• Home
  • »
  • News
  • »
  • trend
  • »
  • Medical Insurance: ಉತ್ತೇಜನಕಾರಿಯಾಗಿರುವ ಮೆಡಿಕಲ್ ಇನ್ಶೂರೆನ್ಸ್ ಹೇಗೆ ಸಹಕಾರಿ? ಇಲ್ಲಿದೆ ಮಾಹಿತಿ

Medical Insurance: ಉತ್ತೇಜನಕಾರಿಯಾಗಿರುವ ಮೆಡಿಕಲ್ ಇನ್ಶೂರೆನ್ಸ್ ಹೇಗೆ ಸಹಕಾರಿ? ಇಲ್ಲಿದೆ ಮಾಹಿತಿ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಮೊದಲು, ವಿಮೆಯು ಜನರು ಅನಾರೋಗ್ಯಕ್ಕೆ ಒಳಗಾದಾಗ ಮಾತ್ರ ಅವರಿಗೆ ಸೌಕರ್ಯಗಳನ್ನು ಒದಗಿಸುವುದರ ಮೇಲೆ ಕೇಂದ್ರೀಕೃತವಾಗಿತ್ತು ಆದರೆ ಅನಾರೋಗ್ಯಕ್ಕೆ ಒಳಗಾಗುವುದನ್ನು ತಡೆಗಟ್ಟುವ ಕುರಿತು ಯಾವುದೇ ಪ್ರೋತ್ಸಾಹಗಳನ್ನು ವಿಮೆ ಹೊಂದಿರಲಿಲ್ಲ. ಆದರೆ ಸಾಂಕ್ರಾಮಿಕವು ವಿಮಾ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆಯನ್ನುಂಟು ಮಾಡಿದೆ. ಸಾಂಕ್ರಾಮಿಕವು ಜನರಲ್ಲಿ ಆರೋಗ್ಯವಾಗಿರುವುದರ ಮಹತ್ವನ್ನುಂಟು ಮಾಡಿದೆ.

ಮುಂದೆ ಓದಿ ...
  • News18 Kannada
  • Last Updated :
  • New Delhi, India
  • Share this:

ಆರೋಗ್ಯ ವಿಮೆ (Health insurance) ಕ್ಷೇತ್ರದಲ್ಲಿನ ಬದಲಾವಣೆಗೆ ಕೋವಿಡ್ ಸಾಂಕ್ರಾಮಿಕವು ಪ್ರಮುಖ ರುವಾರಿ ಎಂದೆನಿಸಿದೆ. ಮೊದಲು, ವಿಮೆಯು ಜನರು ಅನಾರೋಗ್ಯಕ್ಕೆ ಒಳಗಾದಾಗ ಮಾತ್ರ ಅವರಿಗೆ ಸೌಕರ್ಯಗಳನ್ನು ಒದಗಿಸುವುದರ ಮೇಲೆ ಕೇಂದ್ರೀಕೃತವಾಗಿತ್ತು ಆದರೆ ಅನಾರೋಗ್ಯಕ್ಕೆ ಒಳಗಾಗುವುದನ್ನು ತಡೆಗಟ್ಟುವ ಕುರಿತು ಯಾವುದೇ ಪ್ರೋತ್ಸಾಹಗಳನ್ನು ವಿಮೆ ಹೊಂದಿರಲಿಲ್ಲ. ಆದರೆ ಸಾಂಕ್ರಾಮಿಕವು ವಿಮಾ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆಯನ್ನುಂಟು ಮಾಡಿದೆ. ಸಾಂಕ್ರಾಮಿಕವು ಜನರಲ್ಲಿ ಆರೋಗ್ಯವಾಗಿರುವುದರ (Healthy) ಮಹತ್ವನ್ನುಂಟು ಮಾಡಿದೆ. ಕೋವಿಡ್ -19 ಹಾಗೂ ಇತರ ಯಾವುದೇ ಕಾಯಿಲೆಗಳಿಂದ (Disease) ಬಳಲದಂತೆ ಜನರು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಅಂದರೆ ರೋಗ ದೇಹವನ್ನು ಆವರಿಸಿಕೊಳ್ಳುವ ಮೊದಲೇ ಪೂರ್ವಭಾವಿಯಾಗಿ ಹಲವಾರು ಪರೀಕ್ಷೆಗಳನ್ನು (Tests) ನಡೆಸುವುದು, ಆರೋಗ್ಯಕರ ಆಹಾರ ಪದ್ಧತಿ, ಜೀವನ ಶೈಲಿಗೆ ಒತ್ತು ಕೊಡುವುದು ಹೀಗೆ ಸಾಂಕ್ರಾಮಿಕವು ಒಟ್ಟಾರೆಯಾಗಿ ಜನರ ರೀತಿ ನೀತಿಗಳನ್ನು ಬದಲಾಯಿಸಿದೆ. 


ವೈದ್ಯಕೀಯ ವಿಮಾ ಕ್ಷೇತ್ರವು ಕೂಡ ಆರೋಗ್ಯದ ಸಮಗ್ರ ದೃಷ್ಟಿಕೋನವನ್ನು ಒಳಗೊಂಡಿರುವ ಯೋಜನೆಗಳನ್ನು ರಚಿಸುವುದರ ಮೇಲೆ ಈಗ ಗಮನಹರಿಸಿದೆ.


ಇನ್ಸುರ್ಟೆಕ್ ಸ್ಟಾರ್ಟಪ್‌ಗಳು ವಿಮೆ ಕಂಪನಿಗಳೊಂದಿಗೆ ಹೇಗೆ ಸಂಘಟಿತವಾಗಿದೆ
ಅನಾರೋಗ್ಯವನ್ನು ತಡೆಗಟ್ಟುವುದು ಹಾಗೂ ಅನಾರೋಗ್ಯಕ್ಕೆ ಒಳಗಾದಾಗ ಆರೈಕೆಯ ಮೇಲೆ ಹೆಚ್ಚು ಗಮನಹರಿಸುವಂತಹ ಯೋಜನೆಗಳನ್ನು ಈಗ ಅನುಷ್ಠಾನಕ್ಕೆ ತರಲಾಗುತ್ತಿದೆ. ಇನ್ನು ಗ್ರಾಹಕರ ಆದ್ಯತೆಗಳಿಗೆ ಅನುಗುಣವಾಗಿ ಯೋಜನೆಗಳಿಗೆ ಪೂರಕವಾಗಿರುವ ಕಸ್ಟಮ್ ಪ್ಯಾಕೇಜ್‌ಗಳನ್ನು ರಚಿಸಲು ಇನ್ಸುರ್ಟೆಕ್ (ಪ್ರಸ್ತುತ ವಿಮಾ ಉದ್ಯಮದ ಮಾದರಿಯಿಂದ ವೆಚ್ಚ ಉಳಿತಾಯ ಮತ್ತು ದಕ್ಷತೆಯನ್ನು ಕಂಡುಹಿಡಿಯಲು ವಿನ್ಯಾಸಗೊಳಿಸಲಾದ ತಂತ್ರಜ್ಞಾನದ ಆವಿಷ್ಕಾರಗಳ ಬಳಕೆಯನ್ನು ಸೂಚಿಸುತ್ತದೆ) ಸ್ಟಾರ್ಟಪ್‌ಗಳು ಈ ವಿಮಾ ಕಂಪನಿಗಳೊಂದಿಗೆ ಕೈಜೋಡಿಸಿವೆ.


ಇದನ್ನೂ ಓದಿ: EPS Pensioners: ಇಪಿಎಸ್ ಪಿಂಚಣಿದಾರರಿಗೆ ಗುಡ್ ನ್ಯೂಸ್, ಮತ್ತೊಂದು ಹೊಸ ಫೀಚರ್!


ಇಂತಹ ಸ್ಟಾರ್ಟಪ್‌ಗಳಲ್ಲಿನ ಹೂಡಿಕೆಗಳು 2021 ರಲ್ಲಿ 10 ಶತಕೋಟಿಗೆ ಏರಿಕೆಯಾಗಿದ್ದು, 2020 ರಿಂದ 60% ಹೆಚ್ಚಾಗಿದೆ ಎಂಬುದಾಗಿ ಅಂಕಿ ಅಂಶಗಳು ತಿಳಿಸಿವೆ.


ಹಲವಾರು ಯೋಜನೆಗಳನ್ನೊಳಗೊಂಡ ವಿಮಾ ಪ್ಯಾಕೇಜ್‌ಗಳು
ಆರೋಗ್ಯ ವಿಮಾ ಪ್ಯಾಕೇಜುಗಳು ಹಲವಾರು ಸೌಲಭ್ಯಗಳನ್ನು ಒಳಗೊಂಡಿದ್ದು, ವೈಯಕ್ತೀಕರಿಸಿದ ಸೇವೆಗಳು, ಆರೋಗ್ಯ ಯೋಜನೆಗಳು, ಡಿಜಿಟಲ್ ಆರೋಗ್ಯ ಸಲಹೆ, ಮೇಲ್ವಿಚಾರಣೆಯನ್ನು ಒದಗಿಸುತ್ತವೆ. ಇಂದು ಹೆಚ್ಚಿನ ವಿಮಾದಾರರು ತಮ್ಮದೇ ಫೋನ್ ಇನ್ ಕನ್ಸಲ್ಟೇಶನ್ ಸೇವೆಗಳನ್ನು ಆರಂಭಿಸಿದ್ದು ವಿಮೆ ಮಾಡಲಿಚ್ಛಿಸುವ ಉದ್ಯೋಗಿಗಳಿಗೆ ನೆರವು ನೀಡಲು ಮೂರನೇ ವ್ಯಕ್ತಿ ನೆಟ್‌ವರ್ಕ್‌ಗಳು ಹಾಗೂ ಆರೈಕೆ ಸಂಸ್ಥೆಗಳೊಂದಿಗೆ ಕೈಜೋಡಿಸಿವೆ.


ಆರೋಗ್ಯ ವಿಮೆಗಳನ್ನು ಖರೀದಿಸುವ ಎಚ್‌ಆರ್ ಸಮೂಹಗಳು ಓಪಿಡಿ (ಹೊರರೋಗಿ ವಿಭಾಗ) ಯನ್ನು ಒಳಗೊಂಡ ವಿಮಾ ಯೋಜನೆಗಳಿಗೆ ಆದ್ಯತೆ ನೀಡುತ್ತಿದ್ದು, ಕೈಗೆಟಕುವ ದರದಲ್ಲಿ ಬರುವ ಯೋಜನೆಗಳು ಹಾಗೂ ಸಂಸ್ಥೆಯ ಉದ್ಯೋಗಿಗಳಿಗೆ ಅದು ಪ್ರಯೋಜನಕಾರಿಯಾಗಿರಬೇಕು ಎಂದೂ ಬಯಸುತ್ತಿದ್ದಾರೆ. ಒಪಿಡಿ ಯೋಜನೆಗಳಿರುವ ಪ್ಯಾಕೇಜ್‌ಗಳು ಆರೈಕೆ ವೆಚ್ಚವನ್ನು ನಿಯಂತ್ರಿಸಲು ಅನುವು ಮಾಡಿಕೊಡುತ್ತದೆ. ಅಂತೆಯೇ ಉತ್ತಮ ಒಪಿಡಿ ನೆಟ್‌ವರ್ಕ್‌ಗಳು ನಿಮ್ಮ ಪ್ರೀತಿಪಾತ್ರರನ್ನು ಆರೋಗ್ಯವಂತರನ್ನಾಗಿಸಲು, ವಿಶೇಷವಾಗಿ ಸಾಂಕ್ರಾಮಿಕ ರೋಗ ವಿಭಾಗದಲ್ಲಿ ವಿಮಾದಾರರಿಗೆ ಎಲ್ಲಾ ಕ್ಲೈಮ್‌ಗಳ ಮೂರನೇ ಒಂದು ಭಾಗಕ್ಕಿಂತ ಹೆಚ್ಚಿನದನ್ನು ಸೇರ್ಪಡೆಗೊಳಿಸಲು ಅನುವು ಮಾಡಿಕೊಡುತ್ತದೆ.


ಆರೋಗ್ಯವಂತರಾಗಿರುವುದರಿಂದ ಉಂಟಾಗುವ ಲಾಭಗಳೇನು?
ಒಪಿಡಿಯ ಸುಗಮಗೊಳಿಸುವಿಕೆಯು ಗಂಭೀರ ಕಾಯಿಲೆಗಳನ್ನು ತಡೆಗಟ್ಟಲು ಹಾಗೂ ಸೂಕ್ತ ಚಿಕಿತ್ಸೆಯನ್ನು ಒದಗಿಸಲು ಸಹಕಾರಿಯಾಗಿದೆ. ಇಲ್ಲಿ ಗಮನಿಸಬೇಕಾದ ಒಂದು ಅಂಶವೆಂದರೆ ಅನಾರೋಗ್ಯದಿಂದ ಆರೋಗ್ಯದ ಕಡೆಗೆ ಸಾಗುವುದು ಆರ್ಥಿಕತೆಯ ಮೇಲೂ ಪರಿಣಾಮ ಬೀರುವ ಅಂಶವಾಗಿದೆ.


ಡೆಲಾಯ್ಟ್ ಸಂಸ್ಥೆ ನಡೆಸಿದ ಅಧ್ಯಯನದ ಪ್ರಕಾರ, ಮಾನಸಿಕ ಆರೋಗ್ಯ ಸಮಸ್ಯೆಗಳು ಭಾರತೀಯ ಸಂಸ್ಥೆಗಳಿಗೆ ವರ್ಷಕ್ಕೆ $14 ಶತಕೋಟಿ ವೆಚ್ಚಕ್ಕೆ ಕಾರಣವಾಗಿದೆ ಎಂದು ತಿಳಿಸಿದೆ. ICRIER ನಡೆಸಿರುವ ಅಧ್ಯಯನದ ಪ್ರಕಾರ ಉದ್ಯೋಗಿಗಳು ಅನಾರೋಗ್ಯಕ್ಕೆ ಒಳಗಾಗುವುದರಿಂದ 25% ದಷ್ಟು ಭಾರತೀಯ ಕಂಪನಿಗಳು ವಾರ್ಷಿಕ ಕೆಲಸದ ದಿನಗಳಲ್ಲಿ 14% ನಷ್ಟಕ್ಕೆ ಗುರಿಯಾಗುತ್ತಿವೆ ಎಂದು ತಿಳಿಸಿದೆ.


ಇದನ್ನೂ ಓದಿ:  Car Insurance: ಕಾರಿನ ಮೇಲೆ ಮರ ಬಿದ್ರೆ ವಿಮೆ ಸಿಗೋದಿಲ್ವಾ? ನಿಯಮಗಳು ಏನು ಹೇಳುತ್ತವೆ ಅಂತ ನೋಡಿ


ಅನಾರೋಗ್ಯವು ವೆಚ್ಚಕ್ಕೆ ಕಾರಣವಾಗಿದೆ ಹಾಗೂ ಕಂಪನಿಯ ಉತ್ಪಾದಕತೆ ಮತ್ತು ಲಾಭದ ಮೇಲೂ ಪರಿಣಾಮ ಬೀರುತ್ತದೆ ಎಂಬುದಾಗಿ ಈ ಅಧ್ಯಯನಗಳು ತಿಳಿಸಿವೆ. ಹೊಸಯುಗದ ವಿಮಾ ಕಂಪನಿಗಳು ಉದ್ಯೋಗಿ ಹಾಗೂ ಉದ್ಯಮದೊಂದಿಗೆ ಜೊತೆಯಾಗಿ ಕಾರ್ಯನಿರ್ವಹಿಸುತ್ತಿದ್ದು ದೇಶಕ್ಕೆ ಆರೋಗ್ಯ ಲಾಭವನ್ನು ಒದಗಿಸುವತ್ತ ಗಮನಹರಿಸಿದೆ.

Published by:Ashwini Prabhu
First published: