ಪಶ್ಮಿಮ ಬಂಗಾಳ: ಭಾರತೀಯ ಸೇನೆ (Indian Army) ನಮ್ಮ ಗಡಿಯಲ್ಲಿ ನಿಂತು ನಮ್ಮ ರಕ್ಷಣೆಗಾಗಿ ಕಾವಲು ಕಾಯುತ್ತದೆ. ಸಂಕಷ್ಟದ ಸಮಯದಲ್ಲಿ ನಾಗರಿಕರಿಗೆ ಸಹಾಯ ಮಾಡುವಲ್ಲಿ ಸೈನಿಕರು ಮುಂದಿರುತ್ತಾರೆ. ಜನರನ್ನು ಮಾತ್ರವಲ್ಲದೆ ಕಾಡು ಪ್ರಾಣಿಗಳ (Wild animals) ಸಂಕಷ್ಟದ ಪರಿಸ್ಥಿತಿಯಲ್ಲಿ ಅವುಗಳ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಬೆಂಗಾಲ್ ಸ್ಯಾಪರ್ಸ್‌ನ ತಂಡವೊಂದು ಎನ್‌ಜಿಒ ಸಂಸ್ಥೆಯಾದ ವೈಲ್ಡ್‌ಲೈಫ್ ಎಸ್‌ಒಎಸ್‌ನ (wildlifesos)ಸಹಯೋಗದೊಂದಿಗೆ ಮುಂಗಾಲು ಮುರಿತದೊಂದಿಗೆ ನರಳುತ್ತಿರುವ 35 ವರ್ಷದ ಮೋತಿ ಎಂಬ ಆನೆಯನ್ನು (Elephant) ರಕ್ಷಣೆ ಮಾಡಲು ನೆರವಾಗುತ್ತಿದೆ.
ಮೋತಿ ಎದ್ದು ನಿಲ್ಲಿಸಲು ಹರಸಾಹಸ
ಅಪೌಷ್ಟಿಕತೆ, ಪಶುವೈದ್ಯಕೀಯ ಸೌಲಭ್ಯದಿಂದ ವಂಚಿತವಾಗಿ, ಕಾಲು ಮುರಿದಿರುವ ಹಾಗೂ ಪಾದ ಸವೆದಿದ್ದ ಮೋತಿಯನ್ನು ವೈಲ್ಡ್‌ಲೈಫ್ ಎಸ್‌ಒಎಸ್ ಮಥುರಾ ತಂಡ ಪತ್ತೆ ಮಾಡಿದೆ. ಕುಸಿದುಬಿದ್ದದ ಮೋತಿಯನ್ನು ಎದ್ದೇಳುವಂತೆ ಮಾಡುವುದು ಅದರ ಆರೋಗ್ಯ ದೃಷ್ಟಿಯಿಂದ ಮುಖ್ಯವಾಗಿತ್ತು.
ಅದಕ್ಕಾಗಿ ಎನ್‌ಜಿಒ ತಂಡ ಮಾಜಿ ಸೇನಾ ಮುಖ್ಯಸ್ಥ ಜನರಲ್ ವಿ.ಕೆ. ಸಿಂಗ್ ಮೂಲಕ ಸೇನಾ ಮುಖ್ಯಸ್ಥ ಮತ್ತು ಇಂಜಿನಿಯರ್‌ಗಳ ಮುಖ್ಯಸ್ಥರನ್ನು ಕೇಳಿಕೊಂಡಿದೆ. ತಕ್ಷಣವೇ ಪ್ರತಿಕ್ರಿಯಿಸಿದ, ಲೆಫ್ಟಿನೆಂಟ್ ಕರ್ನಲ್ ನೇತೃತ್ವದ ಬೆಂಗಾಲ್ ಸ್ಯಾಪರ್ಸ್ ತಂಡವು ರಾತ್ರಿಯಿಡೀ ಸಂಚರಿಸಿ ಭಾನುವಾರ ಬೆಳಿಗ್ಗೆ ಮೋತಿ ಇರುವ ಸ್ಥಳಕ್ಕೆ ತಲುಪಿದೆ. ಆನೆ ಬಿದ್ದಿರುವ ಜಾಗದಲ್ಲಿ ಕ್ಲಾರ್ ನಿರ್ಮಾಣ ಮಾಡಿದ್ದು, ಎನ್‌ಜಿಒ ಪಶುವೈದ್ಯಕೀಯ ವೈದ್ಯರ ಸಹಯೋಗದೊಂದಿಗೆ ಆನೆ ನಿಂತುಕೊಳ್ಳುವಂತೆ ಮಾಡಲು ಹರಸಾಹಸ ಪಡುತ್ತಿದ್ದಾರೆ.
ಇದನ್ನೂ ಓದಿ: Dog: ನಾಯಿ ಕಚ್ಚಿದ್ದಕ್ಕೆ ಅದರ ಮಾಲೀಕನಿಗೆ ಶಿಕ್ಷೆ, ರಾಟ್ ವೀಲರ್ ಶ್ವಾನದಿಂದ ಬ್ಯುಸಿನೆಸ್ ಮ್ಯಾನ್ ಜೈಲು ಪಾಲು!
2016ರಲ್ಲೂ ನೆರವಿಗೆ ಬಂದಿದ್ದ ಸೇನೆ
2016 ರಲ್ಲಿ ಸಹ ವೈಲ್ಡ್‌ಲೈಫ್ ಎಸ್‌ಒಎಸ್ ತಂಡಕ್ಕೆ ಭಾರತೀಯ ಸೇನೆ ಇಂತಹದ್ದೆ ಪ್ರಕರಣದಲ್ಲಿ ನೆರವಾಗಿತ್ತು. ಮದ್ರಾಸ್ ಸ್ಯಾಪರ್ಸ್ ವಿಭಾಗ ಅಣೆಕಟ್ಟಿನಿಂದ ಬಿದ್ದು ಕಾಲು ಮುರಿದುಕೊಂಡಿದ್ದ ಸಿದ್ಧ ಎಂಬ ಆನೆಗೆ ಸಹಾಯ ಮಾಡಲು ಬೇಲಿ ನಿರ್ಮಿಸಿಕೊಟ್ಟಿದ್ದರು..
ಇದೀಗ ಮೋತಿ ಆನೆಗೆ ಸಹಾಯ ಮಾಡಲು ಬಂಗಾಳ ಸ್ಯಾಪರ್ಗಳನ್ನು ನಿಯೋಜಿಸಿದ್ದಕ್ಕಾಗಿ ಭಾರತೀಯ ಸೇನೆಗೆ ವೈಲ್ಡ್‌ಲೈಫ್ SOS ಸಿಇಒ ಕಾರ್ತಿಕ್ ಸತ್ಯನಾರಾಯಣ್ ಧನ್ಯವಾದ ಅರ್ಪಿಸಿದ್ದಾರೆ. ಭಾರತದ ಪಾರಂಪರಿಕ ಪ್ರಾಣಿ ಮತ್ತು ಅಳಿವಿನಂಚಿನಲ್ಲಿರುವ ಪ್ರಾಣಿಗಳ ನೆರವಿಗೆ ಸಹಾಯ ಮಾಡಲು ಇದೊಂದು ದೇಶಭಕ್ತಿಯ ಪ್ರಯತ್ನವಾಗಿದೆ. ಅವರ ಸಹಕಾರ ಮತ್ತು ಬೆಂಬಲಕ್ಕಾಗಿ ನಾವು ಅರಣ್ಯ ಇಲಾಖೆ ಮತ್ತು ಮೋತಿ ಆನೆಯ ಪಾಲಕರಿಗೆ ಕೃತಜ್ಞರಾಗಿರುತ್ತೇವೆ ಎಂದು ಅವರು ತಿಳಿಸಿದ್ದಾರೆ.
ಮೋತಿ ಯಾರು, ಏನಾಗಿದೆ?
ಮೋತಿ, ಅವರು 35 ವರ್ಷದ ಆನೆ. ಕಾಲು ಮುರಿತಕ್ಕೆ ಒಳಗಾಗಿ, ಕಾಡಿನ ಮಧ್ಯ ಕುಸಿದುಬಿದ್ದಿತ್ತು. ವೈಲ್ಡ್‌ಲೈಫ್ ಎಸ್ಒಸ್ ತಂಡ ಇದರ ಬಗ್ಗೆ ಮಾಹಿತಿ ತಿಳಿದು ಸೇನೆ ಸಹಾಯದೊಂದಿಗೆ ಅಲ್ಲಿಗೆ ತೆರಳಿದೆ. ಸೇನಾ ಇಂಜಿನಿಯರ್ಸ್ ತಂಡದ ಬೆಂಬಲದೊಂದಿಗೆ ಸಂಪೂರ್ಣ ನಿತ್ರಾಣಗೊಂಡಿದ್ದ ಆನೆಗೆ ಚಿಕಿತ್ಸೆ ಕೊಡಲಾಗುತ್ತಿದೆ. ಜನವರಿ 22ರಿಂದಲೂ ಚಿಕಿತ್ಸೆ ನಡೆಯುತ್ತಿದೆ. ನಿತ್ರಾಣದಿಂದ ಆರೋಗ್ಯ ಸಮಸ್ಯೆ ಎದುರಿಸಿದ್ದ ಮೋತಿ ಆರೋಗ್ಯದಲ್ಲಿ ನಿಧಾನವಾಗಿ ಚೇತರಿಕೆ ಕಾಣುತ್ತಿದೆ ಎಂದು ವೈಲ್ಡ್ ಲೈಫ್ ತಂಡ ಸಾಮಾಜಿಕ ಜಾಲಾತಾಣದಲ್ಲಿ ತಿಳಿಸಿದೆ.
ಆಹಾರವನ್ನು ತ್ಯಜಿಸಿದ್ದ ಮೋತಿ
ಕಾಲು ಮುರಿತ ನೋವಿನಿಂದ ನರಕಯಾತನೆ ಅನುಭವಿಸಿದ ಮೋತಿ ಆರಂಭದಲ್ಲಿ ಆಹಾರ ತಿನ್ನುತ್ತಿರಲಿಲ್ಲ. ವೈಲ್ಡ್ ಲೈಫ್ ತಂಡ ಮೃದುವಾದ ಬೇಯಿಸಿದ ಧಾನ್ಯದ ವಿಶೇಷ ಮಿಶ್ರಣವನ್ನು ಮಾಡಿ ಕೊಟ್ಟ ಮೆಲೆ ಸ್ವಲ್ಪ ತಿನ್ನಲು ಪ್ರಾರಂಭಿಸಿದೆ. ನಂತರ ದಿನೇ ದಿನೇ ಚೇತರಿಸಿಕೊಂಡ ಮೋತಿ ತರಕಾರಿ, ಹಣ್ಣ ಹಂಪಲುಗಳನ್ನು ತಿನ್ನಲು ಶುರುಮಾಡಿದೆ. ಎದ್ದು ನಿಲ್ಲಲು ಸಾಧ್ಯವಾಗದಿದ್ದರೂ, ಮಲಗಿಕೊಂಡೆ ಪ್ರತಿದಿನ 25ರಿಂದ 30 ಕೆಜಿ ಹಣ್ಣುಗಳನ್ನು ತಿನ್ನುತ್ತಿದೆ ಎಂದು ವೈಲ್ಡ್‌ಲೈಫ್ ತನ್ನ ಇನ್ಸ್ಟಾಗ್ರಾಮ್ನಲ್ಲಿ ತಿಳಿಸಿದೆ.
ಆನೆ ಸವಾರಿ ನಿಲ್ಲಿಸುವಂತೆ ಮನವಿ
ಮೋತಿ ಆನೆಗೆ ಕಾಲಿನ ಪರಿಸ್ಥಿತಿಗೆ ಕಾರಣ ವಿವರಿಸಿರುವ ವೈಲ್ಡ್‌ಲೈಫ್ ತಂಡ, ಇದಕ್ಕೆ ಕಾರಣ ಬಂಧಿತ ಆನೆಗಳನ್ನು ಡಾಂಬರು ರಸ್ತೆಯಲ್ಲಿ ಒತ್ತಾಯಪೂರ್ವಕವಾಗಿ ನಡೆಸುವುದು ಎಂದು ತಿಳಿಸಿದೆ. ರಸ್ತೆಗಳಲ್ಲಿ ಓಡಾಡುವಾಗ ಗಾಜು, ಚೂಪಾದ ವಸ್ತುಗಳು ಚುಚ್ಚಿ ಗಾಯಗಳಾಗುತ್ತವೆ. ಜೊತೆಗೆ ಪಾದ ಕೂಡ ಸವೆಯುತ್ತವೆ. ಇಂತಹ ಘಟನೆಗಳು ಭವಿಷ್ಯದಲ್ಲಿ ಬೇರೆ ಆನೆಗಳಿಗೆ ಬರಬಾರದೆಂದರೆ ನಾವೆಲ್ಲಾ ಆನೆಗಳ ಸವಾರಿಯನ್ನು ನಿರಾಕರಿಸುತ್ತೇವೆ ಎಂಬ ಸಂದೇಶವನ್ನು ಸಾರೋಣ ಎಂದು ಎನ್‌ಜಿಒ ಸಾರ್ವಜನಿಕರಿಗೆ ಮನವಿ ಮಾಡಿದೆ.
ಮೋತಿಯನ್ನು ಎದ್ದು ನಿಲ್ಲಿಸಲು ಸೇನೆ ನೆರವು
ಮೋತಿಯ ದುರವಸ್ಥೆಯನ್ನು ವೈಲ್ಡ್‌ಲೈಫ್ ಎಸ್‌ಒಎಸ್ ಭಾರತೀಯ ಸೇನೆಯ ಗಮನಕ್ಕೆ ತಂದಿದ್ದು, ಸೇನಾ ಇಂಜಿನಿಯರ್‌ಗಳು ಮೋತಿ ಇದ್ದ ಸ್ಥಳಕ್ಕೆ ಸೋಮವಾರ ತಲುಪಿದ್ದಾರೆ. ಅವರು ಮೋತಿಯನ್ನು ನೇರವಾಗಿ ನಿಲ್ಲಿಸಲು ಸ್ಯಾಂಡ್ ನಿರ್ಮಾಣ ಮಾಡುತ್ತಿದ್ದಾರೆ. ವೈಲ್ಡ್‌ಲೈಫ್ ತಂಡದೊಂದಿಗೆ ರಾತ್ರಿಯಿಡೀ ಕೆಲಸ ಮಾಡುತ್ತಿದ್ದಾರೆ. ದಯವಿಟ್ಟು ಮೋತಿಗಾಗಿ ಎಲ್ಲರೂ ಪ್ರಾರ್ಥಿಸಿ. ಎಲ್ಲರ ಪ್ರಾರ್ಥನೆಯಿಂದ ಮೋತಿ ನಿಲ್ಲುವಂತಾದಲಿ ಎಂದು ವೈಲ್ಡ್ ಲೈಫ್ ತಂಡ ಮನವಿ ಮಾಡಿಕೊಂಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ