Bank Lockers: ಬ್ಯಾಂಕ್ ಲಾಕರ್‌ಗಳು ಸುರಕ್ಷಿತವೇ? ಅಲ್ಲಿ ನಮ್ಮ ಸ್ವತ್ತುಗಳನ್ನು ಇಡಲು ತೆರಬೇಕಾದ ಶುಲ್ಕವೆಷ್ಟು?

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವು ತನ್ನ ನಗರ ಮತ್ತು ಮೆಟ್ರೋ ಶಾಖೆಗಳಲ್ಲಿ ಚಿಕ್ಕ ಗಾತ್ರದ ಲಾಕರ್‌ಗೆ (125*175*492ಸೆಂ.ಮೀ) ವಾರ್ಷಿಕ 1,500 ರೂ. ಮತ್ತು ಜಿಎಸ್‍ಟಿ ಹಾಗೂ ಅದೇ ಗಾತ್ರದ ಲಾಕರ್‌ಗೆ ಗ್ರಾಮೀಣ ಶಾಖೆಗಳಲ್ಲಿ 1000ರೂ. ಮತ್ತು ಜಿಎಸ್‍ಟಿ ಶುಲ್ಕ ವಿಧಿಸುತ್ತದೆ.

ಬ್ಯಾಂಕ್ ಲಾಕರ್

ಬ್ಯಾಂಕ್ ಲಾಕರ್

  • Share this:

    ನಮ್ಮಲ್ಲಿ ಬಹಳಷ್ಟು ಜನರು, ತಮ್ಮ ಅಮೂಲ್ಯವಾದ ವಸ್ತುಗಳನ್ನು ಮನೆಯ ಬದಲು ಬ್ಯಾಂಕ್ ಲಾಕರ್‌ನಲ್ಲಿ ಇಡಲು ಇಷ್ಟಪಡುತ್ತಾರೆ. ನೈಸರ್ಗಿಕ ವಿಕೋಪದ ಕಾರಣದಿಂದ ಲಾಕರ್‌ನಲ್ಲಿರುವ ವಸ್ತುಗಳಿಗೆ ಹಾನಿಯಾದರೆ ಅಥವಾ ಕಳುವಾದರೆ, ಅದಕ್ಕೆ ಬ್ಯಾಂಕ್ ಜವಾಬ್ದಾರ ಅಲ್ಲ ಎಂದು 2017ರಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೇಳಿದೆ. ಹಾಗಂತ, ಬ್ಯಾಂಕುಗಳು ಲಾಕರ್ ನಿರ್ವಹಣೆಯ ಜವಾಬ್ದಾರಿಯಿಂದ ಕಳಚಿಕೊಳ್ಳುವಂತಿಲ್ಲ. ಲಾಕರ್ ನಿರ್ವಹಣೆ ಕುರಿತಂತೆ ಬ್ಯಾಂಕುಗಳು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಕಡ್ಡಾಯವಾಗಿ ಆರು ತಿಂಗಳ ಒಳಗೆ ನಿಯಮಗಳನ್ನು ರೂಪಿಸಬೇಕೆಂದು ಸುಪ್ರೀಂ ಕೋರ್ಟ್ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾಗೆ ನಿರ್ದೇಶನ ನೀಡಿದೆ. ರಾಷ್ಟ್ರೀಯ ಗ್ರಾಹಕ ವಿವಾದ ಪರಿಹಾರ ಆಯೋಗದ ಆದೇಶದ ವಿರುದ್ಧ ಕಲ್ಕತ್ತಾ ನಿವಾಸಿ ಅಮಿತಾಭ್ ದಾಸ್‍ಗುಪ್ತಾ ಅವರು ಸಲ್ಲಿಸಿದ್ದ ಅರ್ಜಿಗೆ ಪ್ರತಿಯಾಗಿ ಈ ತೀರ್ಪು ನೀಡಲಾಗಿದೆ.


    ಸುಪ್ರೀಂ ಕೋರ್ಟ್ ಏನು ಹೇಳಿದೆ?


    ಸುಪ್ರೀಂ ಕೋರ್ಟ್ ಹೇಳಿರುವ ಪ್ರಕಾರ, ತನ್ನ ಅಮೂಲ್ಯ ವಸ್ತುಗಳ ರಕ್ಷಣೆಗೆ ಸಂಬಂಧಿಸಿದಂತೆ, ಆ ವಿಷಯದಲ್ಲಿ ಹೆಚ್ಚು ವ್ಯವಹಾರ ಕುಶಲತೆ ಹೊಂದಿರುವ ಬ್ಯಾಂಕುಗಳ ಸಂಪೂರ್ಣ ಕೃಪೆಯಲ್ಲಿ ಗ್ರಾಹಕನಿದ್ದಾನೆ. “ಅಂತಹ ಪರಿಸ್ಥಿತಿಯಲ್ಲಿ, ಬ್ಯಾಂಕ್ ಲಾಕರ್‌ಗಳ ನಿರ್ವಹಣೆಗೆ ತಾವು ಹೊಣೆಗಾರರಲ್ಲ ಎಂದು ಹೇಳಿ ಬ್ಯಾಂಕುಗಳು ತಮ್ಮ ಜವಾಬ್ಧಾರಿಯಿಂದ ನುಣುಚಿಕೊಳ್ಳುವಂತಿಲ್ಲ” ಎಂದು ತಿಳಿಸಿದೆ.


    “ಬ್ಯಾಂಕುಗಳ ಇಂತಹ ಕ್ರಮಗಳು, ಗ್ರಾಹಕ ಸಂರಕ್ಷಣೆ ಕಾಯಿದೆಗೆ ಸಂಬಂಧಿಸಿದ ನಿಬಂಧನೆಗಳನ್ನು ಉಲ್ಲಂಘಿಸುವುದಲ್ಲದೆ, ಹೂಡಿಕೆದಾರನ ವಿಶ್ವಾಸ ಮತ್ತು ಉದಯೋನ್ಮುಖ ಆರ್ಥಿಕತೆಯಾಗಿರುವ ನಮ್ಮ ಕೀರ್ತಿಗೆ ಭಂಗ ತರುತ್ತದೆ” ಎಂದು ಸುಪ್ರೀಂ ಕೋರ್ಟ್ ಹೇಳಿದೆ.


    ಇದನ್ನೂ ಓದಿ:Double Murder: ವೈದ್ಯ ದಂಪತಿ ಹತ್ಯೆಗೆ ಕಾರಣವಾಯ್ತು ಹಳೇ ಜೋಡಿ ಕೊಲೆ...!

    ಬ್ಯಾಂಕ್ ಲಾಕರ್‌ಗಳು ಸುರಕ್ಷಿತವೇ..?


    ಬ್ಯಾಂಕ್ ಲಾಕರ್‌ಗಳನ್ನು ಅಮೂಲ್ಯ ಆಭರಣ, ಮುಖ್ಯ ದಾಖಲೆಗಳು, ಪ್ರಮಾಣಪತ್ರಗಳು ಅಥವಾ ಇನ್ನಿತರ ಅಮೂಲ್ಯ ವಸ್ತುಗಳನ್ನು ಇಡಲು ಅತ್ಯಂತ ಸುರಕ್ಷ ಜಾಗವೆಂದು ಪರಿಗಣಿಸಲಾಗುತ್ತಿತ್ತು. ಸಾರ್ವಜನಿಕ ಮತ್ತು ಖಾಸಗಿ ಬ್ಯಾಂಕುಗಳು , ಲಾಕರ್ ಗಾತ್ರವನ್ನು ಆಧರಿಸಿ, ವಾರ್ಷಿಕ 1000 ರೂ.ಗಳಿಂದ 10,000ರೂ. ಗಳ ನಿಗದಿತ ಶುಲ್ಕ ವಿಧಿಸಿ, ಲಾಕರ್ ಸೌಲಭ್ಯವನ್ನು ನೀಡುತ್ತವೆ. ಮನೆಗೆ ಹೋಲಿಸಿದರೆ, ಅಲ್ಲಿ ನೀಡಲಾಗುವ ವಿವಿಧ ಸ್ತರಗಳ ರಕ್ಷಣಾ ಮತ್ತು ಕಣ್ಗಾವಲು ವ್ಯವಸ್ಥೆಯಿಂದಾಗಿ, ಹೆಚ್ಚು ಸುರಕ್ಷಿತ ಎಂದು ಭಾವಿಸಲಾಗಿದೆ.


    ಬ್ಯಾಂಕ್ ಲಾಕರ್ ಚಾರ್ಜುಗಳು


    ಬ್ಯಾಂಕ್ ಲಾಕರ್​ನ ಗಾತ್ರ ಮತ್ತು ಬ್ಯಾಂಕ್‍ನ ಶಾಖೆಯನ್ನು ಆಧರಿಸಿ ದರವನ್ನು ನಿಗದಿ ಪಡಿಸಲಾಗಿರುತ್ತದೆ. ಉದಾಹರಣೆಗೆ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವು ತನ್ನ ನಗರ ಮತ್ತು ಮೆಟ್ರೋ ಶಾಖೆಗಳಲ್ಲಿ ಚಿಕ್ಕ ಗಾತ್ರದ ಲಾಕರ್‌ಗೆ (125*175*492ಸೆಂ.ಮೀ) ವಾರ್ಷಿಕ 1,500 ರೂ. ಮತ್ತು ಜಿಎಸ್‍ಟಿ ಹಾಗೂ ಅದೇ ಗಾತ್ರದ ಲಾಕರ್‌ಗೆ ಗ್ರಾಮೀಣ ಶಾಖೆಗಳಲ್ಲಿ 1000ರೂ. ಮತ್ತು ಜಿಎಸ್‍ಟಿ ಶುಲ್ಕ ವಿಧಿಸುತ್ತದೆ. ಅತ್ಯಂತ ದೊಡ್ಡ ಲಾಕರ್‌ಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ವಾರ್ಷಿಕ ಸುಮಾರು 12,000ರೂ. ಮತ್ತು ಜಿಎಸ್‍ಟಿ ದರ ವಿಧಿಸಲಾಗುತ್ತದೆ. ಲಾಕರ್ನ‌ ಗಾತ್ರವನ್ನು ಆಧರಿಸಿ, ನೀವು ಏಕಕಾಲಿಕ ನೋಂದಾವಣಿ ದರವನ್ನು ಕೂಡ ಪಾವತಿಸಬೇಕಾಗುತ್ತದೆ. ಎಸ್‍ಬಿಐನಲ್ಲಿ ಈ ದರ ಸಣ್ಣ ಮತ್ತು ಮಧ್ಯಮ ಗಾತ್ರದ ಲಾಕರ್‌ಗಳಿಗೆ 500ರೂ. ಮತ್ತು ಜಿಎಸ್‍ಟಿ, ಅದೇ ರೀತಿ ದೊಡ್ಡ ಮತ್ತು ಅತೀ ದೊಡ್ಡ ಲಾಕರ್ಗೆ‌ 1000 ರೂ. ಮತ್ತು ಜಿಎಸ್‍ಟಿ ದರ ನಿಗದಿಪಡಿಸಲಾಗಿದೆ.




    ಬ್ಯಾಂಕ್ ಲಾಕರ್ ಕೀ


    ಬ್ಯಾಂಕ್‍ನಲ್ಲಿ ಲಾಕರ್ ತೆರೆದಾಗ, ಅದಕ್ಕೆ ಎರಡು ಕೀಗಳು ಇರುತ್ತವೆ ಎಂಬುದನ್ನು ತಿಳಿದುಕೊಳ್ಳಬೇಕಾಗುತ್ತದೆ. ಒಂದು, ಬ್ಯಾಂಕ್ ಲಾಕರ್ ಹೊಂದಿರುವ ವ್ಯಕ್ತಿಯ ಬಳಕೆಗೆ, ಇನ್ನೊಂದು ಬ್ಯಾಂಕ್‍ನಲ್ಲಿಯೇ ಇರುತ್ತದೆ. ಆ ಕೀಯನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಬೇಕು, ಯಾವತ್ತೂ ಕಳೆದುಕೊಳ್ಳಬಾರದು. ಕಳೆದುಕೊಂಡರೆ ಏನಾಗುತ್ತದೆ? ನಿಮಗೆ ದಂಡ ಹಾಕಲಾಗುತ್ತದೆ ಮತ್ತು ಅದರ ನಕಲಿ ಕೀ ಅಥವಾ ಹೊಸ ಲಾಕರ್‌ಗಾಗಿ ನೀವು ನಿರ್ದಿಷ್ಟ ಶುಲ್ಕ ತೆರಬೇಕಾಗುತ್ತದೆ. ಲಾಕರನ್ನು ಒಂದು ಬ್ಯಾಂಕ್‍ನಿಂದ ಇನ್ನೊಂದು ಬ್ಯಾಂಕ್‍ಗೆ ವರ್ಗಾಯಿಸುವುದು ಸಾಧ್ಯವಿಲ್ಲ. ಅಂತಹ ಸಂದರ್ಭ ಬಂದರೆ, ಲಾಕರ್ ಇರುವ ಬ್ಯಾಂಕ್‍ನಲ್ಲಿ ಅದನ್ನು ಮುಚ್ಚಿಸಿ, ಬೇರೆ ಬ್ಯಾಂಕ್‍ನಲ್ಲಿ ಹೊಸ ಲಾಕರ್ ತೆಗೆಯಬೇಕು.

    Published by:Latha CG
    First published: