ್ದರೂ, ಪೋಷಕರು ಯಾವಾಗಲೂ ನಮ್ಮ ಜೀವನದಲ್ಲಿ ದೇವರ ಸ್ಥಾನಮಾನವನ್ನು ಹೊಂದಿರುತ್ತಾರೆ. ಜೈ ಹಿಂದ್" ಎಂದು ಮೂರನೇ ವ್ಯಕ್ತಿ ಹೇಳಿದರು. ಅನೇಕ ಬಳಕೆದಾರರು ಪೋಸ್ಟ್ ನಲ್ಲಿ ಹೃದಯದ ಎಮೋಜಿಗಳನ್ನು ಹಾಕಿದ್ದಾರೆ.

  Published by:Prajwal B
  First published: